
ಚೆನ್ನೈ: ಅವಳಿ ಒಲಿಂಪಿಕ್ಸ್ ಪಕದ ವಿಜೇತೆ ಮನು ಭಾಕರ್(Manu Bhaker) ಅವರು ಚೆನ್ನೈಯಲ್ಲಿ ನಡೆದಿದ್ದ ಶಾಲಾ ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾ ಸ್ಕಾಲರ್ಷಿಪ್ ವಿತರಣಾ ಕಾರ್ಯಕ್ರಮ ಇದಾಗಿತ್ತು. ಈ ವೇಳೆ ಅವರಿಗೆ ತಮಿಳುನಾಡಿನ ಕುರಿತಾದ ಹಲವು ಪ್ರಶ್ನೆಗಳನ್ನು ಕೇಳಲಾಯಿತು.
Aise kaun insult karta hai 😂🤣😂🤣 pic.twitter.com/gQUdU7agc5
— desi mojito 🇮🇳 (@desimojito) August 20, 2024
ಇದರೊಲ್ಲೊಂದು ಪ್ರಶ್ನೆ, ತಮಿಳುನಾಡು ಮುಖ್ಯಮಂತ್ರಿ(Tamil Nadu CM) ಎಂ.ಕೆ. ಸ್ಟಾಲಿನ್(MK Stalin) ಗೊತ್ತೇ ಎಂಬುದಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಮನು ಭಾಕರ್ ನನಗೆ ಅವರು ಯಾರೆಂದೆ ತಿಳಿದಿಲ್ಲ ಎಂದು ಹೇಳುವ ಮೂಲಕ ಜೋರಾಗಿ ನಕ್ಕರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಕೂಡ ಮನು ಅವರ ಈ ಪ್ರತಿಕ್ರಿಯೆ ಕೇಳಿ ಜೋರಾಗಿ ನಕ್ಕರು. ಸದ್ಯ ಈ ವಿಡಿಯೊ ವೈರಲ್(viral video) ಆಗಿದೆ.
Double Olympic medalist #ManuBhaker at Chennai ❤️
— Troll Cinema ( TC ) (@Troll_Cinema) August 20, 2024
MK Stalin ❌️#ThalapathyVijay ✅️ pic.twitter.com/9dwOQbPJoR
ತಮಿಳುನಾಡಿನ ವಿಶೇಷ ಖಾದ್ಯ ಪೊಂಗಲ್, ಮಧುರೈ ಮೀನಾಕ್ಷಿ ದೇವಸ್ಥಾನ, ಸಿನಿಮಾ ನಟ ವಿಜಯ್(Vijay) ತಿಳಿದಿದೆಯಾ? ಹೀಗೆ ಹಲವು ಪ್ರಶ್ನೆಗಳನ್ನು ಮನು ಭಾಕರ್ ಅವರಿಗೆ ಕೇಳಲಾಯಿತು. ನಟ ವಿಜಯ್ ಅವರನ್ನು ಹೊರತುಪಡಿಸಿ ಉಳಿದ ಯಾವುದರ ಬಗ್ಗೆಯೂ ತಿಳಿದಿಲ್ಲ ಎಂದು ಹೇಳಿದರು. ಅದರಲ್ಲೂ ಸಿಎಂ ಸ್ಟಾಲಿನ್ ತಿಳಿದಿಲ್ಲ ಎನ್ನುವ ಪ್ರತಿಕ್ರಿಯೆಯ ವಿಡಿಯೊ ಮಾತ್ರ ತುಂಬಾ ವೈರಲ್ ಆಗಿದೆ. ಸ್ಟಾಲಿನ್ ವಿರೋಧಿಗಳು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟ್ರೋಲ್ ಮಾಡಿದ್ದಾರೆ.