ಸಿಲಿಕಾನ್ ಸಿಟಿ ಅಂದವನ್ನು ಹೆಚ್ಚಿಸುವ ಸ್ಮಾರ್ಟ್ ಸಿಟಿ ಯೋಜನೆಯ ಮೂರನೇ ಹಂತ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಇದೇ ಜುಲೈ ವೇಳೆಗೆ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ರಸ್ತೆಗಳೆಲ್ಲ ಸಂಚಾರಕ್ಕೆ ಮುಕ್ತಾವಾಗಲಿದ್ದು, ಟ್ರಾಫಿಕ್ ಸಮಸ್ಯೆಯಿಂದ ಮತ್ತಷ್ಟು ಮುಕ್ತಿ ಸಿಗಲಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಮೂರನೇ ಹಂತ ಬಹುತೇಕ ಮುಕ್ತಾಯ.
ಸ್ಮಾರ್ಟ್ ಸಿಟಿ ಯೋಜನೆ ಬೆಂಗಳೂರಲ್ಲಿ ಪ್ರಾರಂಭ ಆದಾಗ ಸಾಮಾನ್ಯ ಜನ ಖುಷಿ ಪಟ್ಟಿದಿಕ್ಕಿಂತ ಶಪಿಸಿದ್ದೆ ಹೆಚ್ಚು. ಕಾರಣ ಸರಿಯಾದ ಸಮಯಕ್ಕೆ ಕಾಮಗಾರಿಗಳು ಪೂರ್ಣಗೊಳ್ಳದೆ ಇರೋದು, ಕಾಮಗಾರಿಗಳಿಂದ ವಾಹನ ಸವಾರರಿಗೆ ಕಿರಿಕಿರಿ, ಧೂಳು, ಶಬ್ದ ಈ ಎಲ್ಲಾ ಸಮಸ್ಯೆಗಳಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ಸದ್ಯ ರೀಲಿಫ್ ಸಿಗಲಿದೆ. ಇದೇ ತಿಂಗಳು ಯೋಜನೆಯ ಅಡಿಯಲ್ಲಿ ನಿರ್ಮಾಣವಾದ ರಸ್ತೆಗಳು ಸಂಪೂರ್ಣ ಸಂಚಾರಕ್ಕೆ ಮುಕ್ತವಾಗಲಿವೆ.

ಯೋಜನೆ ಅಡಿಯ ರಸ್ತೆಗಳಲ್ಲೆ ಇದೇ ಜುಲೈಗೆ ಸಂಚಾರ ಮುಕ್ತ.
2019ರಲ್ಲಿ ಆರಂಭವಾದ ಈ ಯೋಜನೆ ನಾಲ್ಕು ವರ್ಷ ಆದರೂ ಪೂರ್ಣ ಪ್ರಮಾಣದಲ್ಲಿ ಕಂಪ್ಲೀಟ್ ಆಗಿಲ್ಲ. ಕೊವೀಡ್ ಅನಾಹುತ ಹಾಗೂ ಬಿಬಿಎಂಪಿ, ಜಲ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಕಾಮಗಾರಿಗೆ ಹಿನ್ನಡೆ ಆಗುತ್ತಲೇ ಇತ್ತು. ಆದರೆ ಸದ್ಯ ಕಾಮಗಾರಿಗೆ ಇದ್ದಂತಹ ಅಡೆ ತಡೆಗಳೆಲ್ಲಾ ಮುಗಿದಿದ್ದು, ಇದೇ ಜುಲೈ ವೇಳೆಗೆ ರಸ್ತೆಗಳೆಲ್ಲ ಸಂಪೂರ್ಣ ಸಂಚಾರ ಮುಕ್ತವಾಗಲಿವೆ. ಇಲ್ಲಿವರೆಗೆ ಸದ್ಯ ಸ್ಮಾರ್ಟ್ ಸಿಟಿ ಯೋಜನೆ ಅಡಿ ಬೆಂಗಳೂರಿನಲ್ಲಿ 31 ರೋಡ್ ಗಳಲ್ಲಿ ಸದ್ಯ ಇಲ್ಲಿವರೆಗೆ 29 ರೋಡ್ ಗಳ ಬಹುತೇಕ ಕೆಲಸಗಳು ಮುಕ್ತಾಯವಾಗಿವೆ. ಇನ್ನೂ ಉಳಿದ ಎರಡು ರಸ್ತೆಗಳಾದ ಅವೆನ್ಯೂ ರೋಡ್ ಮತ್ತು ಹೆಚ್ ಕೆ.ಪಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು ಆ ಎರಡು ರಸ್ತೆಗಳು ಸಹ ಇದೇ ಜುಲೈ ಅಂತ್ಯದೊಳಗೆ ಕಾಮಗಾರಿ ಮುಕ್ತಾಯವಾಗಲಿದೆ.
ಇನ್ನೂ ರಸ್ತೆ ಕಾಮಗಾರಿ ಪರಿಶೀಲನೆಗೆ ಕಮಿಟಿ ರಚನೆ ಮಾಡಲಾಗಿದೆ. ಕಮಿಟಿಯಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಇದ್ದು, ರಸ್ತೆ ಕ್ವಾಲಿಟಿ ಪರಿಶೀಲನೆ ಬಳಿಕವೇ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗುತ್ತೆ. ಇಷ್ಟೇ ಅಲ್ಲ ಯೋಜನೆ ಅಡಿ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರೇ ಮೂರು ವರ್ಷ ಆ ರಸ್ತೆಯನ್ನ ನಿರ್ವಹಿಸಬೇಕು. ಬೀದಿ ದೀಪ, ಗಿಡ ನೆಡವುದು, ಸೇರಿದಂತೆ ಗುಂಡಿ ಬಿದ್ದರು, ಯಾವುದೇ ರಿಪೇರಿ ಕೆಲಸ ಇದ್ದರೂ ಮೂರು ವರ್ಷ ಗುತ್ತಿಗೆದಾರರದ್ದೆ ಜವಾಬ್ದಾರಿ ಆಗಿರಲಿದೆ. ಇದರ ಜೊತೆಗೆ ಕೆ ಆರ್ ಮಾರುಕಟ್ಟೆ, ಮಾರುಕಟ್ಟೆ ಜಂಕ್ಷನ್ ಅಭಿವೃದ್ದಿ ಸೇರಿದಂತೆ ಯೋಜನೆ ಅಡಿಯ ಹಲವು ಕೆಲಸಗಳು ಈ ವರ್ಷದ ಡಿಸೆಂಬರ್ ಒಳಗೆ ಮುಕ್ತಾಯವಾಗಲಿದೆ.
ಒಟ್ಟಾರೆ ಸ್ಮಾರ್ಟ್ ಸಿಟಿ ಯೋಜನೆಗಳ ಕಿರಿಕಿರಿಯಿಂದ ಬೇಸತ್ತಿದ್ದ ಸಾಮಾನ್ಯರಿಗೆ ಇನ್ನಾದರು ಸ್ಮಾರ್ಟ್ ಸಿಟಿ ಸಂಕಷ್ಟ ತಪ್ಪಿಸಿ ಇನ್ನಷ್ಟು ಸ್ಮಾರ್ಟ್ ಆಗಿ ಓಡಾಡುವ ಅವಕಾಶಗಳು ಸಿಗುತ್ತಾ ಕಾದು ನೋಡಬೇಕಿದೆ.