ಹಾವೇರಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮೆ ಮಾಡಲಾಗುತ್ತಿದೆ. ಕೆಲವರಿಗೆ ಅದರ ಲಾಭ ಸಿಗುತ್ತಿದ್ದರೂ, ಅದು ಅವರ ಕೈಗೆ ದಕ್ಕುತ್ತಿಲ್ಲ. ಹೀಗಾಗಿ ಸರ್ಕಾರದ ಯೋಜನೆಯ ಹಣ ಕೇವಲ ಬ್ಯಾಂಕ್‌ಗೆ ಸೀಮಿತವಾಯ್ತಾ ಎಂಬ ಮೂಡುತ್ತಿದೆ.

ಪ್ರಮುಖವಾಗಿ ಜಿಲ್ಲೆಯಲ್ಲಿ ನಡೆದಿರುವ ಪ್ರಕರಣವೊಂದು ಈ ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಲ್ಲಿನ ನಿವಾಸಿ ಹುಸೇನ್ ಖಾನ್ ಪಠಾಣ್ ಎನ್ನುವವರು ನಾಗೇಂದ್ರ ಮಟ್ಟಿ ಕೆವಿಜಿ ಬ್ಯಾಂಕ್‌ನಲ್ಲಿ 2 ಲಕ್ಷ ಸಾಲ ಪಡೆದಿದ್ದರು. ಸರಿಯಾಗಿ ಸಾಲದ ಕಂತು ಕಟ್ಟಲು ಸಾಧ್ಯವಾಗದ ಕಾರಣಕ್ಕೆ ಬ್ಯಾಂಕ್ ಪಠಾಣ್ ಖಾತೆಯ ಮೇಲೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಆತನ ಪತ್ನಿ ಶಬಾನು ಬಾನು ಖಾತೆಯಲ್ಲಿನ ಹಣಕ್ಕೆ ಕತ್ತರಿ ಪ್ರಯೋಗಿಸಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ : ಪಾಕ್–ಅಫ್ಘಾನ್ ಗಡಿಯಲ್ಲಿ ತೀವ್ರ ಉದ್ವಿಗ್ನತೆ: ಪಾಕಿಸ್ತಾನದ ವೈಮಾನಿಕ ದಾಳಿ, ತಾಲಿಬಾನ್ ಖಂಡನೆ
ಇನ್ನೂ ಹೀಗೆ ಅಕೌಂಟ್‌ನಲ್ಲಿನ ಹಣಕ್ಕೆ ಕತ್ತರಿ ಬಿದ್ದ ಬಳಿಕ ಶಬಾನು ಬಾನುಗೆ ಏನೂ ತಿಳಿದಿರಲಿಲ್ಲ. ಮೊದಲಿಗೆ 4,000 ರೂಪಾಯಿ ಕಟ್ ಆಗಿತ್ತು. ಬಳಿಕ 11,000 ರೂಪಾಯಿ ಡೆಬಿಟ್ ಆಗಿದೆ. ಹೀಗಾಗಿ ಗೃಹ ಲಕ್ಷ್ಮಿ ಹಣಕ್ಕೆ ಬ್ಯಾಂಕ್ ಕನ್ನ ಹಾಕಿದ್ದು, ಸರ್ಕಾರದ ಯೋಜನೆಯ ಹಣಕ್ಕೂ ಭದ್ತೆಯಿಲ್ಲದಾಯಿತೆ ಎಂಬ ಪ್ರಶ್ನೆಯನ್ನು ಶಬಾನು ಎತ್ತಿದ್ದಾರೆ. ಅಲ್ಲದೆ ತಪ್ಪಿತಸ್ಥ ಬ್ಯಾಂಕ್ ಸಿಬ್ಬಂದಿಗಳ ಕ್ರಮ ಕೈಗೊಳ್ಳುವಂತೆ ಶಬಾನು ಬಾನು ಒತ್ತಾಯಿಸಿದ್ದಾರೆ.






