• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇತರೆ / Others

ದೇವಸ್ಥಾನದ ಹಣ ಹಜ್​ ಯಾತ್ರೆಗೆ ಹೋಗಲ್ಲ.. ಕಾಂಗ್ರೆಸ್​ನಿಂದ ಮಹತ್ವದ ನಿರ್ಧಾರ..!

ಕೃಷ್ಣ ಮಣಿ by ಕೃಷ್ಣ ಮಣಿ
September 17, 2023
in ಇತರೆ / Others, ಇದೀಗ, ಕರ್ನಾಟಕ, ರಾಜಕೀಯ
0
ದೇವಸ್ಥಾನದ ಹಣ ಹಜ್​ ಯಾತ್ರೆಗೆ ಹೋಗಲ್ಲ.. ಕಾಂಗ್ರೆಸ್​ನಿಂದ ಮಹತ್ವದ ನಿರ್ಧಾರ..!
Share on WhatsAppShare on FacebookShare on Telegram

ರಾಜ್ಯದಲ್ಲಿ ಸಾಕಷ್ಟು ಹಿಂದುತ್ವವಾದಿಗಲ ಒಂದು ಪ್ರಮುಕ ಏನಾಗಿತ್ತು ಎಂದರೆ ಕಾಂಗ್ರೆಸ್​ ಸರ್ಕಾರ ಬಂದಾಗ ಹಜ್​ ಯಾತ್ರೆಗೆ ಸಾಕಷ್ಟು ಹಣವನ್ನು ನಿಡಲಾಗುತ್ತದೆ. ಅದು ಮುಜರಾಯಿ ಇಲಾಖೆಯ ಹಣವನ್ನು ಬಳಸಿಕೊಂಡು ಮುಸ್ಲಿಂ ಸಮುದಾಯದ ಜನರ ಯಾತ್ರೆಗೆ ಸಹಾಯಧನ ಕೊಡುತ್ತೆ ಎಂದು ದೂರಲಾಗ್ತಿತ್ತು. ಆದರೆ ಬಿಜೆಪಿ ಅಥವಾ ಇತರೆ ಪಕ್ಷಗಳು ಊಹೆ ಮಾಡಿಕೊಳ್ಳಲು ಸಾಧ್ಯವಾಗದಂತ ನಿರ್ಧಾರವನ್ನು ಕಾಂಗ್ರೆಸ್​ ಸರ್ಕಾರ ಘೋಷಣೆ ಮಾಡಿದ್ದು, ಇನ್ಮುಂದೆ ಸುಖಾಸುಮ್ಮನೆ ಆರೋಪ ಮಾಡದಂತೆ ಮಾಡಲಾಗಿದೆ.

ADVERTISEMENT

ಇನ್ಮುಂದೆ ಹುಂಡಿ ಹಣ ದೇವಸ್ಥಾನದ ಅಭಿವೃದ್ಧಿಗೆ ಬಳಕೆ..!

ರಾಜ್ಯದ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಸಂಗ್ರಹವಾಗುವ ಹಣವನ್ನು ಮುಜರಾಯಿ ಇಲಾಖೆ ತೆಗೆದುಕೊಂಡು ಖರ್ಚು ವೆಚ್ಚ ಮಾಡುವ ನಿಯಮ ಬದಲಾವಣೆ ಮಾಡಿದ್ದು, ಇನ್ಮುಂದೆ ದೇಗುಲದ ಹುಂಡಿ ಹಣ ಅದೇ ದೇವಾಲಯದ ಅಭಿವೃದ್ಧಿಗಾಗಿ ಬಳಕೆ ಮಾಡಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ. ಮುಜರಾಯಿ ಇಲಾಖೆ ವ್ಯಾಪ್ತಿಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಈ ನಿರ್ಧಾರ ಹೊರ ಬಿದ್ದಿದೆ. ಜೊತೆಗೆ ಎಲ್ಲರಿಗೂ ಕಾಣುವಂತೆ ಹುಂಡಿ ಇಡುವುದು ಕಡ್ಡಾಯ, ಹುಂಡಿಗೆ ಬಂದ ಹಣದಲ್ಲಿ ದೇವಾಲಯದ ಅಭಿವೃದ್ಧಿಗೆ‌ ವ್ಯಯ ಮಾಡಲಾಗುವುದು ಎಂದಿದ್ದಾರೆ.

ತಟ್ಟೆ ಕಾಸು ನೇರವಾಗಿ ಅರ್ಚಕರಿಗೆ ಸಿಗಲಿ ಎಂದ ಸರ್ಕಾರ..!

ಸಾಕಷ್ಟು ದೇಗುಲಗಳಲ್ಲಿ ದೇವಸ್ಥಾನ ಹುಂಡಿ ಕಾಸು ಸರ್ಕಾರಕ್ಕೆ ಹೋಗುತ್ತದೆ. ತಟ್ಟೆಗೆ ಹಾಕುವ ಮಂಗಳಾರತಿ ಹಣ ದೇವರ ಸೇವೆ ಮಾಡುವ ನಮಗೆ ಬರುತ್ತದೆ. ನಾವು ದೇವರ ಸೇವೆ ಮಾಡಿಕೊಂಡು ಹೋಗುತ್ತೇವೆ ಎಂದು ಅರ್ಚಕರು ಹೇಳುತ್ತಿದ್ದರು. ಕೆಲವು ಕಡೆ ಹುಂಡಿಯನ್ನೇ ಎತ್ತಿ ಆಚೆಗೆ ಹಾಕುವ ಕೆಲಸವೂ ನಡೆದಿತ್ತು. ಇದೀಗ ಸರ್ಕಾರ ತಸ್ತಿಕ್ ಹಣ (ತಟ್ಟೆಗೆ ಬೀಳುವ ಹಣ)ವನ್ನು ನೇರವಾಗಿ ಅರ್ಚಕರಿಗೆ ತಲುಪುವ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ. ರಾಜ್ಯದ ಎಲ್ಲ ದೇವಾಲಯಗಳಲ್ಲಿ ಭಕ್ತರು ಮೊಬೈಲ್ ಬಳಕೆ ನಿಷೇಧ ಮಾಡಲು ನಿರ್ಧಾರ ಮಾಡಲಾಗಿದ್ದು, ಪ್ರಮುಖ ದೇಗುಲಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಲಾಗಿದೆ.

ಗ್ರೇಡ್​ ಮೇಲೆ ದೇವಸ್ಥಾನಗಳ ಅಭಿವೃದ್ಧಿಗೆ ಸಚಿವರ ಆದೇಶ

ರಾಜ್ಯದಲ್ಲಿ ಇರುವ ದೇವಾಲಯಗಳನ್ನು A,B,C & D ಎಂದು ವಿಂಗಡಣೆ ಮಾಡಲಾಗಿದ್ದು, ಮೊದಲಿಗೆ A ಮತ್ತು B ದರ್ಜೆಯ ಎಲ್ಲ ದೇವಸ್ಥಾನಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸುವಂತೆ ಸಚಿವರು ತಿಳಿಸಿದ್ದಾರೆ. ಇನ್ನು ಪ್ರಮುಖ ದೇಗುಲಗಳಲ್ಲಿ ಆನ್​ಲೈನ್ ಸೇವೆಗಾಗಿ ಶೀಘ್ರದಲ್ಲಿ ಆ್ಯಪ್ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ದೇವಸ್ಥಾನಗಳಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ದೇವಾಲಯದ ಆವರಣ ಸ್ವಚ್ಚವಾಗಿ‌ ಇಡುವುದು ಕಡ್ಡಾಯ. ಶೌಚಾಲಯಕ್ಕೆ ಹೋಗುವ ಭಕ್ತರಿಂದ ಹಣ ತೆಗೆದುಕೊಳ್ಳುವಂತಿಲ್ಲ. ದೇವಾಲಯದ ಆವರಣದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಅಂಗಡಿ ತೆರೆಯುವಂತಿಲ್ಲ ಎಂದು ಸರ್ಕಾರ ತಿಳಿಸಿದೆ. ಒಟ್ಟಾರೆ, ದೇವಸ್ಥಾನದಲ್ಲಿ ಬೀಳುವ ಕಾಣಿಕೆ ಹಣ ಅದೇ ದೇವಸ್ಥಾನದ ಅಬಿವೃದ್ಧಿಗೆ ಬಳಕೆ ಎಂದಿರುವುದು ಬಹುದೊಡ್ಡ ನಿರ್ಧಾರ ಅಂತಾನೇ ಹೇಳಬಹುದು.

ಕೃಷ್ಣಮಣಿ

Tags: KarnatakaTempleZameer Ahmed Khan
Previous Post

ಬಿಜೆಪಿ ಸೋಲನ್ನಪ್ಪಲು ಕಾರಣವಾಯ್ತಾ ಟಿಕೆಟ್​ ಮಾರಾಟ.. ಒಂದೊಂದೇ ರಹಸ್ಯ ರಿಲೀಸ್​..

Next Post

ಅಂಕಣ | ಬಾಹ್ಯಾಕಾಶ ನಡಿಗೆಯಲ್ಲಿ ಮಹಿಳೆಯರ ಹೆಗ್ಗುರುತುಗಳು – ಭಾಗ 8

Related Posts

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ
ರಾಜಕೀಯ

ರಾಘವ್ ಚಡ್ಡಾ ರಾಜಕೀಯ ತಿರುವು: ಪಕ್ಷ ತೊರೆಯುವ ನಿರ್ಧಾರಕ್ಕೆ ರಾಷ್ಟ್ರ ರಾಜಕೀಯದಲ್ಲಿ ಚರ್ಚೆ

by ಪ್ರತಿಧ್ವನಿ
April 25, 2026
0

ನವದೆಹಲಿ: ದೇಶದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಬೆಳವಣಿಗೆಯೊಂದರಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ರಾಘವ ಚಡ್ಡಾ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿರುವುದು ಮಹತ್ವದ ರಾಜಕೀಯ...

Read moreDetails
ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಒಳ ಮೀಸಲಾತಿ ಹಂಚಿಕೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

April 24, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
Next Post
ಅಂಕಣ | ಬಾಹ್ಯಾಕಾಶ ನಡಿಗೆಯಲ್ಲಿ ಮಹಿಳೆಯರ ಹೆಗ್ಗುರುತುಗಳು – ಭಾಗ 8

ಅಂಕಣ | ಬಾಹ್ಯಾಕಾಶ ನಡಿಗೆಯಲ್ಲಿ ಮಹಿಳೆಯರ ಹೆಗ್ಗುರುತುಗಳು - ಭಾಗ 8

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada