• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜಕೀಯ ಪಕ್ಷಗಳ ಹಣಕಾಸಿನ ಅಸ್ಪಷ್ಟ ಲೋಕ

ರಾಜಕೀಯ ಪಕ್ಷಗಳ ಹಣಕಾಸು ವ್ಯವಹಾರ ಗಮನಿಸುವುದು ಚುನಾವಣಾ ಆಯೋಗದ ಜವಾಬ್ದಾರಿ

ನಾ ದಿವಾಕರ by ನಾ ದಿವಾಕರ
September 29, 2026
in Top Story, ಅಂಕಣ, ಕರ್ನಾಟಕ, ದೇಶ
0
The Opaque World of Political Party Finances
Share on WhatsAppShare on FacebookShare on Telegram

ಮೂಲ : ಅಶೋಕ್ ಲವಾಸಾ
ಕನ್ನಡಕ್ಕೆ : ನಾ ದಿವಾಕರ
(ಮೂಲ ಲೇಖನ : The murky world of political party finance ಅಶೋಕ್ ಲವಾಸಾ- ದ ಹಿಂದೂ 25 ಸೆಪ್ಟಂಬರ್ 2026)

ADVERTISEMENT

ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಸದಾ ಕಾಲ ಕಾಣಬಹುದಾದ ವಿರೋಧಾಭಾಸಗಳಲ್ಲಿ ಪ್ರಮುಖವಾದುದೆಂದರೆ, ಚುನಾವಣಾ ಪ್ರಜಾತಂತ್ರದ ಪ್ರಧಾನ ಭಾಗಿದಾರರಾದ (Stake holders) ರಾಜಕೀಯ ಪಕ್ಷಗಳು ಸಂವಿಧಾನದ ಹತ್ತನೆಯ ಷೆಡ್ಯೂಲ್ ಹೊರತುಪಡಿಸಿ, ಭಾರತೀಯ ಸಂವಿಧಾನದಲ್ಲಿ ಎಲ್ಲಿಯೂ ಸಹ ಉಲ್ಲೇಖವಾಗಿಲ್ಲ. ಸಂವಿಧಾನ ಅನುಚ್ಛೇದ 19ರ ವ್ಯಾಪ್ತಿಯಲ್ಲಿ ಮೂಭೂತ ಹಕ್ಕುಗಳ ವಿಸ್ತರಣೆ-ಮುನ್ನಡೆಯ ಹಾದಿಯಲ್ಲಿ ʼರಾಜಕೀಯ ಪಕ್ಷಗಳು ʼ ಸಹವರ್ತಿಯಾಗಿ ಗುರುತಿಸಲ್ಪಡುತ್ತವೆ. ರಾಜಕೀಯ ಪಕ್ಷಗಳನ್ನು ಒಂದು ಕಂಪನಿ, ಟ್ರಸ್ಟ್, ಸೊಸೈಟಿ, ಉದ್ಯಮ (Firm)̧ ಅಥವಾ ಲಾಭರಹಿತ ಕಂಪನಿಯಾಗಿ ಕಾನೂನಾತ್ಮಕ ಲಕ್ಷಣಗಳಿಗೆ ಒಳಪಡುವ ಸಂಸ್ಥೆಯಾಗಿ ಸಂವಿಧಾನದ ಚೌಕಟ್ಟಿನಲ್ಲಿ ನಿರ್ವಚಿಸಿ ಅಳವಡಿಸಲಾಗಿಲ್ಲ.

Ramesh Katti - Laxman Savadi: ಲಿಂಗಾಯತ ಕಾರ್ಯಕ್ರಮದಲ್ಲೇ ರಮೇಶ್ ಕತ್ತಿ ಆರ್ಭಟ #pratidhvani

ಆದಾಗ್ಯೂ ಪಕ್ಷಗಳು ಅಭೂತಪೂರ್ವ ರೀತಿಯಲ್ಲಿ, ಸಾಟಿ ಇಲ್ಲದ ಹಾಗೆ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಪಡೆಯುತ್ತವೆ. ತತ್ಪರಿಣಾಮವಾಗಿ ಅಸ್ಪಷ್ಟ ಮೂಲದ ಹಣ ಸಂಗ್ರಹಾಗಾರಗಳಾಗಿ ಕಾಣುತ್ತವೆ. ಸ್ಪಷ್ಟವಿಲ್ಲದ ಉದ್ದೇಶಗಳನ್ನು ಈಡೇರಿಸುವ ಸಲುವಾಗಿ ಇರುವ ಶೆಲ್ ಕಂಪನಿಗಳ ಹಾಗೆ (ಕಾನೂನುಬದ್ಧವಾಗಿ ನೋಂದಾಯಿಸಲ್ಪಟ್ಟಿರುವ ಆದರೆ ಕೇವಲ ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿರುವ, ಹಾಗೂ ಯಾವುದೇ ಸಕ್ರಿಯ ಚಟುವಟಿಕೆಗಳು, ಭೌತಿಕ ಕಚೇರಿ ಅಥವಾ ಗಮನಾರ್ಹ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರದ ವ್ಯಾಪಾರ ಸಂಸ್ಥೆ. ̲ಅನುವಾದಕ) ಅನೇಕ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿದ್ದು ತಮ್ಮ ಕುಟಿಲ ಉದ್ದೇಶಗಳನ್ನು ಈಡೇರಿಸಲು ಸಾಧ್ಯವಾಗುತ್ತಿದೆ. ಇದು ಗಂಭೀರವಾಗಿ ಗಮನಿಸಬೇಕಾದ ಅಂಶ.

ರಾಜಕೀಯ ನಿಧಿಯ ನಿಗೂಢ ಲಕ್ಷಣ

ಈ ಅಸ್ಪಷ್ಟ ಚಿತ್ರಣವನ್ನು ಇತ್ತೀಚೆಗೆ ಬಿಬಿಸಿ ನಡೆಸಿದ ತನಿಖೆಯೊಂದರ ಮೂಲಕ ಬಹಿರಂಗಪಡಿಸಲಾಗಿತ್ತು. ಈ ವರದಿಯಲ್ಲಿ ನೋಂದಣಿಯಾದ, ಮಾನ್ಯತೆಯಿಲ್ಲದ (Unrecognised) ಆರು ರಾಜಕೀಯ ಪಕ್ಷಗಳ (RUPP) ಹಣಕಾಸು ನಿಧಿಯ ಚಿತ್ರಣವನ್ನು ನೀಡಲಾಗಿದೆ. ಕುತೂಹಲಕಾರಿಯಾದರೂ ಎಲ್ಲರಿಗೂ ತಿಳಿದಿರುವಂತಹ ಭಾರತೀಯ ರಾಜಕಾರಣದ ಅಸಹ್ಯಕರ ಸರ್ವವ್ಯಾಪಿ ಅಂಶಗಳನ್ನು ಈ ವರದಿ ಬಹಿರಂಗಪಡಿಸುತ್ತದೆ. ಈ ವ್ಯವಸ್ಥೆಯಲ್ಲೇ ರಾಜಕೀಯ ಪಕ್ಷಗಳು ಮತ್ತು ಅವುಗಳ ಫಲಾನುಭವಿಗಳು ಹಸನಾಗಿ ಬೆಳೆಯುತ್ತಿರುವುದನ್ನು ಗಮನಿಸಬೇಕಿದೆ. ಈ ಬೆಳವಣಿಗೆಯು ಕಾನೂನುಬಾಹಿರವೂ, ಖಂಡನೀಯವೂ, ಆತಂಕಕಾರಿಯೂ ಆಗಿ ಕಾಣುತ್ತದೆ.

ಈ ಹಿಂದೆ ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಸ್ಥೆ (ADR) 2025ರ ಜುಲೈ 18ರಂದು ವರದಿಯೊಂದನ್ನು ಪ್ರಕಟಿಸಿತ್ತು. ಈ ವರದಿಯನ್ವಯ, 2022-23ರ ಹಣಕಾಸು ವರ್ಷದಲ್ಲಿ ಈ ಆರು RUPP ಪಕ್ಷಗಳ ಘೋಷಿತ ಆದಾಯದಲ್ಲಿ ಶೇಕಡಾ 223ರಷ್ಟು ಹೆಚ್ಚಳ ದಾಖಲಾಗಿತ್ತು. ಒಟ್ಟು 2,764 RUPP ಗಳ ಪೈಕಿ 739 ಪಕ್ಷಗಳು ಮಾತ್ರ ಭಾರತೀಯ ಚುನಾವಣಾ ಆಯೋಗಕ್ಕೆ ಆ ವರ್ಷದ ಹಣಕಾಸು ಲೆಕ್ಕಪತ್ರಗಳನ್ನು ಸಲ್ಲಿಸಿದ್ದವು. ಭಾರತೀಯ ಚುನಾವಣಾ ಆಯೋಗ (ಇಸಿಐ) ಕಾನೂನಾತ್ಮಕವಾಗಿ ರಾಜಕೀಯ ಪಕ್ಷಗಳ ಏಕಮೇವ ಪಾಲಕ ಸಂಸ್ಥೆ ಎನ್ನುವುದನ್ನು ಗಮನಿಸಬೇಕು. 2025ರ ಆಗಸ್ಟ್ 9ರಂದು ಚುನಾವಣಾ ಆಯೋಗ ಪ್ರಕಟಿಸಿದ “ ಚುನಾವಣಾ ವ್ಯವಸ್ಥೆಯ ಶುದ್ಧೀಕರಣ ”ದ ಮಾಧ್ಯಮ ಪ್ರಕಟಣೆಯಲ್ಲಿ ಆಯೋಗವು, 2,844 ಪಕ್ಷಗಳ ಪೈಕಿ 334 ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿತ್ತು. ಚುನಾವಣಾ ವ್ಯವಸ್ಥೆಯನ್ನು ಸ್ವಚ್ಚಗೊಳಿಸುವ ಸಮಗ್ರ ಹಾಗೂ ನಿರಂತರ ಕಾರ್ಯತಂತ್ರದ ಒಂದು ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ತಿಳಿಸಿತ್ತು. ಆಯೋಗದ ಈ ನಿರಂತರ ಕಾರ್ಯತಂತ್ರದಲ್ಲಿ ಮೇಲೆ ಉಲ್ಲೇಖಿಸಿದ ಆರು ಪಕ್ಷಗಳನ್ನೂ ಒಳಗೊಳ್ಳಲಾಗಿದೆಯೇ ಎನ್ನುವುದು ಆಸಕ್ತಿದಾಯಕ ಅಂಶ.

Mysuru Dasara 2026 : ನಾಡಹಬ್ಬಕ್ಕೆ ಕೈ ಬೀಸಿ ಕರೆಯುತ್ತಿದೆ ಸಾಂಸ್ಕೃತಿಕ ನಗರಿ.. #pratidhvani

ಟಿ.ಎನ್. ಶೇಷನ್ ಸುಧಾರಣೆಗಳು

1994ರ ಅಕ್ಟೋಬರ್ 16ರಂದು ಅಂದಿನ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್, 1968ರ ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಮಂಜೂರಾತಿ) ಆದೇಶದ ಅನುಸಾರ ಒಂದು ಆದೇಶವನ್ನು ಹೊರಡಿಸಿದ್ದರು. ಈ ಆದೇಶದಲ್ಲಿ ದಿ. ಟಿ.ಎನ್. ಶೇಷನ್ ಅವರು ” ಮಾನ್ಯತೆ ಪಡೆದ ರಾಷ್ಟ್ರೀಯ-ರಾಜ್ಯಮಟ್ಟದ ಪಕ್ಷಳಾಗಲೀ, ನೋಂದಾಯಿತ-ಮಾನ್ಯತೆ ಪಡೆಯದ ಪಕ್ಷಗಳಾಗಲೀ, ಭಾರತದ ಬಹುಪಾಲು ರಾಜಕೀಯ ಪಕ್ಷಗಳಲ್ಲಿ ಕಾಣುವ ಅಧೋಗತಿಯ ದುರವಸ್ಥೆಯನ್ನು ” ಉಲ್ಲೇಖಿಸಿ, ತತ್ಕಾಲಿಕ ಧೋರಣೆ (Adhocism) ವ್ಯಾಪಕವಾಗಿರುವುದನ್ನು ವಿಷಾದದಿಂದ ದಾಖಲಿಸಿದ್ದರು. “ ಸಂವಿಧಾನದ ನಿಬಂಧನೆಗಳಿಗೆ ಅನುಸಾರವಾಗಿ ಅಥವಾ ಕಾನೂನು ನಿಯಮಗಳಿಗೆ ಅನುಗುಣವಾಗಿ ತಮ್ಮ ವ್ಯವಹಾರಗಳನ್ನು ನಡೆಸುವ ಯಾವುದೇ ಪಕ್ಷ ನನಗೆ ಕಂಡುಬಂದಿಲ್ಲ ” ಎಂದು ಶೇಷನ್ ಹೇಳಿದ್ದರು.

ತಮ್ಮ ಈ ಆದೇಶದ ಮೂಲಕ ಟಿ.ಎನ್ ಶೇಷನ್ ಎಲ್ಲ ರಾಜಕೀಯ ಪಕ್ಷಗಳಿಗೂ ನೋಟಿಸ್ ಜಾರಿ ಮಾಡಿ ಅವುಗಳ ಸಾಂಸ್ಥಿಕ ದುರವಸ್ಥೆಯನ್ನು ಸರಿಪಡಿಸಿಕೊಳ್ಳುವಂತೆ ಸೂಚಿಸಿದ್ದರು. ಹಾಗೆಯೇ ಮುಖ್ಯ ಚುನಾವಣಾ ಆಯೋಗ (ಇಸಿಐ) ಮೌನ ಪ್ರೇಕ್ಷಕನಾಗಿ ಇರುವುದಿಲ್ಲ ಎಂದೂ ಎಚ್ಚರಿಸಿದ್ದರು. ತದನಂತರ 1951ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ (RPA) ಸೆಕ್ಷನ್ 29ಎ ಅನ್ವಯ ನೋಂದಣಿಯ ನಮೂನೆಯನ್ನೂ ಸಹ ನಿಗದಿಪಡಿಸಿದ್ದರು. ಈ ಆದೇಶದ 3(xxiii) ಪ್ಯಾರಾದಲ್ಲಿ , ನೋಂದಣಿಯನ್ನು ಅಪೇಕ್ಷಿಸುವ ಪಕ್ಷವು ತನ್ನ ಸಂವಿಧಾನದಲ್ಲಿ, ನೋಂದಣಿಯಾದ ಐದು ವರ್ಷಗಳ ಒಳಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ, ಒಂದು ವೇಳೆ ಸತತ ಆರು ವರ್ಷಗಳ ಕಾಲ ಚುನಾವಣೆಗಳಲ್ಲಿ ಸ್ಪರ್ಧಿಸದಿದ್ದರೆ ಮಾನ್ಯತೆ ಪಡೆದ ಪಕ್ಷಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಯಾಂತ್ರಿಕವಾಗಿ (Automatically) ಕಳೆದುಕೊಳ್ಳುವುದಾಗಿಯೂ, ಘೋಷಿಸುವಂತೆ ಕೋರಲಾಗಿತ್ತು.

ಪಟ್ಟಿಯಿಂದ ಹೊರತೆಗೆಯಲ್ಪಡುವುದು ಅಥವಾ ತೆಗೆದುಹಾಕಲ್ಪಡುವುದು ನೋಂದಣಿಯ ರದ್ದತಿ ಆಗುವುದಿಲ್ಲ. ಏಕೆಂದರೆ ಮುಖ್ಯ ಚುನಾವಣಾ ಆಯೋಗಕ್ಕೆ ರಾಜಕೀಯ ಪಕ್ಷಗಳ ನೋಂದಣಿ ರದ್ದುಪಡಿಸುವ ಅಧಿಕಾರ ಇರುವುದಿಲ್ಲ. ಹಾಗೆಯೇ ಒಂದು ವೇಳೆ RUPP ಗಳು ಅಮಾನ್ಯಗೊಂಡರೂ (Derecognised) ಸಹ ಪ್ರಜಾಪ್ರಾತಿನಿಧ್ಯ ಕಾಯ್ದೆಯ (RPA) ಸೆಕ್ಷನ್ 29ಬಿ ಅಡಿಯಲ್ಲಿ ದೇಣಿಗೆ ಪಡೆಯಲು ಅರ್ಹತೆ ಪಡೆದಿರುತ್ತವೆ. ಈ ಪಕ್ಷಗಳ ತೆರಿಗೆ ವಿಚಾರಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13ಎ ಅನ್ವಯ ನಿರ್ಧರಿಸಲ್ಪಡುತ್ತವೆ. ಪಕ್ಷಗಳ ʼ ಮಾನ್ಯತೆ ʼ (Recognition) ಚುನಾವಣಾ ಚಿಹ್ನೆಗಳ ಆದೇಶ 6ರ ಅಡಿ ನಿರ್ವಹಿಸಲ್ಪಡುತ್ತದೆ. ಚುನಾವಣಾ ಚಿಹ್ನೆಗಳನ್ನು ವಿತರಿಸುವುದು ಮತ್ತು ಪಕ್ಷಗಳ ವರ್ಗೀಕರಣದ ಪ್ರಕ್ರಿಯೆಯಲ್ಲಿ ʼ ಮಾನ್ಯತೆ ಪಡೆದ ʼ (Recognised) ಮತ್ತು ʼ ಮಾನ್ಯತೆಯಿಲ್ಲದ ʼ (Unrecognised) ಪಕ್ಷಗಳನ್ನು ಈ ಆದೇಶ ಭಿನ್ನವಾಗಿ ನೋಡುತ್ತದೆ.

ಟಿ.ಎನ್. ಶೇಷನ್ ಚಿಹ್ನೆಗಳ ಆದೇಶವನ್ನು ತಿದ್ದುಪಡಿ ಮಾಡಿ, ಸೆಕ್ಷನ್ 16ಎ ಪರಿಚಯಿಸಿದ್ದರು. ಈ ಸೆಕ್ಷನ್ ಅಡಿಯಲ್ಲಿ ಮುಖ್ಯ ಚುನಾವಣಾ ಆಯೋಗಕ್ಕೆ (ಇಸಿಐ) “ ಆದರ್ಶ ನೀತಿ ಸಂಹಿತೆಯನ್ನು ಅನುಸರಿಸುವಲ್ಲಿ ವಿಫಲವಾದ ಪಕ್ಷಗಳ ಮತ್ತು ಆಯೋಗದ ಕಾನೂನಾತ್ಮಕ ನಿರ್ದೇಶನ-ಸೂಚನೆಗಳನ್ನು ಪಾಲಿಸದ ” ಪಕ್ಷಗಳ ಮಾನ್ಯತೆಯನ್ನು ಹಿಂಪಡೆಯುವ ಮತ್ತು ರದ್ದುಪಡಿಸುವ ಹಕ್ಕು ನೀಡಲಾಗಿತ್ತು. ಕ್ರಮ ಕೈಗೊಳ್ಳಲು ಸಾಮಾನ್ಯವಾಗಿ ಹಿಂಜರಿಯುವ ಮುಖ್ಯ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುವ ಈ ನಿಬಂಧನೆ ಕಾನೂನು ಪುಸ್ತಕದಲ್ಲಿ ಸುರಕ್ಷಿತವಾಗಿ ಅಡಗಿ ಕುಳಿತಿದೆ. ಹಾಗಾಗಿ ಪಟ್ಟಿಯಿಂದ ಹೊರಗುಳಿಯಲಿ ಅಥವಾ ಅಮಾನ್ಯವಾಗಿರಲಿ ಪಕ್ಷಗಳು ದೇಣಿಗೆ ಪಡೆಯುವ ಅರ್ಹತೆಯನ್ನು ಉಳಿಸಿಕೊಂಡಿವೆ. ಇಂತಹ ಪಕ್ಷಗಳನ್ನು ಪಟ್ಟಿಯಿಂದ ತೆಗೆಯುವ ಉದ್ದೇಶವೇ ಅನರ್ಹಗೊಳಿಸುವುದು. ಆದ್ದರಿಂದ ಈ ದೇಣಿಗೆಗಳು ಆದಾಯ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆಯುವುದೋ ಇಲ್ಲವೋ ಎನ್ನುವುದು ವಿಚಾರಣೆಗೊಳಪಡಬೇಕಿದೆ.

ರಾಜಕೀಯ ಸಂಪತ್ತಿನ ಅಗಾಧ ಪ್ರಮಾಣ

ಕಾಮನ್ವೆಲ್ತ್ ಮಾನವ ಹಕ್ಕುಗಳ (Commonwealth Human Rights initiative) ಸಂಸ್ಥೆಯಲ್ಲಿ ಹಿರಿಯ ಸಂಶೋಧಕರಾಗಿರುವ ಶ್ರೀಯುತ ವೆಂಕಟೇಶ್ ನಾಯಕ್ ಮಂಡಿಸಿರುವ ಪ್ರಬಂಧವೊಂದರಲ್ಲಿ (ಇದು ಪ್ರಮುಖ ಮಾಧ್ಯಮದಲ್ಲೂ ಪ್ರಕಟವಾಗಿದೆ) ಹೇಳಿರುವಂತೆ, 2024ರ ಮಹಾ ಚುನಾವಣೆಗಳ ವೇಳೆಗೆ 22 ರಾಜಕೀಯ ಪಕ್ಷಗಳು ಒಟ್ಟಾರೆಯಾಗಿ 18,742.31 ಕೋಟಿ ರೂಗಳನ್ನು ಸಂಗ್ರಹಿಸಿದ್ದವು. ಚುನಾವಣೆಗಳನ್ನು ಘೋಷಿಸಿದ ದಿನದಂದು ಪಕ್ಷಗಳ ಖಾತೆಯಲ್ಲಿದ್ದ ಹಣ ಹಾಗೂ ತದನಂತರ ಚುನಾವಣೆಗಳು ಮುಗಿಯುವವರೆಗೆ ಸಂಗ್ರಹಿಸಿದ 7,416.31 ಕೋಟಿ ರೂಗಳ ದೇಣಿಗೆಯೂ ಈ ಮೊತ್ತದ ಒಂದು ಭಾಗವಾಗಿತ್ತು. ಚುನಾವಣೆಗಳ ನಂತರ ಈ ಪಕ್ಷಗಳ ಬಳಿ 14,848.46 ಕೋಟಿ ರೂಗಳು ಉಳಿದಿತ್ತು. ಇದರಲ್ಲಿ ನಗದು, ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಮತ್ತು ನಿಶ್ಚಿತ ಠೇವಣಿಗಳೂ ಸೇರಿದ್ದವು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಖರ್ಚು ಮಾಡಿದ 3,861.57 ಕೋಟಿ ರೂಗಳನ್ನು ಕಳೆದು ಇಷ್ಟು ಮೊತ್ತ ಉಳಿದಿದೆ ಎಂದು ಮುಖ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ವರದಿಗಳು ಸೂಚಿಸುತ್ತವೆ.

ಈ ಅಧ್ಯಯನದಲ್ಲಿ ಕಾಣುವಂತೆ, ಕಳೆದ ಒಂದು ದಶಕದಲ್ಲಿ ರಾಜಕೀಯ ದೇಣಿಗೆಗಳಿಗೆ ನೀಡುವ ತೆರಿಗೆ ವಿನಾಯಿತಿಯ ಪರಿಣಾಮವಾಗಿ ಬೊಕ್ಕಸಕ್ಕೆ 11,813 ಕೋಟಿ ರೂ ನಷ್ಟವಾಗಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಪೈಕಿ ಕಾರ್ಪೋರೇಟ್ ಉದ್ಯಮಿಗಳಿಗಿಂತಲೂ, ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳು (HUF) ಹೆಚ್ಚಿನ ಪಾತ್ರ ವಹಿಸಿವೆ. 2022-23ರ ಹಣಕಾಸು ವರ್ಷದಲ್ಲಿ ವೈಯುಕ್ತಿಕ ದೇಣಿಗೆದಾರರು 2,275.85 ಕೋಟಿ ರೂಗಳ ತೆರಿಗೆ ವಿನಾಯಿತಿ ಪಡೆದಿದ್ದಾರೆ. ಕಾರ್ಪೋರೇಟ್ ಉದ್ಯಮಿಗಳು 514.4 ಕೋಟಿ ರೂ, ಉದ್ಯಮ-ಸಂಘಗಳು 115.71 ಕೋಟಿ ರೂ ವಿನಾಯಿತಿ ಪಡೆದಿವೆ. ರಾಜಕೀಯ ಪಕ್ಷಗಳಿಗೆ ನೀಡಿದ ಘೋಷಿತ ದೇಣಿಗೆ 2015-16ರಲ್ಲಿ 43 ಪಕ್ಷಗಳಿಂದ 714 ಕೋಟಿ ರೂಗಳಷ್ಟಿದ್ದರೆ 2023-24ರ ವೇಳೆಗೆ 27 ಪಕ್ಷಗಳಿಂದ 7,203 ಕೋಟಿ ರೂಗಳಿಗೆ ಏರಿದೆ. ಆದರೂ ಒಂಬತ್ತು ವರ್ಷಗಳ ಅವಧಿಯಲ್ಲಿ 28,287 ಕೊಟಿ ರೂಗಳ ಒಟ್ಟು ದೇಣಿಗೆಗಳ ಪೈಕಿ ಕೇವಲ ಶೇಕಡಾ 41.76 ರಷ್ಟಕ್ಕೆ ಮಾತ್ರ ತೆರಿಗೆ ವಿನಾಯಿತಿ ಪಡೆಯಲಾಗಿದೆ. ಇನ್ನುಳಿದ ಶೇಕಡಾ 58ರಷ್ಟು ದೇಣಿಗೆ ನಿಗೂಢವಾಗಿಯೇ ಉಳಿಯುತ್ತದೆ. ಶ್ರೀಯುತ ನಾಯಕ್ ತಮ್ಮ ಪ್ರಬಂಧದಲ್ಲಿ ಇದನ್ನು ಪ್ರಶ್ನಿಸುತ್ತಾ “ ತೆರಿಗೆ ವಿನಾಯಿತಿ ಇಲ್ಲದೆ ದೇಣಿಗೆ ನೀಡುವಂತಹ ಯಾವ ಉತ್ತೇಜಕಗಳು ಇವರಿಗೆ ಲಭ್ಯವಿದೆ ? ಪಾರದರ್ಶಕತೆ ಇಲ್ಲದಿರುವುದು ಉತ್ತರಗಳನ್ನು ಮರೆಮಾಚುತ್ತವೆ ” ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

ಈ ಗೋಪ್ಯತೆಗೆ ಮತ್ತಷ್ಟು ಗಟ್ಟಿಯಾದ ಕವಚವನ್ನು ಒದಗಿಸಿದ್ದು 2018ರಲ್ಲಿ ಆಡಳಿತಾರೂಢ ಪಕ್ಷ ಜಾರಿಗೊಳಿಸಿದ ಚುನಾವಣಾ ಬಾಂಡ್ ಸುಧಾರಣೆಗಳು. ಈ ಉಪಕ್ರಮವು ರಾಜಕೀಯ ಹಣಕಾಸು ನಿಧಿಯ ಇಡೀ ಪ್ರಕ್ರಿಯೆಯನ್ನು ಮಸುಕಾಗಿಸಿಬಿಟ್ಟಿತು. 2024ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯವು ಈ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ್ದರೂ , ತದನಂತರ ಘೋಷಿಸಲಾದ ದೇಣಿಗೆಯ ವಿವರಗಳ ಸುತ್ತ ಎದ್ದಿರುವ ಪ್ರಶ್ನೆಗಳಿಗೆ ಈವರೆಗೂ ಉತ್ತರ ದೊರೆತಿಲ್ಲ. ಬಹುತೇಕ RUPPಗಳು ಚುನಾವಣಾ ಬಾಂಡ್ ಸ್ವೀಕರಿಸುವ ಅರ್ಹತೆಯನ್ನು ಹೊಂದಿರಲಿಲ್ಲ . ಏಕೆಂದರೆ ಇತ್ತೀಚಿನ ವಿಧಾನಸಭೆ-ಲೋಕಸಭೆ ಚುನಾವಣೆಗಳಲ್ಲಿ ಕನಿಷ್ಠ ಶೇಕಡಾ 1ರಷ್ಟು ಮತಗಳನ್ನು ಗಳಿಸುವ ಪಕ್ಷಗಳಿಗೆ ಮಾತ್ರ ಈ ಅರ್ಹತೆ ಲಭ್ಯವಾಗುತ್ತದೆ. ಹಾಗಾದರೆ ಈ ದೇಣಿಗೆಗಳನ್ನು ನೀಡಿದವರು ಯಾರು ? ಏಕೆ ನೀಡಿದರು ?

ಉನ್ನತ ನ್ಯಾಯಾಲಯ ಮತ್ತು ಇಸಿಐ ಸಕ್ರಿಯವಾಗಬೇಕು

ರಾಜಕೀಯ ಪಕ್ಷಗಳು ಪಾರದರ್ಶಕತೆಯಲ್ಲಿ ಅತ್ಯಲ್ಪ ಆಸಕ್ತಿ ತೋರಿವೆ. 2013ರಲ್ಲಿ ಕೇಂದ್ರ ಮಾಹಿತಿ ಆಯೋಗವು (CIC) ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆಯ (RTI) ವ್ಯಾಪ್ತಿಗೆ ತರುವ ಆದೇಶ ಹೊರಡಿಸಿದಾಗ ಇದನ್ನು ಐಕ್ಯ ದನಿಯಿಂದ ವಿರೋಧಿಸಲಾಯಿತು. ಕುತೂಹಲಕಾರಿ ಸಂಗತಿ ಎಂದರೆ, ಮಾಹಿತಿ ಆಯೋಗದ ಹೊರತಾಗಿ ಸುಪ್ರೀಂಕೋರ್ಟ್ ಆಗಲೀ, ಮುಖ್ಯ ಚುನಾವಣಾ ಆಯೋಗವಾಗಲೀ ಈ ಆದೇಶವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆಸಕ್ತಿ ತೋರಿಲ್ಲ. ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ (ED) ಸಾಧಾರಣ ತೆರಿಗೆದಾರರ ಲೆಕ್ಕ ಪರಿಶೋಧನೆ ಮಾಡುವ ರೀತಿಯಲ್ಲಿ ರಾಜಕೀಯ ಪಕ್ಷಗಳ ಖಾತೆಗಳ ಪರಿಶೋಧನೆಗೆ ಆದ್ಯತೆ ನೀಡುವುದಿಲ್ಲ. ಚುನಾವಣಾ ಆಯೋಗಕ್ಕೆ ಆ ಹಕ್ಕು ಇರುವುದಿಲ್ಲ ಆದರೆ ರಾಜಕೀಯ ಪಕ್ಷಗಳು ಯಾಂತ್ರಿಕವಾಗಿ ಸಲ್ಲಿಸುವ ಲೆಕ್ಕಪತ್ರಗಳ ಔಚಿತ್ಯವನ್ನಾಗಲೀ, ಮೂಲ ಸಂಪನ್ಮೂಲಗಳನ್ನಾಗಲೀ ಪ್ರಶ್ನಿಸಲು ಮುಂದಾಗುವುದಿಲ್ಲ. ಕಾನೂನು ನಿಯಮವನ್ನು ಪಾಲಿಸಲು ಲೆಕ್ಕ ಪತ್ರಗಳನ್ನು ಸಲ್ಲಿಸುವುದಷ್ಟೇ ಸಾಕು. ಈ ಪಕ್ಷಗಳ ಆತ್ಮಸಾಕ್ಷಿ ಉಸಿರುಗಟ್ಟಿಸಿದರೂ ಲೆಕ್ಕಿಸುವುದಿಲ್ಲ. ಈ ಆತ್ಮಸಾಕ್ಷಿಯನ್ನು ಪುನಶ್ಚೇತನಗೊಳಿಸುವುದು ಯಾರು ? ಅಥವಾ ಇದನ್ನು ಪುನಶ್ಚೇತನಗೊಳಿಸುವುದು ಹೇಗೆ ?

ಹಾಗಾಗಿ ಚುನಾವಣಾ ಬಾಂಡ್ಗಳ ಗೊಂದಲ ಮತ್ತು ಇದರ ಸುತ್ತಲೂ ಸುಪ್ರೀಂಕೋರ್ಟ್ ಮುಂದೆ ಇರುವ ನೂರಾರು ಅರ್ಜಿಗಳನ್ನು ಪರಿಶೀಲನೆಗೊಳಪಡಿಸುವ ನಿಟ್ಟಿನಲ್ಲಿ ನ್ಯಾಯಾಲಯದ ನಿರ್ವಹಣೆಯಲ್ಲೇ ತನಿಖೆಯನ್ನು ಆದೇಶಿಸುವುದು ಅಗತ್ಯ. ಈ ತನಿಖೆಯ ವ್ಯಾಪ್ತಿಯಲ್ಲೇ, ಚುನಾವಣೆಗಳಲ್ಲಿ ಗಮನಾರ್ಹವಾಗಿ ಪಾಲ್ಗೊಳ್ಳದೆ ಹೋದರೂ ಸಹ ಅಪಾರ ಮೊತ್ತದ ಹಣವನ್ನು ದೇಣಿಗೆ ರೂಪದಲ್ಲಿ ಪಡೆದು ಅದ್ಧೂರಿಯಾಗಿ ಖರ್ಚು ಮಾಡುತ್ತಿರುವ, ಅಷ್ಟೇನೂ ಮುಖ್ಯವಲ್ಲದ RUPP ಪಕ್ಷಗಳನ್ನೂ ತನಿಖೆಗೊಳಪಡಿಸಬೇಕು. ಇಂತಹ ಶೆಲ್ (Shell) ಪಕ್ಷಗಳು ಯಾವುದೇ ಕಾರಣಕ್ಕೂ ಅಪಾರ ಮೊತ್ತದ ಖರ್ಚುಗಳನ್ನು ಆಡಳಿತ ವೆಚ್ಚ ಎಂದು ನಿರೂಪಿಸಲಾಗುವುದಿಲ್ಲ.

ಕನ್ಹಿಯ ಲಾಲ್ ಓಮರ್ vs ಆರ್ ಕೆ ತ್ರಿವೇದಿ ಮತ್ತಿತರರು ಪ್ರಕರಣದ ಚಾರಿತ್ರಿಕ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಚುನಾವಣಾ ಆಯೋಗವನ್ನು ಅಧಿಕಾರದ ಸಂಗ್ರಹಾಗಾರ ಎಂದು ಬಣ್ಣಿಸಿದೆ. ಈ ಬಣ್ಣನೆಯ ಹಿನ್ನೆಲೆಯಲ್ಲಿ ಸಂವಿಧಾನ ಅನುಚ್ಛೇದ 324ರ ಅಡಿಯಲ್ಲಿ ಮುಖ್ಯ ಚುನಾವಣಾ ಆಯೋಗವು (ಇಸಿಐ), ರಾಜಕೀಯ ಪಕ್ಷಗಳಿಗೆ “ ಭಾರತದ ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕ ” ಸಂಸ್ಥೆಯ (CAG) ಮೂಲಕ ಅಥವಾ ಈ ಸಂಸ್ಥೆ ನೇಮಿಸುವವರ ಮೂಲಕ ತನಿಖೆಗೊಳಗಾಗುವಂತೆ ಆದೇಶಿಸಬೇಕು. ಚುನಾವಣೆಗಳ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮಾಡುವ ಖರ್ಚುಗಳಿಗೂ ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು. ಇದನ್ನು ಕಾಲ ಕಾಲಕ್ಕೆ ಆಯೋಗ ನಿಗದಿಪಡಿಸುತ್ತಲೇ ಬಂದಿದೆ. ದೇಣಿಗೆಗಳಿಗೆ ನೀಡುವ ಆದಾಯ ತೆರಿಗೆ ವಿನಾಯಿತಿಯು ನಿಗದಿತ ವೆಚ್ಚ ಮಿತಿಗೆ ಅನುಗುಣವಾಗಿರಬೇಕು. ಪಕ್ಷಗಳನ್ನು ಶ್ರೀಮಂತಗೊಳಿಸುವ ಎಲ್ಲ ಇತರ ದೇಣಿಗೆಗಳಿಗೂ ತೆರಿಗೆ ವಿಧಿಸಬೇಕು.

ತನ್ನ ಮಾರ್ಗಸೂಚಿಗಳ ಅನುಸಾರ ಚುನಾವಣೆಗಳಲ್ಲಿ ಸ್ಪರ್ಧಿಸದ RUPP ಪಕ್ಷಗಳು ನೋಂದಣಿಯನ್ನು ಕಳೆದುಕೊಳ್ಳುವ ಯಾಂತ್ರಿಕ ಪ್ರಕ್ರಿಯೆಯನ್ನು (Automatic Procedure) ಅಳವಡಿಸುವ ಮೂಲಕ ಮುಖ್ಯ ಚುನಾವಣಾ ಆಯೋಗವು ಎಲ್ಲ ನೋಂದಾಯಿತ ರಾಜಕೀಯ ಪಕ್ಷಗಳೂ ತಮ್ಮ ಹಣಕಾಸು ದತ್ತಾಂಶಗಳನ್ನು ಪ್ರಮಾಣಿತ ಸ್ವರೂಪದಲ್ಲಿ (Standardised format) ಅಪ್ಲೋಡ್ ಮಾಡಲು ಅನುಕೂಲವಾಗುವಂತೆ ಡಿಜಿಟಲ್ ಪೋರ್ಟಲ್ ಒಂದನ್ನು ಸಿದ್ಧಪಡಿಸಬೇಕು. ಮುಖ್ಯ ಚುನಾವಣಾ ಆಯೋಗವು ತನ್ನ ಅಧಿಕಾರ ವ್ಯಾಪ್ತಿ ಮತ್ತು ಸಾಮರ್ಥ್ಯವನ್ನು ನೈಜ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಹಾಕುವುದಕ್ಕೆ ಬಳಸುವುದರ ಬದಲು ಚುನಾವಣೆಗಳ ವಾತಾವರಣವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಖರ್ಚುಮಾಡಬೇಕಿದೆ. ಭಾರತದ ಜನಗಳಾದ ನಾವು ಅಲ್ಲಿಯವರೆಗೂ ” ನಾವು ಇಲ್ಲೇ ಇದ್ದೇವೆ ” ಎಂದು ಕೂಗುತ್ತಲೇ ಇರಬೇಕು.

ಸೊಹ್ರಬುದ್ದೀನ್ ಎನ್‌ಕೌಂಟರ್  ಕೇಸ್‌ಗೆ ಸುಪ್ರೀಂ ಟ್ವಿಸ್ಟ್: ಅಮಿತ್ ಶಾ ವಿರುದ್ಧದ ಅರ್ಜಿ ತಿರಸ್ಕಾರ ಅಥವಾ ಪುರಸ್ಕಾರ ?

Tags: Financespolitical partyPratidhvani
Previous Post

ಡ್ರೋನ್‌ ಪ್ರತಾಪ್‌ಗೆ ಬಿಗ್ ರಿಲೀಫ್; ಈ  ಪ್ರಕರಣದ FIR ರದ್ದುಪಡಿಸಿದ ಹೈಕೋರ್ಟ್‌

Next Post

ಪಿ.ಟಿ. ಉಷಾ ದಾಖಲೆ ಮುರಿದ ವಿತ್ಯಾ ರಾಮರಾಜ್‌; ಯಾರಿವರು ? ಏಷ್ಯನ್‌ ಗೇಮ್ಸ್‌ನಲ್ಲಿ ಡಬಲ್‌ ಪದಕದ ಸಂಭ್ರಮ

Related Posts

The Controversy Surrounding the NICE Project: A Brief Overview
Top Story

ನೈಸ್ ಯೋಜನೆ ಸುತ್ತಲಿನ ವಿವಾದ: ಒಂದು ಸಂಕ್ಷಿಪ್ತ ಕಿರುನೋಟ | NICE

by ಪ್ರತಿಧ್ವನಿ
September 29, 2026
0

ಬೆಂಗಳೂರು: ಮೂರು ದಶಕಗಳ ಹಿಂದೆ ರೂಪುಗೊಂಡ ನೈಸ್‌ (NICE) ರಸ್ತೆ ಯೋಜನೆ, ಕರ್ನಾಟಕದ (Karnataka) ಮೂಲಸೌಕರ್ಯ ಅಭಿವೃದ್ಧಿಯ ಇತಿಹಾಸದಲ್ಲೇ ಅತ್ಯಂತ ಚರ್ಚೆಗೆ ಈಡಾದ ಯೋಜನೆಗಳಲ್ಲಿ ಒಂದು. ಬೆಂಗಳೂರು...

Read moreDetails
Parents sell their one-month-old infant to buy gold jewelry and a smartphone

SHOCKING : ಚಿನ್ನಾಭರಣ, ಸ್ಮಾರ್ಟ್‌ಫೋನ್‌ ಖರೀದಿಸಿಲು 1 ತಿಂಗಳ ಹಸುಗೂಸನ್ನೇ ಮಾರಿದ ಹೆತ್ತವರು.!

September 29, 2026
Gyanesh Kumar is a puppet of the Centre Mallikarjun Kharge

ಜ್ಞಾನೇಶ್ ಕುಮಾರ್ ಕೇಂದ್ರದ ಕೈಗೊಂಬೆ, ತಕ್ಷಣ ರಾಜೀನಾಮೆ ನೀಡಲಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ | Mallikarjun Kharge

September 29, 2026
Centre approves 1,650 new MBBS seats in Karnataka

ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಕರ್ನಾಟಕದಲ್ಲಿ ಹೊಸ 1,650 ಹೊಸ MBBS ಸೀಟುಗಳಿಗೆ ಕೇಂದ್ರ ಅನುಮೋದನೆ | MBBS

September 29, 2026
How to change the mobile number linked to FASTag

`ಫಾಸ್ಟ್‌ ಟ್ಯಾಗ್’ ಜೊತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ | FASTag

September 29, 2026
Next Post
ಪಿ.ಟಿ. ಉಷಾ ದಾಖಲೆ ಮುರಿದ ವಿತ್ಯಾ ರಾಮರಾಜ್‌; ಯಾರಿವರು ? ಏಷ್ಯನ್‌ ಗೇಮ್ಸ್‌ನಲ್ಲಿ ಡಬಲ್‌ ಪದಕದ ಸಂಭ್ರಮ

ಪಿ.ಟಿ. ಉಷಾ ದಾಖಲೆ ಮುರಿದ ವಿತ್ಯಾ ರಾಮರಾಜ್‌; ಯಾರಿವರು ? ಏಷ್ಯನ್‌ ಗೇಮ್ಸ್‌ನಲ್ಲಿ ಡಬಲ್‌ ಪದಕದ ಸಂಭ್ರಮ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada