• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನಲ್ಲ : ಮಡಿಕೇರಿ ಶಾಸಕ ಅಪ್ಪಚ್ಚು‌ ರಂಜನ್!

ಪ್ರತಿಧ್ವನಿ by ಪ್ರತಿಧ್ವನಿ
March 29, 2022
in ಕರ್ನಾಟಕ
0
ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನಲ್ಲ : ಮಡಿಕೇರಿ ಶಾಸಕ ಅಪ್ಪಚ್ಚು‌ ರಂಜನ್!
Share on WhatsAppShare on FacebookShare on Telegram

ಹಿಜಾಬಿಂದ ಶುರುವಾದ ವಿವಾದ ಸದ್ಯಕ್ಕೆ ಟಿಪ್ಪು ಸುಲ್ತಾನ್ ಇತಿಹಾಸಕ್ಕೆ ಬಂದು ನಿಂತಿದೆ. ಸಮಾಜ ವಿಜ್ಞಾನದಿಂದ ಟಿಪ್ಪು ಸುಲ್ತಾನ್ ಯಶೋಗಾಥೆ ತೆಗೆದು ಹಾಕುವುದು ಬಹುತೇಕ ಖಚಿತವಾಗಿದೆ.‌ ಇದಕ್ಕೆ ಪುಷ್ಟಿ ಎಂಬಂತೆ 2019ರಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸರ್ಕಾರಕ್ಕೆ ನೀಡಿದ ಪತ್ರವೊಂದು ಮತ್ತೆಗೆ ಮುನ್ನಲೆಗೆ ಬಂದಿದ್ದು ಭಾರಿ ಚರ್ಚೆಗೆ ನಾಂದಿಹಾಡಿದೆ.

ADVERTISEMENT

ಸರ್ಕಾರ ಟಿಪ್ಪು ಸುಲ್ತಾನ್ ಚರಿತ್ರೆಯನ್ನು ಪಠ್ಯದಿಂದ ಕೈ ಬಿಡಲು ಮುಂದಾಗಿದೆ. ಅನಗತ್ಯವಾಗಿ ಟಿಪ್ಪು ಸುಲ್ತಾನ್ ಬಗ್ಗೆ ವೈಭವೀಕರಿಸಿ ಇತಿಹಾಸ ತಿರುಚಿ ಸುಳ್ಳು ಕಟ್ಟಲಾಗಿದೆ ಎಂದು ಪಠ್ಯಪುಸ್ತಕ ಪರಿಷ್ಕೃತ ರಚನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ ಬೆನ್ನಲ್ಲೇ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕೆಲ ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್ ಚರಿತ್ರೆ ಬಗ್ಗೆ ಸರ್ಕಾರಕ್ಕೆ ಬರೆದ ಪತ್ರವೊಂದು ಇದೀಗ ಚರ್ಚೆಯ ಕೇಂದ್ರ ಬಿಂದುವಾಗಿದೆ. ಈಗಾಗಲೇ ಈ ಬಾರಿಯ ಪಠ್ಯದಿಂದ ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಬ್ರೇಕ್ ಹಾಕಲಾಗಿದ್ದು ಕೇವಲ ಟಿಪ್ಪು ಪರಿಚಯಕ್ಕೆ ಮಾತ್ರ ವಿಷಯ ಸೀಮಿತವಾಗಿರುವ ಹಾಗಿದೆ. ಇದರ ನಡುವೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಬರೆದಿರುವ ಈ ಪತ್ರ ಮತ್ತೊಂದು ಹಂತಕ್ಕೆ ವಿವಾದವನ್ನು ಕೊಂಡೊಯ್ದಿದೆ.

16 ಪುಟ.. 51 ವಿಚಾರ.. ಇಂಗ್ಲೆಂಡ್‌ನಿಂದ ತರಿಸಿದ ದಾಖಲೆ ಇದೆ ಎಂದ ಅಪ್ಪಚ್ಚು ರಂಜನ್ !

2019 ನವೆಂಬರ್ 7 ರಂದು ಶಾಸಕ ಅಪ್ಪಚ್ಚು ರಂಜನ್ ಆಗಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನಿಗೆ 51 ವಿಚಾರಗಳನ್ನೊಳಗೊಂಡ 16 ಪುಟಗಳ ವರದಿ ಪತ್ರವೊಂದನ್ನು ಕೊಟ್ಟಿದ್ದರು. ಇಂಗ್ಲೆಂಡ್ ನಿಂದ ತರಿಸಿಕೊಂಡ‌ ವಿಲಿಯಂ ಕ್ರಿಕ್ ಪ್ಯಾಟ್ರಿಕ್ ಬರೆದಿರುವ ಕೃತಿಯನ್ನು ಆಧರಿಸಿ ಈ ಪತ್ರದಲ್ಲಿ ವಿಚಾರಗಳನ್ನು ಹೇಳಲಾಗಿದೆ. ಟಿಪ್ಪುವೊಬ್ಬ ಮತಾಂಧ. ಆತ ಹಿಂದೂಗಳ ಮಾರಣಹೋಮ ನಡೆಸಿದ್ದಾನೆ. ಕೊಡವರನ್ನು ಮತಾಂತರ ಮಾಡಿ ಹಿಂಸೆ ಮಾಡಿದ್ದಾನೆ. ಮತ್ತು ಸ್ವತಃ ಟಿಪ್ಪು ತಂದೆ ಹೈದಾರಾಲಿಯೇ ಟಿಪ್ಪು ಬಗ್ಗೆ ಸಂಶಯಹೊಂದಿದ್ದರು ಎಂದು ಪತ್ರದಲ್ಲಿ ದಾಖಲಿಸಲಾಗಿದೆ.

ಇನ್ನು ಈಗಿನ ಸರ್ಕಾರಕ್ಕೂ ಅಪ್ಪಚ್ಚು ರಂಜನ್ ಅದೇ ಹಳೆಯ ವರದಿಯ ಪ್ರತಿಯನ್ನು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ಅಪ್ಪಚ್ಚು ರಂಜನ್ ವರದಿ ಪತ್ರವೊಂದನ್ನು ಕೊಟ್ಟಿದ್ದಾರೆ. ಅದರಲ್ಲಿ ಇಂಗ್ಲೆಂಡ್ ನಿಂದ ತರಿಸಿರುವ ಇತಿಹಾಸ ಪುಸ್ತಕದ ದಾಖಲೆ ಇದೆ. ಅದರ ಬಗ್ಗೆ ವಿವರವಾಗಿ ಚರ್ಚೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತವೆ ಎಂದರು. ಒಟ್ಟಾರೆ ಟಿಪ್ಪು ಸುಲ್ತಾನ್ ಇತಿಹಾಸಕ್ಕೆ ಸಮಾಜ ವಿಜ್ಞಾನ ವಿಷಯದಿಂದ ಬಹುತೇಕ್ ಕೋಕ್ ನೀಡಲಾಗಿದೆ. ಇನ್ನೇನಿದ್ದರೂ ಕೇವಲ ಟಿಪ್ಪು ಪರಿಚಯಕ್ಕೆ ಮಾತ್ರ ಸೀಮಿತವಾಗಿ ಇರಿಸಲಾಗಿದೆ. ಇದರ ಜೊತೆಗೆ ಮೂರು‌ವರ್ಷಗಳ ಹಿಂದೆ ಅಪ್ಪಚ್ಚು ರಂಜನ್ ಸರ್ಕಾರಕ್ಕೆ ಬರೆದಿರುವ ವರದಿ ಪತ್ರ ಮುನ್ನೆಲೆಗೆ ಬಂದಿದ್ದು ವಿವಾದವನ್ನು ಮತ್ತಷ್ಟು ತಾರಕಕ್ಕೇರುವಂತೆ ಮಾಡಿದ್ದಾರೆ.

Tags: BJPCongress PartyCovid 19ಅಪ್ಪಚ್ಚು‌ ರಂಜನ್ಎಚ್ ಡಿ ಕುಮಾರಸ್ವಾಮಿಟಿಪ್ಪು ಸುಲ್ತಾನ್ಬಿಜೆಪಿಮಡಿಕೇರಿಸಿದ್ದರಾಮಯ್ಯಸ್ವಾತಂತ್ರ್ಯ ಹೋರಾಟಗಾರ
Previous Post

ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾರೀ ಬೆಂಕಿ : ಅಗ್ನಿ ನಂದಿಸಲು ವಾಯುಪಡೆಯ ಹೆಲಿಕಾಪ್ಟರ್ಗಳ ಬಳಕೆ!

Next Post

ಕರ್ನಾಟಕ: ಪಾಕಿಸ್ತಾನದ ಗಣರಾಜ್ಯೋತ್ಸವದಂದು ‘ಶಾಂತಿ & ಸೌಹಾರ್ದತೆ’ ವಾಟ್ಸಾಪ್ ಸ್ಟೇಟಸ್ ಹಾಕಿದ ಮಹಿಳೆಯ ಬಂಧನ

Related Posts

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?
Top Story

ಮತ್ತೆ ಡಿಸಿಎಂ ಆಗ್ತಾರಾ ಅಥಣಿ ಶಾಸಕ..? : ಬೆಳಗಾವಿ ಜಿಲ್ಲೆಗೆ ಮಹತ್ವದ ಸ್ಥಾನದ ಬಗ್ಗೆ ಸವದಿ ಹೇಳಿದ್ದೇನು..?

by ಪ್ರತಿಧ್ವನಿ
May 17, 2026
0

ಬೆಂಗಳೂರು : ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ 3 ರೂಪಾಯಿ ಬೆಲೆ ಏರಿಕೆಯಾಗಿರುವುದಕ್ಕೆ ಕೇಂದ್ರದ ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ. ಅಲ್ಲದೆ ಇದರಿಂದ ಜನಸಾಮಾನ್ಯರ ಜೀವನದ ಮೇಲೆ...

Read moreDetails
KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

KPSC ಆಯ್ತು ಈಗ KEAದಲ್ಲೂ ಅಕ್ರಮದ ವಾಸನೆ : ಸಾಮ್ರಾಟ್‌ ಅಶೋಕ್‌ ಸಿಡಿಸಿದ್ರು ಹೊಸ ಬಾಂಬ್‌..!

May 17, 2026
ನೀರಿಲ್ಲದ ಕೃಷ್ಣೆಯ ಒಡಲು : ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ; ರೈತರ ತೀವ್ರ ಆಕ್ರೋಶ..!

ನೀರಿಲ್ಲದ ಕೃಷ್ಣೆಯ ಒಡಲು : ಜವಾಬ್ದಾರಿ ಮರೆತ ಜನಪ್ರತಿನಿಧಿಗಳು ; ರೈತರ ತೀವ್ರ ಆಕ್ರೋಶ..!

May 17, 2026
ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!

ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!

May 17, 2026
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
Next Post
ಕರ್ನಾಟಕ: ಪಾಕಿಸ್ತಾನದ ಗಣರಾಜ್ಯೋತ್ಸವದಂದು ‘ಶಾಂತಿ & ಸೌಹಾರ್ದತೆ’ ವಾಟ್ಸಾಪ್ ಸ್ಟೇಟಸ್ ಹಾಕಿದ ಮಹಿಳೆಯ ಬಂಧನ

ಕರ್ನಾಟಕ: ಪಾಕಿಸ್ತಾನದ ಗಣರಾಜ್ಯೋತ್ಸವದಂದು 'ಶಾಂತಿ & ಸೌಹಾರ್ದತೆ' ವಾಟ್ಸಾಪ್ ಸ್ಟೇಟಸ್ ಹಾಕಿದ ಮಹಿಳೆಯ ಬಂಧನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada