ವ್ಯಾಕ್ಸಿನ್ ನ ಎರಡೂ ಡೋಸ್ ಶೀಘ್ರವಾಗಿ ತೆಗೆದುಕೊಳ್ಳುವುದು ಉತ್ತಮ: ಬ್ರಿಟನ್ ಅಧ್ಯಯನ ವರದಿ

ಕೋವಿಡ್ ಲಸಿಕೆಯ ಎರಡನೇ ಡೋಸ್ ಅನ್ನು ಹದಿನಾರು ವಾರಗಳ ಅಂತರದಲ್ಲಿ ತೆಗೆದುಕೊಂಡರೆ ಸಾಕಾಗುತ್ತದೆ ಎಂದು ಭಾರತ ಸರ್ಕಾರ ನಿರ್ಧರಿಸಿರುವ ಬೆನ್ನಲ್ಲೇ ಬ್ರಿಟನ್ನಿನ ಅಧ್ಯಯನವೊಂದು ಕೋವಿಶೀಲ್ಡ್‌ನ ಎರಡನೇ ಡೋಸ್ ಪಡೆದ ಎರಡು ವಾರಗಳ ಬಳಿಕ ರೋಗದ ವಿರುದ್ಧ ಅದರ ಪರಿಣಾಮವು 60% ಆಗಿದ್ದು ಒಂದನೇ ಡೋಸ್ ಪಡೆದ ಬಳಿಕ ಪರಿಣಾಮ ಕೇವಲ 33% ಆಗಿರುತ್ತದೆ ಎಂದು ತಿಳಿಸಿದೆ.

“ಎರಡು ಡೋಸ್‌ಗಳ ನಂತರ ರೋಗಲಕ್ಷಣಗಳಿರುವ ಕಾಯಿಲೆಯ ವಿರುದ್ಧ ಲಸಿಕೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ ”ಎಂದು ‘ಪಬ್ಲಿಕ್ ಹೆಲ್ತ್ ಇಂಗ್ಲೆಂಡ್‌’ನ ಪ್ರಮುಖ ಲೇಖಕರ ಅಧ್ಯಯನವು ತೀರ್ಮಾನಿಸಿದೆ. “ನಮ್ಮ ಆವಿಷ್ಕಾರಗಳು B.1.617.2 ರೂಪಾಂತರದ ಪ್ರಸರಣದಲ್ಲಿ ಎರಡು ಡೋಸ್‌ಗಳ ಲಸಿಕೆ ತೆಗೆದುಕೊಳ್ಳುವಿಕೆಯನ್ನು ಹೆಚ್ಚಿಸುವುದನ್ನು ಬೆಂಬಲಿಸುತ್ತದೆ” ಎಂದು ತಿಳಿಸಿದೆ.

ತೀವ್ರವಾಗಿ ಪ್ರಸರಣವಾಗಬಲ್ಲ ಬಿ .1.617.2 ರೂಪಾಂತರದ ವಿರುದ್ಧ ಕೇವಲ ಕೋವಿಶೀಲ್ಡ್‌ನ ಒಂದು ಡೋಸ್‌ಗಿಂತ ಎರಡನೇ ಡೋಸ್ ಪಡೆದುಕೊಳ್ಳುವುದು 60% ಪರಿಣಾಮಕಾರಿ ಎಂದು ಅಧ್ಯಯನವು ದೃಢಪಡಿಸಿದೆ. ಅದೇ ಹೊತ್ತಿಗೆ ಫಿಝರ್ ( Pfizer) ಲಸಿಕೆಯ ಎರಡನೇ ಡೋಸ್‌ನ ಪರಿಣಾಮಕತ್ವವು 88% ಆಗಿರುತ್ತದೆ. ಆದರೆ ಈ ಲಸಿಕೆಯು ಭಾರತದಲ್ಲಿ ಲಭ್ಯವಿಲ್ಲ‌.

ಈ ತಿಂಗಳ ಆರಂಭದಲ್ಲಿ ಭಾರತ ಸರ್ಕಾರವು ಎರಡನೇ ಡೋಸ್ ಪಡೆದುಕೊಳ್ಳಲಿರುವ ಅಂತರವನ್ನು 12-16 ವಾರಕ್ಕೆ ಹೆಚ್ಚಿಸಿತ್ತು. ಈ ಮೊದಲು ಈ ಅಂತರವು ಗರಿಷ್ಠ 8 ವಾರಗಳು ಮಾತ್ರ ಇರಬಹುದು ಎನ್ನಲಾಗಿತ್ತು.

ಫಿಜರ್-ಬಯೋಟೆಕ್ ಲಸಿಕೆಯು ಎರಡನೇ ಡೋಸ್ ಪಡೆದ ವಾರಗಳ ನಂತರ B.1.1.7 ರೂಪಾಂತರದ ವಿರುದ್ಧ 93%‌ ಪರಿಣಾಮಕಾರಿಯಾದರೆ B.1.617.2 ರೂಪಾಂತರ ರೋಗಲಕ್ಷಣಗಳಿರುವ ಕಾಯಿಲೆಯ ವಿರುದ್ಧ 88% ಪರಿಣಾಮಕಾರಿಯಾಗಿದೆ.
ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳು B.1.1.7 ರೂಪಾಂತರದ ವಿರುದ್ಧ 66% ಪರಿಣಾಮಕಾರಿಯಾದರೆ B.1.617.2 ರೂಪಾಂತರದ ಕಾಯಿಲೆಯ ವಿರುದ್ಧ 60% ಪರಿಣಾಮಕಾರಿ.
ಎರಡೂ ಲಸಿಕೆಗಳು ಮೊದಲ ಡೋಸ್ ನಂತರ 3 ವಾರಗಳ ನಂತರ B.1.1.7 ರೂಪಾಂತರದ ವಿರುದ್ಧ ಸುಮಾರು 50% ಪರಿಣಾಮಕಾರಿತ್ವಕ್ಕೆ ಹೋಲಿಸಿದರೆ B.1.617.2 ರೂಪಾಂತರದ ರೋಗಲಕ್ಷಣದ ವಿರುದ್ಧ 33% ಪರಿಣಾಮಕಾರಿ ಎಂದು’ ಪಬ್ಲಿಕ್ ಹೆಲ್ತ್ ಇಂಗ್ಲಡ್’ ತನ್ನ ಅಧ್ಯಯನದ ಬಳಿಕ ವಿಷದಪಡಿಸಿದೆ.

ಭಾರತ ಮತ್ತು ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವ 1.617.2 ರೂಪಾಂತರದ ವಿರುದ್ಧ ಲಸಿಕೆಯ ಎರಡೂ ಪ್ರಮಾಣವನ್ನು ಸ್ವೀಕರಿಸುವ ಪ್ರಾಮುಖ್ಯತೆಯನ್ನು ಅಧ್ಯಯನದ ಫಲಿತಾಂಶಗಳು ಪುನರುಚ್ಚರಿಸಿವೆ.

ಭಾರತವೂ ಸೇರಿದಂತೆ ಪ್ರಪಂಚದ ಕೆಲವು ಭಾಗಗಳಲ್ಲಿ ಅತಿಶಯವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗವನ್ನು ತಗ್ಗಿಸಲು ಅಸ್ತಿತ್ವದಲ್ಲಿರುವ ಲಸಿಕೆಗಳು ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂದು ಸಂಶೋಧನೆಗಳು ಭರವಸೆ ನೀಡುತ್ತವೆ.

ಯುಕೆ ಸರ್ಕಾರವು ಜೂನ್ 21 ರಿಂದ ದೇಶದ ಉಳಿದ COVID-19 ನಿರ್ಬಂಧಗಳನ್ನು ತೆಗೆದುಹಾಕಲು ಯೋಚಿಸಿದೆ, ಮತ್ತು ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್ಕಾಕ್ ಪತ್ರಕರ್ತರಿಗೆ PHE ನ ಸಂಶೋಧನೆಗಳು ದೇಶವು ನಿರ್ಬಂಧಗಳನ್ನು ತೆಗೆದುಹಾಕುವ ಹಾದಿಯಲ್ಲಿದೆ ಎಂದು ಖಚಿತಪಡಿಸುತ್ತದೆ.

ಬ್ರಿಟನ್ ಯುರೋಪಿನ ಅತಿ ವೇಗವಾಗಿ ವ್ಯಾಕ್ಸಿನೇಷನ್ ಅನುಷ್ಠಾನಿಸಿದೆ. ಆದರೆ ಭಾರತದಲ್ಲಿ ಮೊದಲು ವರದಿಯಾದ ರೂಪಾಂತರದ ಹರಡುವಿಕೆಯಿಂದ ಬ್ರಿಟನ್ ಸಹ ಹೊಸ ಸವಾಲನ್ನು ಎದುರಿಸುತ್ತಿದೆ.

ಲಭ್ಯವಿರುವ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಲಸಿಕೆಗಳ ನಡುವಿನ ಅಂತರ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತ ಸರ್ಕಾರ ಹೇಳಿದೆ. ದೇಶವು ಲಸಿಕೆ ಕೊರತೆ ಅನುಭವಿಸುತ್ತಿದ್ದು ಡೋಸ್‌ಗಳ ಅಂತರದಲ್ಲಿನ ಹೆಚ್ಚಳವು ಹೆಚ್ಚುವರಿ ಪೂರೈಕೆಗಾಗಿ ಸಮಯವನ್ನು ಹೊಂದಿಸುವ ಮಾರ್ಗವಾಗಿದೆ. ಇಲ್ಲಿಯವರೆಗೆ, 10.7% ಭಾರತೀಯರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ, ಮತ್ತು 3% ರಷ್ಟು ಜನ ಎರಡೂ ಡೋಸೇಜ್ ಪಡೆದಿದ್ದಾರೆ.‌ಭಾರತ ಸರ್ಕಾರವು ಗರಿಷ್ಠ ಅಂತರವನ್ನು 16 ವಾರಗಳಿಗೆ ಹೆಚ್ಚಿಸಿದ್ದರಿಂದ, ಈ ಜನರು ತಮ್ಮ ಎರಡನೇ ಡೋಸ್ ಅನ್ನು ಸ್ವೀಕರಿಸುವವರೆಗೆ, ಅಂದರೆ‌ ನಾಲ್ಕು ತಿಂಗಳ ವರೆಗೆ ಬಿ .1.617.2 ರೂಪಾಂತರದ ಸೋಂಕಿನ ವಿರುದ್ಧ ಯಾವುದೇ ಮಹತ್ವದ ರಕ್ಷಣೆಯನ್ನು ಹೊಂದುವುದಿಲ್ಲ.

ಈ ತಿಂಗಳ ಆರಂಭದಲ್ಲಿ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ 50 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ದೈಹಿಕವಾಗಿ ದುರ್ಬಲವಾದ ಜನರಿಗೆ ಪ್ರಾಯೋಗಿಕವಾಗಿ ಎರಡನೇ ಡೋಸ್ ನೀಡುವಿಕೆಯನ್ನು ವೇಗಗೊಳಿಸಲು ಆದೇಶಿಸಿದರು.

“ಯುಕೆ ಯಲ್ಲಿ ದೈಹಿಕವಾಗಿ ದುರ್ಬಲವಾಗಿರುವವರು ಸಾಧ್ಯವಾದಷ್ಟು ಬೇಗ ಸಂಪೂರ್ಣ ಲಸಿಕಾ ರಕ್ಷಣೆಯನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳುವ ಪ್ರಯತ್ನದಲ್ಲಿ ಯುಕೆ ಸರ್ಕಾರವು ಕಳೆದ ವಾರ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಡೋಸೇಜ್‌ಗಳ ನಡುವಿನ ಅಂತರವನ್ನು 12 ವಾರಗಳಿಂದ ಎಂಟಕ್ಕೆ ಇಳಿಸಿತು ” ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.

ಭಾರತದಲ್ಲಿ ಮೊದಲು ಕಂಡುಬಂದ ರೂಪಾಂತರದ ಸೋಂಕು ಬ್ರಿಟನ್‌ನಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಜರ್ಮನಿಯು ಶುಕ್ರವಾರ ಯುಕೆಯಿಂದ ದೇಶಕ್ಕೆ ಪ್ರವೇಶಿಸುವವವರು ಎರಡು ವಾರಗಳ ಕಾಲ ಕ್ವಾರೆಂಟೈನ್ ನಲ್ಲಿರುವಂತೆ ಆದೇಶಿಸಿದೆ.

ಮತ್ತೊಂದೆಡೆ ಭಾರತದಲ್ಲಿ ದೈನಂದಿನ ಸಾವುಗಳ ಸಂಖ್ಯೆ 4000 ದಾಟಿದೆ. ಈ ವರ್ಷ ಜನವರಿ ನಾಲ್ಕರಂದು ‘ದಿ ವೈರ್’ ಪ್ರಕಟಿಸಿದಂತೆ NITI ಆಯೋಗ ಸದಸ್ಯ ಪಾಲ್ ಅವರು “ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರಂತಹ ಆದ್ಯತೆಯ ಗುಂಪುಗಳನ್ನು ಚುಚ್ಚುಮದ್ದು ಮಾಡಲು ದೇಶವು ಸಾಕಷ್ಟು ಲಸಿಕೆಗಳನ್ನು ಸಂಗ್ರಹಿಸಿದೆ” ಎಂದು ಹೇಳಿದ್ದರು.

ಆದರೆ ಕೋ-ವಿನ್ ದತ್ತಾಂಶವು ತೋರಿಸಿದಂತೆ, ಇಲ್ಲಿಯವರೆಗೆ ಕೇವಲ 191.5 ಮಿಲಿಯನ್ ಡೋಸ್‌ಗಳನ್ನು ಮಾತ್ರ ನೀಡಲಾಗಿದೆ. ಒಟ್ಟು 300 ಮಿಲಿಯನ್ ಮುಂಚೂಣಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಒಳಗೊಳ್ಳಲು 600 ಮಿಲಿಯನ್ ಡೋಸ್‌ಗಳ ಅಗತ್ಯವಿದೆ.

ಮೇ 22 ರಂದು ಮಿನ್ನೇಸೋಟದ ಮಾಯೊ ಕ್ಲಿನಿಕ್‌ನ ಡಾ.ಪ್ರಿಯಾ ಸಂಪತ್‌ಕುಮಾರ್ ಅವರು ಭಾರತಕ್ಕೆ ತಕ್ಷಣವೇ ಲಸಿಕೆಗಳು ಬೇಕಾದರೆ, ದೇಶವು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ, ಏಕೆಂದರೆ ಸ್ಥಳೀಯ ಉತ್ಪಾದನೆಯಲ್ಲಿ ಹೂಡಿಕೆ ಮಾಡಲು ಕೆಲವು ತಿಂಗಳುಗಳೇ ಬೇಕಾಗುತ್ತವೆ‌ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...