ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ 2021-22 ರ ಸಾಲಿನ ಕೇಂದ್ರ ಬಜೆಟಿನ ಮುಖ್ಯಾಂಶಗಳು ಇಲ್ಲಿವೆ
- ಭಾರತವು ಎರಡು ಕರೋನಾ ಲಸಿಕೆಗಳನ್ನು ಅಭಿವೃದ್ಧಿ ಪಡಿಸಿದೆ. ದೇಶದ ಪ್ರಜೆಗಳನ್ನು ಮಾತ್ರವಲ್ಲದೆ. ಇತರೆ ದೇಶಗಳ ಪ್ರಜೆಗಳನ್ನು ರಕ್ಷಿಸಲು ಹೊರಟಿದೆ
- 2020 ರಲ್ಲಿ ಕರೋನಾ ಲಗ್ಗೆಯಿಟ್ಟ ನಂತರ ವಿಶ್ವದ ಎಲ್ಲಾ ದೇಶಗಳಲ್ಲಿಯೂ ಕಾರ್ಯತಂತ್ರದಲ್ಲಿ ಬದಲಾಗಿದೆ. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಹೊಸಯುಗದ ಆರಂಭವಾಗಿದೆ. ಭಾರತ ಹೊಸ ಭರವಸೆಯತ್ತ ಸಾಗುತ್ತಿದೆ.
- ಹಿಂದೆಂದು ಬರದಂತಹ ಪರಿಸ್ಥಿತಿಯಲ್ಲಿ ಈ ಬಾರಿ ಬಜೆಟ್ ಸಿದ್ದಗೊಂಡಿದೆ.
- ಮೂರು ಬಾರಿ ಮಾತ್ರಾ ಬಜೆಟ್ ಭಾರತದ ಆರ್ಥಿಕತೆಯಲ್ಲಿ ಸಂಕುಚಿತತೆಯನ್ನು ಅನುಸರಿಸಿದೆ. ಈ ಬಾರಿ ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆಯ ಮರುಹೊದಿಕೆ ಮತ್ತು ಅದನ್ನು ಸುಗಮಗೊಳಿಸಲು ಸರ್ಕಾರ ಸಿದ್ದವಾಗಿದೆ.
- ಆತ್ಮನಿರ್ಭರ್ ಯೋಜನೆಯ ಅಡಿ 130 ಕೋಟಿ ಅನುದಾನ .
- ಆರ್ಬಿಐ ಕೈಗೊಂಡ ಕ್ರಮಗಳು ಸೇರಿದಂತೆ, ಆತ್ಮ ನಿರ್ಭಾರ ಭಾರತ್ ಪ್ಯಾಕೇಜ್ಗಳ ಒಟ್ಟು ಆರ್ಥಿಕ ಪರಿಣಾಮ ಸುಮಾರು 27.1 ಲಕ್ಷ ಕೋಟಿ ರೂ. ಇದು ಜಿಡಿಪಿಯ ಶೇಕಡಾ 13 ಕ್ಕಿಂತಲೂ ಹೆಚ್ಚಿದೆ.
- ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೋಗ್ಯ ಸುಧಾರಣೆಗೆ 64,180 ಕೋಟಿ ರೂ ಇದು ರಾಷ್ಟ್ರೀಯ ಮಿಷನ್ಗೆ ಹೆಚ್ಚುವರಿಯಾಗಿದೆ.
- ಬಡವರ ಅನುಕೂಲಕ್ಕಾಗಿ ಸಂಪನ್ಮೂಲಗಳ ವಿಸ್ತರಣೆ. ಗರೀಬ್ ಕಲ್ಯಾಣ್ ಯೋಜನೆ ಮೂರು ಆತ್ಮನಿರ್ಭಯ ಪ್ಯಾಕೇಜ್ಗಳು, ಮತ್ತು ನಂತರದ ಘೋಷಣೆಗಳು ಮಿನಿ ಬಜೆಟ್ ಅಂತಿದ್ದವು.
- ಜಲಜೀವನ್ ಮಿಷನ್ಗಾಗಿ 2.87 ಲಕ್ಷ ಕೋಟಿ ರೂ.
- ವಾಯುಮಾಲಿನ್ಯದ ನಿರ್ವಹಣೆಗೆ 42 ನಗರ ಕೇಂದ್ರಗಳಿಗೆ 2217 ಕೋಟಿ ರೂ.
- ಕೋವಿಡ್ ಲಸಿಕೆ ನಿರ್ವಹಣೆಗೆ 35,000 ಕೋಟಿ ರೂ
- ಆರೋಗ್ಯ ರಕ್ಷಣೆಗಾಗಿ ಒಟ್ಟು 2.23 ಲಕ್ಷ ಕೋಟಿ. ಇದು ಕಳೆದ ವರ್ಷಕ್ಕಿಂತ 137% ಹೆಚ್ಚಾಗಿದೆ ಎಂದು ಪ್ರಸ್ತಾಪಿಸಲಾಗಿದೆ.
- ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಅಡಿಯಲ್ಲಿ 1 ಲಕ್ಷ ಕೋಟಿ ರೂಗಳು, ಈಗ 217 ಯೋಜನೆಗಳು ಪೂರ್ಣಗೊಂಡಿವೆ.
- 20,000 ಕೋಟಿ ಅಭಿವೃದ್ಧಿ ಹಣಕಾಸು ಸಂಸ್ಥೆ ಸ್ಥಾಪಿಸಲು ಮಸೂದೆ ಪರಿಚಯಿಸಲಿದೆ.
- ಮೂರು ವರ್ಷಗಳೊಳಗೆ 7 ಜವಳಿ ಉದ್ಯಾನವನಗಳ ಸ್ಥಾಪನೆ
- ಬಂಡವಾಳ ವೆಚ್ಚವನ್ನು 5.54 ಲಕ್ಷ ಕೋಟಿಗೆ ಹೆಚ್ಚಿಸಲು, 4.39 ಲಕ್ಷ ಕೋಟಿ ರೂ ಮೀಸಲು
- ರಸ್ತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆರ್ಥಿಕ ಕಾರಿಡಾರ್ ಯೋಜನೆ
- 2021 ರಲ್ಲಿ 11,000ಕಿ.ಮೀ ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯವನ್ನು ಪೂರ್ಣಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
- ತಮಿಳುನಾಡು, ಕೇರಳ ಪಶ್ಚಿಮ್ ಬಂಗಾಳ ಮತ್ತು ಅಸ್ಸಾಂ ಗಳಲ್ಲಿ ಹೆದ್ದಾರಿ ಯೋಜನೆಗಳ ಪ್ರಕಟ
- ಪಶ್ಚಿಮ ಬಂಗಾಳಕ್ಕೆ 255 ಕೋಟಿ ರೂ ಗಳ ವೆಚ್ಚದಲ್ಲಿ 675 ಕಿ.ಮೀ ಹೆದ್ದಾರಿ ಕಾಮಗಾರಿ
- ಮೈನ್ವೀನ್ ಮಾರುಕಟ್ಟೆಗಳು 2021 ರ ಕೇಂದ್ರ ಬಜೆಟ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ. ಸೆನೆಕ್ಸ್ 700 ಪಾಯಿಂಟ್ಗಳಿಗಿಂತ ಹೆಚ್ಚಿದೆ.
- ರೈಲ್ವೇ ವಿನಿಯೋಗ 1.07 ಲಕ್ಷ ಕೋಟಿ ರೂ.
- ಹೈಡ್ರೋಜನ್ ಉತ್ಪಾದಿಸಲು ಹೈಡ್ರೋಜನ್ ಎನರ್ಜಿ ಮಿಷನ್ಗಳ ಸ್ಥಾಪನೆ.
- ಬಂದರುಗಳ ಅಭಿವೃದ್ಧಿಗೆ ಪಿಪಿಪಿ ಕ್ರಮದಲ್ಲಿ 2000 ಕೋಟಿ ರೂ
- ಸಾಂಪ್ರದಾಯಕವಲ್ಲದ ಇಂಧನ ಕ್ಷೇತ್ರಗಳ ಉತ್ತೇಜನೆ
- ಅನಿಲ ವಿತಾರಣಾ ಜಾಲಕ್ಕೆ ಮುಂದಿನ 3 ವರ್ಷಗಳಲ್ಲಿ 100 ನಗರಗಳ ಸೇರ್ಪಡೆ
- ವಿದ್ಯುತ್ ಕ್ಷೇತ್ರಕ್ಕೆ 3.05 ಲಕ್ಷ ಕೋಟಿ ರೂ
- ಸೌರಶಕ್ತಿ ನಿಗಮಕ್ಕೆ 1,000 ಕೋಟಿ ಮತ್ತು ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಗೆ 1,500 ಕೋಟಿ ರೂ
- ವಿಮೆಯಲ್ಲಿ ಎಫ್ಡಿಐ 49% ರಿಂದ 74% ಏರಿಕೆ
- ಬ್ಯಾಂಕುಗಳ ಸಾಲ ನಿರ್ವಹಣೆಗೆ ಸಹಾಯಕವಾಗಲು ಆಸ್ತಿ ನಿರ್ವಾಹಣ ಸಂಸ್ಥೆ ಸ್ಥಾಪನೆ
- ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ 20,000 ಕೋಟಿ ರೂ
- ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ.
- ರಾಷ್ಟ್ರೀಯ ಶಿಕ್ಷಣ ನೀತಿಯಡಿ 15,000 ಕ್ಕೂ ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸುವುದು.
- ಎಂಎಸ್ಪಿ ಖರೀದಿ ಸ್ಥಿರವೇಗದಲ್ಲಿ ಮುಂದುವರೆಯುತ್ತದೆ.
- ಕನಿಷ್ಠ ಬೆಂಬಲ ಬೆಲೆ ನಿಲ್ಲಿಸುವುದಿಲ್ಲ
- ಕೋವಿಡ್ ಸಾಂಕ್ರಾಮಿಕ ರೋಗದಿಂದ ಸರ್ಕಾರದ ಆದಾಯ ಸಂಗ್ರಹಕೆ ಹೊಡೆತ ನೀಡಿದೆ. ಖಚ್ಚು ಹೆಚ್ಚಿದೆ.
- ರೈಲ್ವೆಗಾಗಿ 1,10,055 ಕೋಟಿ ಹಣ ದಾಖಲೆ ನೀಡುತ್ತೇವೆ. ಬಂಡವಾಳ ವೆಚ್ಚಕ್ಕೆ 1,07,100 ಕೋಟಿ ರೂ ಮಾತ್ರಾ
- 1 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಉಜ್ವಲ ಯೋಜನೆಯ ವಿಸ್ತರಣೆ
- ಆಸ್ಸಾಂ ಪಶ್ಚಿಮ್ ಬಂಗಾಳಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕೆ ವಿಶೇಷ ಯೋಜನೆಗಳ ಜಾರಿ
- ಅಸ್ಸಾಂ ಮತ್ತು ಬಂಗಾಳದ ಚಹಾ ಕಾರ್ಮಿಕರಿಗೆ 1000 ಕೋಟಿ ಅನುದಾನ
- ತೆರಿಗೆ ಲೆಕ್ಕ ಪರಿಶೋಧನೆಯ ಮಿತಿಯನ್ನು 5 ಕೋಟಿಯಿಂದ 10 ಕೋಟಿಗೆ ಹೆಚ್ಚಿಸಲಾಗಿದೆ
- ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಕಲ್ಪನೆ ಜಾರಿ. ಫಲಾನುಭವಿಗಳನ್ನು ಪಡಿತರವನ್ನು ದೇಶದಲ್ಲಿ ಎಲ್ಲಾದರು ಪಡೆಯ ಬಹುದು. 32 ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಜಾರಿ
- ಅಸಂಘಟಿತ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಪೋರ್ಟಲ್ ಸ್ಥಾಪನೆ
- ಡಿಜಿಟಲ್ ಜನಗಣತಿ ನಡೆಸಲು ನಿರ್ಧಾರ , 3,768 ಕೋಟಿ ಮೀಸಲು
- ಹಿರಿಯ ನಾಗರಿಕರಿಗೆ ಐಟಿ ರಿಟನ್ ಸಲ್ಲಿಕೆ -75 ವರ್ಷ ಮೇಲ್ಪಟ್ಟವರಿಗೆ
- ಡಿಜಿಟಲ್ ತಂತ್ರಜ್ಞಾನ ಬಳಸಿ ವ್ಯವಹಾರ ನಡೆಸುವ ಕಂಪನಿಗಳಿಗೆ ತರಿಗೆ ಲೆಕ್ಕ ಪರಿಶೋಧನೆಯ ಮಿತಿಯನ್ನು 10 ಕೋಟಿಗೆ ದ್ವಿಗುಣ
- ವಲಸೆ ಕಾರ್ಮಿಕರ ವಸತಿಗೆ ತೆರಿಗೆ ವಿನಾಯಿತಿ, ವಿಮಾನ ಗುತ್ತಿಗೆಯಲ್ಲಿ ತೆರಿಗೆ ವಿನಾಯಿತಿ
- ಸ್ಟಾರ್ಟಪ್ಗಳಿಗೆ ಒಂದು ವರ್ಷದ ತೆರೆಗೆ ವಿನಾಯಿತಿ.
- ವಾಹನಗಳ ಬಿಡಿ ಭಾಗ, ಹತ್ತಿ, ರೇಷ್ಮೆ, ಸೋಲಾರ್ ಮೇಲೆನ ಕಸ್ಟಂಮ್ ಸುಂಕ ಹೆಚ್ಚಳ