ಜಗತ್ತಿನಲ್ಲಿ ಕೆಲವೊಂದು ಅಪರಾಧ (crime) ಪ್ರಕರಣಗಳು ಕೇವಲ ಸಣ್ಣಸಣ್ಣ ವಿಚಾರಕ್ಕೆ ಊಹೆಗೂ ಮೀರಿದ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇಂತಹ ಅಪರಾಧ ಪ್ರಕರಣವನ್ನ ನೋಡುವ ಜನ(people) ಈ ರೀತಿಯಾದ ಘಟನೆಗಳು ಕೂಡ ನಡೆಯೋದಕ್ಕೆ ಸಾಧ್ಯವಿದ್ಯಾ ಎಂದು ಉದ್ಘರಿಸುತ್ತಾರೆ. ಆದ್ರೆ ಹಾಗೆ ಉದ್ಘರಿಸವರ ಊಹೆಗೂ ಮೀರಿದ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇದೀಗ ಇಂತಹದ್ದೇ ಒಂದು ವಿಚಿತ್ರವಾದ ಘಟನೆ ಬೆಂಗಳೂರಿನ(bengaluru) ತಲ್ಲಘಟಪುರ(Talaghattapura)ದಲ್ಲಿ ನಡೆದಿದೆ

ಹೌದು.. ಪಾತ್ರೆ(plats) ತೊಳೆಯುವ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಬಿಯರ್ ಬಾಟಲ್ ನಿಂದ ಗೆಳೆಯನಿಗೆ ಇರಿದು ಪರಾರಿಯಾಗಿದ್ದಾನೆ.ಕಲ್ಲು ಕುಮಾರ್ ಹಲ್ಲೆಗೊಳಗಾದ ಯುವಕ ಅನ್ನೋದು ತಿಳಿದು ಬಂದಿದ್ದು ಈತನಿಗೆ ಈಗ ಸೂಕ್ತ ಚಿಕಿತೆಯನ್ನ ಕೂಡ ನೀಡಲಾಗ್ತಾ ಇದೆ. ಇನ್ನು ಈ ಕುಮಾರ್ ಅನ್ನೋ ವ್ಯಕ್ತಿಗೆ ಬಿಯರ್ ಬಾಟಲ್ನಿಂದ ಇರಿದವನು ಆತನ ಸ್ನೇಹಿತನಾದ ಬಂಡ್ ಕುಮಾರ್

ಕುಮಾರ್ ಮತ್ತೆ ಬಂಡ್ ಕುಮಾರ್ ಇಬ್ಬರು ಸ್ನೇಹಿತರು. ನಿನ್ನೆ ರಾತ್ರಿ ಇಬ್ಬರು ಸೇರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಪಾತ್ರೆ ತೊಳೆಯುವ ಕಾರಣಕ್ಕೆ ಕಿತ್ತಾಟ ನಡೆದಿದೆ. ಎಣ್ಣೆ ಅಮಲಿನಲ್ಲಿದ್ದ ಬಂಡ್ ಕುಮಾರ್ ಬಿಯರ್ ಬಾಟಲ್ ನಿಂದ ಕುಮಾರ್ಗೆ ಇರಿದಿದ್ದಾನೆ.
ಹೊಟ್ಟೆ ಮತ್ತೆ ಕತ್ತಿಗೆ ಚಾಕು ಇರಿತವಾಗಿದ್ದು. ಸ್ನೇಹಿತನ ಮೇಲೆ ಹಲ್ಲೆ ಮಾಡಿ ಬಂಡ್ ಕುಮಾರ್ ಪರಾರಿಯಾಗಿದ್ದಾನೆ. ಗಾಯಾಳು ಕುಮಾರ್ ವಿಕ್ಟೋರಿಯಾ ಅಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಿನ್ನೆ ರಾತ್ರಿ ತಲ್ಲಘಟಪುರದ ಗಾಣಿಗೆರ ಪಾಳ್ಯದಲ್ಲಿ ಗಲಾಟೆ ನಡೆದಿದ್ದು. ತಲ್ಲಘಟಪುರದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.