ದೆಹಲಿ ಸಿಎಂ ಆಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ( Central Bureau of Investigation ) ತನಿಖಾ ತಂಡ ಮದ್ಯನೀತಿ ಹಗರಣದಲ್ಲಿ ಬಂಧಿಸಿದ್ದು, ಇಂದು ಸುಪ್ರೀಂಕೋರ್ಟ್ನಲ್ಲಿ ಜಾಮೀನು ಮಂಜೂರಾಗಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯ್ಯಾನ್ ನೇತೃತ್ವದ ಪೀಠ ಸೆಪ್ಟೆಂಬರ್ 5 ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಲಾಗಿತ್ತು.
ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧನದಿಂದ ನ್ಯಾಯಮೂರ್ತಿ ಸಂಜೀವ್ ಖನ್ನಾ ಪೀಠ ಜಾಮೀನು ಮಂಜೂರು ಮಾಡಿತ್ತು. ಆದರೂ ಸಿಬಿಐ ಕೇಸ್ನಿಂದ ಅರವಿಂದ್ ಕೇಜ್ರಿವಾಲ್‌ಗೆ ರಿಲೀಫ್ ಸಿಕ್ಕಿರಲಿಲ್ಲ. ಇದೀಗದ ಸುಪ್ರೀಂಕೋರ್ಟ್ ಸಿಬಿಐ ಬಂಧನಕ್ಕೂ ಜಾಮೀನು ಮಂಜೂರು ಮಾಡಿದ್ದು, ದೆಹಲಿ ಸಿಎಂ ಕೇಜ್ರಿವಾಲ್‌ಗೆ ರಿಲೀಫ್ ಸಿಕ್ಕಂತಾಗಿದೆ.
AAP ಮುಖ್ಯಸ್ಥರಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ಮೊದಲಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧನ ಮಾಡಿದ್ದರು. ಆ ಬಳಿಕ ಜುಲೈ 12ರಂದು ಸಿಬಿಐ ಅದೇ ಕೇಸ್ನಲ್ಲಿ ಅರೆಸ್ಟ್ ಮಾಡಿತ್ತು. ಜಾರಿ ನಿರದದೇಶನಾಲಯ Enforcement Directorate ಕೇಸ್ನಲ್ಲಿ ಜಾಮೀನು ಸಿಕ್ಕರೂ ಸಿಬಿಐ ಕೇಸ್ನಲ್ಲಿ ಬಂಧನದಲ್ಲೇ ಇರುವಂತಾಗಿತ್ತು. ಈ ನಡುವೆ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಕೆಲವು ದಿನಗಳ ಕಾಲ ಪ್ರಚಾರಕ್ಕೆ ಸುಪ್ರೀಂಕೋರ್ಟ್ ಅವಕಾಶ ಮಾಡಿಕೊಟ್ಟಿತ್ತು.