ತರಕಾರಿ ಮಾರುಕಟ್ಟೆ ಬಂದ್ ಮಾಡಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿ ಕೊನೆಗೆ ರೊಚ್ಚಿಗೆದ್ದು ರಸ್ತೆಮೇಲೆ ತರಕಾರಿ ಚೆಲ್ಲಿ ಪ್ರತಿಭಟಿಸಿದ್ದಾರೆ.
ವಿಜಯಪುರ ನಗರದ ಗೋದಾವರಿ ಹೋಟೆಲ್ ಮುಂಭಾಗ ರೈತರು ಪ್ರತಿಭಟಿಸಿದ್ದು, ತರಕಾರಿ ಮಾರಾಟ ಮಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಡು ರಸ್ತೆಯಲ್ಲೇ ನೂರಾರು ಜನ ಜಮಾವಣೆಗೊಂಡು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಮಗೆ ತರಕಾರಿ ಮಾರಲು ಅವಕಾಶ ನೀಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.