‘ಕಾಶ್ಮೀರದಂತಹ ಜ್ವಲಂತ ಅಂಶಗಳ’ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ‘ಗಂಭೀರ ಮತ್ತು ಪ್ರಾಮಾಣಿಕ ಮಾತುಕತೆ’ಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕರೆ ನೀಡಿದ್ದಾರೆ. ದುಬೈ ಮೂಲದ ಅಲ್ ಅರೇಬಿಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ, ಭಾರತದೊಂದಿಗೆ ಮೂರು ಯುದ್ಧಗಳ ನಂತರ ಪಾಕಿಸ್ತಾನ ತನ್ನ ಪಾಠವನ್ನು ಕಲಿತಿದೆ ಮತ್ತು ಈಗ ಅದು ತನ್ನ ನೆರೆಹೊರೆಯೊಂದಿಗೆ ಶಾಂತಿಯನ್ನು ಬಯಸುತ್ತದೆ ಎಂದು ಒತ್ತಿ ಹೇಳಿದರು.
“ಭಾರತೀಯ ನಾಯಕತ್ವ ಮತ್ತು ಪ್ರಧಾನಿ ಮೋದಿಗೆ ನನ್ನ ಸಂದೇಶವೆಂದರೆ ಕಾಶ್ಮೀರದಂತಹ ನಮ್ಮ ಜ್ವಲಂತ ಅಂಶಗಳನ್ನು ಪರಿಹರಿಸಲು ಮೇಜಿನ ಮೇಲೆ ಕುಳಿತು ಗಂಭೀರ ಮತ್ತು ಪ್ರಾಮಾಣಿಕ ಮಾತುಕತೆ ನಡೆಸೋಣ. ಶಾಂತಿಯುತವಾಗಿ ಬದುಕುವುದು ಮತ್ತು ಪ್ರಗತಿ ಸಾಧಿಸುವುದೋ ಅಥವಾ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡಿ ಪರಸ್ಪರ ಜಗಳವಾಡುವುದೋ ಎನ್ನುವುದರ ಬಗ್ಗೆ ಚರ್ಚಿಸೋಣ.,” ಎಂದು ಶೆಹಬಾಜ್ ಷರೀಫ್ ಹೇಳಿದರು.
رسالتي للشعب الباكستاني أن يقتدوا بـ #السعودية ورؤيتها المستقبلية.#مقابلة_خاصة #باكستان@layal_alekhtiar@CMShehbaz pic.twitter.com/Ra5p7Sfxvb
— العربية برامج (@AlArabiya_shows) January 16, 2023
ದುಬೈ ಮೂಲದ ಅರೇಬಿಕ್ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ಪ್ರಧಾನಿ, “ನಾವು ಭಾರತದೊಂದಿಗೆ ಮೂರು ಯುದ್ಧಗಳನ್ನು ಮಾಡಿದ್ದೇವೆ ಮತ್ತು ಅವು ಜನರಿಗೆ ಹೆಚ್ಚು ದುಃಖ, ಬಡತನ ಮತ್ತು ನಿರುದ್ಯೋಗವನ್ನು ತಂದಿವೆ” ಎಂದು ಹೇಳಿದರು.
“ನಾವು ನಮ್ಮ ಪಾಠವನ್ನು ಕಲಿತಿದ್ದೇವೆ ಮತ್ತು ನಾವು ನಮ್ಮ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾದರೆ ನಾವು ಭಾರತದೊಂದಿಗೆ ಶಾಂತಿಯಿಂದ ಬದುಕಲು ಬಯಸುತ್ತೇವೆ” ಎಂದು ಸೋಮವಾರ ಪ್ರಸಾರವಾದ ಸಂದರ್ಶನದಲ್ಲಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ತೀವ್ರ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಪಾಕಿಸ್ತಾನ, ಹಿಟ್ಟಿನ ಬಿಕ್ಕಟ್ಟು ಮತ್ತು ಇಂಧನ ಕೊರತೆಯಿಂದಾಗಿ ಆಡಳಿತದ ವಿರೋಧಿ ಅಲೆಯನ್ನು ಎದುರಿಸುತ್ತಿದೆ, ನಿಷೇಧಿತ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಯಿಂದ ಭಯೋತ್ಪಾದಕ ದಾಳಿಗಳ ಹೆಚ್ಚುತ್ತಿರುವ ಭೀತಿಯನ್ನು ಎದುರಿಸುತ್ತಿದೆ.
“ಭಾರತವು ನಮ್ಮ ನೆರೆಯ ದೇಶ, ನಾವು ನೆರೆಹೊರೆಯವರು, ನಾವು ತುಂಬಾ ತಿಕ್ಕಾಟವಿಲ್ಲದಂತೆ ವರ್ತಿಸೋಣ, ನಾವು ಆಯ್ಕೆಯಿಂದ ನೆರೆಹೊರೆಯವರಲ್ಲದಿದ್ದರೂ ನಾವು ಎಂದೆಂದಿಗೂ ನೆರೆಹೊರೆಯವರಾಗಿಯೇ ಇರುತ್ತೇವೆ. ಶಾಂತಿಯುತವಾಗಿ ಬದುಕಿ ಪ್ರಗತಿ ಹೊಂದಬೇಕೋ ಅಥವಾ ಪರಸ್ಪರ ಜಗಳವಾಡಿ ಸಮಯ ವ್ಯರ್ಥ ಮಾಡುಬೇಕೋ ನಮಗೆ ಬಿಟ್ಟದ್ದು. ” ಎಂದು ಶೆಹಬಾಜ್ ಷರೀಫ್ ಅಲ್ ಅರೇಬಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಶೆಹಬಾಜ್ ಷರೀಫ್ ಅವರು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ್ದು, “ಪಾಕಿಸ್ತಾನವು ಶಾಂತಿಯನ್ನು ಬಯಸುತ್ತದೆ ಆದರೆ ಕಾಶ್ಮೀರದಲ್ಲಿ ಏನಾಗುತ್ತಿದೆ ಅದನ್ನು ನಿಲ್ಲಿಸಬೇಕು” ಎಂದು ಹೇಳಿದರು.
@AlArabiya_shows ಟ್ವಿಟರ್ ಹ್ಯಾಂಡಲ್‌ನಲ್ಲಿ ಸೋಮವಾರ ಅಪ್‌ಲೋಡ್ ಮಾಡಿದ ಸಂದರ್ಶನದಲ್ಲಿ ಪಾಕಿಸ್ತಾನದ ನಾಯಕ, ಎರಡೂ ದೇಶಗಳು ಎಂಜಿನಿಯರ್‌ಗಳು, ವೈದ್ಯರು ಮತ್ತು ನುರಿತ ಕಾರ್ಮಿಕರನ್ನು ಹೊಂದಿವೆ ಎಂದು ಹೇಳಿದ್ದಾರೆ. “ನಾವು ಈ ಸ್ವತ್ತುಗಳನ್ನು ಸಮೃದ್ಧಿಗಾಗಿ ಬಳಸಿಕೊಳ್ಳಲು ಬಯಸುತ್ತೇವೆ ಮತ್ತು ಎರಡೂ ರಾಷ್ಟ್ರಗಳು ಬೆಳೆಯಲು ಈ ಪ್ರದೇಶಕ್ಕೆ ಶಾಂತಿಯನ್ನು ತರಲು ನಾವು ಬಯಸುತ್ತೇವೆ.” ಎಂದು ಹೇಳಿದ್ದಾರೆ.
“ಪಾಕಿಸ್ತಾನವು ಬಾಂಬ್‌ಗಳು ಮತ್ತು ಮದ್ದುಗುಂಡುಗಳ ಮೇಲೆ ಸಂಪನ್ಮೂಲಗಳನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. “ ಎಂದು ಅವರು ಹೇಳಿದ್ದಾರೆ.