• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಎಷ್ಟು ಸುಳ್ಳು ಹೇಳುತ್ತೀರಿ, ಜಗತ್ತಿಗೆ ಎಲ್ಲ ಗೊತ್ತು : ಟ್ರಂಪ್‌ನ ಹಸಿ ಹಸಿ ಸುಳ್ಳುಗಳಿಗೆ ಇರಾನ್‌ ತಿರುಗೇಟು..!

ಈ ಯುದ್ಧದ ವಿಚಾರದಲ್ಲಿ ಅಮೆರಿಕ ಸರ್ಕಾರ ಒಂದು ಹೇಳುತ್ತಿದೆ, ಆದರೆ ವಾಸ್ತವತೆಯೇ ಬೇರೆಯಿದೆ ಎಂದು ಇರಾನ್ ವಾಗ್ದಾಳಿ..

ಪ್ರತಿಧ್ವನಿ by ಪ್ರತಿಧ್ವನಿ
March 21, 2026
in Top Story, ಇದೀಗ, ರಾಜಕೀಯ, ವಿದೇಶ
0
ಎಷ್ಟು ಸುಳ್ಳು ಹೇಳುತ್ತೀರಿ, ಜಗತ್ತಿಗೆ ಎಲ್ಲ ಗೊತ್ತು : ಟ್ರಂಪ್‌ನ ಹಸಿ ಹಸಿ ಸುಳ್ಳುಗಳಿಗೆ ಇರಾನ್‌ ತಿರುಗೇಟು..!
Share on WhatsAppShare on FacebookShare on Telegram

ನವದೆಹಲಿ : ಇರಾನ್‌ ಮೇಲೆ ನಡೆಸಿರುವ ಇಸ್ರೇಲ್‌ ಹಾಗೂ ಅಮೆರಿಕ ದೇಶಗಳ ಯುದ್ಧಕ್ಕೆ ಇಂದು 22 ದಿನಗಳಾಗಿವೆ. ಆದರೆ ಈ ಮೂರು ವಾರಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ಸೇನೆ ಮುಗಿದಿದೆ, ಅಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾಗೂ ಸೇನಾ ನೆಲೆಗಳು, ವಾಯು ನೆಲೆಗಳನ್ನು ಧ್ವಂಸ ಮಾಡಿದ್ದೇವೆ ಎಂಬ ಇತ್ಯಾದಿ ಹೇಳಿಕೆಗಳನ್ನು ನೀಡುತ್ತಿದ್ದರು. ಯುದ್ಧ ಆರಂಭಿಸಿದ್ದಾಗಿನಿಂದ ಹಿಡಿದು ಪ್ರತಿ ದಿನ ಮಾಧ್ಯಮಗಳಿಗೆ ಮನಬಂದಂತೆ ಕಪೋಲ ಕಲ್ಪಿತ ಮಾಹಿತಿ ತುಂಬುತ್ತಿದ್ದರು.

ADVERTISEMENT
Sangamesh Upase :KAS Officer Sangamesh Upase Interview| ಮನುಷ್ಯನ ಮನಸ್ಥಿತಿ ಬದಲಾದ್ರೆ, ಮನುಷ್ಯರಾಗ್ತೀವಿ...

ಆದರೆ ಅಮೆರಿಕದ ಹಸಿ ಹಸಿ ಸುಳ್ಳುಗಳನ್ನು ಇದೀಗ ಇರಾನ್‌ ಜಗತ್ತಿನ ಮುಂದೆ ಬಟಾ ಬಯಲು ಮಾಡಿದೆ. ಈಗಾಗಲೇ ನಾವು ಹೇಳಿಕೊಂಡಂತೆ ಅಮೆರಿಕದ F-35 ವಿಮಾನ ಉರುಳಿಸಿದ್ದೇವೆ. ಯುಎಸ್‌ಎಸ್‌ನ ಜೆರಾಲ್ಡ್ ಫೋರ್ಡ್, ಅಮೆರಿಕದ ಅಬ್ರಹಾಂ ಲಿಂಕನ್ ನೌಕೆಯು ನೆಲಕಚ್ಚಿದೆ. ಈ ಯುದ್ಧದಲ್ಲಿ ಅಮೆರಿಕಕ್ಕೆ ಗೆಲುವಾಗಲು ಸಾಧ್ಯವೇ ಇಲ್ಲ, ಟ್ರಂಪ್‌ ಹೇಳಿರುವುದು ಎಲ್ಲ ಸುಳ್ಳು ಎಂದು ಇರಾನ್‌ನ ವಿದೇಶಾಂಗ ಸಚಿವ ಸೈಯ್ಯದ್‌ ಅಬ್ಬಾಸ್  ಅರಾಘ್ಚಿ ಕಿಡಿ ಕಾರಿದ್ದಾರೆ.

ವಿಯೆಟ್ನಾಂನಲ್ಲಿ ನೂರಾರು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾಗ ಆ ಫಲಿತಾಂಶವು ಸ್ಪಷ್ಟವಾಗಿದ್ದಾಗಲೂ, ಯುದ್ಧವು ಚೆನ್ನಾಗಿ ನಡೆಯುತ್ತಿದೆ ಎಂದು ಎಲ್ಲರಿಗೂ ಭರವಸೆ ನೀಡಲು ಜನರಲ್ ವಿಲಿಯಂ ವೆಸ್ಟ್‌ಮೋರ್‌ಲ್ಯಾಂಡ್ ಅವರನ್ನು ಮನೆಗೆ ಕರೆಸಿದ್ದೀರಿ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ : ಕನ್ನಡ ಗೀತೆಯ ಮೂಲಕ ಪ್ರಧಾನಿ ಮೋದಿ ಶುಭಾಶಯ ಸಂದೇಶ 

ಮಾಧ್ಯಮಗಳು ಸಹ ಯಾವುದನ್ನೂ ಮರೆತಿಲ್ಲ, ಮುಂಚೂಣಿಯಿಂದ ಬಂದ ಆ ಅಸತ್ಯದ, ಉಡಾಫೆಯ ಮಾತುಗಳನ್ನು ಸುದ್ದಿಗೋಷ್ಠಿಯ ಹೇಳಿಕೆಗಳಲ್ಲಿ ನೋಡಿದ್ದೇವೆ. ಆದರೆ ಇವೆಲ್ಲ ನಿಮ್ಮ ಅಪಖ್ಯಾತಿಗೆ ಕಾರಣವಾಗುತ್ತವೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಇಂದಿನವರೆಗೆ ನೀವು ವೇಗವಾಗಿ ಮುಂದುವರಿಯಿರಿ: ಅದೇ ಸ್ಕ್ರಿಪ್ಟ್, ಆದರೆ ವಿಭಿನ್ನ ಶೈಲಿಯಷ್ಟೇ; ಆ ಹೆಗ್ಸೆತ್ ಹೆಜ್ಜೆ ಹಾಕುತ್ತಾನೆ, ಸತ್ಯವನ್ನು ಮರೆಮಾಚಿ ಸುಳ್ಳನ್ನು ಹರಡುತ್ತೀರಿ ಎಂದು ಅಮೆರಿಕದ ವಿರುದ್ಧ ಅರಾಘ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಯುದ್ಧದ ವಿಚಾರದಲ್ಲಿ ಅಮೆರಿಕ ಸರ್ಕಾರ ಒಂದು ಹೇಳುತ್ತಿದೆ, ಆದರೆ ವಾಸ್ತವತೆಯೇ ಬೇರೆಯಿದೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಅಮೆರಿಕದ ಅಧಿಕಾರಿಗಳು ಹಸಿ ಸುಳ್ಳು ಹೇಳುತ್ತಿದ್ದಂತೆಯೇ ಒಂದು ಎಫ್-35 ವಿಮಾನವನ್ನು ನಾವು ಹೊಡೆದುರುಳಿಸಿದ್ದೇವೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಇರಾನ್‌ನ ನೌಕಾಪಡೆಯನ್ನು ಸಂಪೂರ್ಣ ಮುಗಿಸಿದ್ದೇವೆ ಎಂಬ ಹೇಳಿಕೆಯನ್ನೂ ನೀಡುವಷ್ಟರಲ್ಲಿಯೇ, ನಾವು ಅಮೆರಿಕದ ಜೆರಾಲ್ಡ್ ಫೋರ್ಡ್ ನೌಕೆಯನ್ನು ಪುಡಿಗಟ್ಟಿದ್ದೇವೆ. ಅಮೆರಿಕದ ಸುಳ್ಳಿನ ಸರಮಾಲೆಯನ್ನೇ ಹೆಣೆಯುತ್ತಿದೆ. ಆದರೆ ಇದರಲ್ಲಿ ಗೆಲುವು ನಮ್ಮದೇ ಎಂದು ಸೈಯ್ಯದ್‌ ಅಬ್ಬಾಸ್‌ ಅರಾಘ್ಚಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು ಅಮೆರಿಕ ಹಾಗೂ ಟ್ರಂಪ್‌ ವಿರುದ್ಧ  ವಾಗ್ದಾಳಿ ನಡೆಸಿದ್ದಾರೆ.

Tags: Abraham Lincon vesselAmerica PresidentDonald TrumpDrone attackinternational newsIran Foreign MinisterIran israel conflictsiran warMediaMiddle East TentionsMissile AttackPratidhvanipressmeetSayyed Abbas AragchiVietnam Conflicts
Previous Post

ಕನ್ನಡ ಗೀತೆಯ ಮೂಲಕ ಪ್ರಧಾನಿ ಮೋದಿ ಶುಭಾಶಯ ಸಂದೇಶ 

Next Post

Viral News ; ಅಪಾಯದಲ್ಲಿ ಗಂಗಾ ನದಿಯ ಈ ಸೇತುವೆ : ಜನರಲ್ಲಿ ಪಿಲ್ಲರ್ ಕುಸಿತದ ಆತಂಕ!

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post
Viral News ; ಅಪಾಯದಲ್ಲಿ ಗಂಗಾ ನದಿಯ ಈ ಸೇತುವೆ : ಜನರಲ್ಲಿ ಪಿಲ್ಲರ್ ಕುಸಿತದ ಆತಂಕ!

Viral News ; ಅಪಾಯದಲ್ಲಿ ಗಂಗಾ ನದಿಯ ಈ ಸೇತುವೆ : ಜನರಲ್ಲಿ ಪಿಲ್ಲರ್ ಕುಸಿತದ ಆತಂಕ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada