• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

ಪ್ರತಿಧ್ವನಿ by ಪ್ರತಿಧ್ವನಿ
May 21, 2026
in Top Story
0
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?
Share on WhatsAppShare on FacebookShare on Telegram

ಭಾರತದ ಮುಖ್ಯ ನ್ಯಾಯಮೂರ್ತಿಗಳ ಯುವಜನರ ಕುರಿತ ಹೇಳಿಕೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಹುಟ್ಟಿಕೊಂಡಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇದೀಗ ಮತ್ತೊಮ್ಮೆ ಭಾರಿ ಸುದ್ದಿಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ, ಮೀಮ್ ಮತ್ತು ರಾಜಕೀಯ ಟೀಕೆಗಳ ಮೂಲಕ ಸಂಚಲನ ಮೂಡಿಸಿದ್ದ ಈ ಡಿಜಿಟಲ್ ಚಳವಳಿಯ ಅಧಿಕೃತ ‘X’ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ಸದ್ದಿಲ್ಲದೆ ತಡೆಹಿಡಿಯಲಾಗಿದೆ.

 

ADVERTISEMENT

ಕೇವಲ ಹಾಸ್ಯ ಮತ್ತು ವ್ಯಂಗ್ಯದಿಂದ ಆರಂಭವಾದ ಈ ಅಭಿಯಾನ, ಕೆಲವೇ ದಿನಗಳಲ್ಲಿ ಯುವಕರ ಅಸಮಾಧಾನದ ಪ್ರತೀಕವಾಗಿ ಬೆಳೆದಿತ್ತು. ರಾಜಕೀಯ ವ್ಯವಸ್ಥೆ, ನಿರುದ್ಯೋಗ, ಪ್ರಶ್ನೆಪತ್ರಿಕೆ ಸೋರಿಕೆ, ಆಡಳಿತ ವೈಫಲ್ಯಗಳಂತಹ ವಿಷಯಗಳನ್ನು ಮೀಮ್‌ಗಳ ಮೂಲಕ ಪ್ರಸ್ತಾಪಿಸುತ್ತಿದ್ದ ಈ ಪೇಜ್‌ಗೆ ಭಾರೀ ಜನಬೆಂಬಲ ವ್ಯಕ್ತವಾಗಿತ್ತು.

ಇನ್‌ಸ್ಟಾಗ್ರಾಂನಲ್ಲಿ ದಾಖಲೆ ಮಟ್ಟದ ಬೆಳವಣಿಗೆ “@cockroachjantaparty” ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಆರಂಭವಾದ ಕೇವಲ ಐದು ದಿನಗಳಲ್ಲೇ 1 ಕೋಟಿಗೂ ಅಧಿಕ ಫಾಲೋವರ್ಸ್ ಪಡೆದು ಎಲ್ಲರ ಗಮನ ಸೆಳೆದಿತ್ತು. ಇದೇ ವೇಳೆ ಭಾರತದ ಪ್ರಮುಖ ರಾಜಕೀಯ ಪಕ್ಷಗಳ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಿಗಿಂತಲೂ ವೇಗವಾಗಿ ಜನಪ್ರಿಯತೆ ಗಳಿಸಿತ್ತು.

Congress protest: ದೇಶದಲ್ಲಿ ಮಿತಿವ್ಯಯ ಅಂತಿರೋ ಮೋದಿ ಯೂರೋಪ್ ಟ್ರಿಪ್ ಹೋಗವ್ರೆ ಎಂದ ಸಿದ್ರಾಮಯ್ಯ #pratidhvani

ಪ್ರಮುಖ ಪಕ್ಷಗಳ ಇನ್‌ಸ್ಟಾಗ್ರಾಂ ಫಾಲೋವರ್ಸ್ ಹೋಲಿಕೆ:

  • ಕಾಂಗ್ರೆಸ್ (INC) – ಸುಮಾರು 13.2 ಮಿಲಿಯನ್
  • ಕಾಕ್ರೋಚ್ ಜನತಾ ಪಾರ್ಟಿ (CJP) – 10 ಮಿಲಿಯನ್+
  • ಬಿಜೆಪಿ (BJP) – ಸುಮಾರು 8.7 ಮಿಲಿಯನ್
  • ಆಮ್ ಆದ್ಮಿ ಪಾರ್ಟಿ (AAP) – ಸುಮಾರು 1.9 ಮಿಲಿಯ

ಯಾವುದೇ ಸಾಂಪ್ರದಾಯಿಕ ರಾಜಕೀಯ ಸಂಘಟನೆ ಅಥವಾ ನಾಯಕತ್ವವಿಲ್ಲದೇ, ಕೇವಲ ಕ್ರಿಯೇಟಿವ್ ಮೀಮ್ಸ್, ವ್ಯಂಗ್ಯಚಿತ್ರಗಳು ಮತ್ತು ಶಾರ್ಟ್ ವಿಡಿಯೋಗಳ ಮೂಲಕವೇ ಈ ಪೇಜ್ ದೊಡ್ಡ ಮಟ್ಟದ ಪ್ರಭಾವ ಬೀರಿತ್ತು. ವಿಶೇಷವಾಗಿ ಯುವಜನರು ತಮ್ಮ ಅಸಮಾಧಾನ, ನಿರಾಶೆ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಲು ಈ ವೇದಿಕೆಯನ್ನು ಬಳಸುತ್ತಿದ್ದರು.

Youth Congress protest: ನೀಟ್​ ಪರೀಕ್ಷೆ ಅಕ್ರಮ ಖಂಡಿಸಿ ಯೂಥ್ ಕಾಂಗ್ರೆಸ್ ಪ್ರತಿಭಟನಾ ಸ್ಥಳಕ್ಕೆ CM ಎಂಟ್ರಿ

ಈ ಟ್ರೆಂಡ್‌ಗೆ ದೇಶದ ಹಲವಾರು ಪ್ರಮುಖ ಸಾರ್ವಜನಿಕ ವ್ಯಕ್ತಿಗಳೂ ಪ್ರತಿಕ್ರಿಯಿಸಿದ್ದರು. ಯೂಟ್ಯೂಬರ್ ಧ್ರುವ್ ರಾಠಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಹಲವರು ಈ ಡಿಜಿಟಲ್ ಚಳವಳಿಯ ಬಗ್ಗೆ ಮಾತನಾಡಿದ್ದರು. ಟಿಎಂಸಿ ನಾಯಕ ಕೀರ್ತಿ ಆಜಾದ್ ಕೂಡ ಈ ಅಭಿಯಾನದ ಪರವಾಗಿ ಆಸಕ್ತಿ ತೋರಿಸಿದ್ದರು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇದೀಗ CJP ಯ ಅಧಿಕೃತ ‘X’ ಖಾತೆ ಭಾರತದಲ್ಲಿ ತಡೆಹಿಡಿಯಲ್ಪಟ್ಟಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಯುವಜನರ ಅಸಮಾಧಾನ ಮತ್ತು ಡಿಜಿಟಲ್ ಪ್ರತಿಭಟನೆಗಳ ಕುರಿತು ಮತ್ತೆ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಖಾತೆ ತಡೆಹಿಡಿಯಲು ನಿಖರ ಕಾರಣ ಏನು ಎಂಬುದರ ಕುರಿತು ಅಧಿಕೃತ ಸ್ಪಷ್ಟನೆ ಇನ್ನೂ ಹೊರಬಿದ್ದಿಲ್ಲ.

Tags: BJP FollowersCJI Remark ControversyCJPCockroach Janata PartyDigital ProtestIndia Social Media NewsInternet TrendMeme PoliticsOnline MovementPolitical SatireSocial Media CensorshipViral Instagram PageX Account BlockedYouth OutrageYouth Voice
Previous Post

ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

Related Posts

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು
Top Story

ಡಿಎಂಕೆ ಆಕ್ಷೇಪದ ಬೆನ್ನಲ್ಲೇ ಹಿನ್ನಡೆ ಅನುಭವಿಸಿದ ಟಿವಿಕೆ: ₹17 ಲಕ್ಷ ಟೆಂಡರ್ ರದ್ದು

by ಪ್ರತಿಧ್ವನಿ
May 21, 2026
0

ತಮಿಳುನಾಡಿನ ರಾಜಕೀಯದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕೇವಲ ಆರು ಗಂಟೆಗಳ ಅವಧಿಯಲ್ಲಿ ನೀಡಲಾಗಿದ್ದ ₹17 ಲಕ್ಷ ಮೌಲ್ಯದ...

Read moreDetails
*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

*ಆಗ್ನೇಯ ಪದವೀಧರ ಕ್ಷೇತ್ರ : ಎಷ್ಟು ಮತದಾರರು? ಯಾವೆಲ್ಲ ಜಿಲ್ಲೆಗಳು..?*

May 21, 2026
ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

ಈದ್‌ಗೂ ಮುನ್ನ ಪಶು ವಧೆ ನಿರ್ಬಂಧ: ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದ ಮಹುವಾ ಮೊಯಿತ್ರಾ

May 21, 2026
ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಜಾರ್ಜ್

May 20, 2026
ರೋಮ್‌ನಲ್ಲಿ ಮೋದಿ–ಮೆಲೋನಿ ಸ್ನೇಹದ ಸದ್ದು: ಮೇಲೋನಾಗೆ ‘ಮೆಲೋಡಿ’ ಚಾಕೊಲೇಟ್ ಗಿಫ್ಟ್‌!

ಅಭಿಷೇಕ್ ಬ್ಯಾನರ್ಜಿಗೆ ಬಿಜೆಪಿ ಹೊಸ ಶಾಕ್..! 43 ಆಸ್ತಿಗಳ ಪಟ್ಟಿ ಬಿಡುಗಡೆ

May 20, 2026
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada