
ಮಂಡ್ಯ: ರಾಜ್ಯದಲ್ಲಿ ವಕ್ಫ್ (Waqf) ವಿವಾದ ವಿಚಾರಕ್ಕೆ ಸಂಬಂಧಿಸಿ ಪಕ್ಷಗಳ ನಡುವೆ ವಾಕ್ಸಮರ ಶುರುವಾಗಿದೆ. ಇದರ ಮಧ್ಯೆ ಮುಡಾ ಹಗರಣ (Muda Scam) ಸಂಬಂಧ ಸಿಎಂ ಸಿದ್ದರಾಮಯ್ಯ ಅವರ (Siddaramaiah) ವಿರುದ್ದ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಷಡ್ಯಂತ್ರ ನಡೆಸುತ್ತಿದೆ.
ಸಿದ್ದರಾಮಯ್ಯ ಲೋಕಾಯುಕ್ತ (Lokayukta) ವಿಚಾರಣೆ ವಿಚಾರದಲ್ಲಿ ಕೂಡ ದೊಡ್ಡ ಷಡ್ಯಂತರ ಇದೆ ಎಂದು ಶಾಸಕ ಗಣಿಗ ರವಿಕುಮಾರ್ (Ganiga Ravikumar) ಆರೋಪಿಸಿದ್ದಾರೆ.
ಕುಮಾರಣ್ಣನಿಗೆ ಹಗಲು ಗನಸು:

ರಾಜ್ಯದಲ್ಲಿ ಮತ್ತೆ ನಾನು ಮುಖ್ಯಮಂತ್ರಿ ಆಗ್ತೇನೆ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಕುಮಾರಣ್ಣ ಸಿಎಂ ಆಗುವ ಹಗಲು ಗನಸು ಕಾಣುತ್ತಿದ್ದಾರೆ. ಕೊಟ್ಟಾಗ ಕುದುರೆ ಏರಲ್ಲ, ಬಿದೋಗ್ತಾರೆ, ಬಿದ್ದಾಗ ಮತ್ತೆ ಕುದುರೆ ಹಿಡಿಯೋದಕ್ಕೆ ಓಡ್ತಾರೆ. 19 ಸೀಟ್ ಬಂದು ಮುಖ್ಯಮಂತ್ರಿ ಆಗ್ತಿನಿ ಅನ್ನೋದು ಅಸಾಧ್ಯ. ನಮ್ಮನ್ನೆಲ್ಲ ರೆಬಲ್ ಒಕ್ಕಲಿಗರು ಎಂದು ಅಂದುಕೊಂಡಿದ್ದಾರೆ. ಆದರೆ ನಾವೇ ಒರಿಜಿನಲ್ ಒಕ್ಕಲಿಗರು ಹಾಗೂ ಕೆಲಸ ಮಾಡೋದು ಸಹ ನಾವೇ. ಅವರು ಏನು ಮಾಡಲ್ಲ. ಇನ್ನು ಚನ್ನಪಟ್ಟಣದಲ್ಲಿ ಯಾವ ಕೆಲಸವನ್ನೂ ಮಾಡಿಲ್ಲ.
ನಾನು ಶಾಸಕನಾಗಿ ಅಭಿವೃದ್ಧಿ ಮಾಡಿದ್ದೇನೆ. ಇನ್ನು 10 ಸಾವಿರ ಮತದಿಂದ ಯೋಗೇಶ್ವರ್ ಗೆಲ್ಲೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಗಣಿಗ ರವಿಕುಮಾರ್ ಹೇಳಿದ್ದಾರೆ.
ಮಂಡ್ಯದ ಬಸರಾಳು ಗ್ರಾಮದಲ್ಲಿ ಶಾಸಕ ಗಣಿಗ ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ವರ್ಗಗಳ ನಾಯಕ ಎರಡನೇ ಬಾರಿ ಸಿಎಂ ಆಗಿದ್ದಾರೆ ಅಂತ ಬಿಜೆಪಿ-ಜೆಡಿಎಸ್ ಸೇರಿ ಸರ್ಕಾರ ಅಸ್ಥಿರ ಮಾಡಲು ಹೊರಟಿದೆ. 50ಕೋಟಿ ಆಮೀಷವೊಡ್ಡಿ ಶಾಸಕರನ್ನ ಖರೀದಿ ಮಾಡಲು ಹೊರಟಿದ್ದಾರೆ. ಆದರೆ ಆ ಕೆಲಸ ಅವರಿಂದ ಆಗಲಿಲ್ಲ. ಕಾಂಗ್ರೆಸ್ ಸರ್ಕಾರ ಹೆಸರು ಮಾಡುತ್ತೆ ಎಂದು ಸಿಎಂ ಅವರನ್ನ ಮುಡಾ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡುತ್ತೇವೆ. ಯಾರನ್ನ ಒಳಗೆ ಹಾಕಿಸಬೇಕು ಹಾಕಿಸ್ತೇವೆ. ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡಲು ಬಂದಿದಕ್ಕೆ ನಮ್ಮ ಬಳಿ ಸರಿಯಾದ ದಾಖಲೆ ಇದೆ.
ಸಿಎಂ ಕುರ್ಚಿ ಗಟ್ಟಿಯಾಗಿದೆ, ಆದರೂ ಕುತಂತ್ರದಿಂದ ಅಲುಗಾಡಿಸಲು ಪ್ರಯತ್ನ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಸಿಎಂ ಕುರ್ಚಿ ಅಲ್ಲಾಡಿಸಲಾಗಲ್ಲ. ನಾವು ಶಾಸಕರಾಗಿ ಎಷ್ಟು ಅವಧಿ ಇರ್ತಿವೋ ಅನ್ನೋದು ಮುಖ್ಯ ಅಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಮಾಡೋದು ಮುಖ್ಯ. ಯಾವತ್ತೊ ಒಂದಿನ ಮಾಜಿ ಆಗಲೇಬೇಕು. ಆದರೆ ಅಭಿವೃದ್ಧಿ ಮಾಡೋದು ನಮ್ಮ ಕೆಲಸ ಎಂದು ರವಿಕುಮಾರ್ ಹೇಳಿದ್ದಾರೆ




