• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?

ಈ ಬೆಳವಣಿಗೆಯು ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ತಿರುವು ಪಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ..

ಪ್ರತಿಧ್ವನಿ by ಪ್ರತಿಧ್ವನಿ
September 1, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ, ಸಿನಿಮಾ
0
ಪ್ರದೋಷ್‌ ಮಾಫಿ ಸಾಕ್ಷಿ ಪ್ರಶ್ನಿಸಿದ‌ ನಟ ದರ್ಶನ್ : ರೇಣುಕಾ ಸ್ವಾಮಿ ಕೊ* ಕೇಸ್‌ನಲ್ಲಿ ಮಹತ್ವದ ಬದಲಾವಣೆ..?
Share on WhatsAppShare on FacebookShare on Telegram

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ರಾವ್ (ಪ್ರದೋಷ್) ಅವರನ್ನು ಮಾಫಿ ಸಾಕ್ಷಿ (ಅಪ್ರೂವರ್) ಆಗಿ ಪರಿಗಣಿಸಿದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ರಾಜ್ಯ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

ADVERTISEMENT
JDS Protest Against Kharge : ಒಬ್ಬ ದೊಡ್ಡ ಲೀಡರ್ ಆಗೋಕೆ ಪ್ರಿಯಾಂಕ್ ಖರ್ಗೆ ಹೊರಟಿದ್ದಾರೆ..! | #pratidhvani

ಪ್ರದೋಷ್ ಸಾಕ್ಷಿ ಹೇಳಿಕೆ ದಾಖಲಿಸುವುದು ಬುಧವಾರಕ್ಕೆ ನಿಗದಿಯಾಗಿರುವುದರಿಂದ ತುರ್ತು ವಿಚಾರಣೆ ನಡೆಸಬೇಕೆಂದು ಕೋರಿದ್ದಾರೆ. ಹೈಕೋರ್ಟ್ ತುರ್ತು ವಿಚಾರಣೆಗೆ ಒಪ್ಪಿಗೆ ನೀಡದೆ, ಅರ್ಜಿಯನ್ನು ಬುಧವಾರ (ಸೆಪ್ಟೆಂಬರ್ 2) ವಿಚಾರಣೆಗೆ ಮುಂದೂಡಿದೆ.

ಸೆಷನ್ಸ್ ನ್ಯಾಯಾಲಯ ಪ್ರದೋಷ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಪರಿಗಣಿಸಿ, ಸೆಪ್ಟೆಂಬರ್ 2ರಂದು ಹೇಳಿಕೆ ದಾಖಲಿಸಲು ಸಮನ್ಸ್ ನೀಡಿದೆ. ನಟ ದರ್ಶನ್ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಮತ್ತು ವಿಚಾರಣೆ ತುರ್ತಾಗಿ ನಡೆಸಬೇಕು ಎಂದು ಕೋರಿದ್ದಾರೆ. ಹೈಕೋರ್ಟ್ ಈ ಅರ್ಜಿಯನ್ನು ಬುಧವಾರ ವಿಚಾರಣೆಗೆ ತೆಗೆದುಕೊಳ್ಳಲಿದೆ. ಈ ಬೆಳವಣಿಗೆಯು ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ತಿರುವು ಪಡೆಯುವ ಸಾಧ್ಯತೆಯಿದೆ. ಪ್ರದೋಷ್ ಹೇಳಿಕೆ ಪ್ರಾಸಿಕ್ಯೂಷನ್‌ಗೆ ಬಲವಾದ ಸಾಕ್ಷ್ಯವಾಗಬಹುದು. ಆದರೆ ದರ್ಶನ್ ಮತ್ತು ಇತರೆ ಆರೋಪಿಗಳು ಅವರನ್ನು ಕ್ರಾಸ್-ಎಕ್ಸಾಮಿನ್ ಮಾಡುವ ಹಕ್ಕನ್ನು ಹೊಂದಿದ್ದಾರೆ.

ಪ್ರಕರಣ ನಡೆದುಕೊಂಡು ಬಂದಿದ್ದು ಹೇಗೆ..?

ಕಳೆದ 2024ರ ಜೂನ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ (33)ಯನ್ನು ಅಪಹರಿಸಿ, ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ (ಆರೋಪಿ ಸಂಖ್ಯೆ 2), ಪವಿತ್ರಾ ಗೌಡ ಸೇರಿದಂತೆ ಹಲವು ಜನರನ್ನು ಬಂಧಿಸಲಾಗಿತ್ತು. ಪ್ರದೋಷ್ ರಾವ್ (40, ಸಾಫ್ಟ್‌ವೇರ್ ವೃತ್ತಿ) ಪ್ರಕರಣದ 14ನೇ ಆರೋಪಿಯಾಗಿದ್ದರು.ಆಗಸ್ಟ್ ತಿಂಗಳಲ್ಲಿ ಪ್ರದೋಷ್ ಸೆಕ್ಷನ್ 307 ಸಿಆರ್‌ಪಿಸಿ ಅಡಿಯಲ್ಲಿ ಮಾಫಿ ಸಾಕ್ಷಿಯಾಗಲು 11 ಪುಟಗಳ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ : 

ಅಲ್ಲದೆ ಇದರಲ್ಲಿ ಅವರು ಘಟನೆಯ ವಿವರಗಳು, ಸಾಕ್ಷಿ ನಾಶ ಮತ್ತು ಸಹ ಆರೋಪಿಗಳ ಪಾತ್ರದ ಬಗ್ಗೆ ಪೂರ್ಣ ಸತ್ಯ ಹೇಳುವುದಾಗಿ ತಿಳಿಸಿದ್ದರು. ಪ್ರಾಸಿಕ್ಯೂಷನ್ ಇದಕ್ಕೆ ಒಪ್ಪಿಗೆಯನ್ನೂ ನೀಡಿತ್ತು. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಇದಕ್ಕೆ ಆಕ್ಷೇಪಿಸಿದ್ದರು. ಆದರೆ 59ನೇ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ (ಸಿ‌ಸಿ‌ಹೆಚ್-59) ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಸಹಆರೋಪಿಗಳಿಗೆ ಮಾಫಿ ಸಾಕ್ಷಿ ಅರ್ಜಿ ವಿಚಾರಣೆಯಲ್ಲಿ ಭಾಗವಹಿಸುವ ಹಕ್ಕಿಲ್ಲ ಎಂದು ತಿಳಿಸಿ, ಆಗಸ್ಟ್ 25ರಂದು ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಅಂಗೀಕರಿಸಿದ್ದರು. ಷರತ್ತುಗಳೊಂದಿಗೆ ಕ್ಷಮಾದಾನ ನೀಡಲಾಗಿದೆ. ಸುಳ್ಳು ಹೇಳಿದರೆ ಅಥವಾ ಸತ್ಯ ಮರೆಮಾಡಿದರೆ ಮತ್ತೆ ಆರೋಪಿಯಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಇದಕ್ಕೂ ಮೊದಲು ನಟ ದರ್ಶನ್ ಸಹಆರೋಪಿಯಾಗಿ ವಾದ ಮಂಡಿಸಲು ಅವಕಾಶ ಕೋರಿ ಹೈಕೋರ್ಟ್‌ಗೆ ಹೋಗಿದ್ದರು. ಆಗಸ್ಟ್ 13ರಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಅದನ್ನು ತಿರಸ್ಕರಿಸಿದ್ದರು. ಸಹಆರೋಪಿಗಳಿಗೆ ಮಾಫಿ ಸಾಕ್ಷಿ ಅರ್ಜಿ ಹಂತದಲ್ಲಿ ಹಕ್ಕಿಲ್ಲ; ಸಾಕ್ಷಿ ಹೇಳಿಕೆ ದಾಖಲಾದ ನಂತರವೇ ಕ್ರಾಸ್-ಎಕ್ಸಾಮಿನೇಷನ್ ಹಕ್ಕು ಇದೆ ಎಂದು ತಿಳಿಸಿದ್ದರು.

Tags: actor darshan caseactor darshan case updatesCross ExaminationHashmat Pasha‌High courtMaafi SaakshiPradosh raoPratidhvaniRenukaswamy Murder Case
Previous Post

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!

Next Post

ವಿದೇಶ ಪ್ರವಾಸ, ವಿದೇಶಿ ಮದುವೆ, ಚಿನ್ನ ಖರೀದಿ ಬೇಡ: ಭಾರತೀಯರಿಗೆ ಪ್ರಧಾನಿ ಮೋದಿ ಮಹತ್ವದ ಮನವಿ

Related Posts

ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕೂಡಲೇ ರದ್ದುಪಡಿಸಿ: ರಾಜ್ಯಪಾಲರಿಗೆ IISc ತಜ್ಞರ ವರದಿ! ಕಾರಣವೇನು?
Top Story

ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕೂಡಲೇ ರದ್ದುಪಡಿಸಿ: ರಾಜ್ಯಪಾಲರಿಗೆ IISc ತಜ್ಞರ ವರದಿ! ಕಾರಣವೇನು?

by ಪ್ರತಿಧ್ವನಿ
September 1, 2026
0

ಬೆಂಗಳೂರಿನ ಹೆಬ್ಬಾಳ ಸುರಂಗ ರಸ್ತೆ ಯೋಜನೆ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (IISc) ತಜ್ಞರ ತಂಡ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರೊ. ಆಶೀಶ್ ವರ್ಮಾ ನೇತೃತ್ವದ ಸಿವಿಲ್...

Read moreDetails
ಸೆ.12ರಂದು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ; ಡಿಕೆಶಿ ಸಿಎಂ ಆಗಿ ಮುಂದುವರಿಯಲ್ಲ ಎಂದ ಜೆಡಿಎಸ್ ಶಾಸಕ!

ಸೆ.12ರಂದು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ; ಡಿಕೆಶಿ ಸಿಎಂ ಆಗಿ ಮುಂದುವರಿಯಲ್ಲ ಎಂದ ಜೆಡಿಎಸ್ ಶಾಸಕ!

September 1, 2026
ಅಧಿಕಾರದ ಕುದುರೆ ಏರಲು ದೆಹಲಿ, ಬೆಂಗಳೂರಿನ ನಡುವೆ ಡಿಕೆಶಿ ಸತತ ಪ್ರಯತ್ನ : ಸಿಎಂ ವಿರುದ್ಧ ಬೊಮ್ಮಾಯಿ ಅಬ್ಬರ..!

ಅಧಿಕಾರದ ಕುದುರೆ ಏರಲು ದೆಹಲಿ, ಬೆಂಗಳೂರಿನ ನಡುವೆ ಡಿಕೆಶಿ ಸತತ ಪ್ರಯತ್ನ : ಸಿಎಂ ವಿರುದ್ಧ ಬೊಮ್ಮಾಯಿ ಅಬ್ಬರ..!

September 1, 2026
ವಿದೇಶ ಪ್ರವಾಸ, ವಿದೇಶಿ ಮದುವೆ, ಚಿನ್ನ ಖರೀದಿ ಬೇಡ: ಭಾರತೀಯರಿಗೆ ಪ್ರಧಾನಿ ಮೋದಿ ಮಹತ್ವದ ಮನವಿ

ವಿದೇಶ ಪ್ರವಾಸ, ವಿದೇಶಿ ಮದುವೆ, ಚಿನ್ನ ಖರೀದಿ ಬೇಡ: ಭಾರತೀಯರಿಗೆ ಪ್ರಧಾನಿ ಮೋದಿ ಮಹತ್ವದ ಮನವಿ

September 1, 2026
ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮ್ಯಾಜಿಕ್!

September 1, 2026
Next Post
ವಿದೇಶ ಪ್ರವಾಸ, ವಿದೇಶಿ ಮದುವೆ, ಚಿನ್ನ ಖರೀದಿ ಬೇಡ: ಭಾರತೀಯರಿಗೆ ಪ್ರಧಾನಿ ಮೋದಿ ಮಹತ್ವದ ಮನವಿ

ವಿದೇಶ ಪ್ರವಾಸ, ವಿದೇಶಿ ಮದುವೆ, ಚಿನ್ನ ಖರೀದಿ ಬೇಡ: ಭಾರತೀಯರಿಗೆ ಪ್ರಧಾನಿ ಮೋದಿ ಮಹತ್ವದ ಮನವಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!