CAA (Citizenship Amendment Act) ದೇಶದಲ್ಲಿ ಇಂದಿನಿಂದ ಅಧಿಕೃತವಾಗಿ ಜಾರಿಯಾಗಿದೆ. 2019ರಲ್ಲೇ ಲೋಕಸಭೆ ಹಾಗು ರಾಜ್ಯಸಭೆಯಲ್ಲಿ ಪಾಸ್ ಆಗಿದ್ದ ವಿಧೇಯಕ ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದುಕೊಂಡಿತ್ತು. ಆದರೆ ಕೇಂದ್ರ ಸರ್ಕಾರ ಗೆಜೆಟೆಡ್‌ನಲ್ಲಿ ಪ್ರಕಟ ಮಾಡದ ಕಾರಣಕ್ಕೆ ಕಾನೂನು ಜಾರಿ ಆಗಿರಲಿಲ್ಲ. ಇದೀಗ 2014ರ ಲೋಕಸಭಾ ಚುನಾವಣೆಗೂ ಮುನ್ನ ಗೆಜೆಟೆಡ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಕಟ ಮಾಡುವ ಮೂಲಕ ರಾಜಕೀಯ ಲಾಭದ ಲೆಕ್ಕಾಚಾರ ಮಾಡುತ್ತಿದೆ.

ಯಾವುದೇ ಸರ್ಕಾರ ಮಂಡಿಸುವ ಬಿಲ್ ಲೋಕಸಭೆ, ರಾಜ್ಯ ಸಭೆಯಲ್ಲಿ ಪಾಸ್ ಆದ್ಮೇಲೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯುತ್ತದೆ. ಆ ಬಳಿಕ ಕೂಡಲೇ ಕಾಯ್ದೆಯಾಗಿ ಅಧಿಸೂಚನೆ ಹೊರಡಿಸಲಾಗುತ್ತದೆ. ಆದರೆ CAAಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಸರಿ ಸುಮಾರು 100 ಜನರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ಮತ್ತಷ್ಟು ಹೋರಾಟಕ್ಕೆ ಪುಷ್ಟಿ ಕೊಡುವುದು ಬೇಡ ಎನ್ನುವ ಕಾರಣಕ್ಕೆ ಸರಿ ಸುಮಾರು ನಾಲ್ಕು ವರ್ಷಗಳ ಕಾಲ ಸುಮ್ಮನಾಗಿತ್ತು.
ಇದೀಗ ಎಲ್ಲವೂ ತಣ್ಣಗಾದ ಬಳಿಕ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. CAA ಅಂದ್ರೆ ಪೌರತ್ವ ತಿದ್ದುಪಡಿ ಕಾಯ್ದೆ. ಈ ಕಾನೂನು ಮೂಲಕ ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದು ವಾಸಿಸುತ್ತಿರುವ ಜನರಿಗೆ ಪೌರತ್ವ ನೀಡಲಾಗುತ್ತದೆ. ಆದರೆ ಈ ಕಾನೂನಲ್ಲಿ ಮುಸ್ಲಿಮೇತರರು ಎಂದು ಸೇರ್ಪಡೆ ಆಗಿದೆ. ಅಂದರೆ 2014 ಡಿಸೆಂಬರ್ 31ರ ಒಳಗಾಗಿ ಯಾರೆಲ್ಲಾ ಭಾರತಕ್ಕೆ ಬಂದಿದ್ರು, ಅವರಿಗೆ ಭಾರತದ ಪೌರತ್ವ ಸಿಗಲಿದೆ. ಮುಸ್ಲಿಮರು ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದು ವಾಸವಾಗಿದ್ದರೆ ಪೌರತ್ವ ಸಿಗಲ್ಲ.

ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು, ಕ್ರಿಶ್ಚಿಯನ್ನರಿಗೆ ಭಾರತದಲ್ಲಿ ಪೌರತ್ವ ಪಡೆದುಕೊಳ್ಳಲು ಅನುಕೂಲ ಆಗಲಿದೆ. ಭಾರತಕ್ಕೆ ಬಂದಿರುವ ಟ್ರಾವೆಲ್ ಟಿಕೆಟ್ ಅಥವಾ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿದ್ರೆ ಭಾರತದ ಪೌರತ್ವ ಸಿಗಲಿದೆ. ಆದರೆ ಮುಸ್ಲಿಮರನ್ನು ಹೊರತುಪಡಿಸಿರುವ ಕಾನೂನು ಆಗಿರುವ ಕಾರಣಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತದೆ ಎನ್ನುವುದು ಭಾರತೀಯ ಜನತಾ ಪಾರ್ಟಿಗೆ ಚೆನ್ನಾಗಿಯೇ ಗೊತ್ತಿದೆ. ಅದೇ ಕಾರಣಕ್ಕೆ ಚುನಾವಣೆಗೂ ಮುನ್ನ ಮತ ಕ್ರೂಢೀಕರಣಕ್ಕೆ ಯೋಜನೆ ರೂಪಿಸಿದೆ. ಈಗಾಗಲೇ ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಪೌರತ್ವ ತಿದ್ದುಪಡಿ






