• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, October 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

“ಭಕ್ತಿಯ ಬೇರು, ಕೃಷಿಯ ತಳಹದಿ, ಪರಂಪರೆಯ ಶಕ್ತಿಯೇ ಕಂಬಳದ ವೈಶಿಷ್ಟ್ಯ”

ಕಂಬಳ ಓಟಗಾರರಿಗೆ ತರಬೇತಿ ನೀಡಿದರೆ ಅಥ್ಲೆಟಿಕ್ಸ್ ನಲ್ಲಿ ಸಾಧನೆ ಮಾಡುವ ವಿಶ್ವಾಸವಿದೆ : ಸಿಎಂ ಡಿಕೆ ಶಿವಕುಮಾರ್..

ಪ್ರತಿಧ್ವನಿ by ಪ್ರತಿಧ್ವನಿ
October 19, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
“ಭಕ್ತಿಯ ಬೇರು, ಕೃಷಿಯ ತಳಹದಿ, ಪರಂಪರೆಯ ಶಕ್ತಿಯೇ ಕಂಬಳದ ವೈಶಿಷ್ಟ್ಯ”
Share on WhatsAppShare on FacebookShare on Telegram

ಮೈಸೂರು : ಕಂಬಳ ಶ್ರಮಿಕರ ಕ್ರೀಡೆ, ಕರಾವಳಿ ಭಾಗದ ಜನರ ಸಾಂಸ್ಕೃತಿಕ ಹಬ್ಬ. ಕೃಷಿ ಮಣ್ಣಿನಲ್ಲಿ ಹುಟ್ಟಿದ್ದು ಕಂಬಳ, ಕೃಷಿ ಸಂಸ್ಕೃತಿಯ ಮೂಲ. ಭಕ್ತಿಯ ಬೇರು, ಕೃಷಿಯ ತಳಹದಿ, ಪರಂಪರೆಯ ಶಕ್ತಿ ಕಂಬಳದ ವೈಶಿಷ್ಟ್ಯ” ಎಂದು ಸಿಎಂ ಡಿ ಕೆ ಶಿವಕುಮಾರ್ ಬಣ್ಣಿಸಿದ್ದಾರೆ.

ADVERTISEMENT

ಮೈಸೂರು ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಕಂಬಳ ಸ್ಪರ್ಧೆಗೆ ಶಿವಕುಮಾರ್ ಚಾಲನೆ ನೀಡಿ ಮಾತನಾಡಿ, ಇದು ಕನ್ನಡ ನಾಡಿನ ಹಬ್ಬ. ತಾಯಿ ಚಾಮುಂಡಿಯ ಹಬ್ಬಕ್ಕೆ ಕರಾವಳಿಯಿಂದ ಕಂಬಳ ಕಾರ್ಯಕ್ರಮವನ್ನು ತಂದಿದ್ದೇವೆ. 800 ವರ್ಷಗಳ ಹಿಂದೆ ರೈತರ ಬದುಕು ಕಾಪಾಡುವಂತೆ ಕದ್ರಿ ಮಂಜುನಾಥನ ಸೇವೆಗೆ, ಪ್ರಾರ್ಥನೆಗೆ ಈ ಕಂಬಳ ಪ್ರಾರಂಭವಾಗಿದೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಡೆಯುತ್ತದೆ. ಈ ಆಚರಣೆ ಬಗ್ಗೆ ದೇಶದಾದ್ಯಂತ ಚರ್ಚೆ ಮಾಡಿ ಕಾನೂನು ತರಲಾಗಿದೆ ಎಂದು ಹೇಳಿದ್ದಾರೆ.

May be an image of dais and text

ಭತ್ತದ ಗದ್ದೆ, ಮಳೆ, ಮಣ್ಣು, ಕೋಣ, ರೈತರ ಬದುಕನ್ನು ನಾವು ಕಂಬಳದಲ್ಲಿ ನೋಡುತ್ತಿದ್ದೇವೆ. ಕೃಷಿಯ ಶ್ರಮಿಕರಿಗೆ ಗೌರವಿಸಲು, ನಮ್ಮ ಕ್ರೀಡೆ ಹಾಗೂ ಕಲೆಗೆ ಉತ್ತೇಜನ ನೀಡಲು ನಾವು ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಇದರ ಬಗ್ಗೆ ಟೀಕೆಗಳು ಬಂದವು. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ. ಟೀಕೆ ಮಾಡುವುದು ತಪ್ಪಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಎಲ್ಲಾ ಸಂಸ್ಕೃತಿ, ಪರಂಪರೆಯನ್ನು ಈ ದಸರಾ ಕಾರ್ಯಕ್ರಮದ ಭಾಗವಾಗಿ ಮಾಡಲು ನಾವು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

May be an image of one or more people, crowd and text

ಕಂಬಳ ನಡೆಸುವ ಸುಮಾರು 3 ಸಾವಿರ ಜನ ಕರಾವಳಿಯಿಂದ ಇಲ್ಲಿಗೆ ಬಂದಿದ್ದೀರಿ, ನಿಮಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಈ ಹಿಂದೆ ವಿಜಯನಗರದ ಅರಸರು ಕೂಡ ಕರಾವಳಿ ಭಾಗದ ಕೋಣಗಳಿಗೆ ಗೌರವ ಅರ್ಪಿಸುತ್ತಿದ್ದರು. ಈ ಕುರಿತ ಇತಿಹಾಸ ಪುಸ್ತಕವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

ಒಂದೇ ನಾಡು ಹಲವು ಸಂಸ್ಕೃತಿ, ಒಂದೇ ಕನ್ನಡತನ ಅದುವೇ ಅಖಂಡ ಕರ್ನಾಟಕ ಎಂಬ ಸಂದೇಶ ರವಾನೆ..

ತಾಯಿ ಚಾಮುಂಡಿ ಹಾಗೂ ನನ್ನ ಆರಾಧ್ಯ ದೈವ ವೀರ ಗಂಗಾಧರ ಅಜ್ಜಯ್ಯ ಅವರ ಪಾದಗಳಿಗೆ ನಮಿಸಿ, ಈ ಐತಿಹಾಸಿಕ ಸಾಂಸ್ಕೃತಿಕ ಕ್ರೀಡೆಯನ್ನು ಆನಂದಿಸಿದ್ದೇವೆ. ಕಂಬಳ ಕರಾವಳಿಯ ಸಾಂಸ್ಕೃತಿಯ ಹಬ್ಬ, ನಾಡಿನ ಕ್ರೀಡೆಯಾಗಿದೆ. ನಮ್ಮ ಸರ್ಕಾರ 23 ಕಂಬಳ ಕೂಟಕ್ಕೆ ತಲಾ 5 ಲಕ್ಷ ನೀಡುತ್ತಿದೆ. ಕರಾವಳಿಯಿಂದ ಮೈಸೂರು ಕಲ್ಯಾಣ ಕರ್ನಾಟಕವರೆಗೆ ‘ಒಂದೇ ನಾಡು ಹಲವು ಸಂಸ್ಕೃತಿ, ಒಂದೇ ಕನ್ನಡತನ ಅದುವೇ ಅಖಂಡ ಕರ್ನಾಟಕ’ ಎಂಬ ಸಂದೇಶವನ್ನು ನಾವು ನೀಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ದಸರಾ ಬಗ್ಗೆ ರೀಲ್ ಮಾಡಿ, 100 ಅತ್ಯುತ್ತಮ ರೀಲ್ ಮಾಡಿದವರಿಗೆ ಪ್ರಶಸ್ತಿ..

ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಈ ಕಂಬಳ ವೀಕ್ಷಣೆ ಮಾಡಿದ್ದಾರೆ. ರಾಜ್ಯದ ಜನರು ಮೈಸೂರು ದಸರಾ ಕಾರ್ಯಕ್ರಮದ ಬಗ್ಗೆ ರೀಲ್ ಮಾಡಿ ಮೈಸೂರು ದಸರಾ ಪೇಜ್ (mysoredasara.2026) ಗೆ ಟ್ಯಾಗ್ ಮಾಡಿ. ಅತ್ಯುತ್ತಮ 100 ರೀಲ್ ಮಾಡಿದವರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುವುದು. ರಾಜ್ಯದ ಯಾವ ಭಾಗದ ಜನರಾದರೂ ಸರಿ, ದೀಪಾಲಂಕಾರ, ಜಂಬೂಸವಾರಿ, ಕ್ರೀಡೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಯಾವುದರ ಬಗ್ಗೆ ಬೇಕಾದರೂ ರೀಲ್ ಮಾಡಬಹುದು ಎಂದು ಸಿಎಂ ಡಿಕೆ ಶಿವಕುಮಾರ್‌ ಕರೆ ನೀಡಿದ್ದಾರೆ.

May be an image of wedding

ಭಾರತೀಯ ಪ್ರಾಣಿ ಮಂಡಳಿಯವರು ಈ ಕಂಬಳ ವಿಚಾರದಲ್ಲಿ ತೊಡಗಿದ್ದಾರೆ. ಈ ಕಂಬಳ ಯಾವ ರೀತಿ ಮಾಡಬೇಕು ಎಂದು ಕಾನೂನು ರಚಿಸಿ, ಮಾರ್ಗಸೂಚಿಸಿ ರಚಿಸಿದ್ದಾರೆ. ನಾವು ಸಂಸ್ಕೃತಿ, ಸಂಪ್ರದಾಯ ಗೌರವಿಸಿ ಪಾಲಿಸಬೇಕು, ಕಲೆಯನ್ನು ಪ್ರೋತ್ಸಾಹಿಸಬೇಕು, ಪರಂಪರೆಯನ್ನು ಪಾಲಿಸಬೇಕು. ನಾವು ಹೋರಿಗಳನ್ನು ಸಾಕುತ್ತೇವೆ. ಆದರೆ ಕ್ರೀಡೆ ಮಾಡುತ್ತಿಲ್ಲ. ನಾವು ಶ್ವಾನ ಪ್ರದರ್ಶನ ಮಾಡಿಕೊಂಡು ಬರುತ್ತಿದ್ದೇವೆ. ದಸರಾದಲ್ಲಿ ವಿಂಟೆಜ್ ಕಾರು, ಗಾಯನ, ನೃತ್ಯ, ಆಹಾರ ಪ್ರದರ್ಶನ ಮಾಡಿದ್ದು, ಏರ್ ಶೋ ಮೂಲಕ ನಮ್ಮ ಸೈನಿಕರು ವೈಮಾನಿಕ ಪ್ರದರ್ಶನ ನಡೆಸಲಿದ್ದಾರೆ ಎಂದು ದಸರಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಂಬಳ ಓಟಗಾರರಿಗೆ ತರಬೇತಿ ನೀಡಿದರೆ ಅಥ್ಲೆಟಿಕ್ಸ್ ನಲ್ಲಿ ಸಾಧನೆ ಮಾಡುವ ವಿಶ್ವಾಸವಿದೆ..

ಇಂದು ಕಂಬಳದ ಓಟದಲ್ಲಿ 9 ಸೆಕೆಂಡಿಗೆ ಓಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಬೆನ್ ಜಾನ್ಸನ್ ಅವರು 9 ಸೆಕೆಂಡಿಗೆ 100 ಮೀ. ಓಡಿ ವಿಶ್ವ ದಾಖಲೆ ಬರೆದಿದ್ದರು. ಈ ಕಂಬಳದಲ್ಲಿ ಓಡುವರಿಗೆ ಸೂಕ್ತ ತರಬೇತಿ ನೀಡಿದರೆ ಅಥ್ಲೆಟಿಕ್ಸ್ ನಲ್ಲಿ ಸಾಧನೆ ಮಾಡಬಹುದು ಎಂಬ ನಂಬಿಕೆ ಇದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ನಾಡಿನ ವಿವಿಧ ಕಲೆಗಳಿಗೆ ದಸರಾದಲ್ಲಿ ಅವಕಾಶ ಕಲ್ಪಿಸಲಾಗಿದೆ. ನಮ್ಮ ನಾಡಿನ ವಿವಿಧ ಪರಂಪರೆಯನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಲಕ್ಷಾಂತರ ಜನ ಬಂದು ದಸರಾ ವೀಕ್ಷಣೆ ಮಾಡುತ್ತಿದ್ದಾರೆ. ನಿಮ್ಮ ಮೇಲೆ ತಾಯಿ ಚಾಮುಂಡೇಶ್ವರಿ ಕೃಪೆ ಇರಲಿ ಎಂದು ಕೋರಿಕೊಂಡಿದ್ದಾರೆ.

Tags: CM DK Shivakumarkambala runnerKaravali TraditionKarnataka Govermentmysore dasaraMysore Festivalmysore newsMysuru KambalaPratidhvani
Previous Post

EPFO: ನಿಮ್ಮ ಸಂಬಳ 25,000 ರೂ. ಆಗಿದ್ದರೆ ಸಿಗುವ ಪಿಂಚಣಿ ಎಷ್ಟು? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ

Next Post

ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : `ಇ-ಕೆವೈಸಿ’ ದೃಢೀಕರಣ ಗಡುವು ಮತ್ತೆ ವಿಸ್ತರಣೆ

Related Posts

ದೇವರಗುಡ್ಡದ ಕಾರ್ಣಿಕ ನುಡಿ ಮೊಳಗಿತು: ‘ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್‌!’ ಇದರ ಅರ್ಥವೇನು?
ಕರ್ನಾಟಕ

ದೇವರಗುಡ್ಡದ ಕಾರ್ಣಿಕ ನುಡಿ ಮೊಳಗಿತು: ‘ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್‌!’ ಇದರ ಅರ್ಥವೇನು?

by ಪ್ರತಿಧ್ವನಿ
October 19, 2026
0

  ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಪ್ರಸಿದ್ಧ ಐತಿಹಾಸಿಕ ಧಾರ್ಮಿಕ ಕ್ಷೇತ್ರ ದೇವರಗುಡ್ಡದಲ್ಲಿ ನವರಾತ್ರಿ ಹಾಗೂ ವಿಜಯದಶಮಿ ಅಂಗವಾಗಿ ನಡೆಯುವ ಮಾಲತೇಶ (ಮೈಲಾರಲಿಂಗೇಶ್ವರ) ದೇವರ ಕಾರ್ಣೀಕೋತ್ಸವ ಭಕ್ತಿಭಾವದಿಂದ...

Read moreDetails
ಆಯುಧ ಪೂಜೆ, ದಸರಾ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ! ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ದರ ಎಷ್ಟಿದೆ?

ಆಯುಧ ಪೂಜೆ, ದಸರಾ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ! ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ದರ ಎಷ್ಟಿದೆ?

October 19, 2026
ಆಯುಧ ಪೂಜೆ ದಿನ ಕಾರು, ಬೈಕ್ ತೊಳೆದರೆ ದಂಡ! ಬೆಂಗಳೂರಿಗರಿಗೆ ಜಲಮಂಡಳಿಯಿಂದ ಎಚ್ಚರಿಕೆ

ಆಯುಧ ಪೂಜೆ ದಿನ ಕಾರು, ಬೈಕ್ ತೊಳೆದರೆ ದಂಡ! ಬೆಂಗಳೂರಿಗರಿಗೆ ಜಲಮಂಡಳಿಯಿಂದ ಎಚ್ಚರಿಕೆ

October 19, 2026
Northeast Teachers' Constituency Election: Alternative documents permitted if voter ID card is unavailable

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಪರ್ಯಾಯ ದಾಖಲೆಗಳ ಬಳಕೆಗೆ ಅವಕಾಶ

October 19, 2026
We will topple the government that beats children and farmers—through the ballot box: Actor Prakash Raj

ಮಕ್ಕಳನ್ನು, ರೈತರನ್ನು ಹೊಡೆಯುವ ಸರಕಾರವನ್ನು ಮತದಾನದ ಮೂಲಕವೇ ಕೆಳಗಿಳಿಸುತ್ತೇವೆ : ನಟ ಪ್ರಕಾಶ್ ರಾಜ್

October 19, 2026
Next Post
Attention ration card holders in the state: Deadline for 'e-KYC' verification extended once again

ರಾಜ್ಯದ ಪಡಿತರ ಚೀಟಿದಾರರೇ ಗಮನಿಸಿ : `ಇ-ಕೆವೈಸಿ’ ದೃಢೀಕರಣ ಗಡುವು ಮತ್ತೆ ವಿಸ್ತರಣೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada