ಮೋದಿ ಸರ್ಕಾರ ತನ್ನ ಮೂಲಭೂತ ಜವಾಬ್ದಾರಿ & ಕರ್ತವ್ಯವನ್ನು ಮರೆತು ಜನತೆಯನ್ನು ವೈಫಲ್ಯಕ್ಕೆ ದೂಡಿದೆ: ಸೋನಿಯಾ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಕೋವಿಡ್‌ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲವಾಗಿದೆ’ ಎಂದು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, “ಕರೋನ ಬಿಕ್ಕಟ್ಟನ್ನು ನಿಯಂತ್ರಿಸಲು ಸಮರ್ಥ, ಶಾಂತ ಹಾಗೂ ದೂರದೃಷ್ಟಿಯ ನಾಯಕತ್ವದ ಅಗತ್ಯವಿದೆ. ಮೋದಿ ಸರ್ಕಾರದ ಅಸಮರ್ಥತೆ, ಭಿನ್ನಾಭಿಪ್ರಾಯಗಳ ಭಾರದಿಂದ ದೇಶ ಮುಳುಗುತ್ತಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ವ್ಯವಸ್ಥೆ ವೈಫಲ್ಯ ಅನುಭವಿಸಿಲ್ಲ. ಮೋದಿ ಸರ್ಕಾರ ಜನತೆಯನ್ನು ವೈಫಲ್ಯಕ್ಕೆ ದೂಡಿದೆ” ಎಂದು ಕಿಡಿಕಾರಿದ್ದಾರೆ.

ತಮ್ಮ ಪಕ್ಷದ ಭಾಷಣದಲ್ಲಿ ಮಾತಾಡಿದ ಸೋನಿಯಾ ಗಾಂಧಿ, “ಮೋದಿ ಸರ್ಕಾರ ತಜ್ಞರ ಸಲಹೆಯನ್ನು ನಿರ್ಲಕ್ಷಿಸಿದೆ, ಆಮ್ಲಜನಕ, ಔಷಧಿ ಮತ್ತು ವೆಂಟಿಲೇಟರ್‌ಗಳಿಗೆ ಸರಬರಾಜು ಸರಪಳಿಗಳನ್ನು ಬಲಪಡಿಸಲು ಹಿಂದೇಟಾಕಿದೆ. ನಮ್ಮ ಜನರ ಅಗತ್ಯಗಳನ್ನು ಪೂರೈಸಲು ಲಸಿಕೆಗಳಿಗೆ ಸಾಕಷ್ಟು ಆದೇಶಗಳನ್ನು ನೀಡಲು ಸರ್ಕಾರ ವಿಫಲವಾಗಿದೆ. ಬದಲಾಗಿ, ಜನರ ಯೋಗಕ್ಷೇಮಕ್ಕೆ ಸಂಬಂಧವೇ ಇಲ್ಲದ ಯೋಜನೆಗಳಿಗೆ ಸಾವಿರಾರು ಕೋಟಿಗಳನ್ನು ಮೀಸಲಿಡಲು ನಿರ್ಧರಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಆಡಳಿತವಿರುವ ಕೆಲ ಸರ್ಕಾರಗಳು ಸಹಾಯಕ್ಕಾಗಿ ಕೂಗಿದ ಜನರನ್ನು ಬಂಧಿಸಲು ದಮನಕಾರಿ ಶಕ್ತಿಯನ್ನು ಬಳಸುತ್ತಿವೆ. ಆಮ್ಲಜನಕದ ಕೊರತೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಿಳಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶದ ಹೆಸರು ಹೇಳದೆ, ಅಲ್ಲಿ ನಡೆದ ಘಟನೆಯನ್ನು ತಿಳಿಸಿದರು.

ಕೇಂದ್ರ ಸರ್ಕಾರದ ಲಸಿಕಾ ನೀತಿ ಅಸಮಾನತೆಯಿಂದ ಕೂಡಿದೆ. ದಲಿತರು, ಆದಿವಾಸಿಗಳು, ಇತರೆ ಹಿಂದುಳಿದ ವರ್ಗಗಳ ಜತೆಗೆ ಬಡವರು ಹಾಗೂ ತುಳಿತಕ್ಕೊಳಗಾದವರನ್ನು ಲಸಿಕಾ ಅಭಿಯಾನದಿಂದ ಹೊರಗಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತವು ಮಾರಣಾಂತಿಕ ಆರೋಗ್ಯ ದುರಂತದ ಹಿಡಿತದಲ್ಲಿದೆ, ಲಕ್ಷಾಂತರ ಜನರು ಮೂಲಭೂತ ಆರೋಗ್ಯ, ಜೀವ ಉಳಿಸುವ ಔಷಧಿಗಳು, ಆಮ್ಲಜನಕ ಮತ್ತು ಲಸಿಕೆಗಳನ್ನು ಪಡೆಯಲು ಪರದಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲಿ, ರಸ್ತೆಗಳಲ್ಲಿ ಹಾಗೂ ವಾಹನಗಳಲ್ಲಿ ಕಾಯುತ್ತಾ ಜನರು ತಮ್ಮ ಪ್ರಾಣಕ್ಕಾಗಿ ಹೋರಾಡುತ್ತಿರುವುದನ್ನು ನೋಡುವುದು ಹೃದಯ ವಿದ್ರಾವಕವಾಗಿದೆ ‘ ಎಂದು ಹೇಳಿದ್ದಾರೆ.

ಮತ್ತು “ಇಂತಹ ಸಂದರ್ಭಗಳಲ್ಲಿ ಮೋದಿ ಸರ್ಕಾರ ಏನು ಮಾಡುತ್ತಿದೆ? ಜನರ ನೋವನ್ನು ನಿವಾರಿಸುವ ಬದಲು, ಜನರ ಬಗೆಗಿನ ಮೂಲಭೂತ ಜವಾಬ್ದಾರಿಗಳನ್ನು ಮತ್ತು ಕರ್ತವ್ಯಗಳನ್ನು ಮರೆತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮೋದಿ ಸರ್ಕಾರ ಮೂಲಭೂತ ಜವಾಬ್ದಾರಿ ಮತ್ತು ಕರ್ತವ್ಯವನ್ನು ಮರೆತಿದೆ, ನ್ಯಾಷನಲ್​ ಟಾಸ್ಕ್​ ಫೋರ್ಸ್​, ಇಜಿಒಎಂ ಮತ್ತು ಸಂಸದೀಯ ಸಮಿತಿ ನೀಡುತ್ತಿರುವ ಎಚ್ಚರಿಸಿದ್ದರು ಮತ್ತು ಅದಕ್ಕೆ ಯೋಜನೆ ಮತ್ತು ಸಿದ್ಧತೆ ಮಾಡಿಕೊಳ್ಳುವಂತೆ ಒತ್ತಾಯಿಸಿದರು ಅದನ್ನು ನಿರ್ಲಕ್ಷಿಸಿದೆ.

ವಿರೋಧ ಪಕ್ಷಗಳ ಸಂಸದೀಯ ಸ್ಥಾಯಿ ಸಮಿತಿಯು ಕರೋನ ಸಂಬಂಧಿಸಿದಂತೆ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿತ್ತು. ಆದರೂ, ಈ ವರ್ಷದ ಆರಂಭದಲ್ಲಿ ಪ್ರಧಾನ ಮಂತ್ರಿ ಅವರು ಸಾಂಕ್ರಾಮಿಕ ರೋಗವನ್ನು ಸೋಲಿಸಿದ್ದಾರೆಂದು ಸೊಕ್ಕಿನಿಂದ ಹೆಮ್ಮೆಪಟ್ಟರು ಮತ್ತು ಅವರ “ಯಶಸ್ಸಿನ” ಕಾರಣಕ್ಕಾಗಿ ಅವರ ಪಕ್ಷವು ವಿಧೇಯತೆಯಿಂದ ಅವರನ್ನು ಸನ್ಮಾನಿಸಿತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ನಾನು ಕೋವಿಡ್ -19 ವಿರುದ್ಧ ಹೋರಾಡಲು ಕ್ರಮಬದ್ಧ ಮತ್ತು ಪ್ರಾಯೋಗಿಕ ಸಲಹೆಗಳನ್ನು ನೀಡುವ ರಚನಾತ್ಮಕ ಸಹಕಾರದ ಮನೋಭಾವದಿಂದ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿದ್ದಾರೆ.

ದೇಶದಲ್ಲಿ ಒಂದೇ ದಿನದಲ್ಲಿ 4. 14 ಸಾವಿರ ಕೋವಿಡ್​ ಪ್ರಕಣ ದಾಖಲಾಗುತ್ತಿದ್ದು, 3.900ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸೋಂಕು ಎದುರಿಸಲು ಸಾಮೂಹಿಕ ಕ್ರಮ ಮತ್ತು ಹೊಣೆಗಾರಿಕೆಯನ್ನು ಖಚಿತಡಿಸಬೇಕು. ಇದಕ್ಕಾಗಿ ಸ್ಥಾಯಿ ಸಮಿತಿ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.

ನಮ್ಮ ಜನರು ಅನುಭವಿಸುತ್ತಿರುವ ಅವ್ಯವಸ್ಥೆ, ನೋವು ಮತ್ತು ಕೋಪವನ್ನು ನಿವಾರಿಸಲು ಜನರು ಮತ್ತು ಪಕ್ಷದ ಸಂಘಟನೆ, ಕಾರ್ಮಿಕರು ಮತ್ತು ನಾಯಕರು ಎಲ್ಲಾ ಸಾಮರ್ಥ್ಯದಲ್ಲೂ ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಾಂಗ್ರೆಸ್ ಮುಖಂಡರು ಮತ್ತು ಸಂಸದರನ್ನು ಶ್ಲಾಘಿಸಿದರು. ಮುಖ್ಯವಾಗಿ ಯುವ ಕಾಂಗ್ರೆಸ್ ಸಹಾಯ ಹಸ್ತ ಚಾಚುವ ಪ್ರಯತ್ನವನ್ನು ಸೋನಿಯಾ ಗಾಂಧಿ ಶ್ಲಾಘಿಸಿದರು.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...