• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಭಾರತದ ಆರ್ಥಿಕತೆ ವಿಚಾರದಲ್ಲಿ ನಾಯಕರ ಕೀಳುಮಟ್ಟದ ವ್ಯಂಗ್ಯ..!

Any Mind by Any Mind
November 8, 2023
in ಕರ್ನಾಟಕ
0
ಭಾರತದ ಆರ್ಥಿಕತೆ ವಿಚಾರದಲ್ಲಿ ನಾಯಕರ ಕೀಳುಮಟ್ಟದ ವ್ಯಂಗ್ಯ..!
Share on WhatsAppShare on FacebookShare on Telegram

ADVERTISEMENT

ಭಾರತದ ಆರ್ಥಿಕತೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಹಾಗು ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯಭರಿತ ಮಾತುಗಳಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ. ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಏನಾಗಿತ್ತು, ಯಾವ ಮಟ್ಟದಲ್ಲಿತ್ತು..? ಅದಕ್ಕಿಂತಲೂ ಈಗ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಭಾರತದ ರೂಪಾಯಿ ಮೌಲ್ಯ ಉತ್ತಮವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಎಕ್ಸ್‌ (Twitter) ನಲ್ಲಿ ಪೋಸ್ಟ್‌ ಮಾಡಿದ್ದರು. ಇಷ್ಟನ್ನೇ ಮಾಡಿದ್ದರೆ ಗೌರವಯುತ ಚರ್ಚೆ ಆಗುತ್ತಿತ್ತು. ಆದರೆ ಮಿಸ್ಟರ್‌ ಟ್ರೋಲ್‌ ಮಿನಿಸ್ಟರ್‌ ಎನ್ನುವ ಮೂಲಕ ಚರ್ಚೆಯ ಕಾವು ಏರುವಂತೆ ಮಾಡಿದ್ದು, ಪ್ರಿಯಾಂಕ್ ಖರ್ಗೆ ಅವರನ್ನು ಕೆರಳಿಸಿದೆ.

ಅಸಲಿಗೆ ತೇಜಸ್ವಿ ಸೂರ್ಯ ಆರೋಪ ಏನು..?

ಯುಪಿಎ ಅವಧಿಯಲ್ಲಿ ವಿಫಲ ಹಣಕಾಸು ನೀತಿಗಳು ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ಶೇ. 50.67 ರಷ್ಟು ಕುಸಿದಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಸೆಪ್ಟೆಂಬರ್ 2013ರಲ್ಲಿ ನರೇಂದ್ರ ಮೋದಿ ಅವರ ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ತಕ್ಷಣ, ರೂಪಾಯಿ ಮೌಲ್ಯ ಚೇತರಿಕೆ ಕಾಣುವುದಕ್ಕೆ ಶುರುವಾಯ್ತು. ಸದ್ಯ ಜಾಗತಿಕವಾಗಿ ಕೋವಿಡ್-19 ಮತ್ತು ಯುದ್ಧಗಳ ಪರಿಣಾಮದ ನಡುವೆಯೂ ಮಾರ್ಚ್ 2020 ರಿಂದ ಫೆಬ್ರವರಿ 2022ರ ನಡುವೆ ಡಾಲರ್‌ ವಿರುದ್ಧ ಭಾರತೀಯ ರೂಪಾಯಿ ಶೇ. 2.48 ರಷ್ಟು ಬೆಳೆದಿದೆ. ನಿಮ್ಮ ಸರ್ಕಾರ ಎಂದಿಗೂ ಇದನ್ನು ಸಾಧಿಸಲು ಆಗಿಲ್ಲ ಅಲ್ಲವೇ ಎಂದು ಕುಟುಕಿದ್ದರು.

ಸಚಿವ ಪ್ರಿಯಾಂಕ್‌ ಖರ್ಗೆ ಕೊಟ್ಟ ಕೌಂಟರ್‌ ಏನು..?

‘ಮಿಸ್ಟರ್‌ ಟ್ರೋಲ್‌ ಮಿನಿಸ್ಟರ್‌’ ಎನ್ನುವ ವ್ಯಂಗ್ಯಕ್ಕೆ ನೇರವಾಗಿಯೇ ಚಾಟಿ ಬೀಸಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಹೋಲ್ಡ್‌ ಆನ್‌.. ತಪ್ಪಿಸಿಕೊಳ್ಳಲು ತುರ್ತು ಬಾಗಿಲು ತೆರೆಯಬೇಡಿ ಎನ್ನುವ ಮೂಲಕ ವಿಮಾನದಲ್ಲಿ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ ಘಟನೆಯನ್ನು ನೆನಪಿಸಿ ವ್ಯಂಗ್ಯ ಮಾಡಿದ್ದಾರೆ. ಆ ಬಳಿಕ ನಾನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮಾತಿನಿಂದಲೇ ಪ್ರಾರಂಭ ಮಾಡ್ತಾರೆ. ನಿರ್ಮಲಾ ಮೇಡಂ ಹೇಳಿದ್ದರು, ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿಲ್ಲ ಬದಲಿಗೆ ಡಾಲರ್‌ ಮೌಲ್ಯ ವೃದ್ಧಿಯಾಗುತ್ತಿದೆ. ನೀವು ಕೊಟ್ಟಿರುವ ದಾಖಲೆಗಳೇ ಹೇಳುತ್ತಿವೆ. ಯುಪಿಎ ಸರ್ಕಾರದಲ್ಲಿ ಶೇ.29.11ರಷ್ಟು ಕುಸಿತ ಕಂಡಿದ್ದ ರುಪಾಯಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಶೇ. 42.12ರಷ್ಟು ಕುಸಿತ ಕಂಡಿದೆ ಎಂದಿದೆ ಎಂದಿದ್ದಾರೆ.

ಮೋದಿ ಪ್ರಧಾನಿ ಅಭ್ಯರ್ಥಿ ಎಂದಾಗ ರೂಪಾಯಿ ಚೇತರಿಕೆ..!?

2013ರಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಕೂಡಲೇ ರೂಪಾಯಿ ಮೌಲ್ಯ ಚೇತರಿಕೆ ಕಂಡಿತು ಎನ್ನುವ ನಿಮ್ಮ ವಾದ ಮೂರ್ಖತನದಿಂದ ಕೂಡಿದೆ ಎಂದಿರುವ ಪ್ರಿಯಾಂಕ್‌ ಖರ್ಗೆ, ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಕೂಡಲೇ ರೂಪಾಯಿ ಮೌಲ್ಯ ಜಿಗಿತ ಕಂಡಿತು ಎನ್ನುವ ಮಾತು ನಗೆಪಾಟಲಿಗೆ ಈಡಾಗುತ್ತದೆ. ಇದು ನಿಮ್ಮ ವಾಟ್ಸಾಪ್ ಯೂನಿವರ್ಸಿಟಿಯಿಂದ ಹೊರಬಂದ ವಿಶ್ಲೇಷಣೆ ಎನ್ನುವುದಕ್ಕೆ ಸೂಕ್ತ ಉದಾಹರಣೆ ಎಂದಿದ್ದಾರೆ. ಅಂದು ಹಣಕಾಸು ಸ್ಥಿತಿ ಸುಧಾರಿಸಲು ಕಾರಣವಾಗಿದ್ದು, ಅಂದಿನ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರು ತೆಗೆದುಕೊಂಡ ನಿಲುವಾಗಿತ್ತು. ರಘುರಾಮ್‌ ರಾಜನ್‌ ಅವರನ್ನು RBI ಗೌವರ್ನರ್‌ ಮಾಡಿದ್ದೂ ಒಂದು ಕಾರಣ. ಆದರೆ ನೀವು ಯಾವುದೇ ಕಾರಣ ಇಲ್ಲದೆ ರಘುರಾಮ್‌ ರಾಜನ್‌ ಅವರನ್ನು ತೆಗೆದುಬಿಟ್ರಿ ಎಂದು ತಿರುಗೇಟು ನೀಡಿದ್ದಾರೆ. ಸಾಧ್ಯವಾದರೆ ಎರಡು ಮಾಧ್ಯಮ ವರದಿಗಳನ್ನು ಓದಿ ಎಂದು ಆನ್‌ಲೈನ್‌ ತಾಣದ ಲಿಂಕ್‌ ಹಾಕಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕಾಂಗ್ರೆಸ್‌ನಲ್ಲಿ ‘ಅಧಿಕಾರದ ಬೆಂಕಿ’ ಹಚ್ಚುವ ಪ್ರಯತ್ನ ನಡೆದಿದ್ಯಾ..?

Next Post

ಭಾರತ್ ಜೋಡೋ ಯಾತ್ರಾ 2.0 | ಡಿಸೆಂಬರ್ – ಫೆಬ್ರವರಿ ನಡುವೆ ಪ್ರಾರಂಭ ಸಾಧ್ಯತೆ: ವರದಿ

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

ಆಯುಕ್ತರ ಹೆಸರಿನಲ್ಲಿ ವಾಟ್ಸ್‌ಆಪ್ ವಂಚನೆ ಯತ್ನ: ಬೆಂಗಳೂರು ಪಾಲಿಕೆಗಳಿಂದ ಸಾರ್ವಜನಿಕರಿಗೆ ಎಚ್ಚರಿಕೆ

April 24, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

April 23, 2026
Next Post
ಭಾರತ್ ಜೋಡೋ ಯಾತ್ರಾ 2.0 | ಡಿಸೆಂಬರ್ – ಫೆಬ್ರವರಿ ನಡುವೆ ಪ್ರಾರಂಭ ಸಾಧ್ಯತೆ: ವರದಿ

ಭಾರತ್ ಜೋಡೋ ಯಾತ್ರಾ 2.0 | ಡಿಸೆಂಬರ್ - ಫೆಬ್ರವರಿ ನಡುವೆ ಪ್ರಾರಂಭ ಸಾಧ್ಯತೆ: ವರದಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada