
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿಯಿದೆ. ಕನ್ನಡತನವನ್ನು ಎತ್ತಿ ಹಿಡಿಯೋದ್ರಲ್ಲಿ ಸಿದ್ದರಾಮಯ್ಯನವರನ್ನು ಮೀರಿಸಿದ ಮತ್ತೊಬ್ಬ ರಾಜಕಾರಣಿಯಿಲ್ಲ. ಹೀಗೆ ಕನ್ನಡದ ಮೇಲೆ ಬೆಟ್ಟದಷ್ಟು ಅಭಿಮಾನ ಹೊಂದಿರುವ ಸಿದ್ದರಾಮಯ್ಯ ಅವರು ಆಗಾಗ ಕನ್ನಡ ವ್ಯಾಕರಣದ ಪಾಠಗಳನ್ನು ಮಾಡ್ತಾರೆ.
ಆದರೆ ಇದೀಗ ಅವರ ಎಕ್ಸ್ ಖಾತೆಯ ಪೋಸ್ಟ್‌ನಲ್ಲೇ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿಬಿಟ್ಟಿದೆ.ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಾಯಕರು ಹಾಗೂ ಕುಮಾರಸ್ವಾಮಿ ಕೇಸ್‌ಗೆ ಪಾಸಿಕ್ಯೂಷನ್ ಅನುಮತಿ ನೀಡದ ರಾಜ್ಯಪಾಲರು ಕೇವಲ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಸಿರುವ ಸಿದ್ದರಾಮಯ್ಯ, ಇದರ ಹಿಂದೆ ಮೋದಿಯವರ ಕೈವಾಡವಿದೆ ಎಂದು ಬಿಂಬಿಸುವ ವ್ಯಂಗ್ಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಜೊತೆಗೆ “ಗೊಂಬೆ ಆಡ್ಸೋನು… ಮ್ಯಾಲೆ ಕೂಂತವ್ನು…” ಎಂಬ ಶೀರ್ಷಿಕೆ ಕೂಡ ನೀಡಿದ್ದಾರೆ.
ಗೊಂಬೆ ಆಡ್ಸೋನು…
— Siddaramaiah (@siddaramaiah) August 21, 2024
ಮ್ಯಾಲೆ ಕೂಂತವ್ನು…#SaveDemocracy pic.twitter.com/NBt0Wl4f1J
ಆದ್ರೆ ಇದರಲ್ಲಿ “ಬೊಂಬೆ ಆಡ್ಸೋನು.. ಮ್ಯಾಲೆ ಕುಂತವ್ನು” ಎಂದು ಬರೆಯುವ ಬದಲು “ಕೂಂತವ್ನು” ಎಂದು ಬರೆಯಲಾಗಿದೆ. ಶೀರ್ಷಿಕೆಯಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಎದ್ದು ಕಾಣುತ್ತಿದ್ದು, ಇದೀಗ ವ್ಯಾಕರಣ ಪಾಠ ಮಾಡುವ ಸಿಎಂ ಅವರೇ ತಪ್ಪು ಬರೆದಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.ಇದನ್ನೇನು ಖುದ್ದು ಸಿದ್ದರಾಮಯ್ಯರೇ ಬರೆದಿರೋದಿಲ್ಲ. ಆದರೆ ಅವರ ಸೋಷಿಯಲ್ ಮೀಡಿಯಾ ಖಾತೆ ನಿರ್ವಹಿಸುವವರು ಇದನ್ನೆಲ್ಲಾ ಗಮನಿಸದೇ ಪೋಸ್ಟ್ ಮಾಡಿರುವುದು “ವ್ಯಾಕರಣ ಮೇಷ್ಟ್ರು” ಸಿದ್ದರಾಮಯ್ಯಗೆ ಮುಜುಗರ ತಂದಿದೆ