ದಕ್ಷಿಣ ಆಫ್ರಿಕಾ ವಿರುದ್ದ ಭಾರತ ಕ್ರಿಕೆಟ್ ತಂಡ ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಶನಿವಾರ ಟ್ವೀಟ್ ಮಾಡಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತು ಮೌನ ಮುರಿದಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್ ಮಾಡಿ, “ಅದು ಅವರ ವೈಯಕ್ತಿಕ ನಿರ್ಧಾರ ಮತ್ತು ಮಂಡಳಿ ಅವರ ನಿರ್ಧಾರವನ್ನು ಸದಾ ಗೌರವಿಸುತ್ತದೆ,” ಎಂದಿದ್ದಾರೆ.
ಮಂದುವರೆದು ಭಾರತದ ಸ್ಟಾರ್ ಬ್ಯಾಟ್ಸ್ ಮನ್ ಆಗಿ ತಂಡವನ್ನು ಮುನ್ನಡೆಸುವಲ್ಲಿ ಅವರ ಪಾತ್ರ ದೊಡ್ದು ಎಂದು ಬಣ್ಣಿಸಿದ್ದಾರೆ.
ಒಂದು ಕಾಲದ ಭಾರತದ ಯಶಸ್ವಿ ನಾಯಕರೆನ್ನಿಸಿಕೊಂಡಿದ್ದ ಕೊಹ್ಲಿ ತಾವು ನಾಯಕತ್ವ ವಹಿಸಿರುವ 68 ಟೆಸ್ಟ್ ಪಂದ್ಯಗಳಲ್ಲಿ 40ರಲ್ಲಿ ಜಯ ದಾಖಲಿಸಿದ್ದಾರೆ.






