ಕಲಬುರಗಿ :ಬೈಕ್‌ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ದುಷ್ಕರ್ಮಿಗಳು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ವಾಗ್ದಾರಿ ರಸ್ತೆಯ ಖಾನಾಪುರ ಬಳಿ ಇಂದು ನಡೆದಿದೆ.
ವಿಶ್ವನಾಥ್ ಜಮಾದಾರ್ (50) ಎಂಬುವವರನ್ನು ಕೊಲೆಗಡುಕರು ಶೂಟ್ ಮಾಡಿ ಎಸ್ಕೇಪ್ ಆಗಿದ್ದಾರೆ. ಬೈಕ್‌ನಲ್ಲಿ ಬಂದ ಹಂತಕರು ದುಷ್ಕರ್ಮಿಗಳಿಂದ ಮೂರು ಬಾರಿ ಫೈರಿಂಗ್ ಮಾಡಿ ಕೊಲೆಗೈದಿದ್ದಾರೆ.
ಪಡುಸಾವಳಿಯಿಂದ ಆಳಂದ ಪಟ್ಟಣಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ವಿಶ್ವನಾಥ್ನನ್ನು, ಮತ್ತೊಂದು ಬೈಕ್‌ನಲ್ಲಿ ಹಿಂಬಾಲಿಸಿ ಬಂದ ಹಂತಕರು ಶೂಟ್ ಮಾಡಿ ಸಾಯಿಸಿದ್ದಾರೆ.ಸ್ಥಳಕ್ಕೆ ಕಲಬುರಗಿಯ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.