ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ ಮಾಡುತ್ತಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ. ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿಗೆ ಕತ್ತರಿ ಹಾಕಿರುವ ವಿಷಯಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಿಎಂ ಡಿಕೆ ಶಿವಕುಮಾರ್ ಗ್ಯಾರಂಟಿ ವಿಚಾರದಲ್ಲಿ ಪರಿಷ್ಕರಣೆ ಮಾಡುವ ತೀರ್ಮಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆ ಬಂದ್ ಮಾಡುವ ಹುನ್ನಾರವದು ಎಂದು ದೂರಿದ್ದಾರೆ.

ಡಿಕೆ ಶಿವಕುಮಾರ್ ಅವರಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ ಕೊಟ್ಟ ಯೋಜನೆ ವಿರುದ್ಧ ಇದ್ದಾರಾ ಅಂತ ಸ್ಪಷ್ಟನೆ ಕೊಟ್ಟಿಲ್ಲ. ಸಿದ್ದರಾಮಯ್ಯ ಸರ್ಕಾರ ಸರಿ ಇರಲಿಲ್ಲ ಅಂತ ಡಿಕೆಶಿ ಹೇಳೋಕೆ ಹೊರಟಿದ್ದಾರಾ ಅದೂ ಗೊತ್ತಿಲ್ಲ. ಗ್ಯಾರಂಟಿ ಯೋಜನೆ ನಿಲ್ಲಿಸಬೇಕಾ? ಎಂಬ ಗೊಂದಲದಲ್ಲಿ ಡಿಕೆಶಿವಕುಮಾರ್ ಇದ್ದಾರೆ ಅಂತ ಕಿಡಿಕಾರಿದ್ದಾರೆ.

ಇವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಎಲ್ಲಾ ಗ್ಯಾರಂಟಿಯನ್ನು ಎಲ್ಲರಿಗೂ ಕೊಡ್ತೀವಿ ಅಂತ ಹೇಳಿದರು. ಕಾಕಾ ಪಾಟೀಲ್, ಮಹದೇವಪ್ಪಗೆ ಫ್ರೀ ಅಂತ ಹೇಳುತ್ತಲೇ ಅಧಿಕಾರಕ್ಕೆ ಬಂದು ಇವತ್ತು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಜನರು ಗ್ಯಾರಂಟಿ ಕೊಡಿ ಅಂತ ಕೇಳಲಿಲ್ಲ. ನಿಮ್ಮ ಸ್ವಾರ್ಥಕ್ಕೆ ಗ್ಯಾರಂಟಿ ತಂದ್ರಿ. ಇವತ್ತು ಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಬಂದ್ ಮಾಡೋಕೆ ಹೊರಟಿದ್ದೀರಾ? ನೀವು ರಾಜ್ಯದ ಮಹಿಳೆಯರ ಮುಂದೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಎಲೆಕ್ಷನ್ ಗೆದ್ದ ಮೇಲೆ ದುರ್ಬಳಕೆ ಆಗಿದೆ ಅಂತಿದ್ದೀರಾ. ಸದನದಲ್ಲಿ 2 ತಿಂಗಳ ಹಣ ಗೃಹಲಕ್ಷ್ಮಿ ಹಣ ಕೊಟ್ಟಿಲ್ಲ ಅಂತ ಹೇಳಿದ್ರಿ. ಜನರಿಗೆ ಈ ಹಣ ಬಂದಿಲ್ಲ. ಸಿದ್ದರಾಮಯ್ಯ- ಡಿಕೆಶಿ ನಡುವೆ ಶೀಥಲ ಸಮರ ನಡೆಯುತ್ತಿದೆ. ಡಿಕೆ ಶಿವಕುಮಾರ್ ಸಿಎಂ ಆದ ಮೇಲೆ ಕನಕಪುರದಲ್ಲಿ ಆಪಲ್ ಕಚ್ಚಿ ಜನರಿಗೆ ಎಸೆದ್ರು. ಅವರ ಸ್ಟೈಲ್ ನೋಡಿದ್ರೆ ರಾಜ್ಯದ ಜನ ಮುಂದೆ ನಾನು ತಿಂದ ನಂತರ ರಾಜ್ಯದ ಜನರಿಗೆ ಉಳಿದಿದ್ದು ಅಂತ ತೋರಿಸಿದ್ದಾರೆ ಅಂತ ಡಿಕೆಶಿ ವಿರುದ್ದ ಅವರು ಕಿಡಿಕಾರಿದ್ದಾರೆ.






