ಭಾರತ-ಪಾಕಿಸ್ತಾನ ವಿಭಜನೆ ವೇಳೆ ಬೇರ್ಪಟ್ಟಿದ್ದ ಸಹೋದರರು 74 ವರ್ಷಗಳ ನಂತರ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಕರ್ತಾರಪುರದಲ್ಲಿ ಒಂದಾಗಿದ್ದಾರೆ. ಸಹೋದರರ ಇಬ್ಬರ ಸಮಾಗಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾರತ-ಪಾಕಿಸ್ತಾನ ವಿಭಜನೆ ವೇಳೆ ಬೇರ್ಪಟ್ಟಿದ್ದ ಸಹೋದರರು 74 ವರ್ಷಗಳ ನಂತರ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಕರ್ತಾರಪುರದಲ್ಲಿ ಒಂದಾಗಿದ್ದಾರೆ.
ಸಹೋದರರ ಇಬ್ಬರ ಸಮಾಗಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಾಕಿಸ್ತಾನದ ಫೈಸಲಾಬಾದ್ನಲ್ಲಿ ವಾಸಿಸುತ್ತಿರುವ ಸಿದ್ದಿಕಿ ತಮ್ಮ ಸಹೋದರ ಹಬೀಬ್ರನ್ನು ಭೇಟಿ ಮಾಡಲು ಸಿಖ್ಖರ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಭೇಟಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಹಬೀಬ್, “ವಿಭಜನೆಯ ವೇಳೆ ಸಿದ್ದಿಕಿ ಇನ್ನು ಶಿಶುವಾಗಿದ್ದರು ಮತ್ತು ಬೇರೆಯಾದ ನಂತರ ಸಹೋದರ ಹಬೀಬ್ ಭಾರತದಲ್ಲಿ ಬೆಳೆದರು. ಸಿದ್ದಿಕಿ ಪಾಕಿಸ್ತಾನದಲ್ಲಿ ಬೆಳೆದರು. ಈ ಕಾರಿಡಾರ್ ನಿಂದ ನಮಗೆ ತುಂಬಾ ಸಹಾಯವಾಗಿದೆ ಮತ್ತು ಇನ್ಮುಂದೆ ನಾನು ನನ್ನ ಸಹೋದರ ಭೇಟಿ ಮಾಡಲು ಈ ಕಾರಿಡಾರ್ಗೆ ಬರುವುದಾಗಿ ತಿಳಿಸಿದ್ದಾರೆ.
ಭಾರತದಿಂದ ಕರ್ತಾರಪುರ ಕಾರಿಡಾರ್ವರೆಗೆ ವಿಸಾ ಮುಕ್ತ ಪ್ರಯಾಣಕ್ಕಾಗಿ ಅವಕಾಶ ಮಾಡಿಕೊಟ್ಟ ಎರಡು ದೇಶಗಳ ಸರ್ಕಾರವನ್ನು ಈ ವೇಳೆ ಸಹೋದರರು ಧನ್ಯವಾದ ತಿಳಿಸಿದ್ದಾರೆ. ಸಹೋದರಿಬ್ಬರ ಪುರ್ನಮಿಲನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಭಾವನಾತ್ಮಕ ಕ್ಷಣ ಎಂದು ಬಣ್ಣಿಸಿದ್ದಾರೆ.
ಕೋವಿಡ್ನಿಂದಾಗಿ ಅಂತರಾಷ್ಟ್ರೀಯ ಗಡಿಯನ್ನು ಮುಚ್ಚಲಾಗಿತ್ತು. ನಂತರ ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರಿಡಾರ ಅನ್ನು ಪುನಃ ತೆರೆಯುವ ನಿರ್ಧಾರ ಮಾಡಿತ್ತು.