ಕಳೆದ ತಿಂಗಳು ಕರೋನ ಸೋಂಕಿತರಾಗಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು ಕೆಲವು ದಿನಗಳಿಂದಷ್ಟೇ ಪವಾಡಸದೃಶವಾಗಿ ಗುಣಮುಖರಾಗಿದ್ದರು. ಬುಧವಾರ ಸುಮಾರು 1:30 ರ ಸಮಯದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾದ್ದಾರೆ ಎಂದು ತಿಳಿದು ಬಂದಿದೆ.
ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು 104 ವರ್ಷ ವಯಸ್ಸಿನ ದೊರೆಸ್ವಾಮಿ ಅವರಿಗೆ ಮಂಗಳವಾರ ರಾತ್ರಿಯಿಂದ ಸ್ವಲ್ಪ ಆರೋಗ್ಯ ಹದಗೆಟ್ಟು ಇಂದು ಬೆಳಗ್ಗೆ ಉಸಿರಾಟಕ್ಕೆ ತೊಂದರೆ ಆಗಿತ್ತು. ತೀವ್ರ ನಿಗಾ ಘಟಕಕ್ಕೆ ಕರೆದುಕೊಂಡು ಬಂದ ಸ್ವಲ್ಪ ಹೊತ್ತಿಗೆ ಹೃದಯಾಘಾತ ಆಗಿದೆ ಎಂದು ಮೂಲಗಳು ತಿಳಿಸಿವೆ.