
ಸೂರತ್: ತಡರಾತ್ರಿ ಗುಜರಾತ್ನ ಸೂರತ್ನ ಸಚಿನ್ ಪ್ರದೇಶದಲ್ಲಿ ಎಕ್ಸ್ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದು ಮೂವರು ಯುವಕರು ಸಾವನ್ನಪ್ಪಿದ್ದಾರೆ.ಈ ಘಟನೆಯ ನಂತರ ಸೂರತ್ ನಗರದಲ್ಲಿ ಕೋಲಾಹಲ ಉಂಟಾಗಿದೆ. ಮೂವರು ಯುವಕರು ಉತ್ತರ ಪ್ರದೇಶದ ಕಾನ್ಪುರದಿಂದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಲು ಇಲ್ಲಿಗೆ ಬಂದಿದ್ದರು.

ಇತ್ತೀಚೆಗಷ್ಟೇ ದೀಪಾವಳಿ ರಜೆಯಲ್ಲಿ ತಮ್ಮ ಹುಟ್ಟೂರು ಉತ್ತರ ಪ್ರದೇಶಕ್ಕೆ ತೆರಳಿದ್ದರು. ರಜೆ ಮುಗಿದು ಮತ್ತೆ ಸೂರತ್ಗೆ ಬಂದರು.ಅವರು ಶಿವಾಂಜಲಿ ಸೊಸೈಟಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರನ್ನು ಆಕಾಶ್ ನಿಶಾದ್ (22 ವರ್ಷ), ದಿನು ನಿಶಾದ್ (24) ಮತ್ತು ಪ್ರಮೋದ್ ನಿಶಾದ್ (17) ಎಂದು ಗುರುತಿಸಲಾಗಿದ್ದು, ಈ ಮೂವರು ಒಟ್ಟಿಗೆ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ರೈಲು ಹಳಿ ಬಳಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.ಮೂವರು ಸ್ನೇಹಿತರು ಓಡುತ್ತಿರುವ ರೈಲಿಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.ಭೀಸ್ತಾನ್ ಸಚಿನ್ ರೈಲ್ವೆ ಟ್ರ್ಯಾಕ್ ಬಳಿ ಈ ಘಟನೆ ನಡೆದಿದೆ. ತಡರಾತ್ರಿಯಲ್ಲಿ ವಡ್ನಗರ್-ವಲ್ಸಾದ್ ಎಕ್ಸ್ಪ್ರೆಸ್ ರೈಲು ಅವರ ಮೇಲೆ ಹರಿದಿದೆ.
ರೈಲ್ವೇ ಟ್ರ್ಯಾಕ್ ಕ್ರಾಸಿಂಗ್ ನಲ್ಲಿ ಈ ಘಟನೆ ನಡೆದಿದೆ. ಮೂವರು ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ರೈಲ್ವೇ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತರ ಪೈಕಿ ಓರ್ವನ ಶವ ರೈಲ್ವೆ ಹಳಿ ಬಳಿಯ ಪೊದೆಯಲ್ಲಿ ಪತ್ತೆಯಾಗಿದೆ.




