ಇಷ್ಟು ದಿನ ನಗರ ಪ್ರದೇಶಗಳಲ್ಲಿ ಆತಂಕ ಮೂಡಿಸಿದ್ದ ಕೊರೋನಾ, ಈಗ ಹಳ್ಳಿಗಳಿಗೆ ದಾಪುಗಾಲಿಡುತ್ತಿದೆ. ಮೂರನೆ ಅಲೆಯ ಆರಂಭದಲ್ಲೇ ನಗರಗಳ ಜೊತೆಗೆ ಹಳ್ಳಿಯಲ್ಲೂ ಹೆಚ್ಚು ವೇಗವಾಗಿ ಕೋವಿಡ್ ಹರಡುತ್ತಿದ್ದು, ಆತಂಕ ಇಮ್ಮಡಿಯಾಗಿಸಿದೆ.
ಹೆಚ್ಚು ಸೋಂಕು ಹರಡಿರುವ ಹಳ್ಳಿಗಳ ಪಟ್ಟಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ
ಹೆಚ್ಚು ಜನರು ಇರುವ ನಗರಗಳಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವುದು ಒಂದು ಕಡೆಯಾದರೆ, ಇದೀಗ ರಾಜ್ಯದ ಹಳ್ಳಿ ಹಳ್ಳಿಗೂ ಈ ಕೋವಿಡ್ ಶರವೇಗದಲ್ಲಿ ಪಸರಿಸುತ್ತಿದೆ. ಈ ಮೂಲಕ ಇಡೀ ರಾಜ್ಯಕ್ಕೆ ವೇಗವಾಗಿ ಕೊರೋನಾ ಸೋಂಕು ಹರಡುತ್ತಿದೆ. ಈಗಾಗಲೇ ರಾಜ್ಯದಲ್ಲಿ ನಿತ್ಯ 20 ಸಾವಿರ ಪಾಸಿಟಿವ್ ಕೇಸ್ಗಳು ದಾಖಲಾಗುತ್ತಿದ್ದು, ಕೆಲವೊಂದು ನಗರ ಪಟ್ಟಣಗಳ ಜೊತೆ ಹಲವು ಹಳ್ಳಿಗಳಲ್ಲೂ ಸೋಂಕು ಏರುಗತ್ತಿಯಲ್ಲಿದೆ. ಈ ಅಪಾಯಕಾರಿ ಅಂಶವನ್ನು ಈಗ ಆರೋಗ್ಯ ಇಲಾಖೆ ಬಿಚ್ಚಿಟ್ಟಿದೆ.
ಇಲಾಖೆಯ ಈ ರಿಪೋರ್ಟ್ ಪ್ರಕಾರ ರಾಜ್ಯದ 30 ಜಿಲ್ಲೆಗಳ ಪೈಕಿ ಸುಮಾರು 282 ಹಳ್ಳಿಗಳಲ್ಲಿ ನಿತ್ಯ ಸೋಂಕು ಹೆಚ್ಚಳವಾಗುತ್ತಿದೆ ಎಂದಿದೆ. ಕಳೆದ ನಾಲ್ಕು ವಾರಗಳಿಂದ ಸೋಂಕಿತರ ಸಂಖ್ಯೆ ನಿರಂತರ ಏರಿಕೆ ಕಂಡು ಬಂದಿದೆ. ರಾಜ್ಯದಲ್ಲಿ 274 ನಗರ-ಪಟ್ಟಣಗಳಿದ್ದು 148 ನಗರ ಪಟ್ಟಣಗಳಲ್ಲಿ ಸೋಂಕು ಏರಿಕೆಯಾಗಿದೆ. 282 ಹಳ್ಳಿಗಳು ಹಾಗೂ 148 ನಗರ ಪಟ್ಟಣಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ.
ಇವುಗಳ ಪೈಕಿ ಟಾಪ್ 20 ಹಳ್ಳಿಗಳ ಲಿಸ್ಟ್ ಮಾಡಿದ್ದು ಇವುಗಳು ಆರೋಗ್ಯ ಇಲಾಖೆಯ ರೆಡ್ ಲಿಸ್ಟ್ ನಲ್ಲಿದೆ.
ಹಳ್ಳಿ – ಜಿಲ್ಲೆ – ದಾಖಲಾದ ಪ್ರಕರಣಗಳು
- ಗಿರಿಯಾಳ – ಬೆಳಗಾವಿ – 139
- ಚಂತರು – ಉಡುಪಿ – 64
- ಕಣ್ಣೂರು – ಬೆಂಗಳೂರು ನಗರ – 125
- ಮೆಲ್ಲಹಳ್ಳಿ – ಮಂಡ್ಯ – 54
- ಕೆ.ಜಿ ತರಳು – ಬೆಂಗಳೂರು – 51
6.ತಿಗಳಚೌಡೇನಹಳ್ಳಿ – ಬೆಂಗಳೂರು – 52 - ಕೊಂಡಜ್ಜಿ – ದಾವಣಗೆರೆ – 48
- ಕೆಂಚಟ್ಟವಳ್ಳಿ – ಹಾಸನ – 46
- ರಾಮೋಹಳ್ಳಿ – ಬೆಂಗಳೂರು – 46
- ರಿಸರ್ವರ್ಡ್ ಫಾರೆಸ್ಟ್ – ಚಾಮರಾಜನಗರ – 45
11.ಚೀಮಸಂದ್ರ – ಬೆಂಗಳೂರು – 44
12 .ಸೋಮನಹಳ್ಳಿ – ಬೆಂಗಳೂರು – 44 - ಸೋಲದೇವನಹಳ್ಳಿ – ಬೆಂಗಳೂರು – 40
- ಹೆಸರಘಟ್ಟ – ಬೆಂಗಳೂರು – 38
15.ಮಾಚೊಹಳ್ಳಿ – ಬೆಂಗಳೂರು – 34 - ತಾವರೆಕೆರೆ- ಬೆಂಗಳೂರು – 34
- ಚಿನಕುರಳಿ – ಮಂಡ್ಯ – 36
- ಆಲನಹಳ್ಳಿ – ಮೈಸೂರು – 34
- ಬೂದಿಗೆರೆ – ಬೆಂಗಳೂರು – 33
- ಹಾಲನಾಯಕನಹಳ್ಳಿ – ಬೆಂಗಳೂರು – 33
ಇಷ್ಟು ದಿನ ನಗರಗಳಲ್ಲಿ ಹೆಚ್ಚಾಗ್ತಿದ್ದ ಕೊರೋನಾ ಕೇಸ್ಗಳು ಈಗ ಹಳ್ಳಿಹಳ್ಳಿಗೂ ಹಬ್ಬುತ್ತಿದೆ. ಎರಡನೇ ಅಲೆಯಲ್ಲೂ ಹೀಗೆಯೇ ನಗರದಿಂದ ಹಳ್ಳಿ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ಜನರು ಹೋಗಿದ್ದರಿಂದ ಹಳ್ಳಿಗಳೂ ಕೂಡ ಕೊರೋನಾ ಹಾಟ್ ಸ್ಪಾಟ್ ಗಳಾಗಿದ್ದವು. ಇದೀಗ ವೀಕೆಂಡ್ ಕರ್ಫ್ಯೂ ಹಾಗೂ ಸಾಲು ಸಾಲು ಹಬ್ಬಗಳಿಂದಿರುವ ರಜೆಗಳು ಜನರನ್ನು ಊರಿನೆಡೆಗೆ ಹೋಗುವಂತೆ ಮಾಡುತ್ತಿದೆ. ಇದು ಈಗ ಹಳ್ಳಿಗಳಲ್ಲೂ ಕೊರೋನಾ ಹೆಚ್ಚಾಗೋದಕ್ಕೆ ಕಾರಣವಾಗಿದೆ.