ADVERTISEMENT

Tag: afganistan

‘ಸಂಪೂರ್ಣ ಸ್ವಾತಂತ್ರ್ಯ’ ಘೋಷಿಸಿಕೊಂಡ ತಾಲಿಬಾನ್

ಕಳೆದ ಎರಡು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ಬೀಡು ಬಿಟ್ಟಿದ್ದ ಅಮೇರಿಕಾ ಸೇನಾಪಡೆಯು ಸಂಪೂರ್ಣವಾಗಿ ವಾಪಾಸಾಗಿದೆ. ಈ ಬಾರಿ ತಾಲಿಬಾನ್ ಉಗ್ರರು ಮತ್ತಷ್ಟು ಬಲಿಷ್ಟವಾಗಿ ಹೊರಹೊಮ್ಮಿದ್ದಾರೆ. ಅಮೇರಿಕಾ ಪಡೆಗಳು ದೇಶವನ್ನು ಬಿಡುವ ಮುನ್ನವೇ, ರಾಜಧಾನಿ ಕಾಬೂಲನ್ನು ವಶಪಡಿಸಿಕೊಂಡಿದ್ದಾರೆ.  ಮಂಗಳವಾರ ಮುಂಜಾನೆ ಕಾಬೂಲ್ ಏರ್ಪೋರ್ಟ್ ಅನ್ನು ವಶಪಡಿಸಿಕೊಂಡ ತಾಲಿಬಾನಿಗಳು ‘ಸಂಪೂರ್ಣ ಸ್ವಾತಂತ್ರ್ಯ’ವನ್ನು ಘೋಷಿಸಿದ್ದಾರೆ. ಮಧ್ಯರಾತ್ರಿ ಹನ್ನೆರಡು ಗಂಟೆಗೆ ಕೆಲವೇ ನಿಮಿಷಗಳ ಮೊದಲು ಅಮೇರಿಕಾದ ಕೊನೆಯ ಸ್ಥಳಾಂತರ ಕಾರ್ಯಾಚರಣೆಯ ವಿಮಾನ ಟೇಕ್ ಆಫ್ ಆಗಿತ್ತು. ಇದಾದ ಕೆಲವೇ ನಿಮಿಷಗಳ ಬಳಿಕ ತಾಲಿಬಾನ್ ಉಗ್ರರು ಏರ್ಪೋರ್ಟ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.  “ಅಮೇರಿಕಾದ ಕಟ್ಟ ಕಡೇಯ ಸೈನಿಕ ಕುಡಾ ಕಾಬೂಲ್ ಏರ್ಪೋರ್ಟ್ ಬಿಟ್ಟು ಹೋಗಿದ್ದಾರೆ. ಇದು ನಮ್ಮ ದೇಶಕ್ಕೆ ಲಭಿಸಿರುವ ಸಂಪೂರ್ಣ ಸ್ವಾತಂತ್ರ್ಯ,” ಎಂದು ತಾಲಿಬಾನ್ ವಕ್ತಾರ ಕಾರಿ ಯೂಸುಫ್ ಅವರು ಅಲ್-ಜಝೀರಾ ಟಿವಿಗೆ ನೀಡಿರುವ ಸಂದರ್ಶನದಲ್ಲಿ  ಹೇಳಿದ್ದಾರೆ.  ಅಮೇರಿಕಾ ಇತಿಹಾಸದಲ್ಲಿಯೇ ಅತ್ಯಂತ ದಿರ್ಘ ಕಾಲದ ಯುದ್ದ ಇದಾಗಿತ್ತು. ಇದರಲ್ಲಿ ಸುಮಾರು 2,500 ಅಮೇರಿಕಾ ಸೈನಿಕರು ಸಾವನ್ನಪ್ಪಿದ್ದರೆ, 2,40,000 ಅಫ್ಘಾನಿಗಳು ಸಾವನ್ನಪ್ಪಿದ್ದರು.  ಈ ಯುದ್ದದಿಂದಾಗಿ ಅಮೇರಿಕಾದ ಮೇಲೆ ಎರಡು ಟ್ರಿಲಿಯನ್  ಡಾಲರ್ ಹೆಚ್ಚುವರಿ ಹೊರೆ ಬೀಳುತ್ತಿತ್ತು.  ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ತನ್ನ ನೆಲೆ ವಿಸ್ತರಿಸಿಕೊಳ್ಳುವುದನ್ನು ಯಶಸ್ವಿಯಾಗಿ ಅಮೇರಿಕಾ ತಡೆದಿತ್ತು. ಮಾತ್ರವಲ್ಲದೇ, ಅಲ್-ಖೈದಾ ಮುಖ್ಯಸ್ಥ ಬಿನ್ ಲಾಡೆನ್  ಹತ್ಯೆಗೈಯುವಲ್ಲಿಯೂ ಸಫಲವಾಗಿತ್ತು.  ತಾಲಿಬಾನ್ ಆಡಳಿತದಿಂದ ಹೆದರಿ ಲಕ್ಷಾಂತಹ ಅಫ್ಘಾನಿಗಳು ಈಗಾಗಲೇ ದೇಶವನ್ನು ತೊರೆದಿದ್ದಾರೆ. ಕಾಬೂಲ್’ನಿಂದ ಲಕ್ಷಕ್ಕು ಹೆಚ್ಚು ಜನರನ್ನು ಏರ್ ಲಿಫ್ಟ್ ಮಾಡಲಾಗಿದೆ. ಆದರೆ, ಕಳೆದ ಇಪ್ಪತ್ತು ವರ್ಷಗಳ ಯುದ್ದದ ಸಂದರ್ಭದಲ್ಲಿ ಅಮೇರಿಕಾ ಸೇನೆಗೆ ನೆರವಾಗಿದ್ದ ಸಾವಿರಾರು ಜನರು ಇನ್ನೂ ಅಫ್ಘಾನಿಸ್ತಾನದಲ್ಲಿ ಬಾಕಿಯಾಗಿದ್ದಾರೆ. “ಯಾರನ್ನೆಲ್ಲಾ ಅಫ್ಘಾನಿಸ್ತಾನದಿಂದ ಹೊರತೆಬೇಕು ಎಂದು ಆಶಿಸಿದ್ದೇವೋ, ಅವರೆಲ್ಲರನ್ನೂ ಕರೆತರಲು ಸಾಧ್ಯವಾಗಿಲ್ಲ. ಅಲ್ಲಿನ ಇನ್ನೂ ಹತ್ತು ದಿನ ಉಳಿದಿದ್ದರೂ ಅದು ಸಾಧ್ಯವಾಗುತ್ತಿರಲಿಲ್ಲ,” ಎಂದು ಅಮೇರಿಕಾದ ಸೆಂಟ್ರಲ್ ಕಮಾಂಡ್ ಜನರಲ್ ಫ್ರ್ಯಾಂಕ್ ಮೆಕೆಂಜಿ ಹೇಳಿದ್ದಾರೆ. 

Read moreDetails

ದೀರ್ಘ ಇತಿಹಾಸ ಇರುವ ಅಫ್ಘಾನಿನ ಸಿಖ್ಖರ ವರ್ತಮಾನ ಮತ್ತು ಭವಿಷ್ಯ ಡೋಲಾಯಮಾನವಾಗಿದೆಯೇ?

ಭಾರತದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಅಫ್ಘಾನಿಸ್ತಾನ ಸೋವಿಯತ್ ಕಾಲದಿಂದಲೂ ಭಾರತದ ಹಿತೈಷಿ.  ಬುಡಕಟ್ಟು ಜನಾಂಗಗಳೇ ಅಧಿಕ ಪ್ರಮಾಣದಲ್ಲಿರುವ ಅಫ್ಘಾನಿಸ್ತಾನದಲ್ಲಿ ಭಾರತದ ಬಗ್ಗೆ ಅಸಹನೆ ಪ್ರಕಟವಾದದ್ದು ತಾಲಿಬಾನ್ ಕಾಲದಲ್ಲಿ ಮಾತ್ರ. ...

Read moreDetails

ಪಾಕ್ ಜೊತೆಗೂಡಿ ಭಾರತದ ವಿರುದ್ಧ ಪಿತೂರಿ ಮಾಡುವುದಿಲ್ಲ : ತಾಲಿಬಾನ್ ಸ್ಪಷ್ಟನೆ!

ತಾಲಿಬಾನ್ ನೇತೃತ್ವದ ಸರ್ಕಾರ ಅಫ್ಘಾನಿಸ್ತಾನದಲ್ಲಿ ರಚನೆಯಾಗುವುದು ಸನ್ನಿಹಿತವಾಗಿದೆ. ಪಾಕಿಸ್ತಾನದಲ್ಲಿ ಈಗಾಗಲೇ ಇದು ಪಾಕ್ ಗೆಲುವೆಂದು ಸಂಭ್ರಮಾಚರಣೆ ನಡೆದಿದೆ. ಭಾರತದ ವಿರುದ್ಧ ಏರಿ ಹೋಗಲು ತನಗೆ ತಾಲಿಬಾನ್ನ ಶಕ್ತಿ ...

Read moreDetails

ಪತ್ರಕರ್ತನ್ನು ರಕ್ಷಿಸುವ ತಾಲಿಬಾನ್ ಭರವಸೆ ಎಲ್ಲಿ ಹೋಯಿತು?

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದ ನಂತರ ಸರಣಿ ಭರವಸೆಗಳನ್ನು ನಿಡಲಾಗಿತ್ತು. ವಿಶ್ವದಾದ್ಯಂತ ತಾಲಿಬಾನ್’ನ ಕಳೆದ ಆಡಳಿತವನ್ನು ನೆನಪಿಸಿಕೊಂಡು ಆತಂಕವನ್ನು ವ್ಯಕ್ತಪಡಿಸುತ್ತಿದ್ದ ಸಂದರ್ಭದಲ್ಲಿ, ಮಹಿಳಾ ಶಿಕ್ಷಣ, ಪತ್ರಿಕಾ ಸ್ವಾತಂತ್ರ್ಯ ...

Read moreDetails

ಸರ್ವಪಕ್ಷ ಸಭೆ: ಅಫ್ಘಾನ್ ಕುರಿತು “ಕಾದು ನೋಡುವ ನೀತಿ” ಅನುಸರಿಸಲು ಭಾರತದ ನಿರ್ಧಾರ

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು ಭಾರತವು ಕಾದು ನೋಡುವ ನೀತಿಯನ್ನು ಅನುಸರಿಸಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರೊಂದಿಗೆ, ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಅಲ್ಲಿಂದ ರಕ್ಷಿಸಲು ನಡೆಸುವ ...

Read moreDetails

ಕಾಬೂಲ್ ಬಾಂಬ್ ದಾಳಿ: ಸಾವನಪ್ಪಿದವರಲ್ಲಿ ಹಲವರು ಯುಎಸ್ ಸೇವಾ ಸದಸ್ಯರು: ಪೆಂಟಗನ್

ಕಾಬೂಲ್ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ "ಹಲವಾರು ಯುಎಸ್ ಸೇವಾ ಸದಸ್ಯರು" ಎಂದು ಪೆಂಟಗನ್ ತನ್ನ‌ ಪ್ರೆಸ್ ರಿಲೀಸ್ ನಲ್ಲಿ ಹೇಳಿದೆ. ಕಾಬೂಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯದ್ವಾರದ ಬಳಿ ...

Read moreDetails

ತಾಲಿಬಾನಿಗಳ ಶರಿಯಾ ಕಾನೂನು : ಅಪಾಯದಲ್ಲಿ ಅಫ್ಘಾನ್‌ ಸಿನೆಮಾ ಕ್ಷೇತ್ರ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸೃಷ್ಟಿಸಿರುವ ಹರಾಜಕತೆ ಇಡೀ ವಿಶ್ವವನ್ನೇ ಹೌಹಾರಿಸಿದೆ. ಬಂದೂಕುಗಳ ನಳನಳಿಕೆ. ಅಂಧ ಧರ್ಮದ ಕೇಕೆ. ಹೀಗೆ ತಾಲಿಬಾನ್‌ ಅಫ್ಘಾನ್‌ನ್ನರ ಮೂಲಭೂತ ಸ್ವಾಂತ್ರತ್ಯವನ್ನು ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡಿದ್ದಾರೆ. ...

Read moreDetails

ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ತಾಲಿಬಾನ್ ಹಿಡಿತ: ಭಾರತದಲ್ಲಿರುವ ಅಫ್ಘಾನ್ ನಿರಾಶ್ರಿತರಲ್ಲಿ ಮನೆ ಮಾಡಿದ ಆತಂಕ.!

ಆಗಸ್ಟ್ ಅಂತ್ಯಕ್ಕೆ ಅಮೆರಿಕ ತನ್ನ ಸೈನ್ಯವನ್ನು ಸಂಪೂರ್ಣವಾಗಿ ಅಫ್ಘಾನಿಸ್ತಾನದಿಂದ ಹಿಂದೆಗೆಯಲಿದೆ ಎಂದು ಘೋಷಿಸಿದ ನಂತರ ಅಫ್ಘಾನ್ ಮತ್ತೊಮ್ಮೆ ಅಂತರ್ಯುದ್ಧ ಪೀಡಿತ ದೇಶವಾಗಿದೆ. ಪತ್ರಕರ್ತರು, ಸೈನಿಕರು, ರಾಜತಾಂತ್ರಿಕರು ಸೇರಿದಂತೆ ...

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!