11/03/2024 ರಂದು ಪ್ರಧಾನಿ(Pm) ನರೆಂದ್ರ ಮೋದಿ (Narendra modi) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಬಹುತೇಕ ಕ್ಷೇತ್ರಗಳ ಟಿಕೆಟ್(Ticket) ಫೈನಲ್ ಮಾಡಲಾಗಿದೆ. 28ರ ಪೈಕಿ 22 ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸಲಾಗಿದೆ. ಯಾವ್ಯಾವ ಕ್ಷೇತ್ರದಿಂದ (constituency)ಯಾರ್ಯಾರು ಸ್ಪರ್ಧಿಸಲಿದ್ದಾರೆ ಅನ್ನೋ ಕುರಿತು ಕುತೂಹಲ ಕಾವೇರಿದೆ.

ಇನ್ನು ಎರಡು ಮೂರು ದಿನದಲ್ಲಿ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಲಿದೆ. ಈ ಸಭೆ ನಂತರದಲ್ಲಿ ಬಿಜೆಪಿ (BJP) ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಮೈಸೂರಿನಿಂದ (Mysuru)ಹ್ಯಾಟ್ರಿಕ್ ಗೆಲುವಿನ ಕನಸುಕಂಡಿದ್ದ ಪ್ರತಾಪ್ ಪ್ರತಾಪ್ (Prathap simha)ಸಿಂಹ ಕನಸು ಭಗ್ನಗೊಂಡಿದ್ಯಂತೆ. ಈ ಬಾರಿ ಸಿಂಹಗೆ ಕೊಕ್ ಕೊಡಲಾಗಿದ್ದು, ಮೈಸೂರು-ಕೊಡಗು ಕ್ಷೇತ್ರದಿಂದ ರಾಜವಂಶಸ್ಥ ಯದುವೀರ್ ಒಡೆಯರ್ಗೆ (yaduveer odeyar) ಟಿಕೆಟ್ ಕೊಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತ, ಬೆಂಗಳೂರು ಗ್ರಾಮಾಂತರ (Bangalore rural) ಕ್ಷೇತ್ರಕ್ಕೆ ಡಾ. ಮಂಜುನಾಥ್ (Dr.Manjunath) ಹೆಸರೇ ಅಂತಿಮವಾಗಿದ್ದು, ಸ್ಪರ್ಧೆ ನೂರಕ್ಕೆ ನೂರು ಖಿಚಿತ ಎನ್ನಲಾಗಿದೆ. ಇನ್ನೂ ವ್ಯಾಪಕ ವಿರೋಧದ ನಡುವೆಯೂ ತುಮಕೂರಿನಿಂದ (Tumkur) ಮಾಜಿ ಸಚಿವ ವಿ.ಸೋಮಣ್ಣ (V.Somanna) ಹೆಸರು ಕೇಳಿ ಬಂದಿದೆ..ಅದಲ್ಲದೇ, ಹಾವೇರಿಯಿಂದ(Haveri )ಮಗನಿಗೆ ಟಿಕೆಟ್ ಕೊಡಿಸಲು ಶತಾಯ-ಗತಾಯ ಈಶ್ವರಪ್ಪ (Eshwarappa) ಪ್ರಯತ್ನಿಸಿದ್ರೂ ಯಾವುದೇ ಫಲ ಕೊಟ್ಟಿಲ್ಲ, ಅಲ್ಲಿಗೆ ಬೊಮ್ಮಾಯಿ (Bommayi) ಹೆಸರನ್ನ ಫೈನಲ್ ಮಾಡಲಾಗಿದ್ಯಂತೆ. ಜೊತೆಗೆ ಚಿಕ್ಕಬಳ್ಳಾಪುರದಿಂದ (Chikkaballapur) ಡಾ.ಕೆ.ಸುಧಾಕರ್ಗೆ (Dr.k.Sudhakar) ಸ್ಪರ್ಧೆ ಕೂಡ ಬಹುತೇಕ ಕನ್ನರ್ಮ್ ಆಗಿದೆ.






