ಎದೆಯುರಿ ಯ ಸಮಸ್ಯೆ ಹೆಚ್ಚು ಜನಕ್ಕೆ ಕಾಡ್ತಾ ಇರುತ್ತೆ .ಆದರೆ ಕೆಲವರಿಗೆ ಬೆಳಗಿನ ಸಂದರ್ಭದಲ್ಲಿ ಯಾವುದೇ ರೀತಿಯ ಎದೆಯುರಿ ಕಾಣಿಸಿಕೊಳ್ಳುವುದಿಲ್ಲ. ಆದರೆ ರಾತ್ರಿ ಸಮಯ ಮಲಗಿದ ನಂತರ ಹೆಚ್ಚು ಜನಕ್ಕೆ ಎದೆಯುರಿ ಕಾಣಿಸಿಕೊಳ್ಳುತ್ತದೆ. ಗ್ಯಾಸ್ಟಿಕ್ ನಿಂದ ಇರಬಹುದು ಎಂದು ಇದರ ಬಗ್ಗೆ ನಿರ್ಲಕ್ಷ ತೋರಿಸುವುದು ಕೂಡ ಉತ್ತಮವಲ್ಲ. ಕೆಲವು ಬಾರಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದಲೂ ಕೂಡ ಎದೆ ಉರಿ ಹೆಚ್ಚಾಗುತ್ತದೆ. ಈ ಎದೆ ಉರಿಯಿಂದಾಗಿ ಹಾಗೂ ಆಮ್ಲಿಯ ಹಿಮ್ಮುಖ ಹರಿವಿನಿಂದಾಗಿ ನಿದ್ರೆಗೆ ತೊಂದರೆಯಾಗುವುದು ಸಹಜ. ಹಾಗೂ ಇದರಿಂದಾಗಿ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮವೂ ಕೂಡ ಬಿರಬಹುದು. ಎದೆ ಉರಿ ಸಮಸ್ಯೆಗೇ ಪ್ರಮುಖ ಕಾರಣ ಹಾಗೂ ಏನು ಮಾಡಬೇಕು ಅನ್ನೋದರ ಮಾಹಿತಿ ಇಲ್ಲಿದೆ.
- ಎದೆ ಹುಡುಗಿ ಪ್ರಮುಖ ಕಾರಣ ಕೆಲವರು ರಾತ್ರಿ ತಡವಾಗಿ ಊಟ ಮಾಡಿ ತಕ್ಷಣವೇ ಮಲಗುತ್ತಾರೆ. ಇದರಿಂದ ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ ಆಮ್ಲವೂ ಅನ್ನನಾಳಕ್ಕೆ ಹಿಮ್ಮುಖವಾಗಿ ಹರಿಯುವುದು ಇದಕ್ಕೆ ಪ್ರಮುಖ ಕಾರಣ.
- ಮಲಗುವ 2 ಗಂಟೆಯ ಮುನ್ನ ಊಟ ಮಾಡಬೇಕು ನಂತರ ಸ್ವಲ್ಪ ವಾಕಿಂಗ್ ಮಾಡುವುದರಿಂದ ಈ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಹಾಗೂ ಎದೆ ಉರಿ ಸಮಸ್ಯೆ ನಿವಾರಣೆ ಆಗುತ್ತದೆ.
- ಆಲ್ಕೋಹಾಲ್ ಸೇವನೆ ಅತಿಯಾಗಿದ್ದರೂ ಕೂಡ ಎದೆ ಉರಿಯ ಸಮಸ್ಯೆ ಹೆಚ್ಚಾಗುತ್ತದೆ.
- ಅತಿಯಾಗಿ ಕಾಫಿ ಟೀ ಸೇವನೆಯಿಂದ ಕೂಡ ಎದೆ ಊರಿ ಸಮಸ್ಯೆ ಕಾಡುವಂತದ್ದು ಸಹಜ .ಅದರಲ್ಲು ಕೂಡ ಕೆಫೆನ್ ಇರುವಂತ ಚಾಕಲೇಟ್ ಗಳನ್ನು ಅತಿಯಾಗಿ ಸೇವಿಸುವುದರಿಂದ ಎದೆ ಉರಿ ಕಾಡುತ್ತವೆ.
- ಎದೆ ಉರಿ ಸಮಸ್ಯೆಯನ್ನು ನಿವಾರಣೆ ಮಾಡಲು ಮಲಗುವ ಬಂಗಿಯನ್ನು ಬದಲಾಯಿಸುವುದು ತುಂಬಾನೇ ಮುಖ್ಯ. ಹೊಟ್ಟೆಯನ್ನು ಕೆಳಕ್ಕೆ ಮಾಡಿ ಮಲಗುವುದು ಅಥವಾ ನಿಮ್ಮ ಬಲ ಭಾಗಕ್ಕೆ ತಿರುಗಿ ಮಲಗುವುದರಿಂದ ಜೀರ್ಣಾಂಗಕ್ಕೆ ತೊಂದರೆ ಆಗುತ್ತದೆ.
- ಕೆಲವು ಬಾರಿ ನಾವು ಧರಿಸುವ ಟೈಟ್ ಫಿಟ್ಟಿಂಗ್ ಬಟ್ಟೆಗಳಿಂದ ಹೊಟ್ಟೆ ಮೇಲೆ ಪ್ರೆಶರ್ ಬಿದ್ದಾಗ ಈ ಸಮಸ್ಯೆ ಎದುರಾಗುತ್ತದೆ
- ರಾತ್ರಿ ವೇಳೆ ಪ್ರಾಪರ್ ಡಯಟ್ ಮೆಂಟೇನ್ ಮಾಡುವುದು ಉತ್ತಮ ಅತಿಯಾಗಿ ತಿನ್ನುವುದು.ಫ್ಯಾಟ್ ಫುಡ್, ಸ್ಪೈಸಿ ಫುಡ್, ಅಸಿಡಿಕ್ ಫುಡ್, ಚಾಕಲೇಟ್ ,ಮಿಂಟ್ ಇವೆಲ್ಲವೂ ರಾತ್ರಿವೇಳೆ ಒಳ್ಳೆಯದಲ್ಲ.
- ಮುಖ್ಯವಾಗಿ ನಮ್ಮ ಲೈಫ್ ಸ್ಟೈಲ್ ಬದಲಾಯಿಸಿಕೊಳ್ಳಬೇಕು ಅತಿಯಾಗಿ ಟೊಬ್ಯಾಕೋ ಸೇವನೆ,ಪೇನ್ ಕಿಲ್ಲರ್ ಮಾತ್ರೆಗಳು ಇವುಗಳನ್ನು ಸೇವಿಸುವುದು ಉತ್ತಮ ಅಲ್ಲ.
- ಡೈಜೇಶನ್ ಸಮಸ್ಯೆ ಮತ್ತು ಎದೆಯೂರಿಗೆ ಪ್ರಮುಖ ಕಾರಣ ಅಂದ್ರೆ ಒತ್ತಡ. ಸ್ಟ್ರೆಸ್ ಜಾಸ್ತಿ ಆದ ಟೈಮಲ್ಲಿ ದೇಹವು ಹೊಟ್ಟೆಯ ಆಮ್ಲವನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತದೆ ಇದರಿಂದ ಎಲ್ಲಿ ಎಸ್ ಕೂಡ ದುರ್ಬಲವಾಗುತ್ತದೆ.