• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?

ವಿಶ್ವಾಸಘಾತುಕ ಮಿತ್ರ ರಾಷ್ಟ್ರವಾಗಿ ಪಾಕಿಸ್ತಾನದ ಇತಿಹಾಸವಿದೆ, ಅಮೆರಿಕದ ಗುಲಾಮನಿಂದ ಇರಾನ್‌ಗೆ ನ್ಯಾಯ ಸಿಗುವುದೇ ಎಂಬ ಚರ್ಚೆಗಳು ಶುರುವಾಗಿವೆ..

ಪ್ರತಿಧ್ವನಿ by ಪ್ರತಿಧ್ವನಿ
April 19, 2026
in Top Story, ಇದೀಗ, ದೇಶ, ರಾಜಕೀಯ, ವಿದೇಶ
0
ಇರಾನ್‌ – ಅಮೆರಿಕ ನಡುವೆ ಮುನೀರ್‌ ಮಧ್ಯಸ್ಥಿಕೆ : ದೊಡ್ಡಣ್ಣ ಎಂದು ಕೊಚ್ಚಿಕೊಳ್ಳುವ ಟ್ರಂಪ್‌ಗ್ಯಾಕೆ ಬಂತು ಈ ದುಸ್ಥಿತಿ..?
Share on WhatsAppShare on FacebookShare on Telegram

ನವದೆಹಲಿ : ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪಾಕಿಸ್ತಾನ, ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಯಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಡೊನಾಲ್ಡ್ ಟ್ರಂಪ್ ಆಡಳಿತದ ಜೊತೆ ಮಾತುಕತೆ ನಡೆಸುವ ಸಂಭಾವ್ಯ ಹೊಣೆಗಾರರನ್ನಾಗಿ ಅಮೆರಿಕದ ಗುಪ್ತಚರ ಇಲಾಖೆ ಗುರುತಿಸಿದೆ.

ADVERTISEMENT
RCB Vs DC Match: ಒಂದಿನ ಸೋಲು, ಇನ್ನೊಂದಿನ ಗೆಲುವು ಇದ್ದೇ ಇರುತ್ತದೆ.... #pratidhvani

ಇರಾನ್‌ನ ಉನ್ನತ ಮಿಲಿಟರಿ ಅಧಿಕಾರಿಗಳೊಂದಿಗೆ ದೀರ್ಘಕಾಲದ ಸಂಪರ್ಕ ಹೊಂದಿದ್ದರಿಂದ ಮುನೀರ್‌ಗೆ ಟ್ರಂಪ್ ಆಡಳಿತ ಡೇಂಜರ್‌ ಎಂದು ಕರೆದಿದೆ. ಪಾಕಿಸ್ತಾನದ ನಿವೃತ್ತ ಜನರಲ್ ಅಹ್ಮದ್ ಸಯೀದ್ ಸಂದರ್ಶನವೊಂದರಲ್ಲಿ ಹೇಳಿದಂತೆ, ಹತ್ಯೆಗೀಡಾದ ಕುದ್ಸ್ ಫೋರ್ಸ್ ಕಮಾಂಡರ್ ಖಾಸಿಮ್ ಸೊಲೈಮಾನಿ ಮತ್ತು ಐಆರ್‌ಜಿಸಿ ಕಮಾಂಡರ್ ಹೊಸೇನ್ ಸಲಾಮಿ ಸೇರಿದಂತೆ ಉನ್ನತ ಶ್ರೇಣಿಯ ಇರಾನಿನ ವ್ಯಕ್ತಿಗಳೊಂದಿಗೆ ಮುನೀರ್ ವೈಯಕ್ತಿಕ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

ಈ ನಡುವೆಯೇ ಅಮೆರಿಕದ ಅಧ್ಯಕ್ಷ ಟ್ರಂಪ್ ಮುನೀರ್ ಅವರನ್ನು ಸಾರ್ವಜನಿಕವಾಗಿ ಹೊಗಳಿದ್ದಾರೆ. ಮುನೀರ್ ಅಚ್ಚುಮೆಚ್ಚಿನ ಫೀಲ್ಡ್ ಮಾರ್ಷಲ್ ಎಂದು ಕರೆದಿದ್ದಾರೆ. ಆದರೆ ಗುಪ್ತಚರ ಅಧಿಕಾರಿಗಳು ಅವರ ಇಬ್ಬಗೆ ನಿಲುವು ಅಮೆರಿಕದ ಹಿತಾಸಕ್ತಿಗಳಿಗೆ ಧಕ್ಕೆ ತರಬಹುದು ಎಂದು ಎಚ್ಚರಿಸಿದ್ದಾರೆ. ವಿಶ್ವಾಸಘಾತುಕ ಮಿತ್ರ ರಾಷ್ಟ್ರವಾಗಿ ಪಾಕಿಸ್ತಾನದ ಇತಿಹಾಸವಿದೆ. ವಿಶೇಷವಾಗಿ ಅಫ್ಘಾನಿಸ್ತಾನದಲ್ಲಿ ವಿಶ್ವಾಸದ್ರೋಹಿ ಮಿತ್ರ ಎಂದು ಕರೆಯುವ ಪಾಕಿಸ್ತಾನವು ಇರಾನ್ ಜೊತೆಗಿನ ನಿಕಟ ಸಂಪರ್ಕ ಅಮೆರಿಕದ ಭದ್ರತೆಗೆ ಅಪಾಯವಾಗಿದೆ ಎಂದು ವರದಿಗಳು ಎಚ್ಚರಿಸಿವೆ.

ಇದನ್ನೂ ಓದಿ : ​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

ಅಮೆರಿಕದ ನೆರವು ಸಂಗ್ರಹಿಸಿ ಪಾಕಿಸ್ತಾನ ತಾಲಿಬಾನ್‌ಗೆ ಬೆಂಬಲ ನೀಡುತ್ತಿದೆ. ಪಾಕಿಸ್ತಾನದ ಹಿಂದಿನ ದಾಖಲೆಯನ್ನು ಗಮನಿಸಿ ವಿಶ್ಲೇಷಕರು ಇದು ದೊಡ್ಡ ಎಚ್ಚರಿಕೆಯಾಗಿದೆ ಎಂದು ಸೂಚಿಸುತ್ತಾರೆ. ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಬಗ್ಗೆ ಎಚ್ಚರದಿಂದಿರಬೇಕು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜೊತೆ ಅಸಿಮ್ ಮುನೀರ್ ಹೊಂದಿರುವ ಸಂಬಂಧಗಳು ಅಮೆರಿಕಕ್ಕೆ ಗಂಭೀರ ಕಳವಳಕಾರಿ ಪ್ರಶ್ನೆಗಳನ್ನು ಹುಟ್ಟು ಹಾಕಿವೆ.

ಮುನೀರ್ ಟ್ರಂಪ್ ಅವರೊಂದಿಗಿನ ತಮ್ಮ ಬಾಂಧವ್ಯವನ್ನು ಬಳಸಿಕೊಂಡು ಇರಾನಿನ ಹಿತಾಸಕ್ತಿಗಳನ್ನು ಸದ್ದಿಲ್ಲದೆ ಮುನ್ನಡೆಸುತ್ತಿರಬಹುದು. ಈ ಕಾರಣಕ್ಕಾಗಿಯೇ ಪಾಕಿಸ್ತಾನದ ಮಧ್ಯಸ್ಥಿಕೆಯ ಬಗ್ಗೆ ಅಮೆರಿಕಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.  ಮುನೀರ್‌ಗೆ ಇರುವ ಈ ಬೇಡಿಕೆ ಪಾಕಿಸ್ತಾನದಲ್ಲಿ ನಾಗರಿಕರ ಮೇಲೆ ಸೇನೆಯ ಪ್ರಾಬಲ್ಯ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ ಎಂದು ಪಾಕಿಸ್ತಾನದ ನಿರೂಪಕ ರಾಜಾ ರೂಮಿ ಹೇಳಿದ್ದಾರೆ.

2022 ರ ಕೊನೆಯಲ್ಲಿ ಮುನೀರ್ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಪಾಕಿಸ್ತಾನವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕಡೆಗಣಿಸಿರುವುದು ಸೇರಿದಂತೆ ರಾಜಕೀಯ ವಿರೋಧದ ಮೇಲೆ ತೀಕ್ಷ್ಣವಾದ ದಮನವನ್ನು ಕಂಡಿದೆ ಎಂದು ವಿಮರ್ಶಕರು ಗಮನಸೆಳೆದಿದ್ದಾರೆ. ನವೆಂಬರ್ 2024 ರಲ್ಲಿ ಪಾಕಿಸ್ತಾನದಲ್ಲಿ ನಡೆದ ಮಾರ್ಗಲ್ಲಾ ಸಂವಾದದಲ್ಲಿ ಮುನೀರ್ ಹೇಳಿಕೆಗಳನ್ನು ಅಂತರಾಷ್ಟ್ರೀಯ ಮಾಧ್ಯಮಗಳು ಉಲ್ಲೇಖಿಸಿವೆ.

RCB Vs DC Match: ಬೌಲಿಂಗ್ ನಲ್ಲೂ ಫಾಸ್ಟ್ ಇದ್ದೀವಿ ಅಂತ ತೋರಿಸಿದ್ದೀವಿ.. #pratidhvani

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸದಿರುವುದು ಜಾಗತಿಕವಾಗಿ ನೈತಿಕ ಮೌಲ್ಯಗಳನ್ನು ನಾಶಪಡಿಸುತ್ತಿದೆ ಎಂದು ಎಚ್ಚರಿಸಿವೆ. ಈ ರೀತಿಯ ಅಭಿಪ್ರಾಯಗಳು ನಾಯಕರಿಗಿಂತ ಸೇನೆಯ ಕಡೆಗೆ ಹೆಚ್ಚಿನ ಪ್ರಾಬಲ್ಯ ಹೊಂದಿದೆ. ಪಾಕಿಸ್ತಾನದ ವಿದೇಶಾಂಗ ನೀತಿಯನ್ನು ಚುನಾಯಿತ ಸರ್ಕಾರಕ್ಕಿಂತ ಹೆಚ್ಚಾಗಿ ಸೇನೆಯೇ ನಡೆಸುತ್ತಿದೆ ಎಂಬ ಕಟು ವಾಸ್ತವವನ್ನು ವಿಮರ್ಶಕರು ಮಾಡುತ್ತಿರುವುದನ್ನು ಅಮೆರಿಕವೂ ಗಮನಿಸುತ್ತಿದೆ.

ಮುನೀರ್‌ ಮೇಲೆ ಈ ರೀತಿಯಾದ ಅಭಿಪ್ರಾಯ ಹಾಗೂ ಆರೋಪಗಳ ಹೊರತಾಗಿಯೂ ಟ್ರಂಪ್ ಮುನೀರ್  ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಮೇ 2025 ರ ಭಾರತ-ಪಾಕಿಸ್ತಾನ ಬಿಕ್ಕಟ್ಟಿನ ಸಂದರ್ಭದಲ್ಲಿ ಇಬ್ಬರ ಸಂಬಂಧವು ಗಟ್ಟಿಯಾಯಿತು, ಅಲ್ಲಿ ಮುನೀರ್ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದ ಕೀರ್ತಿಗೆ ಪಾತ್ರರಾಗಿದ್ದರು.

ಮುನೀರ್ ಪ್ರಸ್ತುತ ಟ್ರಂಪ್ ಆಡಳಿತ (ನಿರ್ದಿಷ್ಟವಾಗಿ ಜೇರೆಡ್ ಕುಶ್ನರ್ ಮತ್ತು ಸ್ಟೀವ್ ವಿಟ್ಕಾಫ್ ಅವರನ್ನು ಒಳಗೊಂಡಂತೆ) ಮತ್ತು ಇರಾನ್ ನಡುವೆ ಬ್ಯಾಕ್-ಚಾನೆಲ್ ಮಾತುಕತೆಯನ್ನು ನಡೆಸುತ್ತಿದ್ದಾರೆ. ಇರಾನ್ ದೃಢವಾದ ಪರಮಾಣು ಕಾರ್ಯಕ್ರಮಗಳನ್ನು ನಿಲ್ಲಿಸಲೂ ಒಪ್ಪದ್ದನ್ನು ಉಲ್ಲೇಖಿಸಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಮಾತುಕತೆಗಳಿಂದ ಹೊರನಡೆದಿದ್ದರು.  ಇದಾದ ಬಳಿಕ ಟ್ರಂಪ್, ಮುನೀರ್ ಶಾಂತಿ ಮಾತುಕತೆಗಳನ್ನು ಏರ್ಪಡಿಸುವಲ್ಲಿ “ಉತ್ತಮ ಕೆಲಸ” ಮಾಡಿದ್ದಾರೆ ಎಂದು ಸಾರ್ವಜನಿಕವಾಗಿ ಶ್ಲಾಘಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಇನ್ನೂ ಪ್ರಮುಖವಾಗಿ ಅಮೆರಿಕವೂ ತಾನೇ ಪೋಷಿಸಿದ್ದ ಕುಟಿಲ, ಕಪಟ ಹಾಗೂ ಭಯೋತ್ಪಾದಕ ಮನಸ್ಥಿತಿಯ ಪಾಕಿಸ್ತಾನದಂತಹ ಹೇಡಿ ರಾಷ್ಟ್ರದ ಕಾಲಿಗೆ ಬೀಳುವ ಪರಿಸ್ಥಿತಿಯು ನಿಜಕ್ಕೂ ನಗೆಪಾಟಲಿಗೀಡಾಗಿರುವ ಸಂಗತಿಯಾಗಿದೆ. ಜಗತ್ತಿಗೆ ದೊಡ್ಡಣ್ಣ ಎಂದು ಹೇಳಿಕೊಳ್ಳುವ ಟ್ರಂಪ್‌ ದಿಕ್ಕು ದೆಶೆಯಿಲ್ಲದ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಶಾಂತಿ ಮಾತುಕತೆಗೆ ಮುಂದಾಗಿ ಇನ್ಯಾವ ದೊಡ್ಡ ಪೆಟ್ಟು ತಿನ್ನುತ್ತಾರೋ ಎಂಬ ಪ್ರಶ್ನೆಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಿವೆ.

Tags: american presidentasim muneerDonald TrumpDrone attackFuel Rate HikeGeopoliticsInternationa Newsiran israel warIran Supreme LeaderMissiles AttackMojtaba KhamPakistan Army ChiefPratidhvani
Previous Post

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

Next Post

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

Related Posts

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು
Top Story

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

by ಪ್ರತಿಧ್ವನಿ
April 19, 2026
0

ವಿಶೇಷ ಲೇಖನ : ನಾ ದಿವಾಕರ ( ಸಂವಾದ ಮಾಸಪತ್ರಿಕೆಯ ಏಪ್ರಿಲ್‌ 2026 ರ ಅಂಬೇಡ್ಕರ್ ವಿಶೇಷ ಸಂಚಿಕೆಗೆ ಬರೆದ ಲೇಖನ ) ಭಾಗ 1 ಸ್ವತಂತ್ರ...

Read moreDetails
​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

April 18, 2026
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
Next Post
ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

ಅಂಬೇಡ್ಕರ್‌ ಮತ್ತು ಸಂವಿಧಾನ – ವಾಸ್ತವಗಳು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada