ಗರ್ಭಾವಸ್ಥೆ ಎನ್ನುವುದು ಪ್ರತಿಯೊಬ್ಬ ಹೆಣ್ಣು ಮಗಳಿಗೂ ಖುಷಿ ನೀಡುವ ಸಮಾಚಾರ. ಪ್ರತಿಯೊಬ್ಬರೂ ಕೂಡ ಈ ಸಂದರ್ಭದಲ್ಲಿ ತಮ್ಮ ಮಗುವಿನ ನಿರೀಕ್ಷೆಯಲ್ಲಿ ಹೆಚ್ಚಿರುತ್ತಾರೆ, ಹಾಗೂ ತಮ್ಮ ಆರೋಗ್ಯದ ಬಗ್ಗೆ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು. ಈ ಸಂದರ್ಭದಲ್ಲಿ ಮೊದಲ ಮೂರು ತಿಂಗಳು ಹೆಚ್ಚು ಜೋಪಾನವಾಗಿರಬೇಕು ಕಾರಣ ಈ ಟೈಮ್ ನಲ್ಲಿ ಗರ್ಭಪಾತ ಆಗುವ ಚಾನ್ಸ್ ಹೆಚ್ಚಿರುತ್ತದೆ.

ನಂತರದ ತಿಂಗಳಲ್ಲಿ ತಾಯಿ ತಾನು ಸೇವಿಸುವ ಆಹಾರದ ಬಗ್ಗೆ ಅದರಲ್ಲೂ ಪೌಷ್ಟಿಕಾಂಶಗಳು ಹೆಚ್ಚಿರುವಂತ ಆಹಾರಗಳನ್ನ ಸೇವಿಸಬೇಕು. ಇದು ಮಗುವಿನ ಬೆಳವಣಿಗೆಗೆ ತುಂಬಾನೇ ಸಹಾಯಕಾರಿಯಾಗಿರುತ್ತದೆ. ಈ ಸಂದರ್ಭದಲ್ಲಿ ವೈದ್ಯರು ಹಾಗೂ ಹಿರಿಯರು ಸಾಕಷ್ಟು ಸಲಹೆಗಳನ್ನು ನೀಡ್ತಾರೆ. ಹಣ್ಣು ಹಂಪಲು, ಡ್ರೈ ಫ್ರೂಟ್ಸ್ ಹಾಲು ಇದೆಲ್ಲದರ ಜೊತೆಗೆ ಕೇಸರಿಯನ್ನು ಸೇವಿಸುವುದು ಉತ್ತಮ.

ಆದ್ರೆ ಕೇಸರಿಯನ್ನು ಸೇವಿಸುವಿದರಿಂದ ಮಗು ಕೆಂಪಾಗಿ ಹುಟ್ಟುತ್ತದೆ ಎಂದು ಹೇಳುತ್ತಾರೆ.ಆದ್ರೆ ಕೇಸರಿಯನ್ನು ಯಾವ ತಿಂಗಳಲ್ಲಿ ತಿನ್ನಬೇಕು,ಎಷ್ಟು ಸೇವಿಸಬೇಕು ಎನ್ನುವ ಬಗ್ಗೆ ಎಚ್ಚರ ವಹಿಸಬೇಕು..ಇಲ್ಲವಾದಲ್ಲಿ ಗರ್ಭಪಾತ ಆಗುವ ಅವಕಾಶವಿರುತ್ತದೆ.

ಹೌದು ಕೇರಸಿ ಹೆಚ್ಚು ಉಷ್ಣವಿರುವಂತಹ ಮಸಾಲಾ ಪದಾರ್ಥ,ಇದನ್ನು ಗರ್ಭಿಣಿಯರು ಆರು ತಿಂಗಳ ನಂತರ ಸೇವಿಸಬೇಕು,ಹಾಗೂ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ,೩ ಕೇಸರಿ ಹಾಕಿ ಇಡಬೇಕು,ಹಾಗೂ ಬೆಳಗ್ಗೆ ಸ್ವಲ್ಪ ಬಿಸಿ ಮಾಡಿ ಆ ಹಾಲನ್ನು ಕುಡಿಯಬೇಕು..ಆದ್ರೆ ಹೆಚ್ಚು ಕೇಸರಿಯನ್ನು ಕೂಡ ಬಳಸಬಾರದು ಮತ್ತು ಮೊದಲ ೪-೫ ತಿಂಗಳು ಕೇಸರಿ ಸೇವನೆ ತೊಂದರೆ ಉಂಟಾಗುತ್ತದೆ.






