Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಒಂದು ದೇಶ ಒಂದು ಸಮವಸ್ತ್ರ: ಕರ್ನಾಟಕ ರಾಜ್ಯ ಪೊಲೀಸರ ಸಮವಸ್ತ್ರದಲ್ಲಿ ಮಾರ್ಪಾಡು?

ಪ್ರತಿಧ್ವನಿ

ಪ್ರತಿಧ್ವನಿ

January 17, 2023
Share on FacebookShare on Twitter

  ದೇಶದ ಎಲ್ಲಾ ರಾಜ್ಯಗಳ, ಪೊಲೀಸರಿಗೆ ಅನ್ವಯಾಗುವಂತಹ ಏಕರೂಪದ, ಸಮವಸ್ತ್ರ ಪದ್ಧತಿ ಜಾರಿಗೆ ತರಲು ಕರ್ನಾಟಕ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.

ಹೆಚ್ಚು ಓದಿದ ಸ್ಟೋರಿಗಳು

ವಿಮಾನ ನಿಲ್ದಾಣಕ್ಕೆ ಯಾರ ಹೆಸರಾದರೂ ಇಡಲಿ, ಮೊದಲು ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲಿ: ಡಿ.ಕೆ. ಶಿವಕುಮಾರ್

D.K Shivakumar : ಏರ್‌ಪೋರ್ಟ್‌ಗೆ BSY ಹೆಸರು ಡಿಕೆಶಿ ರಿಯಾಕ್ಷನ್..! | #pratidhvaninews

ಬ್ರಾಹ್ಮಣ ಸಮೂಹವನ್ನು ನಾನು ನಿಂದಿಸಿಲ್ಲ: ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟನೆ

  ದೇಶದ ಎಲ್ಲ ರಾಜ್ಯಗಳ ಪೊಲೀಸ್‌ ಅಧಿಕಾರಿಗಳ ಸಮವಸ್ತ್ರಗಳು ಒಂದೇ ರೀತಿಯಾಗಿ ಇರಬೇಕು ಎಂದು ಪ್ರಸ್ತಾವನೆಯೊಂದನ್ನು ಕೇಂದ್ರದ ಗೃಹ ಇಲಾಖೆ ಸಿದ್ಧಪಡಿಸಿದ್ದು, ಆಯಾ ರಾಜ್ಯ ಸರಕಾರಗಳ ಅಭಿಪ್ರಾಯ ಕೇಳಿತ್ತು.  

 ‘ಒನ್ ನೇಷನ್ ಒನ್ ಯೂನಿಫಾರ್ಮ್’ ಹೆಸರಿನಲ್ಲಿ ಸಿದ್ಧಪಡಿಸಿರುವ ಪ್ರಸ್ತಾವನೆಗೆ ಕರ್ನಾಟಕ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು  ತಾತ್ವಿಕ ಒಪ್ಪಿಗೆಯನ್ನು ಸೂಚಿಸಿದ್ದಾರೆ.

      ಕೇಂದ್ರದ ಯೋಜನೆ ಜಾರಿಗೊಳಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಸಮ್ಮತಿ ಸೂಚಿಸಿರುವುದರಿಂದ, ಕರ್ನಾಟಕ ಪೊಲೀಸ್‌ ಇಲಾಖೆಯ ಸಿಬ್ಬಂದಿಗಳ ಸಮವಸ್ತ್ರದಲ್ಲಿ ಅಲ್ಪಸ್ವಲ್ಪ ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

One-Nation-One-Police-Uniform-Suggested-in-Chintan-ShivirDownload

ಅದಾಗ್ಯೂ, ಎಲ್ಲಾ ರಾಜ್ಯಗಳಲ್ಲಿ ಒಂದೇ ಮಾದರಿಯ ಯೂನಿಫಾರ್ಮ್ ಜಾರಿಗೆ ಎಷ್ಟು ರಾಜ್ಯಗಳು ಅಂತಿಮವಾಗಿ ಒಪ್ಪಿಗೆ ಸೂಚಿಸುತ್ತವೆ ಎಂಬುದರ ಆಧಾರದ ಮೇಲೆ ಇದನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.

ಪೊಲೀಸರಿಗೆ ಒಂದು ದೇಶ ಒಂದು ಸಮವಸ್ತ್ರ ಪ್ರಸ್ತಾವನೆಯನ್ನು ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿಯೇ ಕೇಂದ್ರ ಸರ್ಕಾರ ಸಿದ್ಧಪಡಿಸಿತ್ತು. ಈ ಪ್ರಸ್ತಾವನೆ ರಾಜ್ಯದಲ್ಲಿ ಡಿಸೆಂಬರ್‌ ತಿಂಗಳು ಲಭ್ಯವಾಗಿದ್ದು, ಸಚಿವ ಸಂಪುಟದಲ್ಲಿ ಚರ್ಚೆಯನ್ನೂ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈಗ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಾತ್ವಿಕ ಒಪ್ಪಿಗೆಯನ್ನು ಸೂಚಿಸಿದ್ದು, ಕೆಲವು ದಿನಗಳಲ್ಲಿ ಅಧಿಕೃತ ಒಪ್ಪಿಗೆಯೊಂದಿಗೆ ಕೇಂದ್ರ ಸರ್ಕಾರಕ್ಕೆ ತಲುಪಲಿದೆ. ನಂತರ, ಪ್ರಸ್ತಾವನೆಯಲ್ಲಿ ಸೂಚಿಸಲಾಗಿದ್ದ ಸಮವಸ್ತ್ರಗಳು ಜಾರಿಗೆ ಬರಬಹುದು.

  ದೇಶಾದ್ಯಂತ ಪೊಲೀಸ್‌ ಸಮವಸ್ತ್ರ ಎಂದರೆ ಖಾಕಿ ಬಟ್ಟೆಯೇ ಇದೆ. ಆದರೆ, ಬೆಲ್ಟ್‌, ಟೊಪ್ಪಿಗೆ, ಹುದ್ದೆಗೆ ತಕ್ಕಂತೆ ಶೂಗಳ ಬಣ್ಣಗಳು ಬದಲಾಗುತ್ತದೆ. ಇನ್ನು ಆಯಾ ರಾಜ್ಯಗಳ ಬ್ಯಾಡ್ಜ್‌ಗಳು ಬದಲಾಗುತ್ತವೆ. ಜೊತೆಗೆ, ಪೊಲೀಸ್‌ ಕಾನ್ಸ್‌ಸ್ಟೇಬಲ್‌, ರಿಸರ್ವ್‌ ಪೊಲೀಸ್‌, ಹೆಡ್‌ ಕಾನ್‌ಸ್ಟೇಬಲ್, ಎಎಸ್‌ಐ, ಪಿಎಸ್‌ಐ, ಸಿಪಿಐ, ಎಸ್‌ಪಿ, ಎಡಿಜಿಪಿ, ಡಿಜಿಪಿ ಹುದ್ದೆಗಳಿಗೆ ತಕ್ಕಂತೆ ಸ್ಟಾರ್‌ಗಳು, ಲಾಂಛನ    ಬದಲಾಗುತ್ತದೆ.  

RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಅಕ್ಷರ, ಆರೋಗ್ಯ, ಅನ್ನವನ್ನು ಕಡೆಗಣಿಸಿದೆ.
ಇದೀಗ

ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಅಕ್ಷರ, ಆರೋಗ್ಯ, ಅನ್ನವನ್ನು ಕಡೆಗಣಿಸಿದೆ.

by ಪ್ರತಿಧ್ವನಿ
February 4, 2023
ಕಾರ್ಯಕರ್ತರಿಗೆ ಊಟದ ಚಿಂತೆ, ಕಟೀಲ್ ಗೆ ಭಾಷಣದ ಚಿಂತೆ …! #pratidhvani #pratidhvanidigital #nalinkumarkatil
ರಾಜಕೀಯ

ಕಾರ್ಯಕರ್ತರಿಗೆ ಊಟದ ಚಿಂತೆ, ಕಟೀಲ್ ಗೆ ಭಾಷಣದ ಚಿಂತೆ …! #pratidhvani #pratidhvanidigital #nalinkumarkatil

by ಪ್ರತಿಧ್ವನಿ
February 8, 2023
ಕಾಂತಾರ 100 ಡೇಸ್‌ ಸೆಲೆಬ್ರೆಷನ್ ಶಿವ ಲೀಲಾ ಮಿಂಚಿಗ್. #pratidhvanidigital #kantara #kantaramovie #100days
ಸಿನಿಮಾ

ಕಾಂತಾರ 100 ಡೇಸ್‌ ಸೆಲೆಬ್ರೆಷನ್ ಶಿವ ಲೀಲಾ ಮಿಂಚಿಗ್. #pratidhvanidigital #kantara #kantaramovie #100days

by ಪ್ರತಿಧ್ವನಿ
February 7, 2023
ನಮ್ಮ ಪಕ್ಷದ ಪ್ರತಿಯೊಬ್ಬ ಕನ್ನಡಿಗನಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ: ಡಾ.ಸಿ.ಎನ್. ಅಶ್ವತ್ಥನಾರಾಯಣ
ಕರ್ನಾಟಕ

ನಮ್ಮ ಪಕ್ಷದ ಪ್ರತಿಯೊಬ್ಬ ಕನ್ನಡಿಗನಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ: ಡಾ.ಸಿ.ಎನ್. ಅಶ್ವತ್ಥನಾರಾಯಣ

by ಪ್ರತಿಧ್ವನಿ
February 7, 2023
ಜೋಶಿ ಬ್ರಾಹ್ಮಣತ್ವದ ಬಗ್ಗೆ HDK ಮಾತಿಗೆ CM ಖಡಕ್ ರಿಯಾಕ್ಷನ್
ರಾಜಕೀಯ

ಜೋಶಿ ಬ್ರಾಹ್ಮಣತ್ವದ ಬಗ್ಗೆ HDK ಮಾತಿಗೆ CM ಖಡಕ್ ರಿಯಾಕ್ಷನ್

by ಪ್ರತಿಧ್ವನಿ
February 7, 2023
Next Post
ʼನಾವು ನಮ್ಮ ಪಾಠ ಕಲಿತಿದ್ದೇವೆʼ: ಪ್ರಧಾನಿ ಮೋದಿಗೆ ಪಾಕ್‌ ಪ್ರಧಾನಿ ನೀಡಿದ ಕರೆಯೇನು?

ʼನಾವು ನಮ್ಮ ಪಾಠ ಕಲಿತಿದ್ದೇವೆʼ: ಪ್ರಧಾನಿ ಮೋದಿಗೆ ಪಾಕ್‌ ಪ್ರಧಾನಿ ನೀಡಿದ ಕರೆಯೇನು?

1960ರ ಬಳಿಕ‌ ಮೊದಲ ಬಾರಿ‌ ಕುಸಿದ ಚೀನಾದ ಜನಸಂಖ್ಯೆ: ಸದ್ಯದಲ್ಲೇ ಚೀನಾವನ್ನು ಹಿಂದಿಕ್ಕಲಿದೆ ಭಾರತ

1960ರ ಬಳಿಕ‌ ಮೊದಲ ಬಾರಿ‌ ಕುಸಿದ ಚೀನಾದ ಜನಸಂಖ್ಯೆ: ಸದ್ಯದಲ್ಲೇ ಚೀನಾವನ್ನು ಹಿಂದಿಕ್ಕಲಿದೆ ಭಾರತ

ಸಿದ್ದರಾಮಯ್ಯ ಸ್ಪರ್ಧೆಗೆ ಬೆಚ್ಚಿ ಬಿದ್ದ ವರ್ತೂರು ಪ್ರಕಾಶ್:‌ ಒಕ್ಕಲಿಗ, ದಲಿತ, ಕುರುಬರನ್ನು ಎತ್ತಿ ಕಟ್ಟುವ ಹುನ್ನಾರ.!

ಸಿದ್ದರಾಮಯ್ಯ ಸ್ಪರ್ಧೆಗೆ ಬೆಚ್ಚಿ ಬಿದ್ದ ವರ್ತೂರು ಪ್ರಕಾಶ್:‌ ಒಕ್ಕಲಿಗ, ದಲಿತ, ಕುರುಬರನ್ನು ಎತ್ತಿ ಕಟ್ಟುವ ಹುನ್ನಾರ.!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist