ಮಂಗಳೂರು : ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡುವ ಸಲುವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳು ನಾಡು ಸಿಎಂ ಸಿ.ಜೋಸೆಫ್ ವಿಜಯ್ ಅವರನ್ನು ಸ್ವಾಗತಿಸಲಾಯಿತು.

ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಸ್ತ್ ಮಾಡಲಾಗಿತ್ತು. ದೇವಸ್ಥಾನಕ್ಕೆ ಭದ್ರತಾ ತಪಾಸಣೆ ಮಾಡಲಾಗಿತ್ತು. ದೇವಸ್ಥಾನ ಒಳಗೆ ಬಾಂಬ್ ಸ್ಕ್ವಾಡ್ ನಿಂದ ತಪಾಸಣೆ ನಡೆಸಲಾಯಿತು. ಮಂಗಳೂರಿನಿಂದ ಕಾರಿನಲ್ಲಿ ಕೊಲ್ಲೂರಿಗೆ ತೆರಳಿದ ವಿಜಯ್ ಅವರು ದೇಗುಲದಲ್ಲಿ ಪೂಜೆ ನೆರವೇರಿಸಿದರು.
ವಿಜಯ್ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಾಗ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಶಕ್ತಿ ದೇವಿಗೆ ನಮಿಸಿ, ಹೂವಿನ ಹಾರ ಹಾಕಿ ಆಶೀರ್ವಾದ ಪಡೆದರು. ಇದೇ ವೇಳೆ ವಿಜಯ್ ದೇವಿಗೆ ಸೀರೆ, ಹಣ್ಣು ಅರ್ಪಿಸಿದರು. ನಂತರ ಅರ್ಚಕರು ಸಂಕಲ್ಪ ಮಾಡಿಸಿ ವಿಶೇಷ ಪೂಜೆ ನೆರವೇರಿಸಿದರು. ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಕೊಲ್ಲೂರು ದೇವಾಲಯಕ್ಕೆ ವಿಜಯ್ ಭೇಟಿ ನೀಡಿದ್ದಾರೆ.
ಇದನ್ನೂ ಓದಿ : ಪರಿಷ್ಕರಣೆ ಹೆಸರಲ್ಲಿ ಗ್ಯಾರಂಟಿ ರದ್ದು ಮಾಡುವ ಹುನ್ನಾರ : ಶ್ರೀರಾಮುಲು ಕಿಡಿ
ವಿಜಯ್ ಅವರು ಸಿಎಂ ಆದರೂ ಕೂಡಾ ಕೊಲ್ಲೂರು ದೇವಾಲಯದಲ್ಲಿ ಆ ಒಂದು ನಿಯಮವನ್ನು ಫಾಲೋ ಮಾಡಿದರು. ವಿಜಯ್ ಪಂಚೆ, ಶಲ್ಯ ಧರಿಸಿ ದೇಗುಲಕ್ಕೆ ಪ್ರವೇಶಿಸಿದರು. ಇನ್ನು ಕೊಲ್ಲೂರಿನಲ್ಲಿ ಸಿಎಂ ಬಂದ ಹಿನ್ನೆಲೆಯಲ್ಲಿ ಯಾವುದೇ ವಿಶೇಷ ಪೂಜೆಗಳು ಇರಲಿಲ್ಲ. ಉಳಿದ ಭಕ್ತರಂತೆ ಸಿಎಂ ವಿಜಯ್ ಅವರು ಕೂಡ ದೇವಿಯ ದರ್ಶನ ಮಾಡಿದರು. ನಂತರ ವಿಜಯ್ ಸ್ವತಃ ತಾವೇ ಕಾರು ಚಾಲನೆ ಮಾಡಿಕೊಂಡು ಅಲ್ಲಿಂದ ಮಂಗಳೂರು ಕಡೆ ತೆರಳಿದರು. ದಾರಿಯುದ್ದಕ್ಕೂ ವಿಜಯ್ ಅಭಿಮಾನಿಗಳು ನೆರೆದು ಜಯಕಾರ ಹಾಕಿದರು.






