• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, September 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮುನ್ನೆಲೆಗೆ ಬಂತು 1993ರ ಮುಂಬೈ ಸ್ಪೋಟ ಪ್ರಕರಣ; ಭೂಗತ ಲೋಕದೊಂದಿಗೆ ಸಂಪರ್ಕ ಹೊಂದಿದ್ರಾ ಸಚಿವ ಮಲ್ಲಿಕ್?

ನಚಿಕೇತು by ನಚಿಕೇತು
November 21, 2021
in ದೇಶ
0
ಮುನ್ನೆಲೆಗೆ ಬಂತು 1993ರ ಮುಂಬೈ ಸ್ಪೋಟ ಪ್ರಕರಣ; ಭೂಗತ ಲೋಕದೊಂದಿಗೆ ಸಂಪರ್ಕ ಹೊಂದಿದ್ರಾ ಸಚಿವ ಮಲ್ಲಿಕ್?
Share on WhatsAppShare on FacebookShare on Telegram

ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ 1993ರ ಸ್ಪೋಟ ಪ್ರಕರಣ ಸಂಬಂಧ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಸ್ಫೋಟಕ ಮಾಹಿತಿ ತೆರೆದಿಟ್ಟಿದ್ದಾರೆ. 1993ರಲ್ಲಿ ನಡೆದಿದ್ದ ಮುಂಬೈ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳ ಜೊತೆ ಸಚಿವ ನವಾಬ್ ಮಲ್ಲಿಕ್ ನಿಕಟ ಸಂಪರ್ಕ ಹೊಂದಿದ್ದಾರೆ. ಮಲ್ಲಿಕ್ ಒಬ್ಬ ಭೂಗತ ಲೋಕದ ಆಪ್ತ ಅಂತ ಫಡ್ನವೀಸ್ ನವಾಬ್ ವಿರುದ್ಧ ಗುಡುಗಿದ್ದಾರೆ.

ADVERTISEMENT

ಮುಂಬೈ ಡ್ರಗ್ಸ್ ಕೇಸ್ ವಿಚಾರದಲ್ಲಿ ಈಗಾಗಲೇ ಬಂಧಿತನಾಗಿರುವ ಡ್ರಗ್ ಪೆಡ್ಲರ್ನೊಬ್ಬ ದೇವೇಂದ್ರ ಫಡ್ನವೀಸ್ ಮತ್ತು ಅವರ ಪತ್ನಿಯೊಂದಿಗೆ ನಿಂತಿರುವ ಫೋಟೋವನ್ನು ಸಚಿವ ನವಾಬ್ ಮಲ್ಲಿಕ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರು. ಇದೇ ವಿಚಾರಕ್ಕೆ ಫಡ್ನವಿಸ್ ವಿರುದ್ಧ ನವಾಬ್ ವಾಗ್ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ಫಡ್ನವೀಸ್ 1993ರ ಮುಂಬೈ ಸ್ಪೋಟ ಪ್ರಕರಣ ಸ್ಫೋಟಕ ಮಾಹಿತಿಯನ್ನ ಬಿಚ್ಚಿಟ್ಟು ಸಂಚಲನ ಸೃಷ್ಟಿಸಿದ್ದಾರೆ.

ಈಗ ಮುಂಬೈ 1993ರ ಭಾರೀ ಸ್ಪೋಟ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಗಳ ಜೊತೆಗೆ ಸಚಿವ ನವಾಬ್ ಮಲ್ಲಿಕ್ ನೇರ ಸಂಪರ್ಕ ಹೊಂದಿದ್ದಾರೆ ಅಂತ ಫಡ್ನವೀಸ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಫಡ್ನವೀಸ್ ಸ್ಪೋಟಕ ಮಾಹಿತಿಯನ್ನ ಬಹಿರಂಗಗೊಳಿಸಿದ್ದಾರೆ.

ಭೂಗತ ಆಪ್ತ ನವಾಬ್

ಕುರ್ಲಾದ ಎಲ್ಬಿಎಸ್ ರಸ್ತೆಯಲ್ಲಿರೋ 2.8 ಎಕರೆ ವಿಸ್ತೀರ್ಣದ ಪ್ಲಾಟ್ನ್ನ ಮುಂಬೈ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾದ ಸಲೀಂ ಪಟೇಲ್ ಮತ್ತು ಸರ್ದಾರ್ ಶಹಾಬ್ ಅಲಿ ಖಾನ್ರಿಂದ ಖರೀದಿಸಿದ್ದಾರೆ.  ಗೌವಾಲಾ ಕಾಂಪೌಂಡ್ ಅಂತ ಕರೆಯೋ ಈ ಆಸ್ತಿಯನ್ನ ಸಚಿವ ನಾವಾಬ್ ಮಲ್ಲಿಕ್ ಕುಟುಂಬಕ್ಕೆ ಸೇರಿರೋ ಸಾಲಿಡಸ್ ಇನ್ವೆಸ್ಟ್ಮೆಂಟ್ ಫ್ರೈವೇಟ್ ಲಿಮಿಟೆಡ್ ಅನ್ನೋ ಕಂಪನಿ ಮೂಲಕ ಖರೀದಿಸಲಾಗಿದೆ. ಈ ಆಸ್ತಿ ಖರೀದಿಗೆ 30 ಲಕ್ಷ ರೂಪಾಯಿ ಒಪ್ಪಂದವಾಗಿದ್ದರೂ ಕೇವಲ 20 ಲಕ್ಷ ನೀಡಿ ಪ್ಲ್ಯಾಟ್ನ್ನ ಖರೀದಿಸಲಾಗಿದೆ ಎಂದು ಫಡ್ನವೀಸ್ ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಿರೋ ಪ್ರಮುಖ ಸಾಕ್ಷ್ಯಗಳೂ ನನ್ನ ಬಳಿ ಇವೆ. ಅಲ್ಲದೇ ಸಲೀಂ ಪಟೇಲ್ ಭೂಗತ ದೊರೆ ದಾವೂದ್ ಸಹಾಯಕ. ಅಂಥವನ ಜೊತೆಗೆ ನವಾಬ್ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಅಂತ ಹೇಳಿದ್ದಾರೆ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್.

ಮಾಜಿ ಸಿಎಂ ಫಡ್ನವೀಸ್ ಹೀಗೆ ಆರೋಪ ಮಾಡುತ್ತಿದ್ದಂತೆ ನವಾಬ್ ಮಲ್ಲಿಕ್ ಪುತ್ರ ಫಾರಜ್ ಪ್ರತಿಕ್ರಿಯಿಸಿದ್ದಾರೆ. ನಾವೇನೂ ತಪ್ಪು ಮಾಡಿಲ್ಲ ಹೆದರುವುದೂ ಇಲ್ಲ ಅಂತ ಹೇಳಿದ್ದಾರೆ. ಖರೀದಿ ಮಾಡಿರೋ ಆಸ್ತಿಗೆ ನಾನು ಗೇಣಿದಾರನಿದ್ದೇನೆ. ಅದಕ್ಕೆಲ್ಲ ಅಗತ್ಯ ದಾಖಲೆಗಳೂ ಇವೆ. ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಮಹಾರಾಷ್ಟ್ರ ಪೊಲೀಸರಿಗಿದೆ. ನಾವೇನೂ ತಪ್ಪು ಮಾಡಿಲ್ಲ. ಹೀಗಾಗಿ ಹೆದರೋದೂ ಇಲ್ಲ ಅಂದಿದ್ದಾರೆ.

ಇನ್ನು ಸಚಿವ ನವಾಬ್ ಮಲ್ಲಿಕ್ ಕೂಡ ಫಡ್ನವೀಸ್ಗೆ ಟಾಂಗ್ ಕೊಟ್ಟಿದ್ದಾರೆ. ಸಚಿವ ನಾವಾಬ್ ಮಲ್ಲಿಕ್ ಮಾಜಿ ಸಿಎಂ ವಿರುದ್ಧ ಪ್ರತಿದಾಳಿ ಮಾಡಿದ್ದಾರೆ. ನನ್ನ ವಿರುದ್ಧ ಆರೋಪಿಸುತ್ತಿರೋ ದೇವೇಂದ್ರ ಫಡ್ನವೀಸ್ಗೂ ಅಂಡರ್ ವರ್ಲ್ಡ್ ಜೊತೆಗೆ ಸಂಬಂಧ ಇದೆ ಅಂತ ನಾನು ಸಾಬೀತು ಪಡಿಸುತ್ತೇನೆ. ಈ ಸಂಬಂಧ ಹೈಡ್ರೋಜನ್ ಬಾಂಬ್ ಸ್ಪೋಟಿಸುತ್ತೇನೆ ಎಂದು ವಾರ್ನ್ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಮುಂಬೈ ಮುಂಬೈ ಸ್ಫೋಟ, ಡ್ರಗ್ ಜಾಲ, ಆಸ್ತಿ ಖರೀದಿ ವಿಚಾರದ ಫಡ್ನವೀಸ್ ಮತ್ತು ನವಾಬ್ ಮಲ್ಲಿಕ್ ನಡುವಿನ ಆರೋಪ ಪ್ರತ್ಯಾರೋಪ ಇನ್ನೂ ಎಲ್ಲಿಗೆ ಹೋಗಿ ತಲುಪುತ್ತದೆಯೋ ಕಾದು ನೋಡಬೇಕಿದೆ. 

Tags: BJPCongress PartyCovid 19ಕರೋನಾಕೋವಿಡ್-19ನರೇಂದ್ರ ಮೋದಿಬಿಜೆಪಿ
Previous Post

ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ; ಮತ್ತೊಂದು ವಾರ ಶಾಲೆಗಳು ಬಂದ್

Next Post

ಹೊಸ ವರ್ಷಾರಂಭದಿಂದ ಸಿದ್ದಉಡುಪು, ಪಾದರಕ್ಷೆಗಳ ದರ ಏರಿಕೆ

Related Posts

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ‘ಕರ್ನಾಟಕ ಹೆರಿಟೇಜ್ ಅಂಡ್‌ ಕಲ್ಚರಲ್‌ ಫೌಂಡೇಶನ್‌ ಸ್ಥಾಪನೆ : ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ ಘೋಷಣೆ
Top Story

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ‘ಕರ್ನಾಟಕ ಹೆರಿಟೇಜ್ ಅಂಡ್‌ ಕಲ್ಚರಲ್‌ ಫೌಂಡೇಶನ್‌ ಸ್ಥಾಪನೆ : ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ ಘೋಷಣೆ

by ಪ್ರತಿಧ್ವನಿ
September 2, 2026
0

- ಸರ್ಕಾರ, CSR, NRI ಹಾಗೂ ಸಾರ್ವಜನಿಕರ ಸಹಭಾಗಿತ್ವದ ಮೂಲಕ ಸಂರಕ್ಷಣೆಗೆ ಹೊಸ ಮಾದರಿ - ಐತಿಹಾಸಿಕ ಸ್ಮಾರಕಗಳು, ಪುರಾತತ್ವ ತಾಣಗಳು ಹಾಗೂ ವಸ್ತುಸಂಗ್ರಹಾಲಯಗಳಿಗೆ ಸುಸ್ಥಿರ ಹಣಕಾಸು...

Read moreDetails
ಡಿಜಿಟಲ್‌ ಭಾರತದಲ್ಲಿ ಮಹಿಳೆ-ಸ್ತ್ರೀ ಸಂವೇದನೆ

ಡಿಜಿಟಲ್‌ ಭಾರತದಲ್ಲಿ ಮಹಿಳೆ-ಸ್ತ್ರೀ ಸಂವೇದನೆ

September 2, 2026
ಅಧಿಕಾರದ ಕುದುರೆ ಏರಲು ದೆಹಲಿ, ಬೆಂಗಳೂರಿನ ನಡುವೆ ಡಿಕೆಶಿ ಸತತ ಪ್ರಯತ್ನ : ಸಿಎಂ ವಿರುದ್ಧ ಬೊಮ್ಮಾಯಿ ಅಬ್ಬರ..!

ಅಧಿಕಾರದ ಕುದುರೆ ಏರಲು ದೆಹಲಿ, ಬೆಂಗಳೂರಿನ ನಡುವೆ ಡಿಕೆಶಿ ಸತತ ಪ್ರಯತ್ನ : ಸಿಎಂ ವಿರುದ್ಧ ಬೊಮ್ಮಾಯಿ ಅಬ್ಬರ..!

September 1, 2026
ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?

ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?

September 1, 2026
543 – ಯಥಾಸ್ಥಿತಿಯಲ್ಲಿ ಏಕೆ ಉಳಿಯಬೇಕು?

543 – ಯಥಾಸ್ಥಿತಿಯಲ್ಲಿ ಏಕೆ ಉಳಿಯಬೇಕು?

August 31, 2026
Next Post
ಹೊಸ ವರ್ಷಾರಂಭದಿಂದ ಸಿದ್ದಉಡುಪು, ಪಾದರಕ್ಷೆಗಳ ದರ ಏರಿಕೆ

ಹೊಸ ವರ್ಷಾರಂಭದಿಂದ ಸಿದ್ದಉಡುಪು, ಪಾದರಕ್ಷೆಗಳ ದರ ಏರಿಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada