• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 26, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಸಿಎಂ ಬದಲಾವಣೆ ಸದ್ಯಕ್ಕಿಲ್ಲ: ಸುರ್ಜೇವಾಲಾ ಸ್ಪಷ್ಟನೆ!

ಪ್ರತಿಧ್ವನಿ by ಪ್ರತಿಧ್ವನಿ
May 27, 2026
in ರಾಜಕೀಯ
0
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?
Share on WhatsAppShare on FacebookShare on Telegram

ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಹಾಗೂ ನಾಯಕತ್ವ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದ್ದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಊಹಾಪೋಹಗಳಿಗೆ ತೆರೆ ಎಳೆಯಲು ಮುಂದಾಗಿದೆ. ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಪ್ರಸ್ತಾಪ ಇಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ADVERTISEMENT
Parameshwar on Meeting :  ಸಿಎಂ ಸ್ಥಾನದ ಆಕಾಂಕ್ಷೆ ಬಗ್ಗೆ ಸಚಿವ ಪರಮೇಶ್ವರ್ ಏನಂದ್ರು ನೋಡಿ..! #dkshivakumar

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾಳೆ ಅಥವಾ ನಾಡಿದ್ದು ರಾಜ್ಯದಲ್ಲಿ ಯಾವುದೇ ರಾಜಕೀಯ ಬದಲಾವಣೆ ನಡೆಯುವುದಿಲ್ಲ. ದೆಹಲಿಯಲ್ಲಿ ನಡೆದ ಸಭೆಗಳ ಕುರಿತು ಹರಿದಾಡುತ್ತಿರುವ ಅಧಿಕಾರ ಹಸ್ತಾಂತರದ ಸುದ್ದಿಗಳು ಕೇವಲ ವದಂತಿಗಳು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನೂ ಇನ್ನೂ ಕರೆದಿಲ್ಲ” ಎಂದು ಹೇಳುವ ಮೂಲಕ ಸಿದ್ದರಾಮಯ್ಯ ರಾಜೀನಾಮೆ ಕುರಿತ ಸುದ್ದಿಗಳನ್ನು ತಳ್ಳಿ ಹಾಕಿದರು.

 

ದೆಹಲಿಯಲ್ಲಿ ನಡೆದ ಹೈವೋಲ್ಟೇಜ್ ಸಭೆಗಳ ಬಗ್ಗೆ ಪ್ರತಿಕ್ರಿಯಿಸಿದ ಸುರ್ಜೇವಾಲಾ, “ನಿನ್ನೆ ನಡೆದ ಚರ್ಚೆಗಳಲ್ಲಿ ರಾಜ್ಯಸಭಾ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ ಮಾತ್ರ ಚರ್ಚೆ ನಡೆಸಲಾಗಿದೆ” ಎಂದರು. ಆದರೆ, ಸಿಎಂ ಬದಲಾವಣೆ ಕುರಿತ ಪ್ರಶ್ನೆಗಳಿಗೆ ನೇರ ಉತ್ತರ ನೀಡದೇ ಹೈಕಮಾಂಡ್ ಮಟ್ಟದಲ್ಲಿ ರಾಜತಾಂತ್ರಿಕ ಮೌನ ಮುಂದುವರಿಸಿದರು.ಈ ಮಧ್ಯೆ, ಮುಖ್ಯಮಂತ್ರಿ ಸ್ಥಾನ ತೊರೆಯಲಿದ್ದಾರೆ ಎಂಬ ವದಂತಿಗಳ ನಡುವೆ ಸಿದ್ದರಾಮಯ್ಯ ಪರ ಆಪ್ತ ಸಚಿವರು ಮತ್ತು ಶಾಸಕರು ತೀವ್ರ ಚಟುವಟಿಕೆಗೆ ಇಳಿದಿದ್ದಾರೆ. ದೆಹಲಿಯಿಂದ ವಾಪಸ್ಸಾದ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಆಪ್ತರ ತಂಡ, ಯಾವುದೇ ಕಾರಣಕ್ಕೂ ಈಗಲೇ ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿದೆ ಎನ್ನಲಾಗಿದೆ.

Karnataka Power Tussle : ಸಿದ್ದು ಮುಂದಿನ ಹೆಜ್ಜೆ ಏನ್‌ ಗೊತ್ತಾ.? #siddaramaiah #dkshivakumar #pratidhvani

“ಸಿಎಲ್‌ಪಿ ಸಭೆಗೂ ಮುನ್ನ ರಾಜೀನಾಮೆ ಅಗತ್ಯವಿಲ್ಲ. ರಾಜ್ಯದ ಜನತೆ ಹೈಕಮಾಂಡ್ ಮುಖ ನೋಡಿ ಮತ ಹಾಕಿಲ್ಲ, ನಿಮ್ಮ ನಾಯಕತ್ವ ಮತ್ತು ಗ್ಯಾರಂಟಿ ಯೋಜನೆಗಳ ಮೇಲೆ ವಿಶ್ವಾಸ ಇಟ್ಟು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ನಾವೆಲ್ಲರೂ ನಿಮ್ಮ ಹೆಸರಿನಲ್ಲಿ ಗೆದ್ದಿದ್ದೇವೆ. ಹೀಗಾಗಿ ನೀವು ಸಿಎಂ ಸ್ಥಾನದಲ್ಲೇ ಮುಂದುವರಿಯಬೇಕು” ಎಂದು ಶಾಸಕರು ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

MB Patil on Siddaramaiah : ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ? ಬಗ್ಗೆ ಸಚಿವ ಎಂಬಿ ಪಾಟೀಲ್‌ ಹೇಳಿದ್ದೇನು.!

ಸುರ್ಜೇವಾಲಾ ಅವರ ಸ್ಪಷ್ಟನೆ ಬಳಿಕ ಸದ್ಯಕ್ಕೆ ಸಿದ್ದರಾಮಯ್ಯ ಬದಲಾವಣೆ ಕುರಿತ ಬಿಕ್ಕಟ್ಟು ತಾತ್ಕಾಲಿಕವಾಗಿ ತಣ್ಣಗಾದಂತಾಗಿದ್ದರೂ, ಮುಂದಿನ ದಿನಗಳಲ್ಲಿ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

Tags: Bengaluru PoliticsBreaking NewsCLP MeetingCm changeCongress High CommandCongress LeadershipDK ShivakumarKARNATAKA CMKarnataka CongressKarnataka GovernmentKarnataka PoliticsPolitical Updatepratidavanirandeep singh surjewalasiddaramaiahsiddaramaiah resignation
Previous Post

ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

Next Post

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

Related Posts

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!
Top Story

ಧರ್ಮೇಂದ್ರ ಪ್ರಧಾನ್‌ ಖಾತೆಯ ಹೊಣೆ ರಾಜ್ಯದ ಪ್ರಭಾವಿ ನಾಯಕನ ಹೆಗಲಿಗೆ : ಬಿಜೆಪಿ ಕಟ್ಟಾಳು, ಆರ್‌ಎಸ್‌ಎಸ್‌ ಹಿನ್ನೆಲೆಯೇ ಇವರ ಮೂಲ. ..!

by ಪ್ರತಿಧ್ವನಿ
July 25, 2026
0

ಬೆಂಗಳೂರು : ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಸ್ಥಾನಕ್ಕೆ ಕರ್ನಾಟಕದ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ...

Read moreDetails
30 ದಿನಗಳು..50ಕ್ಕೂ ಹೆಚ್ಚು ನಿರ್ಧಾರಗಳು: ಹೇಗಿತ್ತು ಡಿ.ಕೆ ಶಿವಕುಮಾರ್ ಸರ್ಕಾರದ ಮೊದಲ ತಿಂಗಳು..?

ಪಶ್ನೆ ಪತ್ರಿಕೆ ಸೋರಿಕೆಯಾದರೆ ಜಿಲ್ಲಾಧಿಕಾರಿಗಳೇ ಹೊಣೆ: ಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ

July 25, 2026
ʼನನ್ನ ಮಗ ಸುರಕ್ಷಿತವಾಗಿ ಮನೆಗೆ ಬರಬೇಕು’: ಅಭಿಜಿತ್ ದೀಪ್ಕೆ ತಾಯಿ ಭಾವುಕ ಮಾತು

ʼನನ್ನ ಮಗ ಸುರಕ್ಷಿತವಾಗಿ ಮನೆಗೆ ಬರಬೇಕು’: ಅಭಿಜಿತ್ ದೀಪ್ಕೆ ತಾಯಿ ಭಾವುಕ ಮಾತು

July 25, 2026
ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಇದು ಬೆಸ್ಟ್ ನ್ಯೂಸ್ ಅಂದ್ರು ರಮ್ಯಾ!

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಇದು ಬೆಸ್ಟ್ ನ್ಯೂಸ್ ಅಂದ್ರು ರಮ್ಯಾ!

July 25, 2026
BREAKING: ಪ್ರತಿಭಟನೆ ಅಂತ್ಯ: ಸಿಜೆಪಿ ವಕ್ತಾರ ಸೌರವ್‌ ದಾಸ್ ಮಹತ್ವದ ಘೋಷಣೆ

BREAKING: ಪ್ರತಿಭಟನೆ ಅಂತ್ಯ: ಸಿಜೆಪಿ ವಕ್ತಾರ ಸೌರವ್‌ ದಾಸ್ ಮಹತ್ವದ ಘೋಷಣೆ

July 25, 2026
Next Post
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್‌ಗೆ 6 ತಿಂಗಳ ಜೈಲು ಶಿಕ್ಷೆ! ಮಾಡಿದ ಅಪರಾಧ ಏನು ?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಸಿಎಂ ಕಚೇರಿಯಲ್ಲಿ ಭಾವುಕ ಕ್ಷಣ; ಕಣ್ಣೀರಿಟ್ಟ ಸಿಬ್ಬಂದಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada