ಕಳೆದ 45 ದಿನಗಳಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ (BGS hospital) ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್ (Actor darshan) ಮೊನ್ನೆ ರೆಗ್ಯುಲರ್ ಜಾಮೀನು ಸಿಕ್ಕಿರುವ ಹಿನ್ನಲೆ, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ದರ್ಶನ್ ಕೋರ್ಟ್ ಮುಂದೆ ಹಾಜರಾಗಿದ್ದರು.

ದರ್ಶನ್ ಪಾಸ್ ಪೋರ್ಟ್ (Passport) ವಾಪಸ್ ನೀಡಲು ಕೋರ್ಟ್ ಸೂಚನೆ ನೀಡಿದೆ. ಯಾಕಂದ್ರೆ ಹೈಕೋರ್ಟ್ ರೆಗ್ಯುಲರ್ ಬೇಲ್ ಆದೇಶದಲ್ಲಿ ಪಾಸ್ ಪೋರ್ಟ್ ಸರೆಂಡರ್ ಮಾಡಬೇಕು ಎಂಬ ಷರತ್ತು ಇಲ್ಲ. ಹೀಗಾಗಿ ಪಾಸ್ ಪೋರ್ಟ್ ವಾಪಸ್ ನೀಡುವಂತೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು.
ಹೀಗಾಗಿ ದರ್ಶನ್ ಪಾಸ್ ಪೋರ್ಟ್ ವಾಪಸ್ ನೀಡುವಂತೆ ಜಡ್ಜ್ ಸೂಚನೆ ನೀಡಿದ್ದಾರೆ. ಮತ್ತೊಂದೆಡೆ

ಪವಿತ್ರಗೌಡ ಶೂರಿಟಿ ಪ್ರಕ್ರಿಯೆ ಮುಕ್ತಾಯಗೊಡಿದ್ದು
ಕೆಲವೇ ಕ್ಷಣಗಳಲ್ಲಿ ಪವಿತ್ರಗೌಡ (Pavitra gowda) ಬಿಡುಗಡೆ ಆದೇಶ ಪ್ರತಿ ರವಾನೆಯಾಗಲಿದೆ. ಜೈಲು ಅಧಿಕಾರಿಗಳಿಗೆ ಇಮೇಲ್ ಮೂಲಕ ಜಾಮೀನು ಆದೇಶ ಪ್ರತಿ ಕಳುಹಿಸಲು ಜಡ್ಜ್ ಸೂಚನೆ ನೀಡಿದ್ದು ಇಂದು ಸಂಜೆಯೊಳಗೆ ಪವಿತ್ರ ರಿಲೀಸ್ ಆಗೋದು ಕನ್ಫರ್ಮ್.