ಉಕ್ರೇನ್ನಲ್ಲಿನ ಬಿಕ್ಕಟ್ಟು ಸೇರಿದಂತೆ ವಿವಿಧ ಭೌಗೋಳಿಕ ರಾಜಕೀಯ ಬೆಳವಣಿಗೆಗಳೊಂದಿಗೆ ನವದೆಹಲಿ ವ್ಯವಹರಿಸುತ್ತಿರುವ ಸಮಯದಲ್ಲಿ ಅನುಭವಿ ರಾಜತಾಂತ್ರಿಕ ವಿನಯ್ ಮೋಹನ್ ಕ್ವಾತ್ರಾ ಅವರು ಭಾನುವಾರ ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
1988ರ ಬ್ಯಾಚ್ನ ಭಾರತೀಯ ವಿದೇಶಾಂಗ ಸೇವೆ (IFS) ಅಧಿಕಾರಿಯಾಗಿ ಕ್ವಾತ್ರಾ ಅವರು ಶನಿವಾರ ಸೇವೆಯಿಂದ ನಿವೃತ್ತರಾದ ಹರ್ಷ್ ವರ್ಧನ್ ಶ್ರಿಂಗ್ಲಾ ಅವರ ಉತ್ತರಾಧಿಕಾರಿಯಾಗಿದ್ದಾರೆ.
ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹರ್ಷವರ್ಧನ್ ಶೃಂಗ್ಲಾ (ಐಎಫ್ ಎಸ್: 1984) ಅವರು ಕಳೆದ ತಿಂಗಳು ಮಾರ್ಚ್ 30ರಂದು ನಿವೃತ್ತಿಯಾಗಿದ್ದಾರೆ. ನಂತರ 2022ರ ವಿದೇಶಾಂಗ ಕಾರ್ಯದರ್ಶಿ ಹುದ್ದೆ ಕಾಲಿ ಇದ್ದು ಅದಕ್ಕೆ ಕ್ಯಾಬಿನೆಟ್ ನೋಟ್ನ ನೇಮಕಾತಿ ಸಮಿತಿಯು ‘ಕಠ್ಮಂಡುವಿನಲ್ಲಿ ರಾಯಭಾರಿಯಾಗಿದ್ದ ವಿನಯ್ ಮೋಹನ್ ಕ್ವಾತ್ರಾ (ಐಎಫ್ ಎಸ್: 1988) ಅವರನ್ನು ನೇಮಿಸಲು ಅನುಮೋದನೆ ನೀಡಿದೆ. ಇಂದು ಅಧಿಕೃತವಾಗಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಕ್ವಾತ್ರಾ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ನೇಪಾಳಕ್ಕೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕು ಮೊದಲು ಅಂದರೆ ಆಗಸ್ಟ್ 2017 ರಿಂದ ಫೆಬ್ರವರಿ 2020 ರವರೆಗೆ ಫ್ರಾನ್ಸ್ಗೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದರು. 32 ವರ್ಷಗಳ ಅನುಭವ ಹೊಂದಿರುವ ಕ್ವಾತ್ರಾ ಅವರು ಅಕ್ಟೋಬರ್ 2015 ಮತ್ತು ಆಗಸ್ಟ್ 2017 ರ ನಡುವೆ ಎರಡು ವರ್ಷಗಳ ಕಾಲ ಪ್ರಧಾನ ಮಂತ್ರಿ ಕಚೇರಿಯಲ್ಲಿ (PMO) ಜಂಟಿ ಕಾರ್ಯದರ್ಶಿ ಸ್ಥಾನವನ್ನು ಹೊಂದಿದ್ದಾರೆ. ಕ್ವಾತ್ರಾ ಅವರು ಭಾರತದ ನೆರೆಹೊರೆಯೊಂದಿಗೆ ಯುಎಸ್, ಚೀನಾ ಮತ್ತು ಯುರೋಪ್ನೊಂದಿಗೆ ವ್ಯವಹರಿಸುವ ಪರಿಣತಿಯನ್ನು ಹೊಂದಿದ್ದಾರೆಂದು ತಿಳಿದುಬಂದಿದೆ.
“ವಿನಯ್ ಕ್ವಾತ್ರಾ ಅವರು ಇಂದು ಬೆಳಿಗ್ಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ವಿದೇಶಾಂಗ ಕಾರ್ಯದರ್ಶಿ ಕ್ವಾತ್ರಾ ಅವರಿಗೆ ಮುಂದೆ ಯಶಸ್ವಿ ಅಧಿಕಾರಾವಧಿಯನ್ನು ನಿರ್ವಹಿಸಲಿ ಎಂದು #TeamMEA ಹಾರೈಸುತ್ತದೆ” ಎಂದು MEA ವಕ್ತಾರ ಅರಿಂದಮ್ ಬಾಗ್ಚಿ ಭಾನುವಾರ ಟ್ವೀಟ್ ಮಾಡಿದ್ದಾರೆ.
ಉಕ್ರೇನ್ ಸಂಘರ್ಷ, ಶ್ರೀಲಂಕಾದಲ್ಲಿನ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಇಂಡೋ-ಪೆಸಿಫಿಕ್ನಲ್ಲಿನ ಬೆಳವಣಿಗೆಗಳು ಸೇರಿದಂತೆ ವಿವಿಧ ಭೌಗೋಳಿಕ ರಾಜಕೀಯ ಬೆಳವಣಿಗೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಭಾರತ ವಿದೇಶಾಂಗ ಕಾರ್ಯದರ್ಶಿಯಾಗಿ ವಿನಯ್ ಕ್ವಾತ್ರಾ ಅಧಿಕಾರ ವಹಿಸಿಕೊಂಡಿದ್ದಾರೆ.