ತಿರುಪತಿ ದೇವಸ್ಥಾನದ (Tirupati temple) ಲಡ್ಡು ವಿವಾದದ ಬಳಿಕ ಟಿಟಿಡಿ (TTD) ಈಗ ಮಹತ್ವದ ತೀರ್ಮಾನ ಕೈಗೊಂಡಿದ್ದು ಚರ್ಚೆಗೆ ಕಾರಣವಾಗಿದೆ. ತಿರುಮಲದಲ್ಲಿ ಉದ್ಯೋಗಿಗಳಾಗಿದ್ದ 18 ಮಂದಿ ಹಿಂದೂಯೇತರ (Non Hindus) ಉದ್ಯೋಗಿಗಳೆಗೆ ಗೇಟ್ ಪಾಸ್ ನೀಡಲು ಟಿಟಿಡಿ ತೀರ್ಮಾನಿಸಿದೆ.
ಈ ಹಿಂದೆಯೇ ಟಿಟಿಡಿ ಈ ಬಗ್ಗೆ ಸೂಚನೆ ನೀಡಿತ್ತು. ಹಿಂದೂ ಧರ್ಮ (Hindus) ಪಾಲಿಸುವವರನ್ನು ಹೊರತು ಪಡಿಸಿ ಅನ್ಯ ಧರ್ಮೀಯರಿಗೆ ಟಿಟಿಡಿ ಯಲ್ಲಿ ಉದ್ಯೋಗಾವಕಾಶ ಇರುವುದಿಲ್ಲ ಎಂದು ಹೇಳಿತ್ತು.
ಇದೀಗ ಹಿಂದೂಯೇತರ ಉದ್ಯೋಗಿಗಳಿಗೆ ಟಿಟಿಡಿ ಸೂಚನೆ ನೀಡಿದ್ದು, ಒಂದೋ ಇತರೆ ಸರ್ಕಾರಿ ಸಂಸ್ಥೆಗೆ ವರ್ಗಾವಣೆ ಪಡೆಯಿರಿ, ಇಲ್ಲವಾದಲ್ಲಿ ನೀವಾಗಿಯೇ ವಿಆರ್ಎಸ್ ಪಡೆಯಿರಿ ಎಂದು ಸೂಚಿಸಿದೆ.
ಹಿಂದೂ ಧರ್ಮದ ಬಗ್ಗೆ ಶ್ರದ್ದೆ, ಭಕ್ತಿ ಇಲ್ಲದವರು ಟಿಟಿಡಿ ಉದ್ಯೋಗಿಗಳಾಗಿ ಇರಬಾರದು.ಈ ಹಿನ್ನಲೆಯಲ್ಲಿ ಹಿಂದೂಯೇತರರಿಗೆ ವಿಆರ್ಎಸ್ ನೀಡಿಕೆಗೆ ಟಿಟಿಡಿ ನಿರ್ಧಾರ ಕೈಗೊಂಡಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.