• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, October 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಪರ್ಯಾಯ ದಾಖಲೆಗಳ ಬಳಕೆಗೆ ಅವಕಾಶ

ಪ್ರತಿಧ್ವನಿ by ಪ್ರತಿಧ್ವನಿ
October 19, 2026
in Top Story, ಕರ್ನಾಟಕ
0
Northeast Teachers' Constituency Election: Alternative documents permitted if voter ID card is unavailable
Share on WhatsAppShare on FacebookShare on Telegram

ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ (Election)-2026ರ ಪ್ರಯುಕ್ತ ಅಕ್ಟೋಬರ್ 23 ರಂದು ಮತದಾನ ನಿಗದಿಯಾಗಿದ್ದು, ಅಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಜರುಗಲಿದೆ. ಮತದಾನದ ವೇಳೆ ಮತದಾರರ ಗುರುತಿನ (voter ID)ಚೀಟಿ ಲಭ್ಯವಿಲ್ಲದಿದ್ದಲ್ಲಿ ಮತದಾನಕ್ಕೆ ಪರ್ಯಾಯವಾಗಿ ಬಳಸಬಹುದಾದ ಅಧಿಕೃತ ದಾಖಲೆಗಳ ಪಟ್ಟಿಯನ್ನು ಭಾರತ ಚುನಾವಣಾ ಆಯೋಗ ಪ್ರಕಟಿಸಿದೆ.

ADVERTISEMENT

ಮತದಾರರು ಮತಗಟ್ಟೆಗೆ ಬಂದಾಗ ತಮ್ಮ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಯನ್ನು ತೋರಿಸಿ ಹಕ್ಕು ಚಲಾಯಿಸುವುದು ಕಡ್ಡಾಯವಾಗಿದೆ. ಆದರೆ, ಒಂದು ವೇಳೆ ಯಾವುದೇ ಮತದಾರರ ಬಳಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದ ಪಕ್ಷದಲ್ಲಿ, ಮತದಾನದಿಂದ ವಂಚಿತರಾಗುವುದನ್ನು ತಪ್ಪಿಸಲು ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ಈ ಕೆಳಗಿನ ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತ ಚಲಾಯಿಸಲು ಅವಕಾಶ ನೀಡಲಾಗಿದೆ.

ಪರ್ಯಾಯ ಗುರುತಿನ ದಾಖಲೆಗಳ ವಿವರ:

ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಭಾರತೀಯ ಪಾಸ್‌ಪೋರ್ಟ್, ಸೇವಾ ಗುರುತಿನ ಚೀಟಿಗಳಾದ ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆಗಳು, ಸ್ಥಳೀಯ ಸಂಸ್ಥೆಗಳು ಅಥವಾ ಖಾಸಗಿ ಕೈಗಾರಿಕಾ ಸಂಸ್ಥೆಗಳು ತಮ್ಮ ನೌಕರರಿಗೆ ನೀಡಿರುವ ಅಧಿಕೃತ ಸೇವಾ ಗುರುತಿನ ಚೀಟಿ.

ಅದೇ ರೀತಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ. ಶಿಕ್ಷಕರ ಅಥವಾ ಪದವೀಧರರ ಕ್ಷೇತ್ರದ ಮತದಾರರು ಕರ್ತವ್ಯ ನಿರ್ವಹಿಸುತ್ತಿರುವ ಸಂಬAಧಿತ ಶಿಕ್ಷಣ ಸಂಸ್ಥೆಗಳು ನೀಡಿರುವ ಸೇವಾ ಗುರುತಿನ ಚೀಟಿ. ವಿಶ್ವವಿದ್ಯಾಲಯವು ನೀಡಿರುವ ಮೂಲ ಪದವಿ ಅಥವಾ ಡಿಪ್ಲೊಮಾ ಪ್ರಮಾಣಪತ್ರ.

ಇದಲ್ಲದೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಅಥವಾ ಸಕ್ಷಮ ಪ್ರಾಧಿಕಾರವು ನೀಡಿರುವ ವಿಶಿಷ್ಟ ಅಂಗವಿಕಲತಾ ಗುರುತಿನ ಚೀಟಿ (ಯುಡಿಐಡಿ ಕಾರ್ಡ್).

ಅರ್ಹ ಮತದಾರರು ಈ ಎಲ್ಲಾ ಪರ್ಯಾಯ ದಾಖಲೆಗಳನ್ನು ಸದ್ಬಳಕೆ ಮಾಡಿಕೊಂಡು ಯಾವುದೇ ಗೊಂದಲವಿಲ್ಲದೆ ನಿಗದಿತ ಸಮಯದಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ ಪ್ರಕಟಣೆ ತಿಳಿಸಿದೆ.

ಮಕ್ಕಳನ್ನು, ರೈತರನ್ನು ಹೊಡೆಯುವ ಸರಕಾರವನ್ನು ಮತದಾನದ ಮೂಲಕವೇ ಕೆಳಗಿಳಿಸುತ್ತೇವೆ : ನಟ ಪ್ರಕಾಶ್ ರಾಜ್

Tags: Electionpermittedvoter ID
Previous Post

ಮಕ್ಕಳನ್ನು, ರೈತರನ್ನು ಹೊಡೆಯುವ ಸರಕಾರವನ್ನು ಮತದಾನದ ಮೂಲಕವೇ ಕೆಳಗಿಳಿಸುತ್ತೇವೆ : ನಟ ಪ್ರಕಾಶ್ ರಾಜ್

Next Post

ಆಯುಧ ಪೂಜೆ ದಿನ ಕಾರು, ಬೈಕ್ ತೊಳೆದರೆ ದಂಡ! ಬೆಂಗಳೂರಿಗರಿಗೆ ಜಲಮಂಡಳಿಯಿಂದ ಎಚ್ಚರಿಕೆ

Related Posts

ದೇವರಗುಡ್ಡದ ಕಾರ್ಣಿಕ ನುಡಿ ಮೊಳಗಿತು: ‘ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್‌!’ ಇದರ ಅರ್ಥವೇನು?
ಕರ್ನಾಟಕ

ದೇವರಗುಡ್ಡದ ಕಾರ್ಣಿಕ ನುಡಿ ಮೊಳಗಿತು: ‘ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್‌!’ ಇದರ ಅರ್ಥವೇನು?

by ಪ್ರತಿಧ್ವನಿ
October 19, 2026
0

  ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಪ್ರಸಿದ್ಧ ಐತಿಹಾಸಿಕ ಧಾರ್ಮಿಕ ಕ್ಷೇತ್ರ ದೇವರಗುಡ್ಡದಲ್ಲಿ ನವರಾತ್ರಿ ಹಾಗೂ ವಿಜಯದಶಮಿ ಅಂಗವಾಗಿ ನಡೆಯುವ ಮಾಲತೇಶ (ಮೈಲಾರಲಿಂಗೇಶ್ವರ) ದೇವರ ಕಾರ್ಣೀಕೋತ್ಸವ ಭಕ್ತಿಭಾವದಿಂದ...

Read moreDetails
ಆಯುಧ ಪೂಜೆ, ದಸರಾ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ! ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ದರ ಎಷ್ಟಿದೆ?

ಆಯುಧ ಪೂಜೆ, ದಸರಾ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ! ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ದರ ಎಷ್ಟಿದೆ?

October 19, 2026
ಆಯುಧ ಪೂಜೆ ದಿನ ಕಾರು, ಬೈಕ್ ತೊಳೆದರೆ ದಂಡ! ಬೆಂಗಳೂರಿಗರಿಗೆ ಜಲಮಂಡಳಿಯಿಂದ ಎಚ್ಚರಿಕೆ

ಆಯುಧ ಪೂಜೆ ದಿನ ಕಾರು, ಬೈಕ್ ತೊಳೆದರೆ ದಂಡ! ಬೆಂಗಳೂರಿಗರಿಗೆ ಜಲಮಂಡಳಿಯಿಂದ ಎಚ್ಚರಿಕೆ

October 19, 2026
We will topple the government that beats children and farmers—through the ballot box: Actor Prakash Raj

ಮಕ್ಕಳನ್ನು, ರೈತರನ್ನು ಹೊಡೆಯುವ ಸರಕಾರವನ್ನು ಮತದಾನದ ಮೂಲಕವೇ ಕೆಳಗಿಳಿಸುತ್ತೇವೆ : ನಟ ಪ್ರಕಾಶ್ ರಾಜ್

October 19, 2026
BREAKING: Three killed in a shooting in Manipur; locals express outrage by placing the bodies in front of the CM's residence

BREAKING : ಮಣಿಪುರದಲ್ಲಿ ಗುಂಡಿನ ದಾಳಿಗೆ  ಮೂವರು ಬ*ಲಿ : ಸಿಎಂ ನಿವಾಸದ ಮುಂದೆ ಮೃತದೇಹಗಳನ್ನಿಟ್ಟು ಸ್ಥಳೀಯರ ಆಕ್ರೋಶ

October 19, 2026
Next Post
ಆಯುಧ ಪೂಜೆ ದಿನ ಕಾರು, ಬೈಕ್ ತೊಳೆದರೆ ದಂಡ! ಬೆಂಗಳೂರಿಗರಿಗೆ ಜಲಮಂಡಳಿಯಿಂದ ಎಚ್ಚರಿಕೆ

ಆಯುಧ ಪೂಜೆ ದಿನ ಕಾರು, ಬೈಕ್ ತೊಳೆದರೆ ದಂಡ! ಬೆಂಗಳೂರಿಗರಿಗೆ ಜಲಮಂಡಳಿಯಿಂದ ಎಚ್ಚರಿಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!