ಚಳ್ಳಕೆರೆ : ಅಗಲಿದ ಡಿ ಸುಧಾಕರ್ ಅವರು, ಹೃದಯವಂತ ನಾಯಕ, ಜನಪ್ರತಿನಿಧಿಯಾಗಿದ್ದರು. ಅವರ ನಿಧನದಿಂದ ಅಪಾರ ನಷ್ಟವಾಗಿದೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್ ಲಾಡ್ ಭಾವುಕರಾಗಿದ್ದಾರೆ.

ಭಾನುವಾರ ಮುಂಜಾನೆ ನಿಧನರಾದ ಸಚಿವ ಸುಧಾಕರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿ, ಸುಧಾಕರ್ ಅವರು ಸುಮಾರು ಇಪ್ಪತ್ತು ವರ್ಷಗಳಿಂದ ಪರಿಚಯ. ಮೊದಲ ಬಾರಿಗೆ ಅವರು ಶಾಸಕರಾದಾಗಿನಿಂದ ಪರಿಚಿತರು. ಹುಟ್ಟು ಅನಿರೀಕ್ಷಿತ ಸಾವು ಖಚಿತ ಎಂದು ನಾವೆಲ್ಲ ತಿಳಿದಿದ್ದೇವೆ. ಯಾವೂದೂ ಶಾಶ್ವತ ಅಲ್ಲ. ಕೊನೆಗೆ ಎಲ್ಲರೂ ಮಣ್ಣಾಗಿ ಹೋಗುತ್ತೇವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸುಧಾಕರ್ ಅವರು ನಿಧನರಾಗಿದ್ದು ಅಪಾರ ದುಃಖ ತಂದಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ : ತಮಿಳುನಾಡಿನಲ್ಲಿ ವಿಜಯ್ ಸರ್ಕಾರಕ್ಕೆ ಭರ್ಜರಿ ಚಾಲನೆ; 9 ಸಚಿವರ ಪ್ರಮಾಣವಚನ: ಅವರ ವಿವರ ಇಲ್ಲಿದೆ
ಸುಧಾಕರ್ ಅವರು ಸಣ್ಣ ಸಮುದಾಯದಿಂದದ ಬಂದವರು. ನಾಲ್ಕು ಬಾರಿ ಶಾಸಕಾರಾಗಿ ಆಯ್ಕೆಯಾಗಿದ್ದರು. ಸಚಿವರಾಗಿಯೂ ಅವರು ಹಲವಾರು ಜನಪರ ಕೆಲಸ ಮಾಡಿದ್ದರು. ಒಂದು ರೀತಿ ಎಲ್ಲರೊಂದಿಗೆ ಆಪ್ತತೆ ಹೊಂದಿದ್ದ ಅವರು ಅಜಾತಶತ್ರುವಿನಂತಿದ್ದರು. ರೈತರು, ಕೂಲಿ ಕಾರ್ಮಿಕರು, ಬಡವರು, ಶೋಷಿತ ವರ್ಗಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ಅಗಲಿದ ಸ್ನೇಹಿತನನ್ನು ಸ್ಮರಿಸಿದ್ದಾರೆ.
ಸುಧಾಕರ್ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಭದ್ರಾ ಮೇಲ್ದಂಡೆ ಯೋಜನೆಗೆ ಸುಧಾಕರ್ ಅವರು ಸಾಕಷ್ಟು ಹೋರಾಟ ಮಾಡಿದ್ದರು. ಅವರ ಹೆಸರು ಯೋಜನೆಗೆ ಇಡುವುದು ಜನರ ಅಭಿಪ್ರಾಯ. ಇದನ್ನು ಸರ್ಕಾರಕ್ಕೆ ಮುಟ್ಟಿಸಲಾಗುವುದು ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.






