• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ಕಚ್ಚಾಡಿಸಿದ್ದವರಿಗೆ ಶ್ರೀಲಂಕಾದಲ್ಲಿ ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ: ಪ್ರಕಾಶ್‌ ರಾಥೋಡ್

Any Mind by Any Mind
May 10, 2022
in ಕರ್ನಾಟಕ
0
ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ಕಚ್ಚಾಡಿಸಿದ್ದವರಿಗೆ ಶ್ರೀಲಂಕಾದಲ್ಲಿ ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ: ಪ್ರಕಾಶ್‌ ರಾಥೋಡ್
Share on WhatsAppShare on FacebookShare on Telegram

  ಶ್ರೀಲಂಕಾದ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ಭಾರತಕ್ಕೆ ಪಾಠವಿದೆ ಎಂಬರ್ಥದಲ್ಲಿ ಕಾಂಗ್ರೆಸ್‌ ವಕ್ತಾರ, ಎಂಎಲ್‌ಸಿ ಪ್ರಕಾಶ್‌ ರಾಥೋಡ್‌ ಹೇಳಿದ್ದಾರೆ. ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ದೇಶದ ಜನರನ್ನು ಪರಸ್ಪರ ಕಚ್ಚಾಡಿಸಿದ್ದ ಶ್ರೀಲಂಕಾ ಆಡಳಿತ ಪಕ್ಷದ ಸಂಸದರು-ಶಾಸಕರನ್ನು ಜನ ಹಿಡಿದು ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ ಎಂದು ಹೇಳಿದ ರಾಥೋಡ್‌, ಪರೋಕ್ಷವಾಗಿ ಬಿಜೆಪಿ ನಾಯಕರನ್ನು ಕುಟುಕಿದ್ದಾರೆ.

ADVERTISEMENT

ಈ ಕುರಿತು ಟ್ವೀಟ್‌ ಮಾಡಿರುವ ರಾಥೋಡ್‌, “ಕೇವಲ 2 ವರ್ಷದಲ್ಲಿ ದೇಶದ ಸ್ಥಿತಿ ಉಲ್ಟಾ ಆಗಿದೆ. ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ದೇಶದ ಜನರನ್ನು ಪರಸ್ಪರ ಕಚ್ಚಾಡಿಸಿದ್ದ ಶ್ರೀಲಂಕಾ ಆಡಳಿತ ಪಕ್ಷದ ಸಂಸದರು-ಶಾಸಕರನ್ನು ಜನ ಹಿಡಿದು ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ. ಭಾರತವೂ ಹಣದುಬ್ಬರ-ಬೆಲೆ ಏರಿಕೆಯ ಪಾತಾಳಕ್ಕೆ ಜಾರುತ್ತಾ ಕೋಮುದಳ್ಳುರಿ ಹೆಚ್ಚುತ್ತಿದೆ.” ಎಂದು ಟ್ವೀಟ್‌ ಮಾಡಿದ್ದಾರೆ.

“ದೇಶ ಬೆಲೆ ಏರಿಕೆ-ಹಣದುಬ್ಬರ-ಉದ್ಯಮಗಳ ಪಲಾಯನ-ದೇಶದ ಆಸ್ತಿಗಳ ಮಾರಾಟ-ಆದಾಯಕ್ಕಿಂತ ಸಾಲದ ಮೊತ್ತ ಹೆಚ್ಚಳ-ದೇಶದ ಜನ ಬಡವರಾಗುತ್ತಾ ಕೆಲವೇ ಉದ್ಯಮಿಗಳು ದೇಶದ ಆಸ್ತಿ ಖರೀದಿಸುತ್ತಾ ವಿಶ್ವ ಶ್ರೀಮಂತರ ಪಟ್ಟಿಗೆ ಸೇರುತ್ತಾ ಹೋದರು. ಆಡಳಿತ ಪಕ್ಷ ಆರ್ಥಿಕವಾಗಿ ಶ್ರೀಲಂಕಾ ದೇಶವನ್ನು ದಿವಾಳಿ ಮಾಡಿದ ಪರಿಣಾಮ ಇದು…” ಎಂದು ಅವರು ಬರೆದಿದ್ದಾರೆ.

ಶ್ರೀಲಂಕಾ ಆರ್ಥಿಕ ದುಸ್ಥಿತಿಯ ಆರಂಭಿಕ ಸೂಚನೆಗಳು ಕಂಡು ಬಂದಾಗಲೇ, ಭಾರತಕ್ಕೂ ಇದೇ ರೀತಿಯ ಪರಿಸ್ಥಿತಿ ಬರಬಹುದು ಎಂಬ ಆತಂಕಗಳು ವ್ಯಕ್ತವಾಗುತ್ತಲೇ ಇದೆ. ಭಾರತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಗತ್ಯ ವಸ್ತುಗಳ ಬೆಲೆಗಳಲ್ಲಿ ವಿಪರೀತ ಏರಿಕೆ ಆಗುತ್ತಿದ್ದರೂ, ದೇಶದಲ್ಲಿ ಕೋಮು ವಿಭಜನೆ ವಿಪರೀತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಆತಂಕ ವ್ಯಕ್ತವಾಗುತ್ತಿದೆ. ಅದರಲ್ಲೂ, ಈ ಹಿಂದೆ ಶ್ರೀಲಂಕಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಹಾಗೂ ತಮಿಳರ ವಿರುದ್ಧ ನಡೆದ ದೌರ್ಜನ್ಯವನ್ನು ಉಲ್ಲೇಖಿಸಿ ಭಾರತದ ಪರಿಸ್ಥಿತಿಯೊಂದಿಗೆ ಸಮೀಕರಿಸಲಾಗಿತ್ತು.‌

ಕೇವಲ 2 ವರ್ಷದಲ್ಲಿ ದೇಶದ ಸ್ಥಿತಿ ಉಲ್ಟಾ ಆಗಿದೆ. ಹಿಜಾಬ್-ಹಲಾಲ್-ಧರ್ಮದ ಹೆಸರಲ್ಲಿ ದೇಶದ ಜನರನ್ನು ಪರಸ್ಪರ ಕಚ್ಚಾಡಿಸಿದ್ದ ಶ್ರೀಲಂಕಾ ಆಡಳಿತ ಪಕ್ಷದ ಸಂಸದರು-ಶಾಸಕರನ್ನು ಜನ ಹಿಡಿದು ದನಕ್ಕೆ ಬಡಿದಂತೆ ಬಡಿಯುತ್ತಿದ್ದಾರೆ. ಭಾರತವೂ ಹಣದುಬ್ಬರ-ಬೆಲೆ ಏರಿಕೆಯ ಪಾತಾಳಕ್ಕೆ ಜಾರುತ್ತಾ ಕೋಮುದಳ್ಳುರಿ ಹೆಚ್ಚುತ್ತಿದೆ. https://t.co/ex19o4XsDL

— Prakash Rathod (@PRathod_INC) May 10, 2022
Tags: BJPCongress Partyprakash rathodಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮತಶ್ರದ್ಧೆ ಮತದ್ವೇಷ ಮತ್ತು ಬೌದ್ಧಿಕ ನಿಷ್ಕ್ರಿಯತೆ

Next Post

ಪೊಲೀಸ್ ಅಧಿಕಾರಿ ರವೀಂದ್ರನಾಥ್ ರಾಜೀನಾಮೆ ಅಂಗೀಕಾರ ಬೇಡ: ರಾಜ್ಯ ಸರಕಾರಕ್ಕೆ ಹೆಚ್.ಡಿ.ಕುಮಾಸ್ವಾಮಿ ಒತ್ತಾಯ

Related Posts

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?
Top Story

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

by ಪ್ರತಿಧ್ವನಿ
April 22, 2026
0

ಗದಗ :  ಬೇಸಿಗೆ ಕಾಲ ಆರಂಭವಾಗಿದ್ದು, ಬಿರು ಬಿಸಿಲಿನ ಬೇಗೆಗೆ ಜನರು ತತ್ತರಿಸಿದ್ದಾರೆ. ಜಿಲ್ಲೆಯಲ್ಲಂತೂ ದಿನದಿಂದ ದಿನಕ್ಕೆ ಸೂರ್ಯ ಕಾವೇರುತ್ತಿದ್ದಾನೆ. ಬಿಸಿಲಿನ ಹೊಡೆತ ತಾಳಲಾರದೆ ಜನರು ಹೈರಾಣಾಗಿದ್ದಾರೆ. https://youtu.be/dMLKOlJu3kY?si=xK3Kdu_8RkdSidp9...

Read moreDetails
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

“ನನ್ನ ಚುನಾವಣೆಯ ವೇಳೆ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಿ ಹೋಗ್ತಿದ್ರು, ಸಿಎಂಗೂ ಮಾಟ ಮಂತ್ರ ಮಾಡಿಸಿದ್ದಾರೆ ಅನ್ಸುತ್ತೆ”

April 21, 2026
ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್‌ : SSLC ಹಿಂದಿ ಗ್ರೇಡ್‌ ವಿವಾದಕ್ಕೆ ನ್ಯಾಯಾಲಯ ಹೇಳಿದ್ದೇನು..?

April 21, 2026
Next Post
ಪೊಲೀಸ್ ಅಧಿಕಾರಿ ರವೀಂದ್ರನಾಥ್ ರಾಜೀನಾಮೆ ಅಂಗೀಕಾರ ಬೇಡ: ರಾಜ್ಯ ಸರಕಾರಕ್ಕೆ ಹೆಚ್.ಡಿ.ಕುಮಾಸ್ವಾಮಿ ಒತ್ತಾಯ

ಪೊಲೀಸ್ ಅಧಿಕಾರಿ ರವೀಂದ್ರನಾಥ್ ರಾಜೀನಾಮೆ ಅಂಗೀಕಾರ ಬೇಡ: ರಾಜ್ಯ ಸರಕಾರಕ್ಕೆ ಹೆಚ್.ಡಿ.ಕುಮಾಸ್ವಾಮಿ ಒತ್ತಾಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada