• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಹೇಗಿರುತ್ತೆ : ಡಿಕೆ ಶಿವಕುಮಾರ್‌ ಏನಂದ್ರು..?

ಜೂನ್ 3ರಂದೇ ಕಾಂಗ್ರೆಸ್ ಕಚೇರಿ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಲೋಚನೆ : ಸಿಎಲ್ ಪಿ ನಾಯಕ ಡಿ.ಕೆ. ಶಿವಕುಮಾರ್..

ಪ್ರತಿಧ್ವನಿ by ಪ್ರತಿಧ್ವನಿ
May 31, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
DK Shivakumar Oath Taking Ceremony
Share on WhatsAppShare on FacebookShare on Telegram

ಬೆಂಗಳೂರು : ಜೂನ್ 3ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿದ ಬಳಿಕ ರೇಸ್ ಕೋರ್ಸ್ ರಸ್ತೆ ಬಳಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ನಡೆಸಲು ಆಲೋಚಿಸಲಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಇನ್ನಷ್ಟೇ ಸಮಯ ನಿಗದಿ ಮಾಡಬೇಕಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ADVERTISEMENT
IPL 2026 Final: RCB vs GT : ನಮ್ಮ ವಿರಾಟ್ ಕೊಹ್ಲಿ ದೊಡ್ಡ ಚೇಸ್ ಮಾಸ್ಟರ್.. #pratidhvani

ನಗರದ ರೇಸ್ ಕೋರ್ಸ್ ರಸ್ತೆ ಬಳಿ ಉದ್ದೇಶಿತ ಕಾಂಗ್ರೆಸ್ ಭವನ ನಿರ್ಮಾಣ ಜಾಗಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪಕ್ಷದ ಎಲ್ಲಾ ಬ್ಲಾಕ್ ಹಾಗೂ ಜಿಲ್ಲಾ ಅಧ್ಯಕ್ಷರು, ಶಾಸಕರು ಹಾಗೂ ಮಾಜಿ ಶಾಸಕರು, ಪಕ್ಷದ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು, ಸಂಸದರು, ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಿಗೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು ಎಂದು ಹೇಳಿದ್ದಾರೆ.

ಇದರಲ್ಲಿ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ. ಕಾರ್ಯಕರ್ತರು ಕ್ಷಮಿಸಬೇಕು. ಅಲ್ಲಿ ಜಾಗದ ಕೊರತೆ ಇರುವುದರಿಂದ ಆಹ್ವಾನಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ರಾಹುಲ್ ಗಾಂಧಿ ಅವರಿಗೆ ಇನ್ನಷ್ಟೇ ನೀಡಲಾಗುವುದು. ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಕಚೇರಿ ಶಂಕುಸ್ಥಾಪನೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : “ಮಾತು ಕೊಟ್ಟು ಕಾಂಗ್ರೆಸ್‌ಗೆ ಕರೆತಂದಿದ್ದರು” : ಸಚಿವ ಸ್ಥಾನ ಕುರಿತು ಶಿವಲಿಂಗೇಗೌಡ ಹೇಳಿದ್ದೇನು ?

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ನಮ್ಮ ಪಕ್ಷದ ಎಲ್ಲಾ ನಾಯಕರು ಹಾಗೂ ಪದಾಧಿಕಾರಿಗಳಿಗೆ ಆಹ್ವಾನ ನೀಡಲು ಆಗದ ಕಾರಣ, ಇಲ್ಲೇ ಎಲ್ ಇ ಡಿ ಪರದೆಗಳಲ್ಲಿ ಆ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ನಮಗಾಗಿ ಹೋರಾಟ ಮಾಡಿ, ಶ್ರಮಿಸಿದ ನಾಯಕರಿಗೆ ನಾವು ಇಷ್ಟಾದರೂ ಅವಕಾಶ ಮಾಡಿಕೊಡಬೇಕು ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಲೋಕಭವನದಲ್ಲಿ ಪ್ರಮಾಣ ವಚನ..

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಬಗ್ಗೆ ಕೇಳಿದಾಗ, “ಬೆಂಗಳೂರಿನ ನಾಗರಿಕರಿಗೆ ತೊಂದರೆಯಾಗಬಾರದು, ಈ ಕಾರ್ಯಕ್ರಮಕ್ಕೆ ಹೊರಗಡೆಯಿಂದ ಹೆಚ್ಚಿನ ವಾಹನ ಆಗಮಿಸಿ ಸಂಚಾರ ದಟ್ಟಣೆ ಆಗಬಾರದು ಎಂಬ ಕಾರಣಕ್ಕೆ ವಿಧಾನಸೌಧದ ಮೆಟ್ಟಿಲುಗಳ ಬದಲು ಲೋಕಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಮಾಡಲಾಗುವುದು. ಈ ಕಾರ್ಯಕ್ರಮ ಸರಳವಾಗಿ ನಡೆಯುತ್ತಿರುವುದರಿಂದ ಹೆಚ್ಚಿನ ಜನ ಸೇರಲು ಆಗುವುದಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರು ಕ್ಷಮಿಸಬೇಕು” ಎಂದರು.

ಸಚಿವರ ಪ್ರಮಾಣ ವಚನ; ಹೈಕಮಾಂಡ್ ತೀರ್ಮಾನ..

ನಿಮ್ಮ ಜೊತೆ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡುವರೇ ಎಂದು ಕೇಳಿದಾಗ, “ನನಗೆ ಆ ಬಗ್ಗೆ ಗೊತ್ತಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Tags: Cabinet Formingcongress mlasCongress MLcsCongress PartyDK ShivakumarIndira Bhavan 100Karnataka CongressKarnataka PoliticsKPCC officeMallikarjun KhargeOath Taking ceremonyRahul Gandhisiddaramaiah
Previous Post

BREAKING NEWS : ಟಾಸ್‌ ಗೆದ್ದ RCB ; ಬೌಲಿಂಗ್‌ ಆಯ್ಕೆ ಮಾಡಿಕೊಂಡ ರಜತ್ ಪಾಟಿದಾರ್..

Next Post

ಆರ್‌ಸಿಬಿಗೆ ಐಪಿಎಲ್ ಕಿರೀಟ:  ಪ್ರಶಸ್ತಿಗಳ ಪಟ್ಟಿ ಇಲ್ಲಿದೆ

Related Posts

ಬೆಂಗಳೂರು ಕೆರೆಗಳಲ್ಲಿ ಯುರೇನಿಯಂ ಪತ್ತೆ? ಕುಡಿಯುವ ನೀರಿನ ಸುರಕ್ಷತೆ ಕುರಿತು ಹೆಚ್ಚಿದ ಆತಂಕ
Top Story

ಬೆಂಗಳೂರು ಕೆರೆಗಳಲ್ಲಿ ಯುರೇನಿಯಂ ಪತ್ತೆ? ಕುಡಿಯುವ ನೀರಿನ ಸುರಕ್ಷತೆ ಕುರಿತು ಹೆಚ್ಚಿದ ಆತಂಕ

by ಪ್ರತಿಧ್ವನಿ
June 1, 2026
0

ರಾಜಧಾನಿ ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಸುರಕ್ಷತೆ ಕುರಿತು ಹೊಸ ಆತಂಕ ಎದುರಾಗಿದೆ. ನಗರದ ವಿವಿಧ ಕೆರೆಗಳಲ್ಲಿ ಇತ್ತೀಚೆಗೆ ಸಾವಿರಾರು ಮೀನುಗಳು ಸಾವನ್ನಪ್ಪಿದ ಘಟನೆಗಳ ಬೆನ್ನಲ್ಲೇ, ಜಲಮೂಲಗಳ...

Read moreDetails
BREAKING NEWS : ಟಾಸ್‌ ಗೆದ್ದ RCB ; ಬೌಲಿಂಗ್‌ ಆಯ್ಕೆ ಮಾಡಿಕೊಂಡ ರಜತ್ ಪಾಟಿದಾರ್..

BREAKING NEWS : ಟಾಸ್‌ ಗೆದ್ದ RCB ; ಬೌಲಿಂಗ್‌ ಆಯ್ಕೆ ಮಾಡಿಕೊಂಡ ರಜತ್ ಪಾಟಿದಾರ್..

May 31, 2026
“ಸಿದ್ದರಾಮಯ್ಯ ಅವ್ರನ್ನ ಡೀಡ್ ನಲ್ಲಿನ ವೈಫಲ್ಯಕ್ಕಾಗಿ ಟೀಕಿಸಬಹುದು, ಆದ್ರೆ ಇಂಟೆಂಟ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ರೆ ಅನ್ಯಾಯ ಮಾಡಿದಂತೆ”

“ಸಿದ್ದರಾಮಯ್ಯ ಅವ್ರನ್ನ ಡೀಡ್ ನಲ್ಲಿನ ವೈಫಲ್ಯಕ್ಕಾಗಿ ಟೀಕಿಸಬಹುದು, ಆದ್ರೆ ಇಂಟೆಂಟ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ರೆ ಅನ್ಯಾಯ ಮಾಡಿದಂತೆ”

May 31, 2026
ಬಂಗಾಳದಲ್ಲಿ ಹೆಚ್ಚಾಯ್ತು ಹಿಂಸಾಚಾರ : ಟಿಎಂಸಿ ಸಂಸದರ ಮೇಲೆ ಭೀಕರ ಹಲ್ಲೆ..

ಬಂಗಾಳದಲ್ಲಿ ಹೆಚ್ಚಾಯ್ತು ಹಿಂಸಾಚಾರ : ಟಿಎಂಸಿ ಸಂಸದರ ಮೇಲೆ ಭೀಕರ ಹಲ್ಲೆ..

May 31, 2026
RCB‌ ಅಭಿಮಾನಿಗಳ ಸಂಭ್ರಮಕ್ಕೆ ಖಾಕಿ ಬ್ರೇಕ್‌ : ಬೆಂಗಳೂರಲ್ಲಿ ಆಯುಕ್ತರಿಂದ ಯಾವೆಲ್ಲ ರೂಲ್ಸ್..?

RCB‌ ಅಭಿಮಾನಿಗಳ ಸಂಭ್ರಮಕ್ಕೆ ಖಾಕಿ ಬ್ರೇಕ್‌ : ಬೆಂಗಳೂರಲ್ಲಿ ಆಯುಕ್ತರಿಂದ ಯಾವೆಲ್ಲ ರೂಲ್ಸ್..?

May 31, 2026
Next Post
ಆರ್‌ಸಿಬಿಗೆ ಐಪಿಎಲ್ ಕಿರೀಟ:  ಪ್ರಶಸ್ತಿಗಳ ಪಟ್ಟಿ ಇಲ್ಲಿದೆ

ಆರ್‌ಸಿಬಿಗೆ ಐಪಿಎಲ್ ಕಿರೀಟ:  ಪ್ರಶಸ್ತಿಗಳ ಪಟ್ಟಿ ಇಲ್ಲಿದೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada