• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

543 – ಯಥಾಸ್ಥಿತಿಯಲ್ಲಿ ಏಕೆ ಉಳಿಯಬೇಕು?

ಲೋಕಸಭೆಯನ್ನು ವಿಸ್ತರಿಸದೆಯೇ ಮಹಿಳಾ ಪ್ರಾತಿನಿಧ್ಯ-ಡಿಲಿಮಿಟೇಷನ್-ಒಕ್ಕೂಟ ನ್ಯಾಯ ಸಾಧ್ಯ

ಪ್ರತಿಧ್ವನಿ by ಪ್ರತಿಧ್ವನಿ
August 31, 2026
in Top Story, ಅಂಕಣ, ದೇಶ, ರಾಜಕೀಯ, ವಿಶೇಷ
0
543 – ಯಥಾಸ್ಥಿತಿಯಲ್ಲಿ ಏಕೆ ಉಳಿಯಬೇಕು?
Share on WhatsAppShare on FacebookShare on Telegram

ಮೂಲ : ಎಸ್ ವೈ ಖುರೇಷಿ
ಕನ್ನಡಕ್ಕೆ : ನಾ ದಿವಾಕರ
(ಮೂಲ : Why 543 should remain 543 – ಎಸ್ ವೈ ಖುರೇಷಿ ದ ಹಿಂದೂ 28-8-2026)
“ ವಿವಾದಾಸ್ಪದವಾಗಿರುವ ಡಿ-ಲಿಮಿಟೇಷನ್ ಪ್ರಕ್ರಿಯೆಯನ್ನು ವಸ್ತುನಿಷ್ಠವಾಗಿ ಸಮತೋಲನದಿಂದ, ಎಲ್ಲರಿಗೂ ಅರ್ಥವಾಗುವ ಸರಳ ರೀತಿಯಲ್ಲಿ ವಿಶ್ಲೇಷಿಸಿರುವ ಕಾರಣಕ್ಕಾಗಿ ಈ ಅಪೂರ್ವ ಲೇಖನವನ್ನು ಯಥಾವತ್ತಾಗಿ ಅನುವಾದಿಸಲಾಗಿದೆ “ (ಅನುವಾದಕ)
2026ರ ಆಗಸ್ಟ್ 13ರಂದು ಸಂಸತ್ತಿನ ಉಭಯ ಸದನಗಳನ್ನು ಅನಿರ್ದಿಷ್ಟ ಕಾಲ ಮುಂದೂಡಿದ ನಂತರದಲ್ಲೂ ಸಹ ಮುಂಗಾರು ಅಧಿವೇಶನವನ್ನು ಔಪಚಾರಿಕವಾಗಿ ಸಮಾಪ್ತಿಗೊಳಿಸಿಲ್ಲ. ಹಾಗಾಗಿ ಡಿ-ಲಿಮಿಟೇಷನ್ ಮತ್ತು ಮಹಿಳಾ ಮೀಸಲಾತಿ ಮಸೂದೆಯ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನವನ್ನು ಪುನರಾರಂಭಿಸಬಹುದು ಎಂಬ ಊಹಾಪೋಹಗಳು ದಟ್ಟವಾಗುತ್ತಿವೆ. ಇದು ಸಾಧ್ಯವಾಗುವುದೋ ಇಲ್ಲವೋ , ಸಂಸತ್ತು ಎದುರಿಸಬೇಕಾದ ಒಂದು ಪ್ರಶ್ನೆಯಂತೂ ಖಂಡಿತವಾಗಿ ಉದ್ಭವಿಸುತ್ತದೆ. ಡಿ-ಲಿಮಿಟೇಷನ್ (ಕ್ಷೇತ್ರಗಳ ಮರುವಿಂಗಡನೆ ಮತ್ತು ಸಂಖ್ಯೆಯ ವಿಸ್ತರಣೆ) ಎಂದರೆ ಲೋಕಸಭೆಯಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದು ಎಂದು ಮಾತ್ರ ಅರ್ಥೈಸಬಹುದೇ ?

ADVERTISEMENT
Gruhalakshmi Guarantee Scheme : ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಗೆ 3 ವರ್ಷದ ಸಂಭ್ರಮ #pratidhvani

ಸಂಖ್ಯೆಗಳು ಮಾತ್ರ ನಿರ್ಧರಿಸಲಾಗುವುದಿಲ್ಲ
ಮೇಲ್ನೋಟಕ್ಕೆ ಇದು ಸಂಖ್ಯೆಗಳ ಲೆಕ್ಕಾಚಾರದ ಹಾಗೆ ತೋರುತ್ತದೆ. 50 ವರ್ಷಗಳ ಹಿಂದೆ ಲೋಕಸಭಾ ಸ್ಥಾನಗಳನ್ನು ನಿಗದಿತ ಸಂಖ್ಯೆಗೆ ಸೀಮಿತಗೊಳಿಸಿದ ನಂತರದಲ್ಲಿ ಭಾರತದ ಜನಸಂಖ್ಯೆ ಅಪಾರ ಹೆಚ್ಚಳ ಕಂಡಿದೆ. ಆದ್ದರಿಂದ ಜನಸಂಖ್ಯಾ ಬೆಳವಣಿಗೆಗೆ ಪೂರಕವಾಗಿ ಪ್ರಾತಿನಿಧ್ಯವೂ ಹೆಚ್ಚಾಗಬೇಕು ಎಂದು ವಾದಿಸುವುದು ಸಹಜವಾಗಿಯೇ ಕಾಣುತ್ತದೆ. ಆದರೆ ಸಾಂವಿಧಾನಿಕ ಸಂರಚನೆಯ ವಿನ್ಯಾಸ ಕೇವಲ ಸಂಖ್ಯೆಗಳ ಲೆಕ್ಕಾಚಾರವಲ್ಲ.
ಪ್ರಾತಿನಿಧ್ಯವು ಸಾಧ್ಯವಾದಷ್ಟು ಮಟ್ಟಿಗೆ ಜನಸಂಖ್ಯೆಗೆ ಪೂರಕವಾಗಿರಬೇಕು ಎಂದು ಸಂವಿಧಾನದ ಅನುಚ್ಛೇದ 81 ಹೇಳುತ್ತದೆ. ಆದರೆ ಅನುಚ್ಛೇದ 82 ಪ್ರತಿಯೊಂದು ಜನಗಣತಿಯ ನಂತರವೂ ಮರು-ಹೊಂದಾಣಿಕೆಯ ಅವಕಾಶವನ್ನು ಕಲ್ಪಿಸುತ್ತದೆ. ಆದಾಗ್ಯೂ ಬಲವಾದ ರಾಷ್ಟ್ರೀಯ ಉದ್ದೇಶಗಳು ಎದುರಾಗಿದ್ದಾಗಲೂ ಸಹ ಭಾರತದ ಸಂಸತ್ತು ಎರಡು ಬಾರಿ,ಈ ಅನುಚ್ಛೇದವನ್ನು ತತ್ವವನ್ನು ಯಾಂತ್ರಿಕವಾಗಿ ಮಾರ್ಪಾಟು ಮಾಡಿದೆ. 1976ರಲ್ಲಿ 42ನೆಯ ಸಂವಿಧಾನ ತಿದ್ದುಪಡಿಯ ಮೂಲಕ, 1971ರ ಜನಗಣತಿಯನ್ನು ಆಧರಿಸಿ ಅಂತರ-ರಾಜ್ಯ ಸ್ಥಾನ ಹಂಚಿಕೆಯನ್ನು ಮಿತಿಗೊಳಿಸಲಾಯಿತು. ಇದರ ಪರಿಣಾಮ, ಕುಟುಂಬ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದ ರಾಜ್ಯಗಳು ಜನಸಂಖ್ಯೆಯನ್ನು ಕಡಿಮೆ ಮಾಡಿದ್ದಕ್ಕಾಗಿ ರಾಜಕೀಯ ದಂಡನೆಯನ್ನು ಎದುರಿಸಲಿಲ್ಲ. ಮತ್ತೊಮ್ಮೆ 84ನೆಯ ಸಂವಿಧಾನ ತಿದ್ದುಪಡಿಯ ಮೂಲಕ, 2026ರ ಜನಗಣತಿಯನ್ನು ನಡೆಸುವವರೆಗೂ ಈ ನಿಗದಿತ ಮಿತಿಯನ್ನು ವಿಸ್ತರಿಸಲಾಯಿತು. ಹೀಗೆ ಜನಸಂಖ್ಯೆ ನಿರ್ಣಾಯಕವೇ ಆದರೂ ಸಹ , ಬಾಧಿತವಾಗುವುದು ಅದೊಂದೇ ಸಾಂವಿಧಾನಿಕ ಮೌಲ್ಯ ಅಲ್ಲ ಎಂದು ಸಂಸತ್ತು ನಿರ್ಧರಿಸಿತ್ತು.

#hdkumaraswamy on mla :ನಾನು ನೋಡುವಷ್ಟು ಜನರನ್ನ ನೀನು ನೋಡ್ತೀಯಾ? ಏಕವಚನದಲ್ಲೇ HDK ಕೆಂಡ..! | #pratidhvani

ಹಾಲಿ ಕೇಂದ್ರ ಸರ್ಕಾರವು ಪ್ರತಿಯೊಂದು ರಾಜ್ಯದ ಪ್ರಾತಿನಿಧ್ಯವನ್ನು ಅಂದಾಜು ಶೇಕಡಾ 50ರಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಮಂಡಿಸಿದೆ. ಹೀಗೆ ಮಾಡುವುದರ ಮೂಲಕ ಪ್ರತಿಯೊಂದು ರಾಜ್ಯವೂ ಈಗಿರುವ ಅನುಪಾತದಲ್ಲೇ ಲೋಕಸಭಾ ಸ್ಥಾನಗಳನ್ನು ಹೊಂದಿರುತ್ತದೆ ಎಂದು ಸರ್ಕಾರ ವಾದಿಸುತ್ತದೆ. ಮೇಲ್ನೋಟಕ್ಕೆ ಇದು, ದಕ್ಷಿಣದ ರಾಜ್ಯಗಳು ತಮ್ಮ ಸಾಪೇಕ್ಷ ಸ್ಥಾನಮಾನವನ್ನು ಕಳೆದುಕೊಳ್ಳುತ್ತವೆ ಎಂಬ ಭೀತಿಗೆ ಪ್ರತಿಕ್ರಿಯೆಯಾಗಿ ಕಾಣುತ್ತದೆ. ಆದರೆ ಅನುಪಾತವೊಂದೇ (proportion) ಪೂರ್ಣ ಸತ್ಯವನ್ನು ಸೂಚಿಸುವುದಿಲ್ಲ.

ಉದಾಹರಣೆಗೆ ಉತ್ತರ ಪ್ರದೇಶದಲ್ಲಿ ಲೋಕಸಭಾ ಸ್ಥಾನಗಳು 80 ರಿಂದ 120ಕ್ಕೆ ಹೆಚ್ಚಾದರೆ, ಅದೇವೇಳೆ ತಮಿಳುನಾಡಿನಲ್ಲಿ ಸ್ಥಾನಗಳು 39 ರಿಂದ 59ಕ್ಕೆ ಏರಿದರೆ , ಎರಡೂ ರಾಜ್ಯಗಳ ಅನುಪಾತದ ಸಂಬಂಧ ಯಥಾಸ್ಥಿತಿಯಲ್ಲಿರುತ್ತದೆ. ಆದರೂ ಸಂಸತ್ತಿನಲ್ಲಿ ಮತ ಚಲಾಯಿಸುವ ಸಂಸದರ ಸಂಖ್ಯೆಯಲ್ಲಿನ ವ್ಯತ್ಯಾಸ 41 ರಿಂದ 61ಕ್ಕೆ ಏರುತ್ತದೆ. ಸಂಸತ್ತಿನಲ್ಲಿ ಮತ ಚಲಾವಣೆಯು ಅನುಪಾತಗಳ ಲೆಕ್ಕದಲ್ಲಿ ನಡೆಯುವುದಿಲ್ಲ. ನಿಖರ ಸಂಖ್ಯೆಗಳಲ್ಲಿ ನಡೆಯುತ್ತದೆ. ಸರ್ಕಾರಗಳು ರಚನೆಯಾಗುವುದು ಸಂಸದರ ಸಂಖ್ಯೆಯಿಂದ. ವಿಶ್ವಾಸ ನಿರ್ಣಯಗಳು, ಶಾಸನಗಳು ಮತ್ತು ಸದಸ್ಯರು ನಿರ್ಧರಿಸುವ ಸಾಂವಿಧಾನಿಕ ತಿದ್ದುಪಡಿಗಳು ನಿರ್ಧಾರವಾಗುವುದು ಸಂಖ್ಯೆಗಳ ಮುಖಾಂತರ. ಸಂಖ್ಯೆಗಳಲ್ಲಿ ವ್ಯತ್ಯಾಸ ಹೆಚ್ಚಾದರೂ ಸಹ ಪ್ರಮಾಣಾನುಗುಣವಾಗಿ (Pro-rata) ಶೇಕಡಾ 50ರಷ್ಟು ಹೆಚ್ಚಳವು ಅನುಪಾತವನ್ನು ಯಥಾಸ್ಥಿತಿಯಲ್ಲಿರಿಸುತ್ತದೆ.

Actor Kishore :2028 ಕ್ಕೆ ನಟ ಕಿಶೋರ್ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ..? #pratidhvani #kishore #sir #bjp

ಆದ್ದರಿಂದ 1976ರಲ್ಲಿ ನಿಗದಿಪಡಿಸಿದ ಸಂಖ್ಯಾಮಿತಿ ಒಕ್ಕೂಟ ಒಪ್ಪಂದವನ್ನು ಪುರಸ್ಕರಿಸಿತ್ತು. ಅಂದರೆ, ರಾಷ್ಟ್ರೀಯ ನೀತಿಯ ಅನುಗುಣವಾಗಿಯೇ ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ರಾಜ್ಯಗಳು ತಮ್ಮ ರಾಜಕೀಯ ಧ್ವನಿಯನ್ನು ಕಳೆದುಕೊಳ್ಳಲಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಈ ಗ್ರಹಿಕೆಯನ್ನು ವಿಚಾರ ಮಾಡದೆ ತಿರಸ್ಕರಿಸುವುದು ತಪ್ಪಾಗುತ್ತದೆ.

ಮತ್ತೊಂದೆಡೆ ಡಿ-ಲಿಮಿಟೇಷನ್ ಮತ್ತು ಸಂಖ್ಯೆಗಳ ವಿಸ್ತರಣೆ ಎರಡನ್ನೂ ಪ್ರತ್ಯೇಕಿಸಲಾಗುವುದಿಲ್ಲ ಎಂಬ ತಪ್ಪು ಕಲ್ಪನೆಯೂ ಇದೆ. ಹಾಗೇನೂ ಇಲ್ಲ. ಪ್ರತಿಯೊಂದು ರಾಜ್ಯಕ್ಕೂ ಒದಗಿಸಲಾಗಿರುವ ನಿಗದಿತ ಸಂಸದರ ಸಂಖ್ಯೆಯನ್ನು ಬದಲಾವಣೆ ಮಾಡದೆಯೇ ಕ್ಷೇತ್ರದ ಗಡಿಗಳನ್ನು ವಿಸ್ತರಿಸಬಹುದು ಎಂದು ಭಾರತ ಈಗಾಗಲೇ ನಿರೂಪಿಸಿದೆ. 2001ರ ಜನಗಣತಿಯ ನಂತರ ಕೈಗೊಂಡ ಡಿ-ಮಿಲಿಟೇಷನ್ ಪ್ರಕ್ರಿಯೆಯಲ್ಲಿ ರಾಜ್ಯಗಳಲ್ಲಿ ಆಂತರಿಕವಾಗಿ ಲೋಕಸಭಾ ಕ್ಷೇತ್ರಗಳನ್ನು ಮರುಸಂಘಟನೆ ಮಾಡಲಾಯಿತು. ಈ ಪ್ರಕ್ರಿಯೆಯ ಹೊರತಾಗಿಯೂ ನಿಗದಿತ ಅಂತಾರಾಜ್ಯ ಕ್ಷೇತ್ರಗಳ ಸ್ಥಾನಗಳಲ್ಲಿ ವ್ಯತ್ಯಯವಾಗಲಿಲ್ಲ.

ವಾಟ್ಸಪ್ ಸ್ಟೇಟಸ್ ಹಾಕೋರು ಈ ವಿಡಿಯೋ ನೋಡಿ! ಎಚ್ಚರವಾಗಿರಿ #pratidhvani

ಇದೇ ನೀತಿಯನ್ನು ಪುನಃ ಅಳವಡಿಸಬಹುದು. 2027ರ ಜನಗಣತಿಯು ಪ್ರತಿಯೊಂದು ರಾಜ್ಯದಲ್ಲೂ ಅಂತರಿಕವಾಗಿ ಕ್ಷೇತ್ರಗಳನ್ನು ಮರು ವಿಂಗಡನೆ ಮಾಡಲು ಅಧಾರ ಒದಗಿಸುತ್ತದೆ. ಅಗ ರಾಜ್ಯಗಳಲ್ಲಿ ಜನಸಂಖ್ಯೆಯ ಕ್ಷೇತ್ರಾವಾರು ಹಂಚಿಕೆ ಸಮನಾಗಿರುತ್ತದೆ. ನಿಗದಿಸಲ್ಪಡುವ ಗಡಿಗಳು ಜನಸಂಖ್ಯೆಯ ಚಲನೆ ಮತ್ತು ನಗರೀಕರಣ ಪ್ರಕ್ರಿಯೆಯನ್ನು ಬಿಂಬಿಸಬಹುದು. ಈ ಯಾವುದೇ ಕ್ರಮಗಳಿಗೆ 543 ಲೋಕಸಭಾ ಸ್ಥಾನಗಳನ್ನು ದುಪ್ಪಟ್ಟು ಮಾಡುವ, ಪ್ರಸ್ತುತ ಒಕ್ಕೂಟ ಸಮತೋಲನವನ್ನು ಪಲ್ಲಟಗೊಳಿಸುವ ಅವಶ್ಯಕತೆ ಇರುವುದಿಲ್ಲ.

ಹಾಗೆಯೇ ಜನಸಂಖ್ಯಾ ಹೆಚ್ಚಳಕ್ಕೆ ಪ್ರತಿಕ್ರಿಯೆಯಾಗಿ ಶಾಸಕಾಂಗವನ್ನೂ ನಿರಂತರವಾಗಿ ವಿಸ್ತರಿಸುವುದು ಅನಿವಾರ್ಯವಾದ ಪರಿಣಾಮವೇನೂ ಅಲ್ಲ. ಅಮೆರಿಕದ ಪ್ರಾತಿನಿಧಿಕ ಸಭೆ (House of Representatives US) ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ, ಜನಸಂಖ್ಯೆಯ ಅಗಾಧ ಹೆಚ್ಚಳದ ಹೊರತಾಗಿಯೂ 435 ಸದಸ್ಯರನ್ನೇ ಹೊಂದಿದೆ (ಕೆಲವು ತಾತ್ಕಾಲಿಕ ಅಪವಾದಗಳು ಇರುವುದೂ ಹೌದು) . ಸ್ವಿಜರ್ಲೆಂಡ್ನ ನ್ಯಾಷನಲ್ ಕೌನ್ಸಿಲ್ 1963ರಿಂದಲೂ 200 ಸದಸ್ಯರನ್ನೇ ಹೊಂದಿದೆ. ಇನ್ನೂ ಮುಂದುವರೆಯುವುದಾದರೆ, ಹಂಗೆರಿ ತನ್ನ ಸಂಸತ್ ಸದಸ್ಯರ ಸಂಖ್ಯೆಯನ್ನು 386 ರಿಂದ 199ಕ್ಕೆ ಇಳಿಸಿದೆ. ಇಟಲಿ ತನ್ನ ಚೇಂಬರ್ ಆಫ್ ಡೆಪ್ಯುಟೀಸ್ ಸದಸ್ಯತ್ವವನ್ನು 630 ರಿಂದ 400ಕ್ಕೆ ಇಳಿಸಿದೆ. ಜನಸಂಖ್ಯೆಯ ವೃದ್ಧಿಯಾದಾಗಲೆಲ್ಲಾ ಶಾಸಕಾಂಗವೂ ವಿಸ್ತರಿಸಬೇಕು ಎಂಬ ಪ್ರಜಾಪ್ರಭುತ್ವೀಯ ಕಾನೂನು ಖಂಡಿತವಾಗಿಯೂ ಇಲ್ಲ.

Siddaramaiah, DK Shivakumar : ಒಂದೇ ವೇದಿಕೆ ಮೇಲೆ ಮಾಜಿ ಸಿಎಂ, ಹಾಲಿ ಸಿಎಂ ಮುಖಾಮುಖಿ ಭೇಟಿ..! #siddaramaiah

ವಿಸ್ತರಿಸಿದ ಸದನ –ದುರ್ಬಲವಾಗುವ ಚರ್ಚೆ
ವಿಶಾಲವಾದ ಸದನವನ್ನು (Larger house) ಹೊಂದಿರುವುದರಿಂದ ಸಂಸತ್ತಿನ ಕಾರ್ಯನಿರ್ವಹಣೆಯ ಮೇಲೆ ಉಂಟಾಗುವ ಪರಿಣಾಮವನ್ನೂ ಸಹ ಕಾಳಜಿಯಿಂದ ಗಮನಿಸಬೇಕಿದೆ. ಸಂಸದರ ಸಂಖ್ಯೆ ಹೆಚ್ಚಾದ ಕಾರಣಕ್ಕೆ ಸಂಸದೀಯ ಸಮಯ (Parliamentary Time) ಹೆಚ್ಚಳವಾಗುವುದಿಲ್ಲ. 543 ಸಂಸದರು ಇರುವಾಗಲೂ ಸಹ ಅನೇಕ ಸಂಸದರಿಗೆ ಮಾತನಾಡಲು, ಪ್ರಶ್ನೆ ಕೇಳಲು, ಸಾರ್ವಜನಿಕ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಲು ಅವಕಾಶ ದೊರೆಯುವುದಿಲ್ಲ. ಶೇಕಡಾ 50ರಷ್ಟು ವಿಸ್ತರಿಸಲ್ಪಟ್ಟ ಲೋಕಸಭೆಯಲ್ಲಿ 800ಕ್ಕೂ ಹೆಚ್ಚು ಸಂಸದರು ಇರುತ್ತಾರೆ. ಅಲ್ಲಿ ಈ ಅವಕಾಶಗಳು ಮತ್ತಷ್ಟು ದುರ್ಲಭವಾಗುತ್ತವೆ. ಸಂಖ್ಯೆಯ ದೃಷ್ಟಿಯಿಂದ ಪ್ರಾತಿನಿಧ್ಯವನ್ನು ಹೆಚ್ಚಿಸಬಹುದು ಆದರೆ ಚರ್ಚೆಯ ಗುಣಮಟ್ಟ ಕುಸಿಯುತ್ತದೆ. ಸಂಸತ್ತಿನ ಬಹುಮುಖ್ಯ ಕಾರ್ಯಗಳಲ್ಲಿ ಗುಣಮಟ್ಟದ ಚರ್ಚೆಯೇ ಪ್ರಮುಖವಾದುದು.

ವಿಶ್ವದ ಇತರ ಪ್ರಜಾಪ್ರಭುತ್ವಗಳಿಗೆ ಹೋಲಿಸಿದರೆ ಭಾರತದ ಸಂಸದರು ಈಗಾಗಲೇ ಅತಿದೊಡ್ಡ ಸರಾಸರಿ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅಮೆರಿಕದ ಪ್ರಾದೇಶಿಕ ಚುನಾವಣಾ ಕ್ಷೇತ್ರ (Congressional District) ಅಥವಾ ಇಂಗ್ಲೆಂಡಿನ ಸಂಸದೀಯ ಕ್ಷೇತ್ರಕ್ಕೆ ಹೋಲಿಸಿದರೆ ಈ ಕ್ಷೇತ್ರಗಳು ಹಲವು ಪಟ್ಟು ದೊಡ್ಡದಾಗಿವೆ. 543 ಸಂಸದರ ಸಂಖ್ಯೆಯ ಮಿತಿಯನ್ನು ಯಥಾಸ್ಥಿತಿಯಲ್ಲಿರಿಸಿ, ಜನಸಂಖ್ಯೆಯೂ ಬೆಳೆಯುತ್ತಿದ್ದರೆ , ಡಿ-ಲಿಮಿಟೇಷನ್ ನಂತರದಲ್ಲೇ ಹೊರೆ ಹೆಚ್ಚಾಗತೊಡಗುತ್ತದೆ. ಹೆಚ್ಚಿನ ಪ್ರತಿನಿಧಿಗಳಿಗೆ ಸಂಪರ್ಕ ಸಾಧ್ಯತೆಯನ್ನು (Accessibility) ಹೆಚ್ಚಿಸುವುದೂ ಸಮಸ್ಯಾತ್ಮಕವಾಗುತ್ತದೆ. ಹೆಚ್ಚುವರಿ ಪ್ರತಿನಿಧಿಗಳು ಸಂಸತ್ತಿನಲ್ಲೇ ಇರಬೇಕು ಎಂದೇನೂ ಇಲ್ಲ. ಬಹುಪಾಲು ನಾಗರಿಕರು ರಸ್ತೆ, ಶಾಲೆ, ಆಸ್ಪತ್ರೆ, ಸ್ಥಳೀಯ ಸೇವೆಗಳು, ರಾಜ್ಯಾಡಳಿತ ಇತ್ಯಾದಿ ಸಮಸ್ಯೆಗಳಿಗಾಗಿ ಶಾಸಕ ಪ್ರತಿನಿಧಿಗಳನ್ನು ಸಂಪರ್ಕಿಸುತ್ತಾರೆ. ಇವೆಲ್ಲವೂ ರಾಜ್ಯಗಳ ಆಂತರಿಕ ಸಮಸ್ಯೆಗಳೇ ಆಗಿರುತ್ತವೆ ಈ ದೃಷ್ಟಿಯಿಂದ ನೋಡಿದಾಗ ರಾಜ್ಯಗಳಲ್ಲಿ ಜನಸಂಖ್ಯೆಯ ಹೆಚ್ಚಳವಾಗಿ, ಕ್ಷೇತ್ರಗಳು ಅಸ್ತವ್ಯಸ್ತವಾಗಿದ್ದರೆ ರಾಜ್ಯಮಟ್ಟದಲ್ಲಿ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ವಿವೇಕಯುತ ಕ್ರಮ. ಚಿಕ್ಕ ಕ್ಷೇತ್ರಗಳು ಮತ್ತು ಹೆಚ್ಚಿನ ಶಾಸಕರು ಇರುವುದರಿಂದ ಪ್ರತಿನಿಧಿಗಳು ನಾಗರಿಕರಿಗೆ ನಿಕಟವಾಗುತ್ತಾರೆ, ಇದರಿಂದ ರಾಷ್ಟ್ರೀಯ ಶಾಸಕಾಂಗವನ್ನು ನಿರಂತರವಾಗಿ ವಿಸ್ತರಿಸುವ ಅವಶ್ಯಕತೆಯೂ ಉದ್ಭವಿಸುವುದಿಲ್ಲ.

ಈ ರೀತಿಯ ವಿಸ್ತರಣೆಯಿಂದ, ಲೋಕಸಭೆಯ ವಿಸ್ತರಣೆಯಿಂದ ಉಂಟಾಗುವ ಒಕ್ಕೂಟ ವ್ಯವಸ್ಥೆಯ ನಿರ್ಬಂಧಗಳೂ ಹೆಚ್ಚಾಗುವುದಿಲ್ಲ. ವಿಧಾನಸಭಾ ಕ್ಷೇತ್ರಗಳು ದೊಡ್ಡದಾಗಿದ್ದರೂ ರಾಜ್ಯಗಳ ನಡುವಿನ ಸಮತೋಲನದಲ್ಲಿ ವ್ಯತ್ಯಯವಾಗುವುದಿಲ್ಲ. ಏಕೆಂದರೆ ಪ್ರತಿಯೊಂದು ಕ್ಷೇತ್ರವೂ ತನ್ನ ವ್ಯಾಪ್ತಿಯೊಳಗಿನ ಜನತೆಯನ್ನಷ್ಟೇ ಪ್ರತಿನಿಧಿಸುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಸಂಪರ್ಕ ಸಾಧ್ಯತೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಧಾನಸಭೆಗಳ ವಿಸ್ತರಣೆ ಉಪಯುಕ್ತವಾಗುತ್ತದೆ, ಇದರಿಂದ ಸಂಸತ್ತಿನಲ್ಲಿ ಅಂತಾರಾಜ್ಯ ಸಮತೋಲನವೂ ಬಾಧಿತವಾಗುವುದಿಲ್ಲ. 1976ರಲ್ಲಿ ಮಿತಿಯನ್ನು ನಿಗದಿಪಡಿಸಿದ್ದು ಈ ದೃಷ್ಟಿಯಿಂದಲೇ. ಈಗ ಮಹಿಳಾ ಮೀಸಲಾತಿಯ ಪ್ರಶ್ನೆ ಮುನ್ನಲೆಗೆ ಬರುತ್ತದೆ. ಮಹಿಳೆಯರಿಗೆ ಮೂರನೆ ಒಂದರಷ್ಟು ಸ್ಥಾನಗಳನ್ನು ಮೀಸಲಾತಿ ನೀಡುವ ಪ್ರಕ್ರಿಯೆಯನ್ನು ಡಿ-ಲಿಮಿಟೇಷನ್ಗೆ ತಳಕುಹಾಕಲಾಗುತ್ತಿದೆ. ಚಾಲ್ತಿಯಲ್ಲಿರುವ ರಾಜಕೀಯ ಹಿತಾಸಕ್ತಿಗಳಿಗೆ ವ್ಯತ್ಯಯವಾಗದೆ ಮಹಿಳೆಯರಿಗೂ ಅವಕಾಶ ಹೆಚ್ಚಿಸುವ ಒಂದು ಮಾರ್ಗವಾಗಿ ಲೋಕಸಭೆಯ ವಿಸ್ತರಣೆಯನ್ನು ಮುಂದಿಡಲಾಗುತ್ತಿದೆ.

Madhu Bangarappa :  ನಿಮ್ಮ ಅಪ್ಪ ಜೈಲ್‌ಗೆ ಹೋಗಿದ್ದು..  #pratidhvani

ಆದರೆ ಸಂಸತ್ತಿನ ವಿಸ್ತರಣೆಗೆ ಮಹಿಳೆಯರ ಪ್ರಾತಿನಿಧ್ಯವನ್ನು ಸಾಂವಿಧಾನಿಕ ಸಮರ್ಥನೆಯಾಗಿ ಬಳಸಿಕೊಳ್ಳಬೇಕಿಲ್ಲ. ಹಾಲಿ ಲೋಕಸಭೆಯಲ್ಲಿ ಮೂರನೆ ಒಂದರಷ್ಟು ಸ್ಥಾನಗಳು ಎಂದರೆ 181. ಈಗಿರುವ 543 ಸಂಸದರ ಸಂಖ್ಯೆಯಲ್ಲೇ ಮಹಿಳೆಯರಿಗೆ ನೀಡಿರುವ ಸಾಂವಿಧಾನಿಕ ಪ್ರಾತಿನಿಧ್ಯದ ಭರವಸೆಯನ್ನು ಈಡೇರಿಸಬಹುದು. ಮೀಸಲಾತಿಯ ಉದ್ದೇಶ ಸಂಸದೀಯ ಸ್ಥಾನಗಳನ್ನು ಯಾರು ವಹಿಸಿಕೊಳ್ಳುತ್ತಾರೆ ಎಂದು ನಿರ್ಧರಿಸುವುದೇ ಹೊರತು ಹೆಚ್ಚುವರಿಯಾಗಿ ನೂರು ಸ್ಥಾನಗಳನ್ನು ಸೃಷ್ಟಿಸುವುದಲ್ಲ. ಶೇಕಡಾ 50ರಷ್ಟು ವಿಸ್ತರಣೆಯಿಂದ ಕುತೂಹಲಕಾರಿ ಬೆಳವಣಿಗೆಯನ್ನು ಕಾಣಬಹುದು. ಮಹಿಳಾ ಸಂಸದರ ಸಂಖ್ಯೆ ಹೆಚ್ಚಾಗುತ್ತದೆ, ಇದು ಅಪೇಕ್ಷಣೀಯವೇ. ಆದರೆ ಈಗಾಗಲೇ ಇರುವ ದೊಡ್ಡ ರಾಜ್ಯಗಳ ಸಂಖ್ಯಾ ಪ್ರಾಬಲ್ಯವೂ ಹೆಚ್ಚಾಗುತ್ತದೆ. ಒಂದು ಪ್ರಾತಿನಿಧಿಕ ಅಸಮತೋಲನವನ್ನು ಸರಿಪಡಿಸುವ ಉದ್ದೇಶವುಳ್ಳ ಸುಧಾರಣಾ ಕ್ರಮ ಮತ್ತೊಂದು ಅಸಮತೋಲನವನ್ನು ಇನ್ನೂ ತೀವ್ರವಾಗಿಸುತ್ತದೆ. ಮಹಿಳಾ ಪ್ರಾತಿನಿಧ್ಯ ಮತ್ತು ಒಕ್ಕೂಟ ನ್ಯಾಯ ಎರಡೂ ಸಹ ನ್ಯಾಯಯುತವಾದ ಸಾಂವಿಧಾನಿಕ ಧ್ಯೇಯಗಳು. ಇವೆರಡರ ನಡುವೆ ಆಯ್ಕೆ ಮಾಡುವ ಅಗತ್ಯತೆ ಭಾರತಕ್ಕೆ ಇಲ್ಲ.

543- ಉಳಿಸಿಕೊಂಡು ಸುಧಾರಣೆಗಳು ಅಗತ್ಯ
ಇಲ್ಲಿ ಸರಳವಾದ ಪರಿಹಾರ ಇದೆ. ಲೋಕಸಭಾ ಸದಸ್ಯತ್ವವನ್ನು 543ರಲ್ಲೇ ಉಳಿಸಿಕೊಳ್ಳಬೇಕು. ಪ್ರಸ್ತುತ ಜಾರಿಯಲ್ಲಿರುವ ಅಂತಾರಾಜ್ಯ ಸ್ಥಾನ ವಿತರಣೆಯನ್ನು (Inter-state seat Distribution) ಯಥಾವತ್ತಾಗಿ ಉಳಿಸಿಕೊಳ್ಳಬೇಕು. ನವೀಕೃತ (Updated) ಜನಸಂಖ್ಯಾ ಅಂಕಿಸಂಖ್ಯೆಗಳನ್ನಾಧರಿಸಿ ರಾಜ್ಯಗಳಲ್ಲಿ ಆಂತರಿಕ ಡಿ-ಲಿಮಿಟೇಷನ್ ನಡೆಸಬೇಕು. ಈ ಚೌಕಟ್ಟಿನ ಒಳಗೇ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು. ಜನಸಂಖ್ಯೆಯ ಹೆಚ್ಚಳದಿಂದ ಉಂಟಾಗಿರುವ ಸಂಪರ್ಕ ಸಾಧ್ಯತೆಯ ಒತ್ತಡವನ್ನು (Accessbility Pressures) ನಿಭಾಯಿಸಲು ಸೂಕ್ತವಾಗಿ ವಿಧಾನಸಭೆಯನ್ನು ವಿಸ್ತರಿಸಬೇಕು.

Satish Jarkiholi on Siddaramaiah : ಡಿಕೆ ಶಿವಕುಮಾರ್ ಸರ್ಕಾರಕ್ಕೆ ಡಿಸ್ಟರ್ಬ್ ಆಗೋ ಪ್ರಶ್ನೆಯೇ ಉದ್ಭವಿಸುವುದಿಲ್ಲ

ಅರ್ಧ ಶತಮಾನಕ್ಕೂ ಹೆಚ್ಚು ಕಾಲ ರಾಜ್ಯಗಳು ಜನಸಂಖ್ಯಾ ನೀತಿಗಳನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸಿರುವುದು, ಯಶಸ್ವಿಯಾದ ಜನಸಂಖ್ಯಾ ಸ್ಥಿರೀಕರಣದಿಂದ (Population Stabilisation) ತಮ್ಮ ಸಂಸದೀಯ ಪ್ರಭಾವ ಕಡಿಮೆಯಾಗುವುದಿಲ್ಲ ಎಂಬ ನಂಬಿಕೆಯ ಮೇಲೆ. ವಿಶೇಷವಾಗಿ ದಕ್ಷಿಣ ರಾಜ್ಯಗಳು ಶಿಕ್ಷಣ, ಆರೋಗ್ಯ ಸೇವೆ ಮತ್ತು ಕುಟುಂಬ ಕಲ್ಯಾಣ ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಿ, ರಾಷ್ಟ್ರೀಯ ನೀತಿಯ ಅನುಸಾರವೇ ಉತ್ತೇಜಿಸಲಾಗಿರುವ ಫಲವಂತಿಕೆಯ ಮಟ್ಟವನ್ನು ಕಾಪಾಡಿಕೊಂಡಿವೆ. ಈ ಯಶಸ್ಸಿಗೆ ಮನ್ನಣೆ ನೀಡದೆ ಜನಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳವಾದ ರಾಜ್ಯಗಳಿಗೆ ರಾಜಕೀಯ ಲಾಭ ಒದಗಿಸುವುದು , ಕೇಂದ್ರ ಸರ್ಕಾರವೇ ಸೃಷ್ಟಿಸಿರುವ ಉತ್ತೇಜನವನ್ನು ತಲೆಕೆಳಗು ಮಾಡಿದಂತಾಗುತ್ತದೆ.

ಹಾಗಾಗಿ ಇಲ್ಲಿ ಪ್ರಶ್ನೆ ಜನಸಂಖ್ಯೆ ನಿರ್ಣಾಯಕವಾಗಬೇಕೋ ಬೇಡವೋ ಎನ್ನುವುದಲ್ಲ. ಇದು ಖಂಡಿತವಾಗಿಯೂ ಮುಖ್ಯವಾಗಬೇಕು. ಆದರೆ ಪ್ರಶ್ನೆ ಇರುವುದು, ಐದು ದಶಕಗಳ ಕಾಲ ಭಾರತ ಪ್ರಜ್ಞಾಪೂರ್ವಕವಾಗಿ ಕಾಪಾಡಿಕೊಂಡು ಬಂದಿರುವ ಒಕ್ಕೂಟದ ಸಮತೋಲನವನ್ನು ಈಗ ಮರುಹೊಂದಿಸುವ ಅವಶ್ಯಕತೆ ಇದೆಯೇ ? ಈ ಹಿಂದೆ ಎರಡು ಬಾರಿ ಸಂಸತ್ತು, ಜನಸಂಖ್ಯೆಯ ಹೆಚ್ಚಳವಾಗಿದ್ದರೂ ಸಹ ಅಂತಾರಾಜ್ಯ ಸ್ಥಾನ ವಿತರಣೆಯನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಳ್ಳಲು ಸಾಂವಿಧಾನಿಕ ತಿದ್ದುಪಡಿ ಮಾಡಿದೆ. ಮೂರನೆಯ ಬಾರಿ ಇದೇ ಕ್ರಮ ಕೈಗೊಳ್ಳಲು ನಿರಾಕರಿಸುವುದಕ್ಕೆ ಯಾವುದೇ ಅಡ್ಡಿಯಿಲ್ಲ ಸಂಸತ್ ಅಧಿವೇಶನವನ್ನು ಪುನಃ ಅಯೋಜಿಸಬಹುದೇ ಎನ್ನುವ ಅನಿಶ್ಚಿತತೆ ಇದನ್ನು ಕೇವಲ ಅಕಾಡೆಮಿಕ್ ಚರ್ಚೆಯಾಗಿಸುತ್ತದೆ. ಇಂದು ಕೈಗೊಳ್ಳುವ ನಿರ್ಧಾರ ಗಣತಂತ್ರದ ಒಕ್ಕೂಟ ಸಮತೋಲನವನ್ನು ಮುಂದಿನ ಹಲವು ದಶಕಗಳ ಕಾಲ ಪುನಾರಚನೆ ಮಾಡಬಹುದು.

Gali Janardhan Reddy on Nagendra : ನಾಗೇಂದ್ರ ಹೇಳಿಕೆಗೆ ಜನಾರ್ದನ ರೆಡ್ಡಿ  ಸವಾಲ್‌..! #bnagendra

ಡಿ-ಲಿಮಿಟೇಷನ್ ಅಗತ್ಯ. ಮಹಿಳಾ ಪ್ರಾತಿನಿಧ್ಯ ಎಂದೋ ಆಗಬೇಕಿದ್ದ ಬಾಕಿ ಇರುವ ಕ್ರಮ ಕ್ಷೇತ್ರದ ಗಡಿಗಳ ಪುನರ್ ನವೀಕರಣ ಅಪೇಕ್ಷಣೀಯ ಆದರೆ ಈ ಯಾವುದೇ ಉದ್ದೇಶಗಳನ್ನು ಸಾಧಿಸುವುದಕ್ಕೂ ಲೋಕಸಭೆಯಲ್ಲಿ 800ಕ್ಕೂ ಹೆಚ್ಚು ಸದಸ್ಯತ್ವ ಇರಬೇಕಿಲ್ಲ.
ಕೆಲವೊಮ್ಮೆ ಸಾಂವಿಧಾನಿಕ ವಿವೇಕವನ್ನು (Constitutional Wisdom) ಸಂಸ್ಥೆಗಳ ವಿಸ್ತರಣೆಯಲ್ಲಿ ಕಾಣುವುದಕ್ಕಿಂತಲೂ ಹೆಚ್ಚಾಗಿ, ಸಂಸ್ಥೆಯ ದೀರ್ಘಕಾಲ ಬಾಳಿಕೆಗೆ ಕಾರಣವಾಗಿರುವ ಸಮತೋಲನವನ್ನು ಕಾಪಾಡುವಲ್ಲಿ ಕಾಣಲು ಸಾಧ್ಯ. 543 ಕ್ಷೇತ್ರಗಳು ಭಾರತವನ್ನು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕಾಪಾಡಿದೆ. ಈ ಸಂಖ್ಯೆಯನ್ನು ಅದೇ ಸ್ಥಿತಿಯಲ್ಲಿ ಉಳಿಸಿಕೊಳ್ಳಲು ಸಾಂವಿಧಾನಿಕವಾದ, ಒಕ್ಕೂಟ ವ್ಯವಸ್ಥೆಯ , ಪ್ರಜಾಸತ್ತಾತ್ಮಕವಾದ ಬಲವಾದ ಕಾರಣಗಳಿವೆ.
( ಮೂಲ ಲೇಖಕರು ಮಾಜಿ ಭಾರತೀಯ ಮುಖ್ಯ ಚುನಾವಣಾ ಆಯುಕ್ತರು )

-೦-೦-೦-೦-೦-

Previous Post

ಗೃಹಲಕ್ಷ್ಮಿಗೆ ಮೂರು ವರ್ಷ: ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ ರಾಜ್ಯದ ಪ್ರಸಿದ್ಧ ತಾಣಗಳು

Next Post

2026ಕ್ಕೂ ಮುನ್ನ ನಿವೃತ್ತರಾದವರಿಗೆ ಪಿಂಚಣಿ ಹೆಚ್ಚಳ ಸಿಗುತ್ತಾ? ಇಲ್ಲಿದೆ ಕೇಂದ್ರದ ಉತ್ತರ

Related Posts

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ
Top Story

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ

by ಪ್ರತಿಧ್ವನಿ
August 31, 2026
0

ಪ್ಯಾಕೆಟ್ ಆಹಾರ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು ಅಥವಾ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಿದ್ದರೆ, ಗ್ರಾಹಕರಿಗೆ ಸುಲಭವಾಗಿ ತಿಳಿಯುವಂತೆ ಪ್ಯಾಕೆಟ್‌ನ ಮುಂಭಾಗದಲ್ಲೇ ಕೆಂಪು ಬಣ್ಣದ ಎಚ್ಚರಿಕೆ ಲೇಬಲ್ ಅಳವಡಿಸುವ...

Read moreDetails
ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

August 31, 2026
ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

August 31, 2026
ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

August 31, 2026
ನಮ್ಮ ವಿರುದ್ಧ ಅಲ್ಲ..ಬಿಜೆಪಿ ವಿರುದ್ಧ ಕುಮಾರಸ್ವಾಮಿ ಹೋರಾಟ: ಸಿಎಂ ಡಿ.ಕೆ ಶಿವಕುಮಾರ್

ನಮ್ಮ ವಿರುದ್ಧ ಅಲ್ಲ..ಬಿಜೆಪಿ ವಿರುದ್ಧ ಕುಮಾರಸ್ವಾಮಿ ಹೋರಾಟ: ಸಿಎಂ ಡಿ.ಕೆ ಶಿವಕುಮಾರ್

August 31, 2026
Next Post
2026ಕ್ಕೂ ಮುನ್ನ ನಿವೃತ್ತರಾದವರಿಗೆ ಪಿಂಚಣಿ ಹೆಚ್ಚಳ ಸಿಗುತ್ತಾ? ಇಲ್ಲಿದೆ ಕೇಂದ್ರದ ಉತ್ತರ

2026ಕ್ಕೂ ಮುನ್ನ ನಿವೃತ್ತರಾದವರಿಗೆ ಪಿಂಚಣಿ ಹೆಚ್ಚಳ ಸಿಗುತ್ತಾ? ಇಲ್ಲಿದೆ ಕೇಂದ್ರದ ಉತ್ತರ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada