ಬೆಂಗಳೂರು : ಬಿಹಾರದ ಪ್ರಮುಖ ಸಂಪರ್ಕ ಸೇತುವೆಗಳಲ್ಲಿ ಒಂದಾದ ವಿಕ್ರಮಶೀಲಾ ಸೇತುವೆ (Vikramshila Setu) ಇದೀಗ ಆತಂಕದ ಕೇಂದ್ರವಾಗಿದೆ. ಇತ್ತೀಚೆಗೆ ನಡೆದ ಘಟನೆಯೊಂದು ಈ ಸೇತುವೆಯ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದಲ್ಲದೆ, ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಇಷ್ಟೊಂದು ಬೇಜವಾಬ್ದಾರಿಯಾಗಿರುವ ನಿತೀಶ್ ಸರ್ಕಾರದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯವಾಗಿ ಸೇತುವೆಯ ಒಂದು ಪಿಲ್ಲರ್‌ಗೆ ಆಧಾರವಾಗಿ ನಿರ್ಮಿಸಿದ್ದ ಸುರಕ್ಷತಾ ಗೋಡೆ ಸಂಪೂರ್ಣವಾಗಿ ಕುಸಿದಿದೆ. ಇದರ ಜೊತೆಗೆ ಇನ್ನೂ ಎರಡು ಪಿಲ್ಲರ್‌ಗಳ ಬಳಿ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಆದರೆ ಇದು ಅತ್ಯಂತ ದೊಡ್ಡ ಮಟ್ಟದ ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಆದರೂ ಸಂಬಂಧಪಟ್ಟವರು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಕಳವಳಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಗಂಗಾ (Ganga River) ನದಿಗೆ ಹೆಚ್ಚಿದ ಪ್ರವಾಹವೇ ಈ ಹಾನಿಗೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.
ನೀರಿನ ತೀವ್ರ ಒತ್ತಡದಿಂದ ಪಿಲ್ಲರ್ ಸುತ್ತಲಿನ ರಕ್ಷಣಾ ವ್ಯವಸ್ಥೆ ದುರ್ಬಲವಾಗಿದೆ. ಈ ಸೇತುವೆ ಉತ್ತರ ಮತ್ತು ದಕ್ಷಿಣ ಬಿಹಾರವನ್ನು ಸಂಪರ್ಕಿಸುವ ಜೀವನಾಡಿಯಾಗಿದೆ. ಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ.
ಇದನ್ನೂ ಓದಿ : ಕಾಂಗ್ರೆಸ್‌ನಲ್ಲಿ ಟಿಕೆಟ್ ಗದ್ದಲ: ಎಸ್.ಎಸ್. ಮಲ್ಲಿಕಾರ್ಜುನ ನಡೆ ವಿರುದ್ಧ ಅಸಮಾಧಾನ
ಆದರೆ ಭವಿಷ್ಯದಲ್ಲಿ ಈ ಸೇತುವೆಯಿಂದ ದೊಡ್ಡ ಮಟ್ಟದ ಅಪಾಯವಾಗುವ ಸಾಧ್ಯತೆಯಿದೆ. ಪಿಲ್ಲರ್ ವಾಲಿರುವ ವಿಡಿಯೋ ವೀಕ್ಷಿಸಿದ ನಂತರ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಅಲ್ಲದೆ
ತಜ್ಞರಿಂದ ಇದರ ಅಪಾಯದ ಸ್ಥಿತಿಗತಿಯ ಕುರಿತು ಮೌಲ್ಯಮಾಪನ ಮಾಡಲು ಮುಂದಾಗಿದೆ.
ಬಿಹಾರದ ಈ ಸೇತುವೆ ಅಪಾಯವನ್ನು ಹೊತ್ತು ತನ್ನ ಕಾರ್ಯನಿರ್ವಹಿಸುತ್ತಿದೆ. ಸೇತುವೆಯ ಸುರಕ್ಷತಾ ಗೋಡೆ ಕುಸಿತದ ಸಾಧ್ಯತೆಯು ದಟ್ಟವಾಗಿದೆ. ಈ ಕಾರಣಕ್ಕಾಗಿಯೇ ಅದರ ಸುರಕ್ಷತೆಯ ಬಗ್ಗೆ ಗಂಭೀರ ಸಮಸ್ಯೆಗಳು ಮೂಡುತ್ತಿವೆ. ಕೂಡಲೇ ಬಿಹಾರ ಸರ್ಕಾರ ಈ ಪ್ರಮುಖ ಸೇತುವೆಯ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಸದ್ಯ ಬಿಹಾರದಲ್ಲಿ ಎನ್‌ಡಿಎ ಸರ್ಕಾರ ಆಡಳಿತದಲ್ಲಿದೆ. ಹಲವಾರು ಬಾರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಜನರ ಸುರಕ್ಷತೆಯ ಬಗ್ಗೆ ಭಾಷಣಗಳನ್ನು ಮಾಡುತ್ತಾರೆ. ಆದರೆ ಈಗ ಅವರದೇ ಆಡಳಿತವಿರುವ ಬಿಹಾರದಲ್ಲಿ ಈ ರೀತಿಯ ಅವ್ಯವಸ್ಥೆ ತಲೆದೂರಿದ್ದು, ಜನಸಾಮಾನ್ಯರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ.






