ಬೆಂಗಳೂರು : ರಾಜಿ ಮಾಡಿಕೊಂಡ ಪ್ರಧಾನಿ ಇನ್ನು ಮುಂದೆ ದೇಶ ನಡೆಸಲು ಸಮರ್ಥರಲ್ಲ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದಾರೆ. ಭಾನುವಾರ ಹೈದ್ರಾಬಾದ್‌ನಲ್ಲಿ ನಡೆದ ಸಮಾರಂಭಧಲ್ಲಿ ಇಂಧನ ಬಳಕೆ ಕಡಿಮೆ ಮಾಡುವಂತೆ ದೇಶದ ಜನರಿಗೆ ಮನವಿ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಮಾತುಗಳು ಕೇಂದ್ರ ಸರ್ಕಾರದ ವೈಫಲ್ಯದ ಪುರಾವೆಯಾಗಿವೆ. ನಿನ್ನೆ ಮೋದಿ ಸಾರ್ವಜನಿಕರಿಗೆ ತ್ಯಾಗ ಮಾಡಲು ಕರೆ ನೀಡಿದರು – ಚಿನ್ನ ಖರೀದಿಸಬೇಡಿ, ವಿದೇಶ ಪ್ರವಾಸ ಮಾಡಬೇಡಿ, ಕಡಿಮೆ ಪೆಟ್ರೋಲ್ ಸೇವಿಸಿ, ರಸಗೊಬ್ಬರ ಮತ್ತು ಅಡುಗೆ ಎಣ್ಣೆಯನ್ನು ಕಡಿಮೆ ಮಾಡಿ ಮೆಟ್ರೋದಲ್ಲಿ ಪ್ರಯಾಣಿಸಿ ಮತ್ತು ಮನೆಯಿಂದಲೇ ಕೆಲಸ ಮಾಡಿಎಂದಿರುವುದು ಇವು ಧರ್ಮೋಪದೇಶಗಳಲ್ಲ, ಬದಲಿಗೆ ಇವು ವೈಫಲ್ಯಕ್ಕೆ ನೈಜ ಸಾಕ್ಷಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಜಾಗತಿಕ ಉದ್ವಿಗ್ನತೆ ನಡುವೆ ದೇಶಕ್ಕೆ ಮೋದಿ ಮನವಿ ಇಲ್ಲಿದೆ
ಕಳೆದ 12 ವರ್ಷಗಳಲ್ಲಿ, ದೇಶವು ಎಂತಹ ಪರಿಸ್ಥಿತಿಗೆ ತಂದಿದೆ ಎಂದರೆ, ಈಗ ಸಾರ್ವಜನಿಕರಿಗೆ ಏನು ಖರೀದಿಸಬೇಕು ಮತ್ತು ಏನು ಖರೀದಿಸಬಾರದು, ಎಲ್ಲಿಗೆ ಹೋಗಬೇಕು ಮತ್ತು ಎಲ್ಲಿಗೆ ಹೋಗಬಾರದು ಎಂದು ಹೇಳಬೇಕಾಗಿದೆ. ಪ್ರತಿ ಬಾರಿಯೂ ಮೋದಿ ತಮ್ಮ ಜವಾಬ್ದಾರಿಯನ್ನು ಜನರ ಮೇಲೆ ಹೊರಿಸುತ್ತಾರೆ, ಇದರಿಂದಾಗಿ ಅವರು ಸ್ವತಃ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಹೀಗಾದರೆ ದೇಶದ ಸ್ಥಿತಿ ಇನ್ನಷ್ಟು ಸಂಕಷ್ಟಕ್ಕೆ ತಲುಪಬಹುದು, ಈ ಕೂಡಲೇ ಸಂಸತ್ತಿನ ಅಧಿವೇಶನ ಕರೆಯಿರಿ ಎಂದು ರಾಹುಲ್ ಗಾಂಧಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.






