ರಾಜ್ಯ ಸಚಿವ ಹಾಗೂ ಕೇಂದ್ರ ಸಚಿವರ ನಡುವಿನ ರಾಜಕೀಯ ವಾಗ್ಯುದ್ಧ ತಾರಕಕ್ಕೇರಿದ್ದು ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಹೆಚ್.ಡಿ ಕುನರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಚಿವ ಚೆಲುವರಾಯ ಸ್ವಾಮಿ ಗೆ ಇರುವ ಚಟ ನನಗೆ ಇಲ್ಲ ಎಂದಿದ್ದಾರೆ.

ಸ್ವತಃ ಮಂಡ್ಯ ಜಿಲ್ಲೆಯಲ್ಲಿ ಚಲುವರಾಯಸ್ವಾಮಿ ಚಟಗಳ ಬಗ್ಗೆ ಕೇಳಿದ್ರೆ, ಅಲ್ಲಿನ ಜನರೇ ಹೇಳ್ತಾರೆ.ಆದ್ರೆ ಚಟಗಳ ಬಗ್ಗೆ ಚರ್ಚೆ ಮಾಡೋದು ಬೇಡಾ, ಅದು ಕೀಳುಮಟ್ಟದ ಅಭಿರುಚಿ.ಚಲುವರಾಯಸ್ವಾಮಿ ಎಷ್ಟು ಮನೆ ಹಾಳು ಮಾಡಿದ್ದಾರೆ ಗೊತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ನಾನು ದುಡ್ಡು ಮಾಡಬೇಕೆಂದು ಆಸೆ ಪಟ್ಟಿಲ್ಲ.ನಾನು ಜನರ ಮಧ್ಯ 24 ಗಂಟೆ ಕೆಲಸ ಮಾಡಿದ್ದೇನೆ.ಜನತಾ ದರ್ಶನ, ಗ್ರಾಮ ವಾಸ್ತವ್ಯದಲ್ಲಿ ಬೆಳಗ್ಗಿನ ಜಾವದವರೆಗೆ ಕೆಲಸ ಮಾಡಿದ್ದೇನೆ.ಇದು ನನ್ನ ವೈಯಕ್ತಿಕ ಸಮಸ್ಯೆ.ಎಲ್ಲವನ್ನೂ ದೇವರು ನೋಡುತ್ತಾನೆ ಎಂದಿದ್ದಾರೆ.






