ಬೆಂಗಳೂರು : ರಾಜ್ಯದಲ್ಲಿ ಕುರ್ಚಿ ಕದನದ ನಡುವೆಯೇ ಸಂಪುಟ ವಿಸ್ತರಣೆಯ ಕೂಗು ಜೋರಾಗಿದೆ. ಬಜೆಟ್ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಬಣಗಳನ್ನು ಬದಿಗಿಟ್ಟು ವೈಯಕ್ತಿಕ ಲಾಭಕ್ಕಾಗಿ ಮುಂದಾಗಿದ್ದಾರೆ.

ಹೀಗಾಗಿ ಇದೇ ವಿಚಾರಕ್ಕೆ ಗುರುವಾರ ರಾತ್ರಿ ಮಹತ್ವದ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣದ 30ಕ್ಕೂ ಅಧಿಕ ಹಿರಿಯ ಶಾಸಕರು ಒಂದೆಡೆ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ್ದಾರೆ. ಈ ವೇಳೆ ಸಂಪುಟ ವಿಸ್ತರಣೆಯ ಕುರಿತು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಒತ್ತಡ ಹೇರಲು ತೀರ್ಮಾನ ಮಾಡಿದ್ದಾರೆ.
ಈಗಿರುವ ಹಳೆಯ ಸಂಪುಟವನ್ನು ಪುನರ್ ರಚನೆ ಮಾಡುವಂತೆಯೂ ಬೇಡಿಕೆ ಇಡಲು ಶಾಸಕರಾದ ಶಿವಲಿಂಗೇಗೌಡ, ಲಕ್ಷ್ಮಣ್ ಸವದಿ, ಎನ್.ಎ. ಹ್ಯಾರೀಸ್, ಎಸ್ ಎನ್ ನಾರಾಯಣಸ್ವಾಮಿ, ಬೇಳೂರು ಗೋಪಾಲಕೃಷ್ಣ, ಪ್ರಸಾದ್ ಅಬ್ಬಯ್ಯ, ಎ.ಆರ್.ಕೃಷ್ಣಮೂರ್ತಿ, ಜಿ.ಟಿ.ಪಾಟೀಲ್, ಷಡಕ್ಷರಿ, ಟಿ.ಬಿ. ಜಯಚಂದ್ರ, ಮಾಗಡಿ ಬಾಲಕೃಷ್ಣ ಸೇರಿದಂತೆ ಹಲವು ಶಾಸಕರು ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್, ಮಾತ್ನಾಡೋ ಜನ ಒಂದ್ ಅರ್ಥ ಮಾಡ್ಕೋಬೇಕು.. : ಮೌನ ಮುರಿದ ರಶ್ಮೀಕಾ..
ಇನ್ನೂ ನಾವು ಕೇವಲ ಒಂದು ಅಜೆಂಡಾ ಇಟ್ಟುಕೊಂಡು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಅವರಿಗೂ ಸಂಪುಟ ವಿಸ್ತರಣೆ ಕುರಿತು ಮನವಿ ಮಾಡಲಿದ್ದೇವೆ ಎಂದು ಹಿರಿಯ ಶಾಸಕ ಅಶೋಕ್ ಪಟ್ಟಣ್ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ.
ಅಲ್ಲದೆ ಇಬ್ಬರು ನಾಯಕರು ಭೇಟಿಯ ಬಳಿಕ ನಾವು ಅವರ ಅನುಮತಿ ಪಡೆದು ಮಾರ್ಚ್ 26 ರಂದು ನವದೆಹಲಿಗೆ ತೆರಳಿ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿಯಾಖಲಿದ್ದೇವೆ. ಅಲ್ಲಿ ಸಂಪುಟ ವಿಸ್ತರಣೆ ಮಾಡುವಂತೆ ಒತ್ತಡ ಹೇರಲಿದ್ದೇವೆ. ಆದರೆ ನಮ್ಮ ಸಭೆಗೂ ನಾಯಕತ್ವ ಬದಲಾವಣೆ ಚರ್ಚೆಗೂ ಯಾವುದೇ ಸಂಬಂಧವಿಲ್ಲ ಎಂದು ಅಶೋಕ್ ಪಟ್ಟಣ್ ಸ್ಪಷ್ಟಪಡಿಸಿದ್ದಾರೆ.






