
ಹಾಸನ: ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ನಮ್ಮ ಜನಾಕ್ರೋಶ ಯಾತ್ರೆಗೆ ಇಂದು ಹಾಸನದಲ್ಲಿ ವರುಣ ದೇವ ಕೂಡ ಆಶೀರ್ವಾದ ಮಾಡಿದ್ದಾನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಹೇಳಿದ್ರು. ಆದ್ರೆ ಇದೀಗ ಮೂವತ್ತಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಮುಸಲ್ಮಾನರ ಮಕ್ಕಳು ಫಾರಿನ್ಗೆ ಹೋದರೆ ಕೊಡುವ ಹಣ ಹೆಚ್ಚಿಸಿದ್ದಾರೆ. ಮುಸ್ಲಿಂ ಮಸೀದಿಗಳ ಮೌಲ್ವಿಗಳಿಗೆ ಸಂಬಳ ಹೆಚ್ಚಿಸಿದ್ದಾರೆ. ಆದ್ರೆ ಹಿಂದೂ ದೇವಾಲಯದ ಅರ್ಚಕರಿಗೆ ಹೆಚ್ಚಿಗೆ ಮಾಡಲಿಲ್ಲ ಎಂದು ಟೀಕಿಸಿದ್ದಾರೆ.
ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾರೆ. ಇವತ್ತು ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುವ ಜವಾಬ್ದಾರಿ ನಮ್ಮದು. ಆದ್ದರಿಂದ ಇಂದು ಈ ಯಾತ್ರೆ ಮಾಡುತ್ತಿದ್ದೇವೆ. ನಮಗೆ ಸರ್ಕಾರವನ್ನ ಬೀಳಿಸುವ ಯೋಚನೆ ಇಲ್ಲ. ಈ ಸರ್ಕಾರದ ಶಾಸಕರೇ ಬೀಳಿಸುತ್ತಾರೆ ಎಂದು ಹೇಳುತ್ತಿದ್ದಾರೆ. ಆರ್. ವಿ ದೇಶಪಾಡೆ ಅನುಧಾನ ಕೊಡುತ್ತಿಲ್ಲ, ಇಂತಹ ಧರಿದ್ರ ಸರ್ಕಾರ ನೋಡಿಲ್ಲ ಎನ್ನುತ್ತಿದ್ದಾರೆ. ಹಿರಿಯ ಶಾಸಕ ರಾಜು ಕಾಗೆ ಕೂಡ ಈ ಸರ್ಕಾರ ಅನುಧಾನ ನೀಡುತ್ತಿಲ್ಲ, ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲೂ ಚಿಕಿತ್ಸಾ ದರ ಹೆಚ್ಚಿಗೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ತಜ್ಞರ ಸಮಿತಿ ಮಾಡಿಕೊಂಡು, ರಾಜ್ಯದಲ್ಲಿ ಅಭಿವೃದ್ಧಿ, ಹೊಸ ಯೋಜನೆ ಮಾಡುತ್ತಾರೆ ಎಂದುಕೊಂಡಿದ್ದೆ. ಆದ್ರೆ ಇವರು ತಜ್ಞರ ಸಮಿತಿ ಮಾಡಿಕೊಂಡು ಬೆಲೆ ಏರಿಸಿ ಲೂಟಿ ಮಾಡುವ ಕೆಲಸ ಮಾಡುತ್ತಿದೆ. ಇಂತಹ ಸರ್ಕಾರ ರಾಜ್ಯದಲ್ಲಿ ಇದ್ದೂ ಸತ್ತಂಗೆ. ಇವರು ಮುಸಲ್ಮಾನರಿಗೆ ಶೇಕಡ 4 ಮೀಸಲಾತಿ ನೀಡಿದ್ದಾರೆ. ಬಿಜೆಪಿ ಮುಸಲ್ಮಾನರ ವಿರೋಧಿಗಳಲ್ಲ. ಆದ್ರೆ ದೇಶ ದ್ರೋಹಿಗಳ ವಿರೋಧಿಗಳು. ಕಾಶ್ಮೀರದ ಲಾಲ್ ಚೌಕಕ್ಕೆ ಕಾಲಿಡಿ ಎಂಬ ಬೆದರಿಕೆ ಹಾಕಿದ್ರು. ಆಗ ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ಮಾಡಿ ಯಶಸ್ವಿಯಾದೆವು ಎಂದು ನೆನಪಿಸಿಕೊಂಡಿದ್ದಾರೆ.

ಹಿಂದೂಗಳಲ್ಲಿ ಯಾರೂ ನಿಮಗೆ ಕಾಣುತ್ತಿಲ್ವ..? ಮುಸಲ್ಮಾನರ ಮಕ್ಕಳಿಗೆ ಮಾತ್ರ ವಿದೇಶದಲ್ಲಿ ವಿದ್ಯಾಭ್ಯಾಕ್ಕೆ ಹಣ ಕೊಡುತ್ತೀರಿ, ಆದ್ರೆ ಹಿಂದೂಗಳು ನಿಮ್ಮ ಕಣ್ಣಿಗೆ ಕಾಣಿಸಲ್ವಾ..? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಅಹಿಂದಾ ಹೆಸರಿನಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ್ರು, ಈ ಸರ್ಕಾರ ಬಂದ ಮೇಲೆ ಮುಸ್ಲಿಮರ ಹಿಂದೆ ಓಡುತ್ತಿದ್ದಾರೆ. ಎಸ್ಸಿ, ಎಸ್ಟಿ ಹಣವನ್ನ ದುರುಪಯೋಗ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಯಡಿಯೂರಪ್ಪನವರ ಸರ್ಕಾರದಲ್ಲಿ ರೈತರಿಗೆ ಟ್ರಾನ್ಸ್‌ಫಾರ್ಮರ್ಸ್ ಹಾಕೋದಕ್ಕೆ 25 ಸಾವಿರ ಇತ್ತು. ಈ ಸರ್ಕಾದಲ್ಲಿ 3 ಲಕ್ಷ ಕೊಡಬೇಕಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.







